ಸರ್ಫರಾಜ್ ಖಾನ್ 
ಕ್ರಿಕೆಟ್

IPL 2026: 'ಹೃದಯದಲ್ಲಿನ ರಕ್ತ ಹಳದಿಯಾಗಿದೆ'; CSK, ಅಭಿಮಾನಿಗಳಿಗೆ ಸಂದೇಶ ಹಂಚಿಕೊಂಡ ಸರ್ಫರಾಜ್ ಖಾನ್!

ಸಿಎಸ್‌ಕೆ ತಂಡದ ಐಪಿಎಲ್ ಸೀಸನ್ ಮುಗಿದ ನಂತರ ಭಾರತದ ದಂತಕಥೆ ಎಂಎಸ್ ಧೋನಿ ಅವರ ಭವಿಷ್ಯದ ಬಗ್ಗೆಯೂ ಒಂದು ಚರ್ಚೆ ನಡೆಯುತ್ತಿದೆ.

ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಬ್ಯಾಟ್ಸ್‌ಮನ್ ಸರ್ಫರಾಜ್ ಖಾನ್‌ಗೆ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ಆವೃತ್ತಿಯಲ್ಲಿ ತಮ್ಮ ಕೌಶಲ್ಯವನ್ನು ಪ್ರದರ್ಶಿಸಲು ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಅವರು ಗಳಿಸಿದ ಸೀಮಿತ ಅವಕಾಶಗಳಲ್ಲಿ, ಸರ್ಫರಾಜ್ 23ರ ಸರಾಸರಿಯಲ್ಲಿ ಮತ್ತು 169.47 ರ ಸ್ಟ್ರೈಕ್-ರೇಟ್‌ನಲ್ಲಿ 161 ರನ್ ಗಳಿಸಿದರು. ಸತತ ಮೂರು ಸೋಲುಗಳಿಂದ ಸಿಎಸ್‌ಕೆ ಪ್ಲೇಆಫ್‌ ರೇಸ್‌ನಿಂದ ಹೊರಗುಳಿಯಿತು ಮತ್ತು ಟೂರ್ನಿಯಿಂದಲೇ ಹೊರಬಿತ್ತು. ಅವಕಾಶಗಳು ಸೀಮಿತವಾಗಿದ್ದರೂ, ಸರ್ಫರಾಜ್ Instagram ನಲ್ಲಿ CSK ಅಭಿಮಾನಿಗಳಿಗಾಗಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

'ಕಳೆದ ಎರಡು ತಿಂಗಳುಗಳಿಂದ ನನಗೆ ತುಂಬಾ ಸಂತೋಷವಾಯಿತು. ನನ್ನ ಹೃದಯದಲ್ಲಿನ ರಕ್ತ ಹಳದಿ ಬಣ್ಣದ್ದಾಗಿದೆ... ಧನ್ಯವಾದಗಳು ಚೆನ್ನೈ ಸೂಪರ್ ಕಿಂಗ್ಸ್, ಸಿಎಸ್‌ಕೆ ಅಭಿಮಾನಿಗಳಿಗೆ ತುಂಬಾ ಧನ್ಯವಾದಗಳು' ಎಂದು ಸರ್ಫರಾಜ್ ಸಿಎಸ್‌ಕೆ ಜೊತೆಗಿನ ತಮ್ಮ ಐಪಿಎಲ್ 2026ನೇ ಆವೃತ್ತಿ ಮುಕ್ತಾಯಗೊಂಡಾಗ ಪೋಸ್ಟ್‌ ಮಾಡಿದ್ದಾರೆ.

ಸಿಎಸ್‌ಕೆ ತಂಡದ ಐಪಿಎಲ್ ಸೀಸನ್ ಮುಗಿದ ನಂತರ ಭಾರತದ ದಂತಕಥೆ ಎಂಎಸ್ ಧೋನಿ ಅವರ ಭವಿಷ್ಯದ ಬಗ್ಗೆಯೂ ಒಂದು ಚರ್ಚೆ ನಡೆಯುತ್ತಿದೆ. ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಬೌಲಿಂಗ್ ಕೋಚ್ ಎರಿಕ್ ಸೈಮನ್ಸ್, ಎಂಎಸ್ ಧೋನಿ ಈ ಆವೃತ್ತಿಯಲ್ಲಿ ಗಾಯದಿಂದಾಗಿ ಆಡಿಲ್ಲವಾದರೂ, 44 ವರ್ಷದ ಅವರು ನೆಟ್ಸ್‌ನಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಧೋನಿ ನೆಟ್ಸ್‌ನಲ್ಲಿ ಚೆಂಡುಗಳನ್ನು ಹೊಡೆಯುತ್ತಿದ್ದಾರೆ. ಅವರು ಉತ್ತಮವಾಗಿ ಹೊಡೆಯುವುದನ್ನು ನಾನು ನೋಡಿದ್ದೇನೆ' ಎಂದರು.

