ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಅಹ್ಮದ್ ಶೆಹಜಾದ್ - ಸೂರ್ಯಕುಮಾರ್ ಯಾದವ್ 
ಕ್ರಿಕೆಟ್

'ನಾವು ಕೀನ್ಯಾ, ಉಗಾಂಡಾ ಸೋಲಿಸಿದರೆ, ಭಾರತ ದೊಡ್ಡ ತಂಡಗಳ ವಿರುದ್ಧ ಗೆಲ್ಲುತ್ತಿದೆ'; ನಮ್ಮ ವ್ಯವಸ್ಥೆಯಲ್ಲಿ ದೋಷವಿದೆ ಎಂದ ಪಾಕ್ ಆಟಗಾರ

ಭಾರತದ ಇನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ ಮತ್ತೆ ಕಂಬ್ಯಾಕ್ ಮಾಡಿತು. ಇಲ್ಲದಿದ್ದರೆ, ಅವರು (ಭಾರತ) 275 ರತ್ತ ಸಾಗುತ್ತಿದ್ದರು. ಈಗ, ನೀವು ಪಾಕಿಸ್ತಾನದಲ್ಲಿ ಯಾವ ಮಟ್ಟದ ಕ್ರಿಕೆಟ್ ಆಡುತ್ತಿದ್ದೀರಿ? ಮತ್ತು ನೀವು ಇದನ್ನೇ ಮಾಡುತ್ತಲೇ ಇರುತ್ತೀರಿ.

ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ 2026ರ ಟಿ20 ವಿಶ್ವಕಪ್ ಪೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಟೀಂ ಇಂಡಿಯಾ ಮೂರನೇ ಬಾರಿಗೆ ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿಯಿತು. ಮೊದಲು ಬ್ಯಾಟಿಂಗ್ ಮಾಡಿ 255 ರನ್ ಕಲೆಹಾಕಿದ್ದ ಭಾರತವು, ಕಿವೀಸ್ ತಂಡವನ್ನು ಕೇವಲ 159 ರನ್‌ಗಳಿಗೆ ಆಲೌಟ್ ಮಾಡಿತು. ಜಾಗತಿಕ ಕ್ರಿಕೆಟ್‌ನ ಅತಿದೊಡ್ಡ ವೇದಿಕೆಯಲ್ಲಿ ಭಾರತ ಹಲವಾರು ದಾಖಲೆಗಳನ್ನು ಮುರಿಯಿತು. ಭಾರತದಂತಹ ಚಾಂಪಿಯನ್ ತಂಡಕ್ಕೆ ಹೋಲಿಸಿದರೆ ತನ್ನ ದೇಶದ ಕ್ರಿಕೆಟ್ ವ್ಯವಸ್ಥೆಯಲ್ಲಿರುವ ನ್ಯೂನತೆಗಳನ್ನು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಅಹ್ಮದ್ ಶೆಹಜಾದ್ ಎತ್ತಿ ತೋರಿಸಿದರು.

ಟಿ20 ವಿಶ್ವಕಪ್‌ವರೆಗೆ ಅವಕಾಶ ಸಿಗದ ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ಅವರಂತಹ ಆಟಗಾರರು ಪಂದ್ಯ ವಿಜೇತರಾದರು ಎಂಬುದನ್ನು ಶೆಹಜಾದ್ ಎತ್ತಿ ತೋರಿಸಿದರು. ಸ್ಯಾಮ್ಸನ್ ಅವರನ್ನು ಪ್ಲೇಯರ್ ಆಫ್ ದ ಟೂರ್ನಮೆಂಟ್‌ ಎಂದು ಹೆಸರಿಸಲಾಯಿತು.

