ಬಾಂಗ್ಲಾದೇಶ ವಿರುದ್ಧ ಸೋತ ಪಾಕಿಸ್ತಾನಕ್ಕೆ ಬರೆ ಹಾಕಿದ ICC 
ಕ್ರಿಕೆಟ್

ಬಾಂಗ್ಲಾದೇಶ ವಿರುದ್ಧ ಸೋತ ಪಾಕಿಸ್ತಾನಕ್ಕೆ ICC ಬರೆ; ಶೇ.40ರಷ್ಟು ದಂಡ, 8 WTC ಅಂಕ ಕಡಿತ

ಪಾಕಿಸ್ತಾನ ತಂಡಕ್ಕೆ ಬರೊಬ್ಬರಿ ಶೇ.40ರಷ್ಡು ಭಾರಿ ದಂಡ ವಿಧಿಸುವುದರ ಜೊತೆಗೆ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ 2025–27 ಪಾಯಿಂಟ್ ಪಟ್ಟಿಯಲ್ಲಿ 8 ಅಂಕಗಳನ್ನು ಕಡಿತಗೊಳಿಸಿದೆ.

ದುಬೈ: ಬಾಂಗ್ಲಾದೇಶ ವಿರುದ್ಧ ಐತಿಹಾಸಿಕ ಟೆಸ್ಟ್ ಸೋಲಿನ ಬಳಿಕ ಪಾಕಿಸ್ತಾನಕ್ಕೆ ಐಸಿಸಿ ಬರೆ ಹಾಕಿದ್ದು, ಭಾರಿ ದಂಡ ವಿಧಿಸಿದ್ದಷ್ಟೇ ಅಲ್ಲ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಅಂಕಗಳನ್ನು ಕೂಡ ಕಡಿತ ಮಾಡಿದೆ.

ಹೌದು.. ಬಾಂಗ್ಲಾದೇಶ ವಿರುದ್ಧದ ಐತಿಹಾಸಿಕ ಸೋಲಿನ ಬಳಿಕ ಪಾಕಿಸ್ತಾನ ತಂಡಕ್ಕೆ ಐಸಿಸಿ ಡಬಲ್ ಆಘಾತ ನೀಡಿದ್ದು, ಪಾಕಿಸ್ತಾನ ತಂಡಕ್ಕೆ ಬರೊಬ್ಬರಿ ಶೇ.40ರಷ್ಡು ಭಾರಿ ದಂಡ ವಿಧಿಸುವುದರ ಜೊತೆಗೆ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ 2025–27 ಪಾಯಿಂಟ್ ಪಟ್ಟಿಯಲ್ಲಿ 8 ಅಂಕಗಳನ್ನು ಕಡಿತಗೊಳಿಸಿದೆ.

ಶುಕ್ರವಾರ ಐಸಿಸಿ ಈ ಬಗ್ಗೆ ಪ್ರಕಟಣೆ ನೀಡಿದ್ದು, ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ನಿಧಾನ ಓವರ್‌ರೇಟ್ ಕಾಯ್ದುಕೊಂಡ ಕಾರಣ ಪಾಕಿಸ್ತಾನ ತಂಡದ ಪಂದ್ಯ ಶುಲ್ಕದ 40 ಶೇಕಡಾ ದಂಡ ವಿಧಿಸಲಾಗಿದೆ.

ಜೊತೆಗೆ ತಂಡದ 8 WTC ಅಂಕಗಳನ್ನು ಕಡಿತಗೊಳಿಸಲಾಗಿದೆ. ಸಮಯ ವಿನಾಯಿತಿಗಳನ್ನು ಪರಿಗಣಿಸಿದ ನಂತರ ಪಾಕಿಸ್ತಾನ ತಂಡ ನಿಗದಿತ ಓವರ್ ಗುರಿಗಿಂತ ಎಂಟು ಓವರ್‌ಗಳು ಕಡಿಮೆ ಮಾಡಿರುವುದು ದೃಢಪಟ್ಟಿತ್ತು.

WTC ಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ಕುಸಿತ

ಈ ಶಿಕ್ಷೆಯಿಂದ ಪಾಕಿಸ್ತಾನದ WTC ಅಭಿಯಾನಕ್ಕೆ ಆರಂಭದಲ್ಲೇ ದೊಡ್ಡ ಹೊಡೆತ ಬಿದ್ದಿದ್ದು, ಅಂಕ ಕಡಿತದ ಬಳಿಕ ಪಾಕಿಸ್ತಾನ ಕೇವಲ ನಾಲ್ಕು ಅಂಕಗಳೊಂದಿಗೆ ಪಟ್ಟಿಯಲ್ಲಿ ಎಂಟನೇ ಸ್ಥಾನಕ್ಕೆ ಕುಸಿದಿದೆ. ಪಾಕಿಸ್ತಾನ ಇದೀಗ ವೆಸ್ಟ್ ಇಂಡೀಸ್ ತಂಡಕ್ಕಿಂತ ಮಾತ್ರ ಮೇಲಿರುವ ಸ್ಥಿತಿ ಬಂದಿದೆ.

