ವಿವಾದಿತ ರನೌಟ್ ಕುರಿತು ಅಮಿರ್ ಆಕ್ರೋಶ 
ಕ್ರಿಕೆಟ್

Cricket: 'ಕ್ರಿಕೆಟ್​ನ ಮೌಲ್ಯಗಳನ್ನೇ ನಿರ್ನಾಮ ಮಾಡಿದ್ದಾರೆ': ವಿವಾದಿತ ರನೌಟ್ ಕುರಿತು ಅಮಿರ್ ಆಕ್ರೋಶ

ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ನಡೆದ ಸಲ್ಮಾನ್ ಅಲಿ ಅಘಾ ಅವರ ವಿವಾದಾತ್ಮಕ ರನ್-ಔಟ್ ಬಗ್ಗೆ ಪಾಕ್ ತಂಡದ ಮಾಜಿ ವೇಗಿ ಮೊಹಮ್ಮದ್ ಆಮಿರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಢಾಕಾ: ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಏಕದಿನ ಸರಣಿ ವಿವಾದ ಮುಗಿಯುವ ಲಕ್ಷಣಗಳೇ ಕಾಣುತ್ತಿಲ್ಲ.. ಸಲ್ಮಾನ್ ಅಲಿ ಅಘಾ ಅವರ ವಿವಾದಿತ ರನೌಟ್ ವಿಚಾರವಾಗಿ ಇದೀಗ ಮಾಜಿ ವೇಗಿ ಮಹಮದ್ ಆಮೀರ್ ಕಿಡಿಕಾರಿದ್ದಾರೆ.

ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ನಡೆದ ಸಲ್ಮಾನ್ ಅಲಿ ಅಘಾ ಅವರ ವಿವಾದಾತ್ಮಕ ರನ್-ಔಟ್ ಬಗ್ಗೆ ಪಾಕ್ ತಂಡದ ಮಾಜಿ ವೇಗಿ ಮೊಹಮ್ಮದ್ ಆಮಿರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುದ್ದಿವಾಹಿನಿಯೊಂದಿಗೆ ಮಾತನಾಡಿರುವ ಆಮೀರ್, 'ಕ್ರಿಕೆಟ್​ನಲ್ಲಿ ಅಂಪೈರಿಂಗ್ ಮಟ್ಟ ದಿನೇ ದಿನೇ ಕುಸಿಯುತ್ತಿದೆ. ಮೆಹದಿ ಹಸನ್ ಅವರು ಅಘಾ ಕ್ರೀಸ್‌ಗೆ ಮರಳದಂತೆ ಅಡ್ಡಿಪಡಿಸಿದರು. ಇದನ್ನು ಅಂಪೈರ್‌ಗಳು ಗಮನಿಸಬೇಕಿತ್ತು ಎಂದು ಆಮೀರ್ ಅಭಿಪ್ರಾಯಪಟ್ಟಿದ್ದಾರೆ.

ಅಂತೆಯೇ 'ಈ ರನ್-ಔಟ್ ನಿಯಮದ ಪ್ರಕಾರ ಸರಿ ಇರಬಹುದು. ಆದರೆ ಕ್ರಿಕೆಟ್‌ನ ‘ಕ್ರೀಡಾ ಸ್ಫೂರ್ತಿ’ಯ ದೃಷ್ಟಿಯಿಂದ ಇದು ತಪ್ಪು. ಬಾಂಗ್ಲಾದೇಶ ತಂಡವು ಸೌಜನ್ಯ ಮೆರೆಯಬಹುದಿತ್ತು. ಅಘಾ ಅವರನ್ನು ಬೌಲರ್ ತಡೆದಿದ್ದರಿಂದ, ಇದರ ಲಾಭವನ್ನು ಬ್ಯಾಟರ್‌ಗೆ ನೀಡಬೇಕಿತ್ತು.

ಆದರೆ ಇದ್ಯಾವುದನ್ನೂ ಅಂಪೈರ್ ಗಮನಿಸಲೇ ಇಲ್ಲ. ಕ್ರಿಕೆಟ್ ಎಂಬುದು ಜಂಟಲ್​ಮ್ಯಾನ್ ಗೇಮ್. ಆದರೆ ಇಲ್ಲಿ ಬಾಂಗ್ಲಾದೇಶ್ ಆಟಗಾರ ಮೆಹದಿ ಹಸನ್ ಮಿರಾಝ್ ಕ್ರೀಡಾ ಸ್ಫೂರ್ತಿಯನ್ನೇ ಮರೆತಿದ್ದಾರೆ. ಅವರು ಕ್ರಿಕೆಟ್​ನ ಮೌಲ್ಯಗಳನ್ನೇ ನಿರ್ನಾಮ ಮಾಡಿದ್ದಾರೆ ಎಂದು ಮೊಹಮ್ಮದ್ ಅಮಿರ್ ಆಕ್ರೋಶ ಹೊರಹಾಕಿದ್ದಾರೆ.

ಆಗಿದ್ದೇನು?

ಢಾಕಾದಲ್ಲಿ ನಡೆದ ಈ ಪಂದ್ಯದಲ್ಲಿ ಮೊಹಮ್ಮದ್ ರಿಝ್ವಾನ್ ಹೊಡೆದ ಚೆಂಡನ್ನು ತಡೆಯಲು ಬೌಲರ್ ಮೆಹದಿ ಹಸನ್ ಮಿರಾಝ್ ಪ್ರಯತ್ನಿಸಿದರು. ಈ ವೇಳೆ ಕ್ರೀಸ್​ನಿಂದ ಹೊರಗಿದ್ದ ಅಘಾ ಚೆಂಡು ಬೌಲರ್‌ಗೆ ನೀಡಲು ಮುಂದಾಗಿದ್ದರು. ಸಲ್ಮಾನ್ ಅಲಿ ಅಘಾ ಅವರು ಚೆಂಡನ್ನು ಎತ್ತಿ ಕೊಡಲು ಮುಂದಾದಾಗ, ಮೆಹದಿ ಹಸನ್ ಅವರು ತಕ್ಷಣವೇ ಚೆಂಡನ್ನು ಎತ್ತಿ ಸ್ಟಂಪ್‌ಗಳಿಗೆ ಎಸೆದರು.

ಅಘಾ ಕ್ರೀಸ್‌ನಿಂದ ಹೊರಗಿದ್ದ ಕಾರಣ ಮೂರನೇ ಅಂಪೈರ್ ಅವರನ್ನು ‘ಔಟ್’ ಎಂದು ಘೋಷಿಸಿದರು. ಅಂಪೈರ್ ತೀರ್ಪಿನಿಂದ ಕೆರಳಿದ ಸಲ್ಮಾನ್ ಅಲಿ ಅಘಾ ಕ್ರೀಸ್‌ನಲ್ಲೇ ತಮ್ಮ ಹೆಲ್ಮೆಟ್ ಮತ್ತು ಗ್ಲೌಸ್‌ಗಳನ್ನು ಎಸೆದು ಆಕ್ರೋಶ ಹೊರಹಾಕಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೌರಿಂಗ್ ಆಸ್ಪತ್ರೆ ದುರಂತ: ಆಸ್ಪತ್ರೆಗೆ ಸಿಎಂ ಸಿದ್ದರಾಮಯ್ಯ ಭೇಟಿ, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ ಪರಿಹಾರ ಘೋಷಣೆ

IPL 2026: ರಿಕಲ್ಟನ್ ಶತಕ ವ್ಯರ್ಥ; ಮುಂಬೈ ನೀಡಿದ ಟಾರ್ಗೆಟ್ ಧೂಳಿಪಟ, ದಾಖಲೆಯ 249 ರನ್ ಬಾರಿಸಿದ ಗೆದ್ದ SRH!

ಬಾಂಗ್ಲಾದೇಶ ಸರ್ಕಾರ ದೊಡ್ಡ ತಪ್ಪು ಮಾಡಿದೆ... ಟಿ20 ವಿಶ್ವಕಪ್ ಬಗ್ಗೆ ಶಕೀಬ್ ಅಲ್ ಹಸನ್ 'ಸ್ಫೋಟಕ ಹೇಳಿಕೆ'!

IPL 2026: 'ಬ್ಯಾಟಲ್ಲಿ AI Chip ಇದೆ' ಎಂದ ಪಾಕಿಸ್ತಾನದ Nouman Niaz ಗೆ ಬಟ್ಟೆ ಸುತ್ತಿ ಹೊಡೆದ ವೈಭವ್ ಸೂರ್ಯವಂಶಿ

Exit polls: ದೀದಿಗೆ ಶಾಕ್; BJP ತೆಕ್ಕೆಗೆ ಬಂಗಾಳ; ಅಸ್ಸಾಂನಲ್ಲೂ ಕಮಲ ಮ್ಯಾಜಿಕ್!

SCROLL FOR NEXT