ಟೀಂ ಇಂಡಿಯಾ 
ಕ್ರಿಕೆಟ್

T20 World Cup ಗೆದ್ದ ಟೀಂ ಇಂಡಿಯಾಕ್ಕೆ 131 ಕೋಟಿ ರೂ ಬಂಪರ್ ಬಹುಮಾನ! ಹೇಗೆ ಹಂಚಿಕೆಯಾಗುತ್ತೆ ಗೊತ್ತಾ?

ಫೈನಲ್‌ನಲ್ಲಿ ನ್ಯೂಜಿಲೆಂಡ್ ನ್ನು 96 ರನ್‌ಗಳಿಂದ ಸೋಲಿಸಿ ದಾಖಲೆಯ ಮೂರನೇ ಬಾರಿಗೆ T20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದ ಟೀಂ ಇಂಡಿಯಾ, ಇಡೀ ಟೂರ್ನಿಯಲ್ಲಿ ಒಂದು ಪಂದ್ಯದಲ್ಲಿ ಮಾತ್ರ ಸೋತಿದೆ.

ನವದೆಹಲಿ: ಐಸಿಸಿ T20 ವಿಶ್ವಕಪ್ ಟ್ರೋಫಿ ಮುಡಿಗೇರಿಸಿಕೊಂಡ ಭಾರತೀಯ ಕ್ರಿಕೆಟ್ ತಂಡದ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗೆ 131 ಕೋಟಿ ರೂ. ನಗದು ಬಹುಮಾನವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಘೋಷಿಸಿದೆ. 2024 ರಲ್ಲಿ T20 ವಿಶ್ವಕಪ್ ಪ್ರಶಸ್ತಿ ಗೆದ್ದ ತಂಡಕ್ಕೆ 125 ಕೋಟಿ ರೂ. ಬಹುಮಾನ ನೀಡಿದ್ದ ಬಿಸಿಸಿಐ ಇದೀಗ ತನ್ನ ಸ್ವಂತ ದಾಖಲೆಯನ್ನು ಮುರಿದಿದೆ.

ಫೈನಲ್‌ನಲ್ಲಿ ನ್ಯೂಜಿಲೆಂಡ್ ನ್ನು 96 ರನ್‌ಗಳಿಂದ ಸೋಲಿಸಿ ದಾಖಲೆಯ ಮೂರನೇ ಬಾರಿಗೆ T20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದ ಟೀಂ ಇಂಡಿಯಾ, ಇಡೀ ಟೂರ್ನಿಯಲ್ಲಿ ಒಂದು ಪಂದ್ಯದಲ್ಲಿ ಮಾತ್ರ ಸೋತಿದೆ. ಬಿಸಿಸಿಐ ಘೋಷಿಸಿರುವ 131 ಕೋಟಿ ರೂ. 15 ಮಂದಿ ಆಟಗಾರರು, ಕೋಚಿಂಗ್ ಸಿಬ್ಬಂದಿ ಮತ್ತಿತರ ಸಹಾಯಕ ಸಿಬ್ಬಂದಿ ನಡುವೆ ಹಂಚಿಕೆಯಾಗುತ್ತದೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಬಿಸಿಸಿಐ ಯಾವುದೇ ವಿವರವನ್ನು ನೀಡದಿದ್ದರೂ, 131 ಕೋಟಿ ರೂ. ಹಣದಲ್ಲಿ ಆಟಗಾರರು ಸಿಂಹಪಾಲು ಪಡೆಯಲಿದ್ದು, ಸಹಾಯಕ ಸಿಬ್ಬಂದಿಯ ಮೊತ್ತವನ್ನು ಅವರ ಸ್ಥಾನಕ್ಕೆ ಅನುಗುಣವಾಗಿ ನಿರ್ಧರಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಐಸಿಸಿ ಪುರುಷರ ಟಿ 20 ವಿಶ್ವಕಪ್‌ ಗೆಲುವಿನ ನಂತರ ಟೀಮ್ ಇಂಡಿಯಾಕ್ಕೆ 131 ಕೋಟಿ ರೂ. ನಗದು ಬಹುಮಾನವನ್ನು ಘೋಷಿಸಿರುವ ಬಿಸಿಸಿಐ, ಈ ಐತಿಹಾಸಿಕ ಸಾಧನೆಗಾಗಿ ಆಟಗಾರರು, ಸಹಾಯಕ ಸಿಬ್ಬಂದಿ ಮತ್ತು ಆಯ್ಕೆದಾರರನ್ನು ಅಭಿನಂದಿಸುತ್ತದೆ ಮತ್ತು ಭವಿಷ್ಯದಲ್ಲಿ ಅವರು ಮುಂದುವರಿಯಲಿ ಎಂದು ಹಾರೈಸುವುದಾಗಿ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡ ಟ್ರೋಫಿ ಗೆದ್ದ ಬಳಿಕ ಐಸಿಸಿಯಿಂದಲೂ ದೊಡ್ಡ ಮೊತ್ತದ ಬಹುಮಾನ ಪಡೆದುಕೊಂಡಿದೆ. ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ 96 ರನ್‌ಗಳಿಂದ ಗೆಲುವು ದಾಖಲಿಸಿದ ನಂತರ ಭಾರತ ತಂಡ ಐಸಿಸಿಯಿಂದ 2.34 ಮಿಲಿಯನ್ ಡಾಲರ್ (ಅಂದಾಜು 21.5 ಕೋಟಿ) ನಗದು ಬಹುಮಾನ ಪಡೆದಿದೆ.

