ಕೋಲ್ಕತಾಗೆ ಭರ್ಜರಿ ಜಯ 
ಕ್ರಿಕೆಟ್

IPL 2026: ಮತ್ತೆ ಮುಗ್ಗರಿಸಿದ MI, KKRಗೆ 4 ವಿಕೆಟ್ ಜಯ, ಮುಂದುವರೆದ ಪ್ಲೇಆಫ್ ಸಸ್ಪನ್ಸ್!

ಕೋಲ್ಕತಾ ಪರ ಕನ್ನಡಿಗ ಮನೀಷ್ ಪಾಂಡೆ (45) ಮತ್ತು ರೋಮನ್ ಪೊವೆಲ್ (40) ಉತ್ತಮ ಬ್ಯಾಟಿಂಗ್ ನಡೆಸಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರಾದರೂ ಇಬ್ಬರೂ ಕೆಲವೇ ರನ್ ಗಳ ಅಂತರದಲ್ಲಿ ಅರ್ಧಶತಕ ಮಿಸ್ ಮಾಡಿಕೊಂಡರು.

ಕೋಲ್ಕತಾ: ಐಪಿಎಲ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್ ತಂಡ ಗೆಲುವು ಸಾಧಿಸಿದ್ದು, ಪ್ಲೇಆಫ್ ಸಸ್ಪನ್ಸ್ ಮುಂದುವರೆದಿದೆ.

ಕೋಲ್ಕತಾದ ಈಡೆನ್ ಗಾರ್ಡನ್ ಕ್ರೀಡಾಂಗಣದಲ್ಲಿ ಇಂದು ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನೀಡಿದ್ದ 148 ರನ್ ಗಳ ಸಾಧಾರಣ ಗುರಿ ಬೆನ್ನು ಹತ್ತಿದ ಕೋಲ್ಕತಾ ನೈಟ್ ರೈಡರ್ಸ್ ತಂಡ 18.5 ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 148 ರನ್ ಪೇರಿಸಿ 4 ವಿಕೆಟ್ ಅಂತರದಲ್ಲಿ ಗೆದ್ದು ಬೀಗಿತು.

ಕೋಲ್ಕತಾ ಪರ ಕನ್ನಡಿಗ ಮನೀಷ್ ಪಾಂಡೆ (45) ಮತ್ತು ರೋಮನ್ ಪೊವೆಲ್ (40) ಉತ್ತಮ ಬ್ಯಾಟಿಂಗ್ ನಡೆಸಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರಾದರೂ ಇಬ್ಬರೂ ಕೆಲವೇ ರನ್ ಗಳ ಅಂತರದಲ್ಲಿ ಅರ್ಧಶತಕ ಮಿಸ್ ಮಾಡಿಕೊಂಡರು. ಅಂತಿಮವಾಗಿ ರಿಂಕು ಸಿಂಗ್ (ಅಜೇಯ 9) ಮತ್ತು ಅನುಕುಲ್ ರಾಯ್ (ಅಜೇಯ 4) ಗೆಲುವಿನ ಔಪಚಾರಿಕತೆ ಪೂರ್ಣಗೊಳಿಸಿದರು.

ರನ್ ಗಳಿಸಲು ತಿಣುಕಾಡಿದ ಮುಂಬೈ ಇಂಡಿಯನ್ಸ್

ಇದಕ್ಕೂ ಮೊದಲು ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ಅಕ್ಷರಶಃ ಬ್ಯಾಟಿಂಗ್ ಮಾಡಲು ಪರದಾಡಿತು. ಆರಂಭಿಕ ಆಟಗಾರರಾದ ರ್ಯಾನ್ ರಿಕಲ್ಟನ್ (6) ರೋಹಿತ್ ಶರ್ಮಾ (15) ಬೇಗನೆ ವಿಕೆಟ್ ಒಪ್ಪಿಸಿದರು.

ಬಳಿಕ ಬಂದ ನಮನ್ ಧೀರ್ ಶೂನ್ಯ ಸುತ್ತಿದರೆ, ಸೂರ್ಯ ಕುಮಾರ್ ಯಾದವ್ 15 ರನ್ ಗಳಿಸಿ ಔಟಾದರು. ತಿಲಕ್ ವರ್ಮಾ 20, ನಾಯಕ ಹಾರ್ದಿಕ್ ಪಾಂಡ್ಯಾ 26, ವಿಲ್ ಜ್ಯಾಕ್ಸ್ 14, ದೀಪಕ್ ಚಹರ್ 10 ರನ್ ಗಳಿಸಿದರು. ಕಾರ್ಬಿನ್ ಬಾಷ್ ಕೇವಲ 18 ಎಸೆತಗಳ್ಲಲಿ ಅಜೇಯ 32 ರನ್ ಗಳಿಸಿ ಕೋಲ್ಕತಾಗೆ ಪ್ರತಿರೋಧ ತೋರಿದರು.