ಐಸಿಸಿ ಕ್ರಮ ಕೈಗೊಂಡಿದ್ದು ಏಕೆ?

ಐಸಿಸಿ ಕೋಡ್ ಆಫ್ ಕಂಡಕ್ಟ್‌ನ Article 2.22 ಪ್ರಕಾರ, ತಂಡ ನಿಗದಿತ ಸಮಯದಲ್ಲಿ ಓವರ್‌ಗಳನ್ನು ಪೂರ್ಣಗೊಳಿಸಲು ವಿಫಲವಾದರೆ ಪ್ರತಿ ಓವರ್‌ಗೆ ಆಟಗಾರರ ಪಂದ್ಯ ಶುಲ್ಕದ 5 ಶೇಕಡಾ ದಂಡ ವಿಧಿಸಲಾಗುತ್ತದೆ। ಪಾಕಿಸ್ತಾನ ಎಂಟು ಓವರ್‌ಗಳು ಕಡಿಮೆಯಾಗಿದ್ದರಿಂದ ಒಟ್ಟು 40 ಶೇಕಡಾ ದಂಡ ವಿಧಿಸಲಾಯಿತು.

ಅದೇ ರೀತಿ, ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ನಿಯಮಾವಳಿಯ Article 16.11.2 ಪ್ರಕಾರ, ಪ್ರತಿ ಕಡಿಮೆ ಓವರ್‌ಗೆ ಒಂದು ಚಾಂಪಿಯನ್‌ಶಿಪ್ ಅಂಕ ಕಡಿತಗೊಳ್ಳುತ್ತದೆ. ಈ ಕಾರಣದಿಂದ ಪಾಕಿಸ್ತಾನಕ್ಕೆ ಎಂಟು ಅಂಕಗಳ ನಷ್ಟವಾಗಿದೆ. ಪಾಕಿಸ್ತಾನ ನಾಯಕ ಶಾನ್ ಮಸೂದ್ ತಪ್ಪನ್ನು ಒಪ್ಪಿಕೊಂಡು ಶಿಕ್ಷೆಯನ್ನು ಸ್ವೀಕರಿಸಿದ್ದರಿಂದ ಅಧಿಕೃತ ವಿಚಾರಣೆಯ ಅವಶ್ಯಕತೆ ಇರಲಿಲ್ಲ ಎಂದು ಹೇಳಲಾಗಿದೆ.

ಅಂಪೈರ್‌ಗಳಾದ ರಿಚರ್ಡ್ ಕೆಟಲ್‌ಬರೋ, ಕುಮಾರ್ ಧರ್ಮಸೇನ, ಮೂರನೇ ಅಂಪೈರ್ ಅಲ್ಲಾವುದ್ದೀನ್ ಪಾಲೇಕರ್ ಮತ್ತು ನಾಲ್ಕನೇ ಅಂಪೈರ್ ಗಾಜಿ ಸೋಹೆಲ್ ಆರೋಪ ಹೊರಿಸಿದ್ದು, ಮ್ಯಾಚ್ ರೆಫರಿ ಜೆಫ್ ಕ್ರೋವ್ ಶಿಕ್ಷೆ ವಿಧಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅನ್ಯ ಉದ್ದೇಶಕ್ಕೆ ಕುಡಿಯುವ ನೀರು ಬಳಕೆ ನಿಷೇಧ; ಬೇಸಿಗೆಯಲ್ಲಿ ತೆಗೆದುಕೊಳ್ಳುವ ಕ್ರಮಗಳನ್ನು ಮಳೆಗಾಲದಲ್ಲೇ ಜಾರಿಗೊಳಿಸಿದ BWSSB!

1 ಓವರ್‌ನಲ್ಲಿ 29 ರನ್ ಹೊಡೆಸಿಕೊಂಡ ಬಿಷ್ಣೋಯ್: ಇಂಗ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯ ಕೈಚೆಲ್ಲಿದ ಭಾರತ

ನಾನು ಸೋತಿದ್ದೇನೆ, ಸತ್ತಿಲ್ಲ: TMC ಕೇಂದ್ರ ಕಚೇರಿಗೆ ಬಿಗ... ಬಂಡಾಯ ನಾಯಕರ ವಿರುದ್ಧ ಮಮತಾ ಬ್ಯಾನರ್ಜಿ ಗರಂ

E20 Petrol: ವೈಜ್ಞಾನಿಕ ಪರೀಕ್ಷೆಗಳಲ್ಲಿ ಸುರಕ್ಷಿತ, ವಾಹನಗಳಿಗೆ ಅತ್ಯುತ್ತಮ; ತಜ್ಞರ ಸಮರ್ಥನೆ

ಮೆಲ್ಬೋರ್ನ್ ಭೇಟಿಗೂ ಮುನ್ನ ಪ್ರಧಾನಿ ಮೋದಿಗೆ ಕೊಲೆ ಬೆದರಿಕೆ; ಆಸ್ಟ್ರೇಲಿಯಾದಿಂದ ತನಿಖೆ