ಇನ್ನೂ ರನ್ನರ್-ಅಪ್ ನ್ಯೂಜಿಲೆಂಡ್ 1.17 ಮಿಲಿಯನ್ ಡಾಲರ್ (ಸುಮಾರು 10.75 ಕೋಟಿ ರೂ) ನಗದು ಬಹುಮಾನ ಪಡೆದುಕೊಂಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯಸಭೆಯಲ್ಲಿ 3ನೇ 2ರಷ್ಟು ಬಹುಮತಕ್ಕೆ NDA ಹತ್ತಿರ: TMC ಬಂಡಾಯದ ಹೊರತಾಗಿಯೂ ಲೋಕಸಭೆಯಲ್ಲಿ ಇಲ್ಲ ಸಂಖ್ಯಾ ಬಲ!

'ಗ್ಯಾರಂಟಿ ಇದೆ, ಗ್ಯಾರಂಟಿ ಇರುತ್ತದೆ': ಗೃಹ ಲಕ್ಷ್ಮಿ, ಗೃಹ ಜ್ಯೋತಿ ಖಾತರಿಗಳನ್ನು ನಿಲ್ಲಿಸಲ್ಲ, ಆತಂಕ ಬೇಡ: ಡಿಕೆ ಶಿವಕುಮಾರ್

ಗ್ವಾಲಿಯರ್ ಅಣೆಕಟ್ಟಿನಲ್ಲಿ ಮುಳುಗಿ ಇಬ್ಬರು ಎಂಬಿಬಿಎಸ್ ವಿದ್ಯಾರ್ಥಿಗಳು ಸಾವು

AIADMKಗೆ ರಾಜೀನಾಮೆ ನೀಡಿದ ಖ್ಯಾತ ನಟಿ ಗೌತಮಿ ತಡಿಮಲ್ಲ!

ಕೊಲ್ಲೂರು ಮೂಕಾಂಬಿಕ ದರ್ಶನದ ನಂತರ ತಮಿಳುನಾಡು ಸಿಎಂ ವಿಜಯ್ ದಾಂಪತ್ಯದಲ್ಲಿ ಸಿಹಿಸುದ್ದಿ; ಸಂಗೀತಾ ಜೊತೆಗೆ ರಾಜಿ?

SCROLL FOR NEXT