ಕ್ರಿಕೆಟ್

'Pink Looks Good On Me': ಗನ್ ಶಾಟ್ ಸೆಲೆಬ್ರೇಷನ್; CKS ಮ್ಯಾನೇಜ್​​ಮೆಂಟ್ ಗೆ ಜಡೇಜಾ ಹೇಳಿದ್ದೇನು? Video

ಎಂಟನೇ ಓವರ್ ನಲ್ಲಿ ಬೌಲಿಂಗ್ ಮಾಡಿದ ರವೀಂದ್ರ ಜಡೇಜಾ, ಹಾಕಿದ ಮೊದಲ ಓವರ್​​​ನ ಎರಡನೇ ಬಾಲ್​​ನಲ್ಲಿ ಸರ್ಫರಾಜ್ ಖಾನ್ ಅವರನ್ನು ಔಟ್ ಮಾಡಿದರು. 12 ಬಾಲ್​​ಗೆ 17 ರನ್ ಬಾರಿಸಿ ಸರ್ಫರಾಜ್ ಪೆವಿಲಿಯನ್ ಸೇರಿದರು.

ಗುವಾಹಟಿ: ಗುವಾಹಟಿಯ ACA ಮೈದಾನದಲ್ಲಿ ಸೋಮವಾರ ರಾತ್ರಿ ನಡೆದ ಐಪಿಎಲ್ 2026 ಪಂದ್ಯದಲ್ಲಿ ಚೆನ್ನೆ ಸೂಪರ್ ಕಿಂಗ್ಸ್ ವಿರುದ್ಧ ಪ್ರಭಾವಶಾಲಿ ಬೌಲಿಂಗ್ ಮಾಡಿದ ಅನುಭವಿ ಎಡಗೈ ಸ್ಪಿನರ್, ಆಲ್‌ರೌಂಡರ್ ರವೀಂದ್ರ ಜಡೇಜಾ ಎರಡು ವಿಕೆಟ್ ಪಡೆದು ರಾಜಸ್ಥಾನ ರಾಯಲ್ಸ್ ಗೆಲುವಿನಲ್ಲಿ ಕೊಡುಗೆ ನೀಡಿದರು.

ಎಂಟನೇ ಓವರ್ ನಲ್ಲಿ ಬೌಲಿಂಗ್ ಮಾಡಿದ ರವೀಂದ್ರ ಜಡೇಜಾ, ಹಾಕಿದ ಮೊದಲ ಓವರ್​​​ನ ಎರಡನೇ ಬಾಲ್​​ನಲ್ಲಿ ಸರ್ಫರಾಜ್ ಖಾನ್ ಅವರನ್ನು ಔಟ್ ಮಾಡಿದರು. 12 ಬಾಲ್​​ಗೆ 17 ರನ್ ಬಾರಿಸಿ ಸರ್ಫರಾಜ್ ಪೆವಿಲಿಯನ್ ಸೇರಿದರು.

ನಂತರ ಕಣಕ್ಕೆ ಇಳಿದ ಶಿವಂ ದುಬೆ ಕೂಡಾ ಸಿಕ್ಸರ್ ಹೊಡೆಯಲು ಹೋಗಿ ಕ್ಯಾಚ್ ನೀಡಿ ನಿರ್ಗಮಿಸಿದರು. ಈ ಮೂಲಕ ಒಂದೇ ಓವರ್​ ಅಲ್ಲಿ ಎರಡು ವಿಕೆಟ್ ತೆಗೆದು ಜಡೇಜಾ ಮಿಂಚಿದರು.

ಈ ವೇಳೆ ಜಡೇಜಾ ಭರ್ಜರಿಯಾಗಿ ಸೆಲೆಬ್ರೇಷನ್ ಕೂಡ ಮಾಡಿದರು. ಗನ್ ಪೋಸ್ ಕೊಟ್ಟು ಸೆಲೆಬ್ರೇಷನ್ ಮಾಡುವ ಮೂಲಕ CKS ಮ್ಯಾನೇಜ್​​ಮೆಂಟ್ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.

ಬಳಿಕ ಪಂದ್ಯದ ನಂತರ ಮಾತನಾಡಿದ ರವೀಂದ್ರ ಜಡೇಜಾ, ನನಗೆ ಗುಲಾಬಿ ಬಣ್ಣವು ಚೆನ್ನಾಗಿ ಕಾಣುತ್ತದೆ ಎಂದುಭಾವಿಸುತ್ತೇನೆ. ಶಿವಂ ದುಬೆ ಬಹಳ ಸಮಯದಿಂದ ನನಗೆ ತಿಳಿದಿದೆ.ಅವರಿಗೆ ನೆಟ್ಸ್‌ನಲ್ಲಿ ಬೌಲಿಂಗ್ ಮಾಡಿದ್ದೇನೆ, ಆದ್ದರಿಂದ ಅವರು ಸ್ಪಿನ್ನರ್‌ಗಳನ್ನು ಹೇಗೆ ಎದುರಿಸುತ್ತಾರೆ ಎಂಬುದನ್ನು ನಾನು ಚೆನ್ನಾಗಿ ಅರ್ಥಮಾಡಿಕೊಂಡಿದ್ದೇನೆ ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್

Cricket: ಪಂತ್‌ರಂತೆ ಆಡಲು ಪ್ರಯತ್ನಿಸಲ್ಲ, ಅವರ ಜೊತೆ ಆಡೋದು ದೊಡ್ಡ ಅನುಭವ: ಫಿಟ್ನೆಸ್ ಅಪ್ಡೇಟ್ ಕೊಟ್ಟ Dhruv Jurel

ಜೈ ಜವಾನ್, ಜೈ ಕಿಸಾನ್: ಐತಿಹಾಸಿಕ ಶತಕದ ಬಳಿಕ ಹೊಸ ಟ್ಯಾಟೂ ರಿವೀಲ್ ಮಾಡಿದ Dhruv Jurel