ಶಾಹಿದ್ ಅಫ್ರಿದಿ 
ಕ್ರಿಕೆಟ್

ಹೆಣ್ಣುಮಕ್ಕಳಿಗೆ ಮೊಬೈಲ್ ಫೋನ್ ನೀಡಬಾರದು: ಮಾಜಿ ಕ್ರಿಕೆಟಿಗ Shahid Afridi ಮತ್ತೆ ವಿವಾದ

ಮಕ್ಕಳು ಮತ್ತು ಹೆಣ್ಣುಮಕ್ಕಳಿಗೆ ಮೊಬೈಲ್ ಫೋನ್ ನೀಡಬಾರದು. ಮೊಬೈಲ್ ಫೋನ್‌ಗಳ ಅತಿಯಾದ ಬಳಕೆ ಮಕ್ಕಳ ಗಮನವನ್ನು ಬೇರೆಡೆಗೆ ತಿರುಗಿಸುತ್ತದೆ..

ಲಾಹೋರ್: ಮಕ್ಕಳು ಮತ್ತು ಹೆಣ್ಣುಮಕ್ಕಳಿಗೆ ಮೊಬೈಲ್ ಫೋನ್ ನೀಡಬಾರದು ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಅವರ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಮಕ್ಕಳು ಮತ್ತು ಹೆಣ್ಣುಮಕ್ಕಳಿಗೆ ಮೊಬೈಲ್ ಫೋನ್ ನೀಡಬಾರದು. ಮೊಬೈಲ್ ಫೋನ್‌ಗಳ ಅತಿಯಾದ ಬಳಕೆ ಮಕ್ಕಳ ಗಮನವನ್ನು ಬೇರೆಡೆಗೆ ತಿರುಗಿಸುತ್ತದೆ ಹಾಗೂ ಕುಟುಂಬ ಮತ್ತು ಸಮಾಜದ ಮೌಲ್ಯಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಅಫ್ರಿದಿ ಹೇಳಿದ್ದಾರೆ.

ಮಕ್ಕಳಿಗೆ, ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳಿಗೆ ಮದುವೆಯಾಗುವವರೆಗೆ ವೈಯಕ್ತಿಕ ಮೊಬೈಲ್ ಫೋನ್‌ಗಳನ್ನು ನೀಡಬಾರದು. ಡಿಜಿಟಲ್ ಯುಗದ ನಕಾರಾತ್ಮಕ ಪ್ರಭಾವಗಳಿಂದ ಪೋಷಕರು ತಮ್ಮ ಮಕ್ಕಳನ್ನು ರಕ್ಷಿಸಬೇಕು. ಸ್ಮಾರ್ಟ್‌ಫೋನ್‌ಗಳ ಬಳಕೆಯನ್ನು ಒಂದು "ಕಾಯಿಲೆ" ಎಂದು ಅಫ್ರಿದಿ ಕರೆದಿದ್ದಾರೆ.

ನಾನು ಕೂಡ ನನ್ನ ಹೆಣ್ಣುಮಕ್ಕಳಿಗೆ ಮದುವೆಯಾಗುವವರೆಗೂ ಮೊಬೈಲ್ ಫೋನ್ ಬಳಸಲು ಅವಕಾಶ ನೀಡಿರಲಿಲ್ಲ. ಮಕ್ಕಳ ಮೇಲೆ ಪೋಷಕರು "ಸಿಂಹದ ನೋಟ" (shair ki nazar) ಇಟ್ಟಿರಬೇಕು.

ವಿಶೇಷವಾಗಿ 16 ರಿಂದ 20 ವರ್ಷದೊಳಗಿನ ಮಕ್ಕಳನ್ನು ಪೋಷಕರು ಸೂಕ್ಷ್ಮವಾಗಿ ಗಮನಿಸಬೇಕು. ಮಕ್ಕಳನ್ನು ಟಿಕ್‌ಟಾಕ್‌ನಂತಹ ವೇದಿಕೆಗಳಿಂದ ದೂರವಿರಿಸಿ "ನೈಜ ಪ್ರಪಂಚದ" ಕಡೆಗೆ ಕರೆದೊಯ್ಯಲು ಶಾಹಿದ್ ಅಫ್ರಿದಿ ಅವರು ಪೋಷಕರಿಗೆ ಸಲಹೆ ನೀಡಿದ್ದಾರೆ.