'ಪಾಕಿಸ್ತಾನದಲ್ಲಿ ಸಾಕಷ್ಟು ಪ್ರತಿಭೆಗಳಿವೆ. ಪ್ರತಿಭೆಯ ಕೊರತೆಯಿಲ್ಲ. ದೋಷ ಇರುವುದು ನಮ್ಮ ವ್ಯವಸ್ಥೆಯಲ್ಲಿ. ಭಾರತದಲ್ಲಿ ಏನಿದೆ? ಪ್ರತಿಭೆ ಮತ್ತು ವ್ಯವಸ್ಥೆ ಎರಡೂ ಇದೆ. ಪ್ರತಿಭೆ ಮತ್ತು ವ್ಯವಸ್ಥೆಯ ಮೂಲಕ ಆಟಗಾರರು ಉತ್ಪತ್ತಿಯಾಗುತ್ತಿರುವುದನ್ನು ನೀವು ನೋಡಬಹುದು. ಈ ಆಟಗಾರ ಯಾರು? ಸಂಜು ಸ್ಯಾಮ್ಸನ್, ಅವರಿಗೆ ಎಂದಿಗೂ ಅವಕಾಶ ಸಿಕ್ಕಿರಲಿಲ್ಲ. ಆದರೆ, ಅವರು ವಿಶ್ವಕಪ್‌ನಲ್ಲಿ ಸರಣಿ ಶ್ರೇಷ್ಠ ಆಟಗಾರರಾಗಿದ್ದಾರೆ. ಇಶಾನ್ ಕಿಶನ್ ಕೂಡ ವಿರಳವಾಗಿ ಆಡುತ್ತಾರೆ. ಅಲ್ಲಿ ಶಿಸ್ತು ಎಷ್ಟಿದೆಯೆಂದರೆ ಅವರನ್ನು ಕೂಡ ಪಕ್ಕಕ್ಕೆ ಇಡಲಾಯಿತು. ದೇಶೀಯ ಕ್ರಿಕೆಟ್‌ನಲ್ಲಿ ಪ್ರದರ್ಶನ ನೀಡಿದ ನಂತರ ಅವರು ಇಲ್ಲಿಗೆ ಬಂದಿದ್ದಾರೆ' ಎಂದು ಪಾಕಿಸ್ತಾನದಲ್ಲಿ ನಡೆದ ಹಾರ್ನಾ ಮನಾ ಹೈ ಕಾರ್ಯಕ್ರಮದಲ್ಲಿ ಶೆಹಜಾದ್ ಹೇಳಿದರು.

'ಅಭಿಷೇಕ್ ಶರ್ಮಾ ತುಂಬಾ ಒತ್ತಡದಲ್ಲಿದ್ದರು. ಫೈನಲ್‌ನಲ್ಲಿ ಅವರು 21 ಎಸೆತಗಳಲ್ಲಿ 52 ರನ್ ಗಳಿಸಿದರು. ಅವರು 'ನಾವು ಇಲ್ಲಿದ್ದೇವೆ' ಎಂದು ಹೇಳುತ್ತಿದ್ದರು. ಆದರೆ, ಪಾಕಿಸ್ತಾನ ತಂಡವು ಜಿಂಬಾಬ್ವೆ, ಉಗಾಂಡಾ ಅಥವಾ ಕೀನ್ಯಾದಂತಹ ತಂಡಗಳನ್ನು ಸೋಲಿಸಿದ್ದನ್ನು ಆಚರಿಸುತ್ತಾರೆ' ಎಂದು ಹೇಳಿದರು.

ಆದರೆ, ಭಾರತ ತಂಡವು ದೊಡ್ಡ ತಂಡಗಳ ವಿರುದ್ಧ ದೊಡ್ಡ ಪಂದ್ಯಗಳನ್ನು ಆಡುತ್ತಾರೆ. ಅವರು ದೊಡ್ಡ ಸರಣಿಗಳನ್ನು ಆಡುತ್ತಾರೆ. ಭಾರತವು ಮೊದಲ ಇನಿಂಗ್ಸ್‌ನಲ್ಲಿ 250 ರನ್‌ಗಳ ಗಡಿಯನ್ನು ದಾಟಲು ಮತ್ತು ಪಂದ್ಯವನ್ನು ಹೇಗೆ ಗೆಲ್ಲಬೇಕೆಂಬ ದೃಢನಿಶ್ಚಯದಲ್ಲಿ ಕಾಣಿಸುತ್ತಿತ್ತು. ಇದಕ್ಕೆ ಹೋಲಿಸಿದರೆ, ಪಾಕಿಸ್ತಾನ ತಂಡವು 180 ರನ್‌ಗಳಿಗೆ ತೃಪ್ತಿಪಡುತ್ತಿತ್ತು ಮತ್ತು ಉಳಿದದ್ದನ್ನು ಬೌಲರ್‌ಗಳು ಮಾಡುವಂತೆ ಕೇಳಲಾಗುತ್ತಿತ್ತು ಎಂದು ಶೆಹಜಾದ್ ಹೇಳಿದರು.

