ಆರ್‌ಸಿಬಿ 
ಕ್ರಿಕೆಟ್

IPL 2026: ಚಿನ್ನಸ್ವಾಮಿಯಲ್ಲಿ RCB ಬ್ಯಾಟಿಂಗ್ ಅಬ್ಬರ; ಟಿ20 ಲೀಗ್​ನ ವಿಶ್ವ ದಾಖಲೆಯೇ ಉಡೀಸ್..!

ನಗರದ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ Sunrisers Hyderabad ವಿರುದ್ಧ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಎಸ್‌ಆರ್‌ಹೆಚ್ ತಂಡ 201/9 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.

ಬೆಂಗಳೂರು: ಐಪಿಎಲ್ 2026 ಟೂರ್ನಿಯ ಆರಂಭದಲ್ಲೇ Royal Challengers Bengaluru (ಆರ್‌ಸಿಬಿ) ತಂಡ ಐತಿಹಾಸಿಕ ಸಾಧನೆ ಮಾಡಿದೆ. 200ಕ್ಕೂ ಹೆಚ್ಚು ರನ್‌ಗಳ ಗುರಿಯನ್ನು ಅತಿ ವೇಗವಾಗಿ ಬೆನ್ನಟ್ಟಿ ದಾಖಲೆ ನಿರ್ಮಿಸಿದೆ.

ನಗರದ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ Sunrisers Hyderabad ವಿರುದ್ಧ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಎಸ್‌ಆರ್‌ಹೆಚ್ ತಂಡ 201/9 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ತಂಡದ ಪರ ಇಶಾನ್ ಕಿಶನ್ ಅದ್ಭುತವಾಗಿ ಬ್ಯಾಟ್ ಬೀಸಿದ್ದು, 80 ರನ್ ಗಳಿಸಿ ತಂಡವನ್ನು ಉತ್ತಮ ಸ್ಥಿತಿಗೆ ತಲುಪಿಸಿದರು. ಕೊನೆಯ ಓವರ್‌ಗಳಲ್ಲಿ ಕೆಲವು ವೇಗದ ರನ್‌ಗಳು ಬಂದ ಕಾರಣ, ಆರ್‌ಸಿಬಿಗೆ ದೊಡ್ಡ ಗುರಿ ಎದುರಾಯಿತು.

ಆದರೆ, ಗುರಿ ಬೆನ್ನಟ್ಟಿದ ಆರ್‌ಸಿಬಿ ಆರಂಭದಿಂದಲೇ ಆಕ್ರಮಣಕಾರಿ ಆಟ ತೋರಿತು. ಪವರ್‌ಪ್ಲೇಯಲ್ಲೇ ವೇಗವಾಗಿ ರನ್‌ಗಳನ್ನು ಕಲೆಹಾಕಿ ಪಂದ್ಯವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿತು. ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಜೋಡಿಯಾಗಿ ಕಣಕ್ಕಿಳಿದು ಅಬ್ಬರದ ಬ್ಯಾಟಿಂಗ್ ಮಾಡಿ, ಪಂದ್ಯ ಸಂಪೂರ್ಣವಾಗಿ ಒಂದೇ ದಿಕ್ಕಿನಲ್ಲಿ ಸಾಗಿತು.

ವಿರಾಟ್ ಕೊಹ್ಲಿ ಅವರ ಜೊತೆ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ದೇವದತ್ತ ಪಡಿಕ್ಕಲ್ ಅವರು ಕೇವಲ 26 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 7 ಬೌಂಡರಿಗಳ ನೆರವಿನಿಂದ 61 ರನ್ ಸಿಡಿಸಿದರು. ಕೊನೆವರೆಗೂ ಕ್ರೀಸ್‌ನಲ್ಲಿದ್ದ ವಿರಾಟ್ ಕೊಹ್ಲಿ 38 ಎಸೆತಗಳಲ್ಲಿ 5 ಬೌಂಡರಿ ಹಾಗೂ 5 ಸಿಕ್ಸರ್‌ ನೆರವಿನಿಂದ ಅಜೇಯ 69 ರನ್ ಸಿಡಿಸಿದರು.

ಇವರಿಬ್ಬರ ನಡುವೆ ಕೇವಲ 45 ಬಾಲ್‌ಗಳಲ್ಲಿ 100ಕ್ಕೂ ಹೆಚ್ಚು ರನ್‌ಗಳನ್ನು ಕಲೆ ಹಾಕಿದರು. ಈ ಜೊತೆಯಾಟವೇ ಗೆಲುವಿನ ಕೀಲಿಕೈ ಆಯಿತು.

ಇದರಲ್ಲಿ ಗಮನಾರ್ಹ ಸಂಗತಿ ಏನೆಂದರೆ, ಆರ್‌ಸಿಬಿ 10 ಓವರ್ ಮುಗಿಯುವಷ್ಟರಲ್ಲಿ ದೊಡ್ಡ ಮಟ್ಟದ ರನ್‌ಗಳನ್ನು ಕಲೆಹಾಕಿ, ಅಗತ್ಯ ರನ್‌ರೇಟ್ ಅನ್ನು ಪಡೆದಿತ್ತು. ಮಧ್ಯ ಓವರ್‌ಗಳಲ್ಲಿಯೂ ರನ್‌ ಕಡಿಮೆಯಾಗದೆ ಮುಂದುವರಿದಿದ್ದು, ಎಸ್‌ಆರ್‌ಹೆಚ್ ಬೌಲರ್‌ಗಳಿಗೆ ಯಾವುದೇ ಅವಕಾಶ ನೀಡಲಿಲ್ಲ.

