ವೈಭವ್ ಸೂರ್ಯವಂಶಿ 
ಕ್ರಿಕೆಟ್

ವೈಭವ್ ಸೂರ್ಯವಂಶಿಗೆ, ಕ್ರಿಸ್ ಗೇಲ್ ಸಿಕ್ಸರ್ ದಾಖಲೆ ಮುರಿಯುವ ಸಾಮರ್ಥ್ಯ ಇದೆ: ಅನಿಲ್ ಕುಂಬ್ಳೆ ಹೀಗೆ ಹೇಳಿದ್ಯಾಕೆ?

ಕೆಲವೇ ಬ್ಯಾಟ್ಸ್‌ಮನ್‌ಗಳು ಕವರ್‌ನಲ್ಲಿ ಅಷ್ಟು ಸುಲಭವಾಗಿ ಸಿಕ್ಸರ್‌ಗಳನ್ನು ಬಾರಿಸುವ ಸಾಮರ್ಥ್ಯ ಹೊಂದಿರುತ್ತಾರೆ. ಅದರಲ್ಲಿ ವೈಭವ್ ಸೂರ್ಯವಂಶಿ ಕೂಡ ಒಬ್ಬರು. ದಿಗ್ವೇಶ್ ರಾಥಿ ಬೌಲಿಂಗ್ ನಲ್ಲಿ ಬಾರಿಸಿದ ಸಿಕ್ಸರ್ ಇದಕ್ಕೆ ಸಾಕ್ಷಿ.

ಬೆಂಗಳೂರು: 15 ವರ್ಷದ ಹದಿಹರೆಯದ ವೈಭವ್ ಸೂರ್ಯವಂಶಿ, ಕ್ರಿಸ್ ಗೇಲ್ ಅವರ ಐಪಿಎಲ್ ಆವೃತ್ತಿ ಒಂದರಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆಯನ್ನು ಮುರಿಯುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಅವರು ಹೇಳಿದ್ದಾರೆ.

ವೈಭವ್ ಸೂರ್ಯವಂಶಿ ಅವರ ಸಾಮರ್ಥ್ಯ ಮತ್ತು ಮನೋಧರ್ಮ ಅವರನ್ನು ಇತರ ಬ್ಯಾಟ್ಸ್‌ಮನ್‌ಗಳಿಗಿಂತ ಭಿನ್ನವಾಗಿಸಿದೆ ಎಂದು ಅನಿಲ್ ಕುಂಬ್ಳೆ ಅವರು ತಿಳಿಸಿದ್ದಾರೆ.

ರಾಜಸ್ಥಾನ್ ರಾಯಲ್ಸ್ ತಂಡ ಮಂಗಳವಾರ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಏಳು ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಪ್ಲೇಆಫ್ ಭರವಸೆಯನ್ನು ಜೀವಂತವಾಗಿರಿಸಿಕೊಂಡಿದ್ದು, ಸೂರ್ಯವಂಶಿ ಐಪಿಎಲ್ 2026 ರಲ್ಲಿ ಮತ್ತೊಂದು ಅದ್ಭುತ ಪ್ರದರ್ಶನದೊಂದಿಗೆ ಎಲ್ಲರ ಗಮನ ಸೆಳೆದಿದ್ದಾರೆ.

15 ವರ್ಷದ ಆರಂಭಿಕ ಆಟಗಾರ ಈ ಆವೃತ್ತಿಯಲ್ಲಿ ಈಗಾಗಲೇ 53 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಇದರಿಂದಾಗಿ ಗೇಲ್ ಅವರ 59 ಸಿಕ್ಸರ್‌ಗಳ ದಾಖಲೆಯನ್ನು ಮುರಿಯುವ ಸಾಮರ್ಥ್ಯ ಸೂರ್ಯವಂಶಿ ಅವರಿಗಿದೆ ಎಂದಿದ್ದಾರೆ.

ಸೂರ್ಯವಂಶಿ ಈ ಐಪಿಎಲ್ ಆವೃತ್ತಿಯಲ್ಲಿ 13 ಪಂದ್ಯಗಳನ್ನು ಆಡಿ ಈಗಾಗಲೇ 53 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಕ್ರಿಸ್ ಗೇಲ್ 59 ಸಿಕ್ಸರ್‌ಗಳೊಂದಿಗೆ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆಯನ್ನು ಹೊಂದಿದ್ದಾರೆ. ಆರ್‌ಆರ್‌ಗೆ ಇನ್ನೂ ಒಂದು ಲೀಗ್ ಪಂದ್ಯ ಮತ್ತು ನಂತರ ಪ್ಲೇಆಫ್‌ಗಳು ಇವೆ. ಅವರು ಗೆದ್ದರೆ, ಅವರಿಗೆ ಹೆಚ್ಚಿನ ಅವಕಾಶಗಳು ಸಿಗುತ್ತವೆ. ವೈಭವ್ ಸೂರ್ಯವಂಶಿ ಗೇಲ್ ಅವರ ದಾಖಲೆಯನ್ನು ಮುರಿದು ಇತಿಹಾಸ ನಿರ್ಮಿಸುವುದನ್ನು ನಾನು ನೋಡಬಹುದು" ಎಂದು ಅನಿಲ್ ಕುಂಬ್ಳೆ ಅವರು ಸ್ಟಾರ್ ಸ್ಪೋರ್ಟ್ಸ್‌ಗೆ ತಿಳಿಸಿದ್ದಾರೆ.

"ಕೆಲವೇ ಬ್ಯಾಟ್ಸ್‌ಮನ್‌ಗಳು ಕವರ್‌ನಲ್ಲಿ ಅಷ್ಟು ಸುಲಭವಾಗಿ ಸಿಕ್ಸರ್‌ಗಳನ್ನು ಬಾರಿಸುವ ಸಾಮರ್ಥ್ಯ ಹೊಂದಿರುತ್ತಾರೆ. ಅದರಲ್ಲಿ ವೈಭವ್ ಸೂರ್ಯವಂಶಿ ಕೂಡ ಒಬ್ಬರು. ದಿಗ್ವೇಶ್ ರಾಥಿ ಬೌಲಿಂಗ್ ನಲ್ಲಿ ಬಾರಿಸಿದ ಸಿಕ್ಸರ್ ಇದಕ್ಕೆ ಸಾಕ್ಷಿ. ಅಂತಹ ಪ್ರತಿಭೆಯ ಕುರಿತು ವಿವರಿಸಲು ನನ್ನ ಬಳಿ ಪದಗಳಿಲ್ಲ. ಈ ಮಗು ತುಂಬಾ ವಿಶೇಷ" ಎಂದು ಹೇಳಬಲ್ಲೆ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದ ಯುವಕ ದಾರುಣ ಅಂತ್ಯ

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್

Cricket: ಪಂತ್‌ರಂತೆ ಆಡಲು ಪ್ರಯತ್ನಿಸಲ್ಲ, ಅವರ ಜೊತೆ ಆಡೋದು ದೊಡ್ಡ ಅನುಭವ: ಫಿಟ್ನೆಸ್ ಅಪ್ಡೇಟ್ ಕೊಟ್ಟ Dhruv Jurel