ಸಲ್ಮಾನ್ ಅಲಿ ಆಘಾ 
ಕ್ರಿಕೆಟ್

Cricket: ಪಾಕಿಸ್ತಾನಕ್ಕೆ ಗಾಯದ ಮೇಲೆ ಬರೆ; ICC ಕ್ರಮ.. ಡಿಮೆರಿಟ್ ಪಾಯಿಂಟ್!

ಬಾಂಗ್ಲಾದೇಶ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಪಾಕಿಸ್ತಾನದ ಸ್ಟಾರ್ ಬ್ಯಾಟ್ಸ್‌ಮನ್ ಸಲ್ಮಾನ್ ಅಲಿ ಅಘಾ ವಿವಾದಾತ್ಮಕ ರನ್ ಔಟ್‌ಗೆ ಬಲಿಯಾಗಿದ್ದರು.

ಢಾಕಾ: ಬಾಂಗ್ಲಾದೇಶ ವಿರುದ್ಧ ಏಕದಿನ ಸರಣಿಯಲ್ಲಿ ಪಾಲ್ಗೊಂಡಿರುವ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಶಾಕ್ ಮೇಲೆ ಶಾಕ್ ಎದುರಾಗುತ್ತಿದ್ದು, ಮೊದಲ ಏಕದಿನ ಪಂದ್ಯದಲ್ಲಿ ಹೀನಾಯವಾಗಿ ಸೋತಿದ್ದ ಪಾಕಿಸ್ತಾನಕ್ಕೆ ಇದೀಗ ಐಸಿಸಿ ಕ್ರಮ ಕೈಗೊಳ್ಳುವ ಮೂಲಕ ಗಾಯದ ಮೇಲೆ ಬರೆ ಎಳೆದಿದೆ.

ಶುಕ್ರವಾರ ಢಾಕಾದ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಪಾಕಿಸ್ತಾನದ ಸ್ಟಾರ್ ಬ್ಯಾಟ್ಸ್‌ಮನ್ ಸಲ್ಮಾನ್ ಅಲಿ ಅಘಾ ವಿವಾದಾತ್ಮಕ ರನ್ ಔಟ್‌ಗೆ ಬಲಿಯಾಗಿದ್ದರು.

ಈ ಔಟ್ ಬಳಿಕ ಸಲ್ಮಾನ್ ಅಲಿ ಅಘಾ ಅಂಪೈರ್ ವಿರುದ್ಧ ಮತ್ತು ಬಾಂಗ್ಲಾದೇಶ ನಾಯಕನ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದರು.

ಇದೇ ವಿಚಾರವಾಗಿ ಪಂದ್ಯದ ರೆಫರಿ ನಿಯಮೂರ್ ರಶೀದ್ ಪಾಕಿಸ್ತಾನ ಕ್ರಿಕೆಟಿಗ ಸಲ್ಮಾನ್ ಅಲಿ ಅಘಾ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

"ಅಂತರರಾಷ್ಟ್ರೀಯ ಪಂದ್ಯದ ಸಮಯದಲ್ಲಿ ಕ್ರಿಕೆಟ್ ಉಪಕರಣಗಳು ಅಥವಾ ಬಟ್ಟೆ, ನೆಲದ ಉಪಕರಣಗಳು ಅಥವಾ ಫಿಕ್ಸ್ಚರ್‌ಗಳು ಮತ್ತು ಫಿಟ್ಟಿಂಗ್‌ಗಳ ದುರುಪಯೋಗ"ಕ್ಕೆ ಸಂಬಂಧಿಸಿದ ಐಸಿಸಿ ಆಟಗಾರರು ಮತ್ತು ಆಟಗಾರರ ಬೆಂಬಲ ಸಿಬ್ಬಂದಿಯ ನೀತಿ ಸಂಹಿತೆಯ ಆರ್ಟಿಕಲ್ 2.2 ರ ಉಲ್ಲಂಘನೆಗಾಗಿ ಆಘಾ ಅವರನ್ನು ಮ್ಯಾಚ್ ರೆಫರಿ ನಿಯಮೂರ್ ರಶೀದ್ ಲೆವೆಲ್ 1 ಅಪರಾಧಕ್ಕಾಗಿ ತಪ್ಪಿತಸ್ಥರೆಂದು ಘೋಷಿಸಿದ್ದಾರೆ.

ಅಂತೆಯೇ ಅಘಾ ನಡೆಯನ್ನು ಪಂದ್ಯದ ರೆಫರಿ ನಿಯಮೂರ್ ರಶೀದ್ ಅವರನ್ನು ಖಂಡಿಸಿದ್ದು ಒಂದು ಡಿಮೆರಿಟ್ ಪಾಯಿಂಟ್ ಸಹ ನೀಡಿದರು.

ಆಗಿದ್ದೇನು?

2ನೇ ಏಕದಿನ ಪಂದ್ಯದ ಪಾಕಿಸ್ತಾನದ ಇನ್ನಿಂಗ್ಸ್‌ನ 39 ನೇ ಓವರ್‌ ನಲ್ಲಿ ಆಘಾ 64 ರನ್ ಗಳಿಸಿ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ಈ ವೇಳೆ ಬಾಂಗ್ಲಾದೇಶದ ಬೌಲರ್ ಮೆಹದಿ ಹಸನ್ ಎಸೆದ ನಾಲ್ಕನೇ ಚೆಂಡನ್ನು ರಿಜ್ವಾನ್ ನೇರವಾಗಿ ಬೌಲರ್ ಕಡೆಗೆ ಆಡಿದರು.