ಕೋಲ್ಕತಾ ಪರ ಸೌರಭ್ ದುಬೆ, ಕೆಮರೂನ್ ಗ್ರೀನ್, ಕಾರ್ತಿಕ್ ತ್ಯಾಗಿ ತಲಾ 2 ವಿಕೆಟ್ ಪಡೆದರೆ, ಸುನಿಲ್ ನರೈನ್ 1 ವಿಕೆಟ್ ಪಡೆದರು.

ಮುಂದುವರೆದ ಪ್ಲೇಆಫ್ ಸಸ್ಪನ್ಸ್!

ಈ ಗೆಲುವಿನೊಂದಿಗೆ ಕೋಲ್ಕತಾ ತಂಡ 2 ಅಂಕ ಪಡೆದಿದ್ದು, ಅಂತೆಯೇ ಟೂರ್ನಿಯಲ್ಲಿ ಪ್ಲೇಆಫ್ ಸಸ್ಪನ್ಸ್ ಮುಂದುವರೆದಿದೆ. ಈಗಾಗಲೇ ಆರ್ ಸಿಬಿ, ಗುಜರಾತ್ ಟೈಟನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಪ್ಲೇಆಫ್ ಗೇರಿದೆ. ಉಳಿದಿರುವ ಒಂದು ಸ್ಥಾನಕ್ಕೆ 5 ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಕೋಲ್ಕತಾ ಇನ್ನೊಂದು ಲೀಗ್ ಪಂದ್ಯಗಳು ಬಾಕಿ ಇದ್ದು, ಪ್ರಸ್ತುತ 13 ಅಂಕಗಳನ್ನು ಹೊಂದಿದ್ದು, 6ನೇ ಸ್ಥಾನದಲ್ಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ಮೇಲಿನ ಅಮೆರಿಕಾ-ಇಸ್ರೇಲ್‌ ಯುದ್ಧಕ್ಕೆ ವಿರೋಧ: Hormuz ಬಂದ್ ಮಾಡಿದ್ರೆ ಜಾಗತಿಕ ವ್ಯಾಪಾರಕ್ಕೆ ಮಾರಕ: ಪುಟಿನ್-ಕ್ಸಿ ಜಂಟಿ ಹೇಳಿಕೆ

59 ವರ್ಷಗಳ ನಂತರ ತಮಿಳುನಾಡಿನಲ್ಲಿ ಕಾಂಗ್ರೆಸ್​ಗೆ ಅಧಿಕಾರ ಹಂಚಿಕೆ; ನಾಳೆ ಸಚಿವರಾಗಿ ಇಬ್ಬರು ಪ್ರಮಾಣ

ಹವಾಮಾನ: ಬಿಸಿಲಿನ ಝಳ, Heat wave ಗೆ ಉತ್ತರ ಭಾರತ ತತ್ತರ; ದೇಶದಲ್ಲೇ ಅತಿ ಹೆಚ್ಚು ತಾಪಮಾನ ಪ್ರದೇಶ ಯಾವುದು ಗೊತ್ತೇ?

ಹಸು ಮೇಲೆ ಅತ್ಯಾಚಾರ; ಕಾಮುಕನ ಬಂಧಿಸಿದ ಪೊಲೀಸರು, ಕೃತ್ಯ ಸಿಸಿಟಿವಿಯಲ್ಲಿ ಸೆರೆ, Video

ಪಾಕಿಸ್ತಾನಕ್ಕೆ ಮತ್ತೆ ಆಘಾತ, ಬಾಂಗ್ಲಾದೇಶಕ್ಕೆ 2ನೇ ಜಯ: WTC ಅಂಕಪಟ್ಟಿಯಲ್ಲಿ ಭಾರತವನ್ನೇ ಹಿಂದಿಕ್ಕಿದ ಬಾಂಗ್ಲಾ ಟೈಗರ್ಸ್!

SCROLL FOR NEXT