ಅಂತಿಮವಾಗಿ ಆರ್‌ಸಿಬಿ ಕೇವಲ 15.4 ಓವರ್‌ಗಳಲ್ಲಿ 203/4 ರನ್ ಗಳಿಸಿ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಇದು ಐಪಿಎಲ್ ಇತಿಹಾಸದಲ್ಲೇ ಅತಿ ವೇಗದ 200+ ರನ್‌ಗಳ ಚೇಸ್ ಆಗಿದೆ. ಇದಕ್ಕೂ ಮೊದಲು ಯಾವುದೇ ತಂಡ ಇಷ್ಟು ಕಡಿಮೆ ಓವರ್‌ಗಳಲ್ಲಿ ಇಂತಹ ಗುರಿಯನ್ನು ತಲುಪಿರಲಿಲ್ಲ.

ಈ ಸಾಧನೆಯಿಂದ ಆರ್‌ಸಿಬಿ ತಂಡದ ನೆಟ್ ರನ್ ರೇಟ್ ಕೂಡ ದೊಡ್ಡ ಮಟ್ಟದಲ್ಲಿ ಏರಿಕೆಯಾಗಿದೆ. ಟೂರ್ನಿಯ ಆರಂಭದಲ್ಲೇ ಇಂತಹ ಗೆಲುವು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ,

ಬೌಲಿಂಗ್ ವಿಭಾಗದಲ್ಲಿಯೂ ಆರ್‌ಸಿಬಿ ಕೆಲ ಕ್ಷಣಗಳಲ್ಲಿ ಒತ್ತಡ ಸೃಷ್ಟಿಸಿದರೂ, ಒಟ್ಟಾರೆ ಪಂದ್ಯದಲ್ಲಿ ಬ್ಯಾಟಿಂಗ್ ಪ್ರದರ್ಶನವೇ ಮುಖ್ಯ ಆಕರ್ಷಣೆಯಾಯಿತು. ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಈ ಗೆಲುವನ್ನು ಭರ್ಜರಿಯಾಗಿ ಸಂಭ್ರಮಿಸುತ್ತಿದ್ದು, ಈ ಪಂದ್ಯವನ್ನು ಐಪಿಎಲ್ ಇತಿಹಾಸದ ಅತ್ಯಂತ ರೋಚಕ ಚೇಸ್‌ಗಳಲ್ಲಿ ಒಂದಾಗಿ ಪರಿಗಣಿಸುತ್ತಿದ್ದಾರೆ.

ಒಟ್ಟಿನಲ್ಲಿ, ಆರ್‌ಸಿಬಿ ಈ ಪಂದ್ಯದಲ್ಲಿ ತೋರಿಸಿದ ಉತ್ತಮ ಪ್ರದರ್ಶನ, ವೇಗ ಮತ್ತು ಆತ್ಮವಿಶ್ವಾಸ ಐಪಿಎಲ್ 2026 ಟೂರ್ನಿಗೆ ಭರ್ಜರಿ ಆರಂಭ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕರ್ನಾಟಕ ಸೇರಿ ದೇಶಾದ್ಯಂತ Pakನ ISI ಬೆಂಬಲಿತ ಗ್ಯಾಂಗಸ್ಟರ್ ಶಹಜಾದ್ ಭಟ್ಟಿ ಜಾಲದ 200ಕ್ಕೂ ಹೆಚ್ಚು ಜನರ ಬಂಧನ: ಅಮಿತ್ ಶಾ

ಸಚಿವ ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಬಿಗಿಪಟ್ಟು: ವಿಧಾನಸಭೆಯಲ್ಲಿ ಪ್ರತಿಭಟನೆ, ಗದ್ದಲ, ಕಲಾಪಕ್ಕೆ ಅಡ್ಡಿ!

'ಸ್ವಲ್ಪ ತಾಳ್ಮೆಯಿಂದ ಕಾಯಿರಿ' ಪಾಕಿಸ್ತಾನ, ಬಾಂಗ್ಲಾದೇಶ, ಅಪ್ಘಾನಿಸ್ತಾನ ಮತ್ತೆ ಭಾರತಕ್ಕೆ ಸೇರಿಕೊಳ್ಳುವ ದಿನ ಬರುತ್ತದೆ- ಬಾಬಾ ರಾಮದೇವ್!

ಆಪ್ ಕಿ ಅದಾಲತ್‌ನಲ್ಲಿ 'ಗಡ್ಡದ ಹಿಂದಿನ ಕಥೆ ಬಿಚ್ಚಿಟ್ಟ ಸೂಪರ್ ಸ್ಟಾರ್ ಯಶ್! Video

BJYM: Tejasvi Surya ಸ್ಥಾನಕ್ಕೆ ನೂತನ ನೇಮಕ; ಯಾರು ಈ ಡಾ. ಹೇಮಾಂಗ್ ಜೋಶಿ?