ಗಮನಾರ್ಹವಾಗಿ, ಸಿಎಸ್‌ಕೆ ತಂಡವು ಐದು ಐಪಿಎಲ್ ಪ್ರಶಸ್ತಿ ಗೆಲುವು ಕಾಣುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಂಎಸ್ ಧೋನಿ ಇದೀಗ ಈ ಆವೃತ್ತಿಯಲ್ಲಿ ಸಿಎಸ್‌ಕೆ ಪರ ಒಂದೇ ಒಂದು ಪಂದ್ಯವನ್ನು ಆಡಿಲ್ಲ. ಗಾಯದಿಂದಾಗಿ ಅವರು ಇಡೀ ಆವೃತ್ತಿಯಿಂದ ಹೊರಗುಳಿದಿದ್ದಾರೆ.

ಮುಂದಿನ ಐಪಿಎಲ್ ಸೀಸನ್‌ನಲ್ಲಿ ಎಂಎಸ್ ಧೋನಿ ಬ್ಯಾಟಿಂಗ್ ನೋಡಲು ಅಭಿಮಾನಿಗಳಿಗೆ ಅವಕಾಶ ಸಿಗುತ್ತದೆಯೇ ಎಂಬ ಬಗ್ಗೆ ಮಾತನಾಡಿದ ಸೈಮನ್ಸ್, ಸಿಎಸ್‌ಕೆ ಮಾಜಿ ನಾಯಕ ಗಾಯದಿಂದ ಪಂದ್ಯದಲ್ಲಿ ಆಡಿಲ್ಲದಿದ್ದರೂ ನೆಟ್ಸ್‌ನಲ್ಲಿ ಅದ್ಭುತವಾಗಿ ಚೆಂಡನ್ನು ಹೊಡೆಯುತ್ತಿದ್ದಾರೆ. ತಮ್ಮ ಐಪಿಎಲ್ ಭವಿಷ್ಯದ ಬಗ್ಗೆ ಧೋನಿ ಅವರೇ ನಿರ್ಧರಿಸುತ್ತಾರೆ ಮತ್ತು ವೈಯಕ್ತಿಕ ಕಾರಣಗಳಿಗಿಂತ ತಂಡಕ್ಕೆ ಯಾವುದು ಉತ್ತಮ ಎಂಬುದರ ಆಧಾರದ ಮೇಲೆ ಅನುಭವಿ ಆಟಗಾರ ನಿರ್ಧಾರ ತೆಗೆದುಕೊಳ್ಳುತ್ತಾರೆ. ಧೋನಿ ಆಡುವುದಾದರೆ, ಅವರು ಶಿಬಿರದಲ್ಲಿ ಇರುವುದು ಉತ್ತಮ' ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Twisha Sharma ಸಾವು ಪ್ರಕರಣ: ನಾಪತ್ತೆಯಾಗಿದ್ದ ಪತಿ ಜಬಲ್ಪುರ ನ್ಯಾಯಾಲಯಕ್ಕೆ ಶರಣು; ಅತ್ತೆಗೆ ಹೈಕೋರ್ಟ್ ನೋಟಿಸ್; Video

'ಶೇ.100ರಷ್ಟು ದೋಷರಹಿತ ಮರು ಪರೀಕ್ಷೆ': NEET UG ಪ್ರಶ್ನೆಪತ್ರಿಕೆ ಸೋರಿಕೆ ಬಳಿಕ ಕಠಿಣ ನಿರ್ಧಾರ ಎಂದ Dharmendra Pradhan

ಮೃತ ನಟಿ ತ್ವಿಶಾ ಶರ್ಮಾ ಎರಡನೇ ಮರಣೋತ್ತರ ಪರೀಕ್ಷೆಗೆ ಹೈಕೋರ್ಟ್ ಅನುಮತಿ; ಜಾಮೀನು ಅರ್ಜಿ ಹಿಂಪಡೆದ ಪತಿ!

IPL 2026: ಕೊಹ್ಲಿ ಜತೆ ಬ್ಯಾಟಿಂಗ್ ನನ್ನ ಬೆಳವಣಿಗೆಗೆ ಕಾರಣ ಎಂದ ಪಡಿಕಲ್; ಸೂರ್ಯವಂಶಿ ಬಗ್ಗೆ ಹೇಳಿದ್ದೇನು?

ದೀಪ್ಕೆ ಬಂಧನ ಭೀತಿ: ಪೋಷಕರ ನಿದ್ದೆಗೆಡಿಸಿದ Cockroach Janata Party

SCROLL FOR NEXT