ಹಾರ್ದಿಕ್ ಔಟ್-ರೋಹಿತ್ ಶರ್ಮಾಗೆ ನೂತನ ನಾಯಕನ ನೇಮಕಾತಿ ಹೊಣೆ 
ಕ್ರಿಕೆಟ್

Mumbai Indians ನಿಂದ ಕಾಲು ಹೊರಗಿಟ್ಟ ಹಾರ್ದಿಕ್ ಪಾಂಡ್ಯಾ; Rohit Sharmaಗೆ ನೂತನ ಕ್ಯಾಪ್ಟನ್ ಆಯ್ಕೆ ಹೊಣೆ?

ಐಪಿಎಲ್ 2026 ಟೂರ್ನಿ ಬಳಿಕ ಮುಂಬೈ ಇಂಡಿಯನ್ಸ್ ತಂಡದ ಆಡಳಿತದೊಂದಿಗೆ ಸಂಬಂಧ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತೊರೆಯಲು ಯೋಚಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಂಬೈ: ಐಪಿಎಲ್ 2026 ಟೂರ್ನಿಯಲ್ಲಿ ಕಳಪೆ ಪ್ರದರ್ಶನದಿಂದ ಹೊರಬಿದ್ದಿರುವ ಮುಂಬೈ ಇಂಡಿಯನ್ಸ್ ತಂಡದಲ್ಲಿ ಮೇಜರ್ ಸರ್ಜರಿಯಾಗುತ್ತಿದ್ದು, ತಂಡದಿಂದ ಹೊರಹೋಗಲು ಹಾರ್ದಿಕ್ ಪಾಂಡ್ಯಾ ಸಿದ್ಧತೆ ನಡೆಸಿರುವ ಮಾತುಕತೆಗಳ ನಡುವೆಯೇ ನೂತನ ನಾಯಕನ ಆರಿಸುವ ಹೊಣೆಯನ್ನು ಹಿರಿಯ ಆಟಗಾರ ರೋಹಿತ್ ಶರ್ಮಾಗೆ ನೀಡಲಾಗಿದೆ ಎಂದು ವರದಿಯಾಗಿದೆ.

ಹೌದು.. ಐಪಿಎಲ್ 2026 ಟೂರ್ನಿ ಬಳಿಕ ಮುಂಬೈ ಇಂಡಿಯನ್ಸ್ ತಂಡದ ಆಡಳಿತದೊಂದಿಗೆ ಸಂಬಂಧ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತೊರೆಯಲು ಯೋಚಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹೀಗಾಗಿ ಮುಂದಿನ ಮುಂಬೈ ಇಂಡಿಯನ್ಸ್ ತಂಡದ ನಾಯಕನ ಆಯ್ಕೆ ರೋಹಿತ್ ಶರ್ಮಾ ಅವರ ‘ಆಶೀರ್ವಾದ’ದ ಮೇರೆಗೆ ನಡೆಯಲಿದೆ ಎನ್ನಲಾಗಿದೆ.

Mumbai Indians ತಂಡದಲ್ಲಿ ಆಮೂಲಾಗ್ರ ಬದಲಾವಣೆಗೆ ತಂಡದ ಆಡಳಿತಮಂಡಳಿ ಮುಂದಾಗಿದ್ದು, ಹಾರ್ದಿಕ್ ಪಾಂಡ್ಯ ಅವರನ್ನು ನಾಯಕ ಸ್ಥಾನದಿಂದ ತೆಗೆದುಹಾಕುವ ಸಾಧ್ಯತೆ ಇದೆ. ಆಡಳಿತದೊಂದಿಗೆ ಸಂಬಂಧ ಹದಗೆಟ್ಟಿರುವ ಕಾರಣ ಆಲ್‌ರೌಂಡರ್ ಹಾರ್ದಿಕ್ ಫ್ರಾಂಚೈಸಿಯನ್ನು ತೊರೆಯಲು ಸಹ ಬಯಸುತ್ತಿದ್