ಮೊಹಮ್ಮದ್ ಕೈಫ್ 
ಕ್ರಿಕೆಟ್

'ಈಗ ಇದೆಲ್ಲ ಏಕೆ ಬೇಕಿತ್ತು ?': ವಿರಾಟ್ ಕೊಹ್ಲಿ ಟೀಕಾಕಾರಗಿಗೆ ತಿರುಗೇಟು ನೀಡಿದ ಮಾಜಿ ಆಟಗಾರ ಮೊಹಮ್ಮದ್ ಕೈಫ್!

ಭಾರತದ ದಿಗ್ಗಜ ಆಟಗಾರ ಕಳೆದ ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಏಕದಿನ ಕ್ರಿಕೆಟ್‌ನಲ್ಲಿ ಭಾರತಕ್ಕಾಗಿ ಸ್ಥಿರವಾದ ಇನಿಂಗ್ಸ್‌ಗಳೊಂದಿಗೆ ತಮ್ಮನ್ನು ತಾವು ಸಾಬೀತುಪಡಿಸಿದ್ದಾರೆ.

ವಿರಾಟ್ ಕೊಹ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿ ಎರಡು ವರ್ಷಗಳಾಗಿವೆ. ಆದರೆ, ಶನಿವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಆರಂಭಿಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ವಿರುದ್ಧ ಗೆಲುವು ಸಾಧಿಸುವ ಮೂಲಕ ಶುಭಾರಂಭ ಮಾಡಿದೆ. ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ, ಕೇವಲ 38 ಎಸೆತಗಳಲ್ಲಿ 69 ರನ್ ಗಳಿಸಿ ಅಜೇಯರಾಗಿ ಉಳಿದರು. ಈ ಮೂಲಕ ವಿರಾಟ್ ಕೊಹ್ಲಿ ಟೀಕಾಕಾರರ ಬಾಯಿ ಮುಚ್ಚಿಸಿದರು. ಕೊಹ್ಲಿಯ ಪ್ರಮುಖ ಇನಿಂಗ್ಸ್ ಆರ್‌ಸಿಬಿಗೆ ಪ್ರಬಲ ಗೆಲುವು ತಂದುಕೊಟ್ಟಿತು.

ಮಾಜಿ ಆಟಗಾರ ಮೊಹಮ್ಮದ್ ಕೈಫ್, ವಿರಾಟ್ ಕೊಹ್ಲಿ ಅವರ ಕಥೆ ಮುಗಿದಿದೆ ಎಂದಿದ್ದವರ ವಿರುದ್ಧ ವಾಗ್ದಾಳಿ ನಡೆಸಿದರು. ಭಾರತದ ದಿಗ್ಗಜ ಆಟಗಾರ ಕಳೆದ ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಏಕದಿನ ಕ್ರಿಕೆಟ್‌ನಲ್ಲಿ ಭಾರತಕ್ಕಾಗಿ ಸ್ಥಿರವಾದ ಇನಿಂಗ್ಸ್‌ಗಳೊಂದಿಗೆ ತಮ್ಮನ್ನು ತಾವು ಸಾಬೀತುಪಡಿಸಿದ್ದಾರೆ. ಇತ್ತೀಚೆಗೆ ಅವರು ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಕುತೂಹಲಕಾರಿ ಪೋಸ್ಟ್ ಒಂದನ್ನು ಹಾಕಿರುವ ಕೈಫ್, ವೈಟ್-ಬಾಲ್ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಅವರ ಕೊನೆಯ 10 ಸ್ಕೋರ್‌ಗಳನ್ನು ಹೈಲೈಟ್ ಮಾಡಿದ್ದಾರೆ. 'ಆಸ್ಟ್ರೇಲಿಯಾದಲ್ಲಿ ಎರಡು ಡಕ್‌ಗಳ ನಂತರ, ವಿರಾಟ್ ಕೊಹ್ಲಿ ಫಿನಿಶ್ ಆಗಿದ್ದಾರೆ ಎಂದು ಕೆಲವರು ಹೇಳಿದ್ದರು. ಆದರೆ, ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಅವರ ಕೊನೆಯ 10 ಸ್ಕೋರ್‌ಗಳು: 74, 135, 102, 65, 131, 77, 93, 23, 124 ಮತ್ತು 69* (ಈ ಪಂದ್ಯದಲ್ಲಿ)' ಎಂದು ಬರೆದಿದ್ದಾರೆ.

ಕೈಫ್ ಅವರ ಪೋಸ್ಟ್ ನೋಡಿದ ಅಭಿಮಾನಿಗಳು, ಭಾರತದ ಮಾಜಿ ಬ್ಯಾಟ್ಸ್‌ಮನ್ ಈಗ ಇಂತಹ ವಿಷಯಗಳನ್ನು ಏಕೆ ಪ್ರಸ್ತಾಪಿಸಿದರು ಎಂದು ಆಶ್ಚರ್ಯಪಟ್ಟರು. ವಿರಾಟ್ ಕೊಹ್ಲಿಯನ್ನು ಟೀಕಿಸಿದ್ದು ರೆಡ್-ಬಾಲ್ ಕ್ರಿಕೆಟ್‌ನಲ್ಲಿ ರನ್ ಗಳಿಸಲು ಸಾಧ್ಯವಾಗದ ಅವಧಿಗೆ ಸೀಮಿತವಾಗಿತ್ತು ಎಂದು ಕೆಲವರು ಎತ್ತಿ ತೋರಿಸಿದರು. ಆ ಸಮಯದಲ್ಲಿ ಟೀಕೆಗಳು ಸಮರ್ಥನೀಯ ಎಂದರು.

