ಐಪಿಎಲ್ ಟ್ರೋಫಿ 
ಕ್ರಿಕೆಟ್

ಪಶ್ಚಿಮ ಏಷ್ಯಾ ಸಂಘರ್ಷದಿಂದ IPL 2026ಗೆ ಸಂಕಷ್ಟ; ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ಆಟಗಾರರ ಲಭ್ಯತೆ ಬಗ್ಗೆ ಅನುಮಾನ?

ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ಆಟಗಾರರು ಬಹುತೇಕ ಎಲ್ಲ ಫ್ರಾಂಚೈಸಿಗಳಲ್ಲಿಯೂ ಇದ್ದಾರೆ. ಹೀಗಾಗಿ, ವಿಳಂಬ ಸಂಭವಿಸಿದಲ್ಲಿ, ತಂಡಗಳಿಗೆ ದೊಡ್ಡ ಹೊಡೆತಕ್ಕೆ ಕಾರಣವಾಗಬಹುದು ಎನ್ನಲಾಗಿದೆ.

T20 ವಿಶ್ವಕಪ್‌ಗಾಗಿ ಇಲ್ಲಿಗೆ ಬಂದಿದ್ದ ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾದ ಆಟಗಾರರು ಇತ್ತೀಚೆಗಷ್ಟೇ ತಮ್ಮ ತಮ್ಮ ಮನೆಗಳಿಗೆ ತೆರಳಿದ್ದಾರೆ. ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆಯಿಂದಾಗಿ, ಆಟಗಾರರು ತಮ್ಮ ತಮರು ರಾಷ್ಟ್ರಗಳಿಗೆ ಮರಳಲು ಸಾಕಷ್ಟು ಸವಾಲುಗಳು ಎದುರಾದವು. ಪಂದ್ಯಾವಳಿ ಮುಗಿದರೂ ಕೆಲ ದಿನಗಳ ಕಾಲ ಭಾರತದಲ್ಲೇ ಅನಿವಾರ್ಯವಾಗಿ ಉಳಿಯಬೇಕಾಗಿತ್ತು. ಈ ಬೆನ್ನಲ್ಲೇ, ಇದೀಗ ಈ ಆಟಗಾರರು ಮಾರ್ಚ್ 28 ರಂದು ಪ್ರಾರಂಭವಾಗುವ IPL 2026ನೇ ಆವೃತ್ತಿಗೆ ತಡವಾಗಿ ಎಲ್ಲ ಫ್ರಾಂಚೈಸಿಗಳಿಗೆ ಸೇರಬಹುದು ಎನ್ನಲಾಗಿದೆ.

ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ಆಟಗಾರರು ಬಹುತೇಕ ಎಲ್ಲ ಫ್ರಾಂಚೈಸಿಗಳಲ್ಲಿಯೂ ಇದ್ದಾರೆ. ಹೀಗಾಗಿ, ವಿಳಂಬ ಸಂಭವಿಸಿದಲ್ಲಿ, ತಂಡಗಳಿಗೆ ದೊಡ್ಡ ಹೊಡೆತಕ್ಕೆ ಕಾರಣವಾಗಬಹುದು ಎನ್ನಲಾಗಿದೆ.

IPL 2026ರ 19ನೇ ಆವೃತ್ತಿಯು ಮಾರ್ಚ್ 28 ರಂದು ಪ್ರಾರಂಭವಾಗಲಿದ್ದು, ಬಿಸಿಸಿಐ ಮೊದಲ ಹಂತದ ಐಪಿಎಲ್ ವೇಳಾಪಟ್ಟಿಯನ್ನು ಮಾರ್ಚ್ 11 ರಂದು ಪ್ರಕಟಿಸಿತು. ಮೊದಲ ಹಂತದಲ್ಲಿ ಕೇವಲ 20-ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಲಾಗಿದೆ. ಭಾರತದ ಮೂರು ರಾಜ್ಯಗಳ ಚುನಾವಣಾ ದಿನಾಂಕಗಳು ಬಹಿರಂಗಗೊಂಡ ನಂತರ ಉಳಿದ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು. ಬೆಂಗಳೂರಿನಲ್ಲಿ ಆರ್‌ಸಿಬಿ ಮತ್ತು ಎಸ್‌ಆರ್‌ಎಚ್ ನಡುವೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ.