'ಒಳ್ಳೆಯ ತಂಡಗಳು ಸರಿಯಾದ ಸಮಯದಲ್ಲಿ ಗರಿಷ್ಠ ಮಟ್ಟವನ್ನು ತಲುಪುತ್ತವೆ ಎಂದು ನೀವು ಹೇಳಿದ್ದೀರಿ. ಅವರು ಆಡುವಾಗ 250 ರನ್ ಗಳಿಸುತ್ತಾರೆ. ನಾವು ಅಲ್ಲಿದ್ದರೆ 180 ರನ್ ಗಳಿಸುತ್ತಿದ್ದೆವು. ಮತ್ತು ಅದರ ನಂತರ, ನಾವು 180 ರನ್ ಗಳಿಸಿದ್ದೇವೆ ಬೌಲರ್‌ಗಳು ಡಿಫೆಂಡ್ ಮಾಡಲಿ ಎಂದು ಹೇಳುತ್ತಿದ್ದೆವು. ಅವರು ಇದನ್ನು ಮಾಡುವುದಿಲ್ಲ' ಎಂದು ಅನುಭವಿ ಕ್ರಿಕೆಟಿಗ ಅಭಿಪ್ರಾಯಪಟ್ಟರು.

'ಭಾರತದ ಇನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ ಮತ್ತೆ ಕಂಬ್ಯಾಕ್ ಮಾಡಿತು. ಇಲ್ಲದಿದ್ದರೆ, ಅವರು (ಭಾರತ) 275 ರತ್ತ ಸಾಗುತ್ತಿದ್ದರು. ಈಗ, ನೀವು ಪಾಕಿಸ್ತಾನದಲ್ಲಿ ಯಾವ ಮಟ್ಟದ ಕ್ರಿಕೆಟ್ ಆಡುತ್ತಿದ್ದೀರಿ? ಮತ್ತು ನೀವು ಇದನ್ನೇ ಮಾಡುತ್ತಲೇ ಇರುತ್ತೀರಿ, ಜಿಂಬಾಬ್ವೆ, ಕೀನ್ಯಾ ಮತ್ತು ಉಗಾಂಡಾಗೆ ಕರೆ ಮಾಡಿ ಸೋಲಿಸಿ' ಎಂದರು.

ಪಾಕಿಸ್ತಾನಕ್ಕೆ ಐಸಿಸಿ ಪ್ರತ್ಯೇಕ ಶ್ರೇಯಾಂಕಗಳನ್ನು ನೀಡಬೇಕು. ಭಾರತ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನಂತಹ ಉನ್ನತ ತಂಡಗಳ ಬದಲಿಗೆ ಜಿಂಬಾಬ್ವೆ, ಕೀನ್ಯಾ ಮತ್ತು ಉಗಾಂಡಾದಂತಹ ತಂಡಗಳ ವಿರುದ್ಧ ರೇಟಿಂಗ್ ನೀಡಬೇಕು ಎಂದು ಶೆಹಜಾದ್ ಒತ್ತಾಯಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ಯುದ್ಧ: ಷೇರುಮಾರುಕಟ್ಟೆ ಮಹಾಕುಸಿತ, 30 ಲಕ್ಷ ಕೋಟಿ ರೂ ನಷ್ಟ... ಇಂದು ಒಂದೇ ದಿನ 12 ಲಕ್ಷ ಕೋಟಿ ರೂ ಕಳೆದುಕೊಂಡ ಹೂಡಿಕೆದಾರರು!

ಇರಾನ್ ತೈಲ ಘಟಕಗಳ ಮೇಲೆ ದಾಳಿ: ಮಿತ್ರಪಡೆಗಳಲ್ಲಿ ಬಿರುಕು, ಇಸ್ರೇಲ್ ಗೆ 'WTF'ಸಂದೇಶ ಕಳುಹಿಸಿದ ಶ್ವೇತಭವನ!

Video: ಟಿ20 ವಿಶ್ವಕಪ್ ಫೈನಲ್ ಪಂದ್ಯದ ವೇಳೆ ಮಹಿಳಾ ವರದಿಗಾರ್ತಿಗೆ ಲೈಂಗಿಕ ಕಿರುಕುಳ, ಕ್ರೀಡಾ ಪತ್ರಕರ್ತೆ ಪೋಸ್ಟ್!

GBA ಚುನಾವಣೆ: ಐದು ನಗರ ಪಾಲಿಕೆಗಳ ವಾರ್ಡ್ ವಾರು ಪರಿಷ್ಕೃತ ಕರಡು ಮತದಾರರ ಪಟ್ಟಿ ಬಿಡುಗಡೆ, ಆಕ್ಷೇಪಣೆ ಸಲ್ಲಿಕೆಗೆ ಅವಕಾಶ

T20 ವಿಶ್ವಕಪ್ 2026 ಫೈನಲ್: 'ಎಲ್ಲಾ ಅವಳ ಕಾಲ್ಗುಣ'.. ಹಾರ್ದಿಕ್ ಪಾಂಡ್ಯಾಗೆ 'ಲೇಡಿ ಲಕ್' mahieka sharma.. ಹೇಳಿದ್ದೇನು?

SCROLL FOR NEXT