ಸೌರವ್‌ ಗಂಗೂಲಿ  
ಕ್ರಿಕೆಟ್

ಹೊಸ ಕ್ಷೇತ್ರದಲ್ಲಿ ಸೌರವ್‌ ಗಂಗೂಲಿ ಸೆಕೆಂಡ್ ಇನ್ನಿಂಗ್ಸ್: 'ದಾದಾ' ಸಾರಥ್ಯದಲ್ಲಿ ಬಿಗ್ ಬಾಸ್!

ಬಿಗ್ ಬಾಸ್​​’ಗೆ ಭಾರತದಲ್ಲಿ ದೊಡ್ಡ ಮಾರುಕಟ್ಟೆ ಇದೆ. ಕಿಚ್ಚ ಸುದೀಪ್, ಸಲ್ಮಾನ್ ಖಾನ್, ಕಮಲ್ ಹಾಸನ್, ನಾಗಾರ್ಜುನ, ವಿಜಯ್ ಸೇತುಪತಿಯಂತಹ ಸ್ಟಾರ್ ನಟರು ಇದರ ಹೋಸ್ಟ್ ಆಗಿ ಮಿಂಚಿದ್ದಾರೆ.

ಭಾರತ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐನ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಅವರು ಇದೀಗ ಹೊಸ ಪ್ರಯತ್ನ ಒಂದ‌ಕ್ಕೆ ಕೈಹಾಕಿದ್ದಾರೆ. ಅವರು ಬಂಗಾಳಿ ಭಾಷೆಯಲ್ಲಿ ಶೀಘ್ರದಲ್ಲೇ ಆರಂಭವಾಗಲಿರುವ ರಿಯಾಲಿಟಿ ಶೋ ‘ಬಿಗ್ ಬಾಸ್’ ಕಾರ್ಯಕ್ರಮವನ್ನು ನಿರೂಪಕನಾಗಿ ನಡೆಸಿಕೊಡಲಿದ್ದಾರೆ.

ಬಿಗ್ ಬಾಸ್​​’ಗೆ ಭಾರತದಲ್ಲಿ ದೊಡ್ಡ ಮಾರುಕಟ್ಟೆ ಇದೆ. ಕಿಚ್ಚ ಸುದೀಪ್, ಸಲ್ಮಾನ್ ಖಾನ್, ಕಮಲ್ ಹಾಸನ್, ನಾಗಾರ್ಜುನ, ವಿಜಯ್ ಸೇತುಪತಿಯಂತಹ ಸ್ಟಾರ್ ನಟರು ಇದರ ಹೋಸ್ಟ್ ಆಗಿ ಮಿಂಚಿದ್ದಾರೆ. ಎಲ್ಲಾ ಭಾಷೆಗಳಲ್ಲೂ ಸಿನಿಮಾ ರಂಗಕ್ಕೆ ಸಂಬಂಧಿಸಿದವರೇ ಇದನ್ನು ಹೋಸ್ಟ್ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಕ್ರಿಕೆಟ್ ಕ್ಷೇತ್ರದ ಹಿನ್ನೆಲೆ ಹೊಂದಿರುವವರು ಬಿಗ್ ಬಾಸ್ ಶೋನ ನಡೆಸಿಕೊಡುತ್ತಿರುವುದು ವಿಶೇಷ.

‘ಬಿಗ್ ಬಾಸ್​’ಗೆ ವಿವಿಧ ರೀತಿಯ ಮನಸ್ಥಿತಿ ಇರುವ ವ್ಯಕ್ತಿಗಳು ಬರುತ್ತಾರೆ. ಅವರೆಲ್ಲರನ್ನೂ ಹ್ಯಾಂಡಲ್ ಮಾಡೋದು ಅಷ್ಟು ಸುಲಭ ಅಲ್ಲ. ಅದಕ್ಕೆ ಸಾಕಷ್ಟು ಖಡಕ್ ಆಗಿ ನಡೆದುಕೊಳ್ಳಬೇಕು. ಸೌರವ್ ಗಂಗೂಲಿ ಅವರು ಮೇಲ್ನೋಟಕ್ಕೆ ಸೈಲೆಂಟ್ ಇದ್ದಂತೆ ಕಂಡರೂ ಅವರು ಮೈದಾನದಲ್ಲಿ ತೋರಿಸಿದ ಅಗ್ರೆಷನ್ ಇನ್ನೂ ಜನರ ಕಣ್ಮುಂದೆ ಇದೆ. ಹೀಗಾಗಿ, ಅವರು ಬಿಗ್ ಬಾಸ್​ ನಡೆಸಿಕೊಡಲು ಉತ್ತಮ ಆಯ್ಕೆ ಎಂದು ಎಲ್ಲರೂ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಾಲಿಯಲ್ಲೂ ಮೊದಲ ಸೀಸನ್ ನಡೆದಿದ್ದು 2013ರಲ್ಲಿ. ಇದಕ್ಕೆ ಮಿಥುನ್ ಚಕ್ರವರ್ತಿ ಹೋಸ್ಟ್ ಆಗಿದ್ದರು. ಎರಡನೇ ಸೀಸನ್ ಪ್ರಸಾರ ಕಂಡಿದ್ದು, 2016ರಲ್ಲಿ. ಇದಕ್ಕೆ ಜೀತ್ ನಿರೂಪಕರಾಗಿದ್ದರು. ಆದರೆ, ಎರಡೂ ಸೀಸನ್​​ಗಳು ಅಷ್ಟಾಗಿ ಯಶಸ್ಸು ಕಾಣಲಿಲ್ಲ. ಹೀಗಾಗಿ, ಅಲ್ಲಿ ಬಿಗ್ ಬಾಸ್ ನಡೆಯಲೇ ಇಲ್ಲ. ಈಗ 10 ವರ್ಷಗಳ ಬಳಿಕ ಶೋ ಬೆಂಗಾಲಿ ಭಾಷೆಗೆ ಮರಳುತ್ತಿದೆ.