ಮತ್ತೊಂದು ದಾಖಲೆ ಬರೆದ ವಿರಾಟ್ ಕೊಹ್ಲಿ

ಈ ಪಂದ್ಯದಲ್ಲಿ ಕೊಹ್ಲಿ ಮತ್ತೊಮ್ಮೆ ದಾಖಲೆ ಮಾಡಿದರು. ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ರನ್ ಚೇಸಿಂಗ್‌ನಲ್ಲಿ 4,000 ರನ್‌ಗಳನ್ನು ದಾಟಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಪಾಕಿಸ್ತಾನದ ಮಾಜಿ ಬ್ಯಾಟ್ಸ್‌ಮನ್ ಶೋಯೆಬ್ ಮಲಿಕ್ ಅವರನ್ನು ಹಿಂದಿಕ್ಕಿ ಟಿ20 ಕ್ರಿಕೆಟ್‌ನಲ್ಲಿ ಆರನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾದರು. ಮಲಿಕ್ 557 ಪಂದ್ಯಗಳು ಮತ್ತು 515 ಇನಿಂಗ್ಸ್‌ಗಳಲ್ಲಿ 13,571 ರನ್ ಗಳಿಸಿದ್ದಾರೆ.

SRH ವಿರುದ್ಧದ ಪಂದ್ಯದಲ್ಲಿ ಕೊಹ್ಲಿ 33 ಎಸೆತಗಳಲ್ಲಿ ತಮ್ಮ 64ನೇ ಐಪಿಎಲ್ ಅರ್ಧಶತಕವನ್ನು ಬಾರಿಸಿದರು. ನಂತರ 16ನೇ ಓವರ್‌ನಲ್ಲಿ ಹರ್ಷಲ್ ಪಟೇಲ್ ಅವರ ನಾಲ್ಕು ಎಸೆತಗಳಲ್ಲಿ 18 ರನ್ ಗಳಿಸುವ ಮೂಲಕ ಪಂದ್ಯವನ್ನು ಮುಗಿಸಿದರು. ಕೊಹ್ಲಿ ಜೊತೆಗೆ, ಇಂಪ್ಯಾಕ್ಟ್ ಪ್ಲೇಯರ್ ದೇವದತ್ ಪಡಿಕ್ಕಲ್ ಕೂಡ 26 ಎಸೆತಗಳಲ್ಲಿ ನಾಲ್ಕು ಸಿಕ್ಸರ್‌ಗಳು ಮತ್ತು ಏಳು ಬೌಂಡರಿಗಳೊಂದಿಗೆ 61 ರನ್ ಗಳಿಸುವ ಮೂಲಕ ಉತ್ತಮ ಪ್ರದರ್ಶನ ನೀಡಿದರು. ಬೆಂಗಳೂರು ತಂಡವು 26 ಎಸೆತಗಳು ಬಾಕಿ ಇರುವಾಗ ಕೇವಲ 15.4 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 203 ರನ್ ಗಳಿಸಿತು.

ಆರ್‌ಸಿಬಿ ತಂಡವು ಕೇವಲ 15.4 ಓವರ್‌ಗಳಲ್ಲಿ ಪಂದ್ಯವನ್ನು ವಶಪಡಿಸಿಕೊಂಡಿತು. ಪಂದ್ಯಾವಳಿಯ ಮೊದಲ ಪಂದ್ಯದಲ್ಲೇ ಅವರ ನೆಟ್ ರನ್ ರೇಟ್ ಗಮನಾರ್ಹ ಏರಿಕೆ ಕಂಡಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಟ್ರಂಪ್ ಎಚ್ಚರಿಕೆಗೆ ಬಗ್ಗದ ಇರಾನ್: ಸೌದಿ ವಾಯುನೆಲೆ ಮೇಲೆ ಮುಂದುವರೆದ ಕ್ಷಿಪಣಿ ದಾಳಿ; ಅಮೆರಿಕಾದ 15 ಸೈನಿಕರಿಗೆ ಗಾಯ, ಐವರ ಸ್ಥಿತಿ ಗಂಭೀರ

'ನಾವು ಓದುವಾಗ ಹಿಂದಿ ಭಾಷೆ ಕಡ್ಡಾಯ ಇರಲಿಲ್ಲ, ಪರೀಕ್ಷೆಗೆ ಅದು ಕಡ್ಡಾಯ ಆಗಬಾರದು': ಸಿಎಂ ಸಿದ್ದರಾಮಯ್ಯ

IPL 2026: ಚಿನ್ನಸ್ವಾಮಿಯಲ್ಲಿ RCB ಬ್ಯಾಟಿಂಗ್ ಅಬ್ಬರ; ಟಿ20 ಲೀಗ್​ನ ವಿಶ್ವ ದಾಖಲೆಯೇ ಉಡೀಸ್..!

IPL ಟಿಕೆಟ್ ವಿವಾದ: ಎರೆಡರಡು VIP ಪಾಸ್ ಪಡೆದರೂ ಮೈದಾನಕ್ಕೆ ಬಾರದ ಶಾಸಕರು, ಟೀಕೆ ಶುರು

IPL 2026, RCB vs SRH: ಕಿಂಗ್ ಕೊಹ್ಲಿ ಸ್ಫೋಟಕ ಬ್ಯಾಟಿಂಗ್; ಉದ್ಘಾಟನಾ ಪಂದ್ಯ ಗೆದ್ದು ಬೀಗಿದ ಬೆಂಗಳೂರು

SCROLL FOR NEXT