ವೈಭವ್ ಸೂರ್ಯವಂಶಿ 
ಕ್ರಿಕೆಟ್

IPL 2026: 'ವೈಭವ್ ಸೂರ್ಯವಂಶಿ ಸಿಡಿದು ನಿಂತರೆ, ರಾಜಸ್ಥಾನ್ ರಾಯಲ್ಸ್ ತಡೆಯಲು ಯಾರಿಂದಲೂ ಸಾಧ್ಯವಿಲ್ಲ'

'ಸೂರ್ಯವಂಶಿ ತುಂಬಾ ರೋಮಾಂಚಕಾರಿ ಪ್ರತಿಭೆ. ಅವರು U19 ವಿಶ್ವಕಪ್ ಮತ್ತು ಕಳೆದ ಐಪಿಎಲ್‌ನಲ್ಲಿ ಆಡಿದ ರೀತಿಯಲ್ಲಿಯೇ ಅವರು ಆಡುವುದನ್ನು ಮುಂದುವರಿಸುವುದನ್ನು ನೋಡಲು ನಾನು ಬಯಸುತ್ತೇನೆ'.

14 ವರ್ಷದ ವೈಭವ್ ಸೂರ್ಯವಂಶಿ 2025ರಲ್ಲಿ ತಮ್ಮ ಮೊದಲ ಐಪಿಎಲ್ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಎಲ್ಲರನ್ನೂ ಬೆರಗುಗೊಳಿಸಿದರು. ಕೇವಲ 14 ವರ್ಷ ವಯಸ್ಸಿನಲ್ಲಿ, ಸೂರ್ಯವಂಶಿ ಐಪಿಎಲ್‌ನಲ್ಲಿ ವಿಶ್ವದ ಕೆಲವು ಅಗ್ರ ಬೌಲರ್‌ಗಳನ್ನು ನಿರ್ಭೀತಿಯಿಂದ ಎದುರಿಸುವ ಮೂಲಕ ಗಮನ ಸೆಳೆದರು. ಅದ್ಭುತ ಪ್ರತಿಭೆಯನ್ನು ಪ್ರದರ್ಶಿಸಿದ ಬಿಹಾರ ಮೂಲದ ಈ ಆಟಗಾರ ರಾಜಸ್ಥಾನ ರಾಯಲ್ಸ್ (RR) ಪರ ಏಳು ಪಂದ್ಯಗಳಲ್ಲಿ 252 ರನ್ ಗಳಿಸಿದರು. ಅವರ ಸ್ಫೋಟಕ ಬ್ಯಾಟಿಂಗ್ ಶೈಲಿಯಿಂದಾಗಿ ಅಭಿಮಾನಿಗಳನ್ನು ರೋಮಾಂಚನಗೊಳಿಸಿದರು. ಗುಜರಾತ್ ಟೈಟಾನ್ಸ್ (GT) ವಿರುದ್ಧ ಕೇವಲ 35 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ ಐಪಿಎಲ್‌ನಲ್ಲಿ ಅತ್ಯಂತ ವೇಗವಾಗಿ ಮತ್ತು ಶತಕ ಗಳಿಸಿದ ಅತ್ಯಂತ ಕಿರಿಯ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ರಾಜಸ್ಥಾನ್ ರಾಯಲ್ಸ್ ತಂಡ ಮುಂಬರುವ ಆವೃತ್ತಿಗೆ ಸಜ್ಜಾಗುತ್ತಿದ್ದು, ಅಭಿಮಾನಿಗಳು ಮತ್ತೊಮ್ಮೆ ವೈಭವ್ ಸೂರ್ಯವಂಶಿ ಅವರ ಆಟವನ್ನು ಕಣ್ತುಂಬಿಕೊಳ್ಳಲು ಉತ್ಸುಕರಾಗಿದ್ದಾರೆ. ವೈಭವ್ ಸೂರ್ಯವಂಶಿ ಭಾರತದ U19 ವಿಶ್ವಕಪ್ ಗೆಲುವಿನಲ್ಲಿ ತಮ್ಮ ಅಸಾಧಾರಣ ಬ್ಯಾಟಿಂಗ್ ಪ್ರದರ್ಶನದೊಂದಿಗೆ ಪ್ರಮುಖ ಪಾತ್ರ ವಹಿಸಿದರು.

ಭಾರತದ ಮಾಜಿ ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್, ವೈಭವ್ ಸೂರ್ಯವಂಶಿ ತಮ್ಮ ಪೂರ್ಣ ಸಾಮರ್ಥ್ಯಕ್ಕೆ ತಕ್ಕಂತೆ ಪ್ರದರ್ಶನ ನೀಡಿದರೆ, ಆರ್‌ಆರ್ ಪಂದ್ಯಾವಳಿಯಲ್ಲಿ ಅಜೇಯ ಶಕ್ತಿಯಾಗಬಹುದು ಎಂದು ಹೇಳಿದ್ದಾರೆ.

'ಈ ಆವೃತ್ತಿಯಲ್ಲಿ ವೈಭವ್ ಸೂರ್ಯವಂಶಿ ದೊಡ್ಡ ಅಂಶವಾದರೆ, ರಾಜಸ್ಥಾನ ರಾಯಲ್ಸ್ ತಂಡವನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ಆದರೆ, ಇದು ಅವರ ಎರಡನೇ ಸೀಸನ್ - ಅವರು ಇನ್ನೂ ಚಿಕ್ಕವರು ಮತ್ತು ಅನನುಭವಿ. ಆದ್ದರಿಂದ ಅವರನ್ನು ಹೆಚ್ಚು ಒತ್ತಡಕ್ಕೆ ಒಳಪಡಿಸಬಾರದು. ಮಾಧ್ಯಮ ನಿರೂಪಣೆಗಳು ಇರುತ್ತವೆ, ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತದೆ' ಎಂದು ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

'ಸೂರ್ಯವಂಶಿ ತುಂಬಾ ರೋಮಾಂಚಕಾರಿ ಪ್ರತಿಭೆ. ಅವರು U19 ವಿಶ್ವಕಪ್ ಮತ್ತು ಕಳೆದ ಐಪಿಎಲ್‌ನಲ್ಲಿ ಆಡಿದ ರೀತಿಯಲ್ಲಿಯೇ ಅವರು ಆಡುವುದನ್ನು ಮುಂದುವರಿಸುವುದನ್ನು ನೋಡಲು ನಾನು ಬಯಸುತ್ತೇನೆ. ಅವರು ಮೊದಲ ಎಸೆತದಿಂದಲೇ ಸ್ಲಾಗ್ ಮಾಡಬೇಕೆಂದು ನಾನು ಬಯಸುತ್ತೇನೆ. ಆದರೆ, ಈ ಆವೃತ್ತಿಯಲ್ಲಿ ಎಲ್ಲ ತಂಡಗಳು ಅವರ ವಿರುದ್ಧ ಯೋಜನೆ ರೂಪಿಸಿಕೊಂಡು ಬರುತ್ತವೆ' ಎಂದರು.

'ನಾಯಕನಾಗಿ ರಿಯಾನ್ ಪರಾಗ್ ತಂಡವನ್ನು ಮುನ್ನಡೆಸುವುದು ಅಷ್ಟು ಸುಲಭವಲ್ಲ. ಅನೇಕ ಯುವಕರು ನಾಯಕತ್ವವನ್ನು ಬಯಸುತ್ತಾರೆ ಮತ್ತು ಅದಕ್ಕಾಗಿ ತೀವ್ರವಾಗಿ ಸ್ಪರ್ಧಿಸುತ್ತಾರೆ. ಜೋಫ್ರಾ ಆರ್ಚರ್ ಉತ್ತಮ ಪ್ರದರ್ಶನ ನೀಡಿದರೆ, ಬಿಷ್ಣೋಯ್ ಉತ್ತಮ ಪ್ರದರ್ಶನ ನೀಡಿದರೆ, ಮತ್ತು ಜಡೇಜಾ ತಮ್ಮ ನಾಲ್ಕು ಓವರ್‌ಗಳು ಮತ್ತು ಫಿನಿಶಿಂಗ್ ಪಾತ್ರವನ್ನು ನಿರ್ವಹಿಸಿದರೆ, ಅದು ಪರಾಗ್ ಅವರ ಕೆಲಸವನ್ನು ಹೆಚ್ಚು ಸುಲಭಗೊಳಿಸುತ್ತದೆ' ಎಂದರು.

'ಯಶಸ್ವಿ ಜೈಸ್ವಾಲ್ ಅವರನ್ನು ಆರ್‌ಆರ್ ಭವಿಷ್ಯದ ನಾಯಕನನ್ನಾಗಿ ಮಾಡುತ್ತದೆ. ನನ್ನ ಮನಸ್ಸಿನಲ್ಲಿ ಎಲ್ಲೋ ಒಂದು ಕಡೆ, ಜಡೇಜಾ ನಾಯಕನಾಗಬಹುದೆಂದು ಅನಿಸಿತು. ಅವರನ್ನು ನಾಯಕನನ್ನಾಗಿ ಮತ್ತು ಪರಾಗ್ ಅವರನ್ನು ಒಂದು ಅಥವಾ ಎರಡು ವರ್ಷಗಳ ಕಾಲ ಉಪನಾಯಕನನ್ನಾಗಿ ಮಾಡಿದ್ದರೆ ಚೆನ್ನಾಗಿ ಕೆಲಸ ಮಾಡಬಹುದಿತ್ತು' ಎಂದು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾರಿಗೆ ನೌಕರರಿಗೆ ಗುಡ್ ನ್ಯೂಸ್: ಕೊನೆಗೂ ವೇತನ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ; ಜುಲೈ 1 ರಿಂದ ಜಾರಿ

IPL 2026: 82 ರನ್‌ಗಳಿಂದ SRH ಮಣಿಸಿದ Gujarat Titans; RCB ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಗಿಲ್ ಪಡೆ!

ಬಂಗಾಳದಲ್ಲಿ ಶುದ್ಧೀಕರಣ ಶುರು ಮಾಡಿದ ಸಿಎಂ ಸುವೇಂದು: TMC ನೇಮಕ ಮಾಡಿದ್ದ ಗ್ರೂಪ್ ಎ ಶ್ರೇಣಿಯ 232 ಅಧಿಕಾರಿಗಳ ವಜಾ!

ಒಂದೇ ಒಂದು ದಾಳಿ ನಡೆದರೂ ಯುರೇನಿಯಂ ದಾಸ್ತಾನು ಶಸ್ತ್ರಾಸ್ತ್ರ ದರ್ಜೆಗೆ ಸಂವರ್ಧನೆ- ಅಮೆರಿಕಾಗೆ ಇರಾನ್ ಕಠಿಣ ಎಚ್ಚರಿಕೆ!

Gruha Lakshmi | ದಕ್ಷಿಣ ಕನ್ನಡದಲ್ಲಿ ಮೃತ ಫಲಾನುಭವಿಗಳ ಖಾತೆಗೆ 22 ಕೋಟಿ ರೂ ಗೃಹಲಕ್ಷ್ಮಿ ಹಣ ಜಮೆ!

SCROLL FOR NEXT