ಇತ್ತ ನಾನ್-ಸ್ಟ್ರೈಕರ್ ತುದಿಯಲ್ಲಿ ನಿಂತಿದ್ದ ಸಲ್ಮಾನ್ ಆಘಾ ರನ್​ಗಾಗಿ ತಮ್ಮ ಕ್ರೀಸ್‌ನಿಂದ ಹೊರಬಂದರಾದರೂ ಅಲ್ಲಿ ರನ್ ಇಲ್ಲದಿರುವುದನ್ನು ಗಮನಿಸಿ ಅಲ್ಲಿಯೇ ನಿಂತರು. ಅಷ್ಟರಲ್ಲಿ ರಿಜ್ವಾನ್ ಬಾರಿಸಿದ ಚೆಂಡು ಕೂಡ ಆಘಾ ಕಡೆಗೆ ಬಂತು. ಹೀಗಾಗಿ ಆಘಾ ಚೆಂಡನ್ನು ಹಿಡಿದು ಬೌಲರ್​ ಮೆಹದಿ ಹಸನ್​ಗೆ ರವಾನಿಸಲು ಪ್ರಯತ್ನಿಸಿದರು.

ಈ ಹಂತದಲ್ಲಿ ಚಾಣಾಕ್ಷತೆ ತೋರಿದ ಮೆಹದಿ ಹಸನ್ ತಾವೇ ಚೆಂಡನ್ನು ಎತ್ತಿಕೊಂಡು ನೇರವಾಗಿ ಸ್ಟಂಪ್​ಗೆ ಎಸೆದರು. ಇದೆಲ್ಲ ನಡೆಯುವಾಗ ಕ್ರೀಸ್​ನಿಂದ ಹೊರಗೆ ನಿಂತಿದ್ದ ಆಘಾ, ಕ್ರೀಸ್ ಒಳಗೆ ಬರುವ ಪ್ರಯತ್ನವನ್ನು ಮಾಡಲಿಲ್ಲ. ಹೀಗಾಗಿ ಚೆಂಡನ್ನು ಸ್ಟಂಪ್​ಗೆ ಎಸೆದ ಕೂಡಲೇ ಮೆಹದಿ ಹಸನ್​ ಔಟ್​ಗಾಗಿ ಅಂಪೈರ್ ಬಳಿ ಮನವಿ ಮಾಡಲಾರಂಬಿಸಿದರು.

ಇದನ್ನು ನೋಡಿ ಆಘಾತಕ್ಕೊಳಗಾದ ಆಘಾ, ಹಸನ್ ಜೊತೆಗೆ ವಾದಿಸಲು ಪ್ರಾರಂಭಿಸಿದರು. ಇತ್ತ ಫೀಲ್ಡ್ ಅಂಪೈರ್ ಮೂರನೇ ಅಂಪೈರ್​ ಬಳಿ ಮರುಪರಿಶೀಲನೆಗೆ ಮನವಿ ಮಾಡಿದರು. ಎಲ್ಲವನ್ನು ಕುಲಂಕುಶವಾಗಿ ಪರಿಶೀಲಿಸಿದ ಅಂಪೈರ್, ಸಲ್ಮಾನ್ ಆಘಾ ಔಟೆಂದು ತೀರ್ಪು ನೀಡಿದರು. ಇದರಿಂದ ಇನ್ನಷ್ಟು ಕೆರಳಿದ ಆಘಾ, ತಮ್ಮ ಹೆಲ್ಮೆಟ್ ಮತ್ತು ಕೈಗ್ಲೌಸ್ ಗಳನ್ನು ತೆಗೆದು ನೆಲದ ಮೇಲೆ ಬಡಿದು ಆಕ್ರೋಶ ಹೊರಹಾಕಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭಾರತೀಯ ನಾವಿಕರ ಹತ್ಯೆ: ಅಮೆರಿಕಾ ಆದೇಶಗಳ ಪಾಲಿಸುವ 'obedient servant': ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಕೊಲ್ಲೂರು ಮೂಕಾಂಬಿಕ ದರ್ಶನದ ನಂತರ ತಮಿಳುನಾಡು ಸಿಎಂ ವಿಜಯ್ ದಾಂಪತ್ಯದಲ್ಲಿ ಸಿಹಿಸುದ್ದಿ; ಸಂಗೀತಾ ಜೊತೆಗೆ ರಾಜಿ?

AIADMKಗೆ ರಾಜೀನಾಮೆ ನೀಡಿದ ಖ್ಯಾತ ನಟಿ ಗೌತಮಿ ತಡಿಮಲ್ಲ!

ಬೆಂಗಳೂರು ಅಭಿವೃದ್ಧಿ ಖಾತೆ ಹಗ್ಗಜಗ್ಗಾಟ: ಅಧಿಕಾರಗಳ ಬಗ್ಗೆ ಸ್ಪಷ್ಟತೆ ಸಿಕ್ಕ ಬಳಿಕವಷ್ಟೇ ಅಧಿಕಾರ ಸ್ವೀಕಾರ: ಕೃಷ್ಣ ಬೈರೇಗೌಡ

ಭಾರತೀಯ ನಾವಿಕರ ಸಾವು: ‘ವಾಣಿಜ್ಯ ಹಡಗುಗಳ ಮೇಲಿನ ದಾಳಿ ನ್ಯಾಯಸಮ್ಮತವಲ್ಲ’; ಅಮೆರಿಕಾಗೆ ಭಾರತ ಖಡಕ್‌ ಸಂದೇಶ, ರಾಜತಾಂತ್ರಿಕ ಸಂಘರ್ಷ ಉಲ್ಬಣ

SCROLL FOR NEXT