ಬಂಧಿತ ಆರೋಪಿಗಳು 
ಕ್ರಿಕೆಟ್

IPL ಟಿಕೆಟ್ ವಂಚನೆ ಪ್ರಕರಣ: ಹೈದರಾಬಾದ್ ನಲ್ಲಿ ಮೂವರ ಬಂಧನ!

ಅವರ ಕಾರನ್ನು ಶೋಧಿಸಿದ ನಂತರ ತಲಾ 22,000 ರೂ. ಮೌಲ್ಯದ ಐದು ಉಚಿತ ಟಿಕೆಟ್‌ಗಳನ್ನು ಪತ್ತೆ ಹಚ್ಚಲಾಯಿತು ಎಂದು ಮಲ್ಕಾಜ್‌ಗಿರಿ ಪೊಲೀಸ್ ಕಮಿಷನರೇಟ್ ಪ್ರಕಟಣೆಯಲ್ಲಿ ತಿಳಿಸಿದೆ.

ಹೈದರಾಬಾದ್: ವಿವಿಐಪಿ/ವಿಐಪಿಗಳ ನಕಲಿ ಲೆಟರ್‌ಹೆಡ್‌ಗಳನ್ನು ಬಳಸಿ ಖರೀದಿಸಲಾದ ಹೆಚ್ಚಿನ ಬೆಲೆಯ IPL ಟಿಕೆಟ್‌ಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ವಂಚನೆ ಬೆಳಕಿಗೆ ಬಂದದ್ದು ಹೇಗೆ? ಉಪ್ಪಳದ ಆರ್‌ಜಿಐ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಐಪಿಎಲ್ ಪಂದ್ಯಕ್ಕಾಗಿ ಬಂದೋಬಸ್ತ್ ಕರ್ತವ್ಯದಲ್ಲಿದ್ದ ಪೊಲೀಸ್ ತಂಡಕ್ಕೆ ಮೂವರು ವ್ಯಕ್ತಿಗಳು ಹೆಚ್ಚಿನ ಬೆಲೆಯ ಐಪಿಎಲ್ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಕೂಡಲೇ ಪೊಲೀಸ್ ತಂಡ ಕ್ರೀಡಾಂಗಣದ ಪಾರ್ಕಿಂಗ್ ಸ್ಥಳಕ್ಕೆ ತಲುಪಿದಾಗ ಮೂವರು ವ್ಯಕ್ತಿಗಳು ಟಿಕೆಟ್‌ಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿರುವುದನ್ನು ಗಮನಿಸಿದ್ದಾರೆ.

ತದನಂತರ ಅವರ ಕಾರನ್ನು ಶೋಧಿಸಿದ ನಂತರ ತಲಾ 22,000 ರೂ. ಮೌಲ್ಯದ ಐದು ಉಚಿತ ಟಿಕೆಟ್‌ಗಳನ್ನು ಪತ್ತೆ ಹಚ್ಚಲಾಯಿತು ಎಂದು ಮಲ್ಕಾಜ್‌ಗಿರಿ ಪೊಲೀಸ್ ಕಮಿಷನರೇಟ್ ಪ್ರಕಟಣೆಯಲ್ಲಿ ತಿಳಿಸಿದೆ.

ಆಂಧ್ರ ಪ್ರದೇಶದ ಮೂವರು ಆರೋಪಿಗಳನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ತಲೆಮರೆಸಿಕೊಂಡಿರುವ ತಮಿಳುನಾಡಿನ ಇತರ ಮೂವರು ಆರೋಪಿಗಳೊಂದಿಗೆ ಸೇರಿ ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ನ್ಯಾಯಾಧೀಶರು, ಸಚಿವರು ಮತ್ತು ರಾಜ್ಯಪಾಲರಂತಹ ವಿವಿಧ ವಿವಿಐಪಿ/ವಿಐಪಿಗಳ ಲೆಟರ್‌ಹೆಡ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡಿರುವುದಾಗಿ ಆರೋಪಿಗಳು ತಿಳಿಸಿರುವುದಾಗಿ ಪ್ರಕಟಣೆಯಲ್ಲಿ ಹೇಳಲಾಗಿದೆ.

ಆರೋಪಿಗಳು ವಿವಿಐಪಿಗಳು, ವಿಐಪಿಗಳ ಸಹಿಗಳನ್ನು ನಕಲಿ ಮಾಡಿ "ಲೆಟರ್‌ಹೆಡ್‌ಗಳನ್ನು" ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ​​ಮತ್ತು ವಿವಿಧ ರಾಜ್ಯಗಳ ಇತರ ಕ್ರಿಕೆಟ್ ಅಸೋಸಿಯೇಷನ್‌ಗಳಿಗೆ ಸಲ್ಲಿಸಿದ್ದರು. ಬಳಿಕ ಹೆಚ್ಚಿನ ದರದ ಟಿಕೆಟ್‌ಗಳನ್ನು ಪಡೆದು ಹೆಚ್ಚಿನ ದರಕ್ಕೆ ಮಾರಾಟ ಮಾಡಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಮೂವರು ಆರೋಪಿಗಳಿಂದ ಕಾರು, ತಲಾ 22,000 ರೂ. ಮೌಲ್ಯದ ಐದು ಐಪಿಎಲ್ ಟಿಕೆಟ್‌ಗಳು, ಐದು ಮೊಬೈಲ್ ಫೋನ್‌ಗಳು ಮತ್ತು ಐದು ನಕಲಿ ಲೆಟರ್‌ಹೆಡ್‌ಗಳನ್ನು ವಶಕ್ಕೆ ಪಡೆದ ನಂತರ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.. ಈ ಸಂಬಂಧ ಉಪ್ಪಳ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್‌ನ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

TMCಗೆ ತೀವ್ರ ಮುಖಭಂಗ: 15 ಸಾವಿರಕ್ಕೂ ಹೆಚ್ಚು ಮತಗಳಿಂದ ಸಿಎಂ ಮಮತಾ ಬ್ಯಾನರ್ಜಿಗೆ ಹೀನಾಯ ಸೋಲು!

ತಮಿಳುನಾಡು ರಾಜಕೀಯದಲ್ಲಿ ಬಿಗ್ ಟ್ವಿಸ್ಟ್: ವಿಜಯ್‌ಗೆ ಕಾಂಗ್ರೆಸ್‌ ಬೆಂಬಲ? ಕೆ.ಸಿ ವೇಣುಗೋಪಾಲ್ ಹೇಳಿದ್ದೇನು?

ಡಾಲರ್ ಎದುರು ರೂಪಾಯಿ ಮೌಲ್ಯ ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿತ: 95.23 ರೂ ಗೆ ಇಳಿಕೆ!

ಪೆಟ್ರೋಲ್, ಡೀಸೆಲ್, LPG ಪೂರೈಕೆಯಲ್ಲಿ ಸ್ಥಿರತೆ: ತಕ್ಷಣ ಬೆಲೆ ಏರಿಕೆ ಇಲ್ಲ- ಕೇಂದ್ರ ಸರ್ಕಾರ

ಕಾರು ಚಾಲಕನ ಪುತ್ರನಿಗೆ ಟಿಕೆಟ್ ನೀಡಿ ಗೆಲ್ಲಿಸಿಕೊಂಡು ಬಂದ ವಿಜಯ್‌; ಡ್ರೈವರ್ ಮಗ ಈಗ MLA! ಹೃದಯಸ್ಪರ್ಶಿ Video ನೋಡಿ

SCROLL FOR NEXT