ಪ್ರೀತಿ ಜಿಂಟಾ 
ಕ್ರಿಕೆಟ್

RR ವಿರುದ್ಧ PBKS ಸೋಲು; 'ಹಲವು ಪಂದ್ಯಗಳು ನಮ್ಮ ಮುಂದಿವೆ, ಇದು ತುಂಬಾ ಸಂತೋಷ'; ತಂಡದ ಸೋಲಿಗೆ ಪ್ರೀತಿ ಜಿಂಟಾ

ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂಜಾಬ್ ಕಿಂಗ್ಸ್ ಪಂದ್ಯಕ್ಕೆ ಕೆಂಪು ದುಪ್ಪಟ್ಟಾ ಧರಿಸಿದ್ದ ಜಿಂಟಾ, ಅದರ ಹಿಂದಿನ ಕಾರಣವನ್ನು ಬಹಿರಂಗಪಡಿಸಿದರು.

ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ತಂಡದ ಸಹ-ಮಾಲೀಕರಾದ ಪ್ರೀತಿ ಜಿಂಟಾ ಐಪಿಎಲ್ 2026ನೇ ಆವೃತ್ತಿಯ ಮೊದಲ ಸೋಲಿನ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಮಂಗಳವಾರ ಮುಲ್ಲನ್‌ಪುರದಲ್ಲಿ ನಡೆದ ತಮ್ಮ ಕೊನೆಯ ತವರು ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ (RR) ವಿರುದ್ಧ ಪಿಬಿಕೆಎಸ್ ಸೋಲು ಕಂಡಿತು. ಶ್ರೇಯಸ್ ಅಯ್ಯರ್ ನೇತೃತ್ವದ ತಂಡವು ತನ್ನ ಎರಡನೇ ತವರಾದ ಧರ್ಮಶಾಲಾದಲ್ಲಿ ತನ್ನ ಉಳಿದ ತವರು ಪಂದ್ಯಗಳನ್ನು ಆಡಲಿದೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಜಿಂಟಾ, ಸೋಲಿನ ಹೊರತಾಗಿಯೂ ತಮ್ಮ ತಂಡವು ಇನ್ನೂ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಮತ್ತು ಗೆಲ್ಲಲು ಇನ್ನೂ ಹಲವು ಪಂದ್ಯಗಳಿವೆ ಎಂದು ಹೇಳಿದರು.

'ಪಂಜಾಬ್‌ನಲ್ಲಿ ನಡೆದ ಕೊನೆಯ ತವರು ಮೈದಾನದಲ್ಲಿ ನಡೆದ ಪಂದ್ಯದಲ್ಲಿ ನಾವು ಬಯಸಿದಂತೆ ಆಗಲಿಲ್ಲ. ಆದರೆ ಕೊಯಿ ನಾ.... ಇನ್ನೂ ಹಲವು ಪಂದ್ಯಗಳು ನಮ್ಮ ಮುಂದಿವೆ. ನಮ್ಮ ಶೇರ್ ಸ್ಕ್ವಾಡ್‌ನ ಅದ್ಭುತ ಪ್ರದರ್ಶನಕ್ಕೆ ಧನ್ಯವಾದಗಳು. ನಾವು ಟೂರ್ನಮೆಂಟ್‌ನ ಅರ್ಧದಾರಿಯಲ್ಲೇ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನದಲ್ಲಿದ್ದೇವೆ. ಇದು ನನಗೆ ತುಂಬಾ ಸಂತೋಷವನ್ನು ನೀಡುತ್ತದೆ' ಎಂದು ಜಿಂಟಾ ವೀಡಿಯೊಗೆ ಶೀರ್ಷಿಕೆ ನೀಡಿದ್ದಾರೆ.

'ನಮ್ಮ ಅಭಿಮಾನಿಗಳು ಕ್ರೀಡಾಂಗಣದ ಒಳಗೆ ಮತ್ತು ಹೊರಗೆ ನಮಗೆ ತುಂಬಾ ಪ್ರೀತಿ ಮತ್ತು ಬೆಂಬಲವನ್ನು ತೋರಿಸಿದ್ದಾರೆ ಮತ್ತು ಅವರು ನಂಬಲು ಅಸಾಧ್ಯ ಎನಿಸುವಷ್ಟು ಶ್ರೇಷ್ಠರಾಗಿದ್ದಾರೆ. ಕ್ರೀಡಾಂಗಣದಲ್ಲಿ, ಸಾಮಾಜಿಕ ಮಾಧ್ಯಮದಲ್ಲಿ ಮತ್ತು ಎಲ್ಲೆಡೆ ಪಿಬಿಕೆಎಸ್ ಅನ್ನು ಬೆಂಬಲಿಸಲು ಬಂದ ನಿಮ್ಮೆಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಐಪಿಎಲ್ 2026 ಅನ್ನು ನಿಮ್ಮೆಲ್ಲರಿಗೂ ಸ್ಮರಣೀಯವಾಗಿಸುವುದು ನಮ್ಮ ಏಕೈಕ ಗುರಿಯಾಗಿದೆ. ಅದಕ್ಕಾಗಿಯೇ - ಬಸ್ ಜೀತ್ನಾ ಹೈ' ಎಂದಿದ್ದಾರೆ.

ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂಜಾಬ್ ಕಿಂಗ್ಸ್ ಪಂದ್ಯಕ್ಕೆ ಕೆಂಪು ದುಪ್ಪಟ್ಟಾ ಧರಿಸಿದ್ದ ಜಿಂಟಾ, ಅದರ ಹಿಂದಿನ ಕಾರಣವನ್ನು ಬಹಿರಂಗಪಡಿಸಿದರು.

'ಈ ಕೆಂಪು ಫುಲ್ಕಾರಿ ದುಪ್ಪಟ್ಟಾ 26 ವರ್ಷ ಹಳೆಯದಾಗಿದ್ದು, ಪಂಜಾಬಿ ಅಭಿಮಾನಿಯೊಬ್ಬರು ನನಗೆ ಉಡುಗೊರೆಯಾಗಿ ನೀಡಿದ್ದರು. ಅವರು ಈ ಪಂದ್ಯದ ವೇಳೆ ಇದನ್ನು ಧರಿಸಬೇಕೆಂದು ಒತ್ತಾಯಿಸಿದರು. ಇದರಿಂದ ಅವರು ಸಂತೋಷಪಡುತ್ತಾರೆ ಎಂದು ನಾನು ಭಾವಿಸಿದ್ದೇನೆ. ಏಕೆಂದರೆ, ಇದನ್ನು ನಾನು ಅವರ ನೆನಪಿನ ವಿಶೇಷ ಭಾಗವಾಗಿ ಧರಿಸಿದೆ. ಫುಲ್ಕರಿ ಸ್ಥಳೀಯ ಕುಶಲಕರ್ಮಿಗಳಿಂದ ಸುಂದರವಾದ ಆದರೆ, ಸಾಯುತ್ತಿರುವ ಜಾನಪದ ಕಸೂತಿಯ ಕಲೆಯಾಗಿದೆ. ನಮ್ಮ ಕ್ರಿಕೆಟ್ ಪಂದ್ಯಗಳಲ್ಲಿ ಈ ದುಪ್ಪಟ್ಟಾಗಳನ್ನು ಧರಿಸುವ ಮೂಲಕ ಅವುಗಳನ್ನು ಉತ್ತೇಜಿಸಲು ಮತ್ತು ಪ್ರತಿನಿಧಿಸಲು ನಾನು ಆಶಿಸುತ್ತೇನೆ. ನಾವು ಎಲ್ಲಿಂದ ಬಂದಿದ್ದೇವೆ ಮತ್ತು ನಾವು ಯಾರೆಂಬುದರ ಬಗ್ಗೆ ನಾವು ಎಂದಿಗೂ ಹೆಮ್ಮೆಪಡುವುದನ್ನು ನಿಲ್ಲಿಸದಂತೆ ಈ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸಲು ನಾನು ಸಣ್ಣ ರೀತಿಯಲ್ಲಿ ಸಹಾಯ ಮಾಡಬಹುದೆಂದು ನಾನು ಭಾವಿಸುತ್ತೇನೆ' ಎಂದು ಜಿಂಟಾ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೋಲ್ಕತ್ತಾ: ಕುಸಿದು ಬಿದ್ದ ನಿರ್ಮಾಣ ಹಂತದ ಗೋದಾಮು; ಹಲವರು ಸಾವು ಶಂಕೆ, ರಕ್ಷಣಾ ಕಾರ್ಯ ಆರಂಭ

‘ಕಾಶ್ಮೀರ ಎಂದಿಗೂ ಭಾರತದ್ದೇ, ಭಾರತದ್ದಾಗಿಯೇ ಉಳಿಯಲಿದೆ’; ವಿಶ್ವಸಂಸ್ಥೆಯಲ್ಲಿ ಪಾಕ್‌ಗೆ ಭಾರತ ತಿರುಗೇಟು..!

ICC ODI Rankings: ವಿರಾಟ್ ಕೊಹ್ಲಿ ಹಿಂದಿಕ್ಕಿದ ಶುಭಮನ್ ಗಿಲ್; ಬುಮ್ರಾ ಜತೆ ಅಗ್ರ ಸ್ಥಾನಕ್ಕೇರಿದ ಹೆನ್ರಿ

Triangle love: ವಿವಾಹಿತ ಮಹಿಳೆಗಾಗಿ ಇಬ್ಬರು ಪುರುಷರ ನಡುವೆ ಜಗಳ; ಮಚ್ಚೇಟಿನಿಂದ ಮುಂಗೈ ಕಟ್!

ಮಂಡ್ಯ: ಎರಡು ಗ್ರಾಮ ಪಂಚಾಯಿತಿಗಳಿಂದ ಅಕ್ರಮವಾಗಿ ಇ-ಖಾತಾ ವಿತರಣೆ; ಲೋಕಾಯುಕ್ತ ತನಿಖೆಯಲ್ಲಿ ಬಹಿರಂಗ!