ವೈಭವ್ ಸೂರ್ಯವಂಶಿ 
ಕ್ರಿಕೆಟ್

IPL 2026: ವೈಭವ್ ಸೂರ್ಯವಂಶಿ ಬ್ಯಾಟಿಂಗ್ ವೈಖರಿಗೆ ಬೌಲರ್‌ಗಳೇ ಹೆದರುತ್ತಾರೆ; ಕಾರಣ ತಿಳಿಸಿದ RCB ಆಟಗಾರ ಜಿತೇಶ್ ಶರ್ಮಾ

ವೈಭವ್ ಮತ್ತೊಂದು ಐಪಿಎಲ್ ಸೀಸನ್ ಆಡಲು ಸಜ್ಜಾಗುತ್ತಿರುವಂತೆಯೇ, ಭಾರತ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿಕೆಟ್ ಕೀಪರ್-ಬ್ಯಾಟರ್ ಜಿತೇಶ್ ಶರ್ಮಾ ಮಾತನಾಡಿದ್ದಾರೆ.

ಮಾರ್ಚ್ 28 ರಿಂದ ಪ್ರಾರಂಭವಾಗುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರಲ್ಲಿ ವೈಭವ್ ಸೂರ್ಯವಂಶಿ ಸುತ್ತ ಇದೀಗ ಹಲವರ ಗಮನ ನೆಟ್ಟಿದೆ. 14 ವರ್ಷದ ಈ ಯುವ ಆಟಗಾರ ಪಂದ್ಯಾವಳಿಯಲ್ಲಿ ಮತ್ತು ಭಾರತ ಪರ 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ತನ್ನ ಅಸಾಮಾನ್ಯ ಬ್ಯಾಟಿಂಗ್ ಸಾಮರ್ಥ್ಯದಿಂದ ಎಲ್ಲರನ್ನೂ ದಿಗ್ಭ್ರಮೆಗೊಳಿಸಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ, ಸೂರ್ಯವಂಶಿ ಅಂತ್ಯಂತ ನಿರ್ಭೀತಿಯಿಂದ ಬೃಹತ್ ಸಿಕ್ಸರ್‌ಗಳನ್ನು ಸಿಡಿಸುತ್ತಾರೆ. ಟಿ20 ಕ್ರಿಕೆಟ್‌ನಲ್ಲಿ ತಮ್ಮನ್ನು ತಾವು ಅಪರೂಪದ ಸರಕು ಎಂದು ಸಾಭೀತುಪಡಿಸಿದ್ದಾರೆ. 2025ರಲ್ಲಿ ತಮ್ಮ ಚೊಚ್ಚಲ ಐಪಿಎಲ್ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ವೈಭವ್, ಗುಜರಾತ್ ಟೈಟಾನ್ಸ್ ವಿರುದ್ಧ ಕೇವಲ 35 ಎಸೆತಗಳಲ್ಲಿಯೇ ಶತಕ ಗಳಿಸುವ ಮೂಲಕ ಐಪಿಎಲ್‌ನಲ್ಲಿ ಶತಕ ಗಳಿಸಿದ ಅತ್ಯಂತ ಕಿರಿಯ ಮತ್ತು ವೇಗದ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ವೈಭವ್ ಮತ್ತೊಂದು ಐಪಿಎಲ್ ಸೀಸನ್ ಆಡಲು ಸಜ್ಜಾಗುತ್ತಿರುವಂತೆಯೇ, ಭಾರತ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿಕೆಟ್ ಕೀಪರ್-ಬ್ಯಾಟರ್ ಜಿತೇಶ್ ಶರ್ಮಾ ಮಾತನಾಡಿದ್ದಾರೆ. ಆರ್‌ಆರ್‌ನ ನೆಟ್ ಬೌಲರ್‌ಗಳು ಅಭ್ಯಾಸದ ಸಮಯದಲ್ಲಿ ವೈಭವ್‌ಗೆ ಬೌಲಿಂಗ್ ಮಾಡಲು ಹೆದರುತ್ತಾರೆ ಎಂದು ಅವರು ಹೇಳಿದರು.

'ತುಂಬಾ ಮುದ್ದಾದ ಹುಡುಗ. ಅವನು ಅಭ್ಯಾಸಕ್ಕಾಗಿ ತಲೆಗಾಂವ್‌ಗೆ ಬರುತ್ತಿದ್ದನು. ಅಲ್ಲಿ ಆರ್‌ಆರ್‌ನ ಅಕಾಡೆಮಿ ಇದೆ. ಅಲ್ಲಿ ನಾನು ಅವನ ಬಗ್ಗೆ ತಿಳಿದುಕೊಂಡೆ, ನಂತರ ನಾವು ಕತಾರ್‌ನಲ್ಲಿ ಆಡಲು ಹೋದೆವು. ಅಲ್ಲಿ ನಾನು ನಾಯಕನಾಗಿದ್ದೆ, ಆದ್ದರಿಂದ ನಮ್ಮ ಬಾಂಧವ್ಯವು ರೂಪುಗೊಂಡಿತು' ಎಂದು ಜಿತೇಶ್ ರಣವೀರ್ ಅಲ್ಹಾಬಾದಿಯಾ ಅವರ ಯೂಟ್ಯೂಬ್‌ನಲ್ಲಿ ಪಾಡ್‌ಕ್ಯಾಸ್ಟ್‌ನಲ್ಲಿ ಹೇಳಿದರು.