ಇದೀಗ ಮತ್ತೊಮ್ಮೆ, ಈ ದೇಶಗಳ ವಿಮಾನ ಪ್ರಯಾಣದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಆಟಗಾರರು ಸಮಯಕ್ಕೆ ಸರಿಯಾಗಿ ತಲುಪಲು ಸಂಕಷ್ಯ ಎದುರಾಗಬಹುದು. ಸದ್ಯ ದುಬೈ ಮತ್ತು ದೋಹಾ ವಿಮಾನ ನಿಲ್ದಾಣಗಳು ಬಂದ್ ಆಗಿವೆ.

ಸುದ್ದಿಸಂಸ್ಥೆ ಪಿಟಿಐ ವರದಿ ಪ್ರಕಾರ, 'ಕಠಿಣ ಪರಿಸ್ಥಿತಿ ಎದುರಾಗಿದೆ. ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾದ ಆಟಗಾರರ ನಿರ್ಗಮನದಲ್ಲಿ ಸಾಕಷ್ಟು ವಿಳಂಬವಾಗಿದೆ. ಇದೀಗ ಅವರನ್ನು ಸಮಯಕ್ಕೆ ಸರಿಯಾಗಿ ಭಾರತಕ್ಕೆ ಕರೆತರುವುದು ಕೂಡ ಕಠಿಣ ಕೆಲಸವಾಗಿದೆ. ಜೊತೆಗೆ, ಪಶ್ಚಿಮ ಏಷ್ಯಾದಲ್ಲಿನ ಯುದ್ಧದಿಂದಾಗಿ ವಿಮಾನ ದರಗಳು ಗಣನೀಯವಾಗಿ ಏರಿದೆ' ಎಂದು ಅಧಿಕಾರಿ ಹೇಳಿದರು.

ಸಿಎಸ್‌ಕೆ ಸಿಇಒ ಕಾಸಿ ವಿಶ್ವನಾಥನ್, ವೆಸ್ಟ್ ಇಂಡೀಸ್‌ನ ಅಕೆಲ್ ಹೊಸೈನ್ ಮತ್ತು ದಕ್ಷಿಣ ಆಫ್ರಿಕಾದ ಬ್ಯಾಟರ್ ಡೆವಾಲ್ಡ್ ಬ್ರೆವಿಸ್ ಇಬ್ಬರೂ ತಂಡದ ಮೊದಲ ಪಂದ್ಯಕ್ಕೂ ಮುನ್ನವೇ ತಂಡವನ್ನು ಸೇರಿಕೊಳ್ಳುತ್ತಾರೆ. ಅವರ ಕಡೆಯಿಂದ ನಾವು ಯಾವುದೇ ವಿಳಂಬವನ್ನು ನಿರೀಕ್ಷಿಸುತ್ತಿಲ್ಲ ಎಂದು ಪಿಟಿಐಗೆ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಂಚಿ ಪರೀಕ್ಷೆ ವಿವಾದ: ಬ್ಯಾರಿಕೇಡ್ ಮುರಿದು ವಿಧಾನಸೌಧದತ್ತ ನುಗ್ಗಿದ ವಿದ್ಯಾರ್ಥಿಗಳು! ಜಲಫಿರಂಗಿ ಬಳಸಿದ ಪೊಲೀಸರು, Video

TNIE Exclusive | Air India ವಿಮಾನದಲ್ಲಿ ಭಾರೀ ತಾಂತ್ರಿಕ ದೋಷ..! Phuket-Delhi ವಿಮಾನ 300 ಅಡಿ ಕುಸಿತಕ್ಕೆ Triple hydraulic systems ವೈಫಲ್ಯ ಕಾರಣ..?

ಸಂಪುಟ ವಿಸ್ತರಣೆ ಬಿಕ್ಕಟ್ಟು ಶಮನಕ್ಕೆ ಸಿಎಂ ಡಿಕೆ.ಶಿವಕುಮಾರ್ ದೆಹಲಿಗೆ ದೌಡು: ಹೈಕಮಾಂಡ್‌ ಜೊತೆ ಮಹತ್ವದ ಚರ್ಚೆ..!

ಬಿಡದಿ ಯೋಜನೆಗೆ ಭೂಸ್ವಾಧೀನ ವಿರೋಧಿಸಿ ಜೆಡಿಎಸ್ ಪಾದಯಾತ್ರೆ: ಮಾಜಿ ಪ್ರಧಾನಿ HD ದೇವೇಗೌಡ ಭಾಗಿ

Maharashtra: ಶಾಲಾ ಹಾಸ್ಟೆಲ್‌ನಲ್ಲಿ ಭೀಕರ ದುರಂತ: ಮಲಗಿದ್ದ 6 ಬಾಲಕಿಯರಿಗೆ ಹಾವು ಕಡಿತ, ಮೂವರ ಸಾವು!