ಇತ್ತೀಚೆಗೆ ಕೋಲ್ಕತ್ತಾದ ಐತಿಹಾಸಿಕ ಈಡನ್ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಬೆಂಗಾಲಿ ''ಬಿಗ್ ಬಾಸ್'' ಕಾರ್ಯಕ್ರಮದ ಲೋಗೋವನ್ನು ಅನಾವರಣ ಮಾಡಲಾಗಿದೆ. ನಿರೂಪಕರಾಗಿ ಸೌರವ್ ಗಂಗೂಲಿ ಅವರ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.

ಇದೇ ಸಮಯದಲ್ಲಿ ಮಾತನಾಡಿರುವ ಸೌರವ್ ಗಂಗೂಲಿ ''ಬಿಗ್ ಬಾಸ್'' ವ್ಯಕ್ತಿ ಮತ್ತು ವ್ಯಕ್ತಿತ್ವಗಳ ಸಂಘರ್ಷ. ಬಂಗಾಳದಲ್ಲಿ ಈ ಕಾರ್ಯಕ್ರಮ ಆಳವಾಗಿ ಬೇರೂರುವ ವಿಶ್ವಾಸ ಇದೆ ಎಂದು ಹೇಳಿದ್ಧಾರೆ.

ಈ ವರ್ಷದ ಸೆಪ್ಟೆಂಬರ್ ನಲ್ಲಿ ಬೆಂಗಾಲಿ ''ಬಿಗ್ ಬಾಸ್‌'' ಕಾರ್ಯಕ್ರಮ ಪ್ರಸಾರವಾಗುವ ನಿರೀಕ್ಷೆ ಇದ್ದು, ಮೂರು ತಿಂಗಳು ಸೌರವ್ ಗಂಗೂಲಿ ಕಿರುತೆರೆಯ ಮೂಲಕ ಮನರಂಜನೆಯ ರಸದೌತಣ ಬಡಿಸಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇರಾನ್ ಸಂಪೂರ್ಣ ಕುಸಿಯುತ್ತಿದೆ': ಹಾರ್ಮುಜ್ ತೆರೆಯುವಂತೆ ಟೆಹ್ರಾನ್ ಬೇಡಿಕೊಳ್ಳುತ್ತಿದೆ: ಟ್ರಂಪ್

ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆ: ಹಣಕ್ಕಾಗಿ ಹೂತಿಟ್ಟ ಸಹೋದರಿ ಶವವನ್ನೇ ಬ್ಯಾಂಕ್​ಗೆ ಹೊತ್ತು ತಂದ ವ್ಯಕ್ತಿ!

IPL 2026: ಜೈಸ್ವಾಲ್, ಫೆರೀರಾ ಅಬ್ಬರಕ್ಕೆ ಪಂಜಾಬ್ ತತ್ತರ; PBKS ವಿರುದ್ಧ RR ಭರ್ಜರಿ ಗೆಲುವು

CM ಸಿದ್ದರಾಮಯ್ಯ ಪದತ್ಯಾಗಕ್ಕೂ ಸಿದ್ಧರಾಗಿದ್ದಾರೆ: ಮಾಜಿ ಸಚಿವ ಕೆ.ಎನ್ ರಾಜಣ್ಣ ಸ್ಫೋಟಕ ಹೇಳಿಕೆ; Video

ಭಾರತದ ರಕ್ಷಣಾ ವ್ಯವಸ್ಥೆಗೆ ಮತ್ತಷ್ಟು ಬಲ: ಮುಂದಿನ ತಿಂಗಳು ಭಾರತಕ್ಕೆ ಬರಲಿದೆ S-400 ಕ್ಷಿಪಣಿ 4ನೇ ಘಟಕ!

SCROLL FOR NEXT