ಅಂತೆಯೇ ವಿಶೇಷವಾಗಿ ಹುಡುಗಿಯರ ಮೊಬೈಲ್ ಬಳಕೆಯ ಕುರಿತು ಅವರು ವ್ಯಕ್ತಪಡಿಸಿದ ಅಭಿಪ್ರಾಯಗಳು ವಿವಾದಕ್ಕೆ ಕಾರಣವಾಗಿವೆ.

ವ್ಯಾಪಕ ಟೀಕೆ

ಶಾಹಿದ್ ಅಫ್ರಿದಿ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಹಲವರು ಇದನ್ನು ಟೀಕಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಅಫ್ರಿದಿಯವರ ಹೇಳಿಕೆಯನ್ನು ಹಳೆಯ ಮನೋಭಾವನೆ ಎಂದು ಟೀಕಿಸಿದರೆ, ಇನ್ನೂ ಕೆಲವರು ಮಕ್ಕಳ ಮೊಬೈಲ್ ಬಳಕೆಗೆ ಮಿತಿ ಇರಬೇಕು ಎಂಬ ಅಂಶವನ್ನು ಬೆಂಬಲಿಸಿದ್ದಾರೆ.

ಈ ಹೇಳಿಕೆ ಕುರಿತಾಗಿ ಮಹಿಳಾ ಹಕ್ಕು ಹೋರಾಟಗಾರರು ಮತ್ತು ಹಲವು ಸಾಮಾಜಿಕ ಕಾರ್ಯಕರ್ತರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ರಶ್ನೆ ಪತ್ರಿಕೆ ಸೋರಿಕೆ: NEET UG 2026 ರದ್ದು, ಸಿಬಿಐ ತನಿಖೆಗೆ ಆದೇಶ; ದೆಹಲಿಯಲ್ಲಿ ಭುಗಿಲೆದ್ದ ಪ್ರತಿಭಟನೆ

Himanta Biswa Sarma Swearing in: US ರಾಯಭಾರಿ ಗೋರ್ ಭಾಗಿಯಾಗಿದ್ದು ವಿಶೇಷ ಏಕೆ? ಅಸ್ಸಾಂ ನಲ್ಲಿ ಅಮೆರಿಕದ ಹಿತಾಸಕ್ತಿ ಏನು?

ಸಿಎಂ ವಿಜಯ್ ಪಕ್ಷಕ್ಕೆ ಬೆಂಬಲ ಘೋಷಿಸಿದ ತನ್ನ ಏಕೈಕ ಶಾಸಕನನ್ನೇ ಉಚ್ಛಾಟಿಸಿದ AMMK!

ತಮಿಳುನಾಡು ರಾಜಕೀಯದಲ್ಲಿ ರೋಚಕ ಟ್ವಿಸ್ಟ್: CM ವಿಜಯ್ ಭೇಟಿ ಮಾಡಿ, TVKಗೆ ಬೆಂಬಲ ಘೋಷಿಸಿದ AIADMKಯ ಷಣ್ಮುಗಂ ಬಣ!

ಪಶ್ಚಿಮ ಬಂಗಾಳದಲ್ಲಿ SIRನಿಂದ ಹೊರಗಿಡಲಾದ ವ್ಯಕ್ತಿಗಳಿಗೆ ಸರ್ಕಾರಿ ಸೌಲಭ್ಯಗಳು ಸಿಗುವುದಿಲ್ಲ: ಬಿಜೆಪಿ ಸರ್ಕಾರ

SCROLL FOR NEXT