'ಇದೆಲ್ಲವೂ ನೈಸರ್ಗಿಕ, ಅವರು ತುಂಬಾ ಬಲಶಾಲಿ. ಅವರ ಮಣಿಕಟ್ಟುಗಳು ನನ್ನ ಮಣಿಕಟ್ಟುಗಳಿಗಿಂತ ದೊಡ್ಡದಾಗಿದೆ. ಅವನಿಗೆ ನನ್ನ ಗಡಿಯಾರವನ್ನು ಕೊಟ್ಟೆ ಮತ್ತು ಅದು ಅವನಿಗೆ ಬಿಗಿಯಾಗಿತ್ತು.

'ಛೋಟಾ ಹಲ್ಕ್ ಹೈ ವೋ (ಅವನು ಬೇಬಿ ಹಲ್ಕ್). ಅವನು ತನ್ನ ಬ್ಯಾಟ್ ಅನ್ನು ಎಷ್ಟು ಜೋರಾಗಿ ಬೀಸುತ್ತಾನೆಂದರೆ, ಅದು ಬೌಲರ್‌ಗೆ ನೇರವಾಗಿ ಬಿದ್ದರೆ ಸಾಯಬಹುದು ಎಂದು ಹೆದರುತ್ತಾರೆ. ಆರ್‌ಆರ್‌ನ ನೆಟ್ಸ್ ಬೌಲರ್‌ಗಳು ನನಗೆ ಗೊತ್ತು. ಅವರು ಚೆಂಡನ್ನು ಪಿಚ್ ಮಾಡುವುದಿಲ್ಲ ಏಕೆಂದರೆ, ಅವನು ಅದನ್ನು ನೇರವಾಗಿ ಹಿಂದಕ್ಕೆ ಹೊಡೆಯಬಹುದು ಎಂದು ಹೇಳುತ್ತಾರೆ. ಆದ್ದರಿಂದ ಅವರು ಅವನನ್ನು ತಮ್ಮಿಂದ ದೂರ ಹೊಡೆಯಲು ಶಾರ್ಟ್ ಬಾಲ್‌ಗಳನ್ನು ಎಸೆಯುತ್ತಾರೆ' ಎಂದರು.

2025ರ ಆವೃತ್ತಿಗೆ ಮುನ್ನ ನಡೆದ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ₹1.1 ಕೋಟಿಗೆ ಅವರನ್ನು ಖರೀದಿಸಿದ ನಂತರ ವೈಭವ್ ಸೂರ್ಯವಂಶಿ ಬೆಳಕಿಗೆ ಬಂದರು. ಅವರು ಏಳು ಪಂದ್ಯಗಳಲ್ಲಿ 36.00 ಸರಾಸರಿ ಮತ್ತು 206.56 ಸ್ಟ್ರೈಕ್ ರೇಟ್‌ನೊಂದಿಗೆ 252 ರನ್‌ ಗಳಿಸಿದರು.

ಗಾಯಗೊಂಡ ಸಂಜು ಸ್ಯಾಮ್ಸನ್ ಬದಲಿಗೆ ವೈಭವ್ ಅವರನ್ನು ಆರ್‌ಆರ್ ಪ್ಲೇಯಿಂಗ್ XI ಗೆ ಸೇರಿಸಲಾಯಿತು ಮತ್ತು ಅವರು ಎಂದಿಗೂ ಹಿಂತಿರುಗಿ ನೋಡಲಿಲ್ಲ. ಗುಜರಾತ್ ಟೈಟಾನ್ಸ್ ವಿರುದ್ಧದ ತಮ್ಮ ಎರಡನೇ ಪಂದ್ಯದಲ್ಲಿ ಸೂರ್ಯವಂಶಿ ದಾಖಲೆಯ ಶತಕ ಸಿಡಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West Asia conflict- ಗ್ರಾಹಕರಿಗೆ ಸ್ವಲ್ಪ ನಿರಾಳ, ಪೆಟ್ರೋಲ್-ಡೀಸೆಲ್ ಮೇಲಿನ ಅಬಕಾರಿ ಸುಂಕ ಇಳಿಸಿದ ಕೇಂದ್ರ ಸರ್ಕಾರ

ವಿದೇಶಾಂಗ ಸಚಿವ ಅರಘ್ಚಿ, ಸ್ಪೀಕರ್ ಹತ್ಯೆಗೆ ಅಮೆರಿಕ, ಇಸ್ರೇಲ್ ಸಂಚು: ವಿಶ್ವಸಂಸ್ಥೆಗೆ ಇರಾನ್ ಮಾಹಿತಿ

ಭಾರತದಲ್ಲಿ ಲಾಕ್‌ಡೌನ್ ವದಂತಿಗಳು ಸಂಪೂರ್ಣ ಸುಳ್ಳು, ಅಂತಹ ಯಾವುದೇ ಪ್ರಸ್ತಾಪವಿಲ್ಲ: ಹರ್ದೀಪ್ ಸಿಂಗ್ ಪುರಿ

ಸಿಬ್ಬಂದಿ ಕೊರತೆಯಿಂದ ನಮ್ಮ ಸೇನೆ ಕುಸಿಯಬಹುದು: ಇಸ್ರೇಲ್ ರಕ್ಷಣಾ ಪಡೆಗಳ ಮುಖ್ಯಸ್ಥ ಹೀಗೆ ಹೇಳಿದ್ಯಾಕೆ?

ಯುದ್ಧ ನಡುವಲ್ಲೇ ಅಮೆರಿಕಾ ರಾಜತಾಂತ್ರಿಕ ಹೆಜ್ಜೆ: ಇರಾನ್ ಮೇಲಿನ ದಾಳಿ ಗಡುವು ಮುಂದೂಡಿಕೆ, ಶಾಂತಿ ಮಾತುಕತೆಗಳಿಗೆ ಒತ್ತು..!

SCROLL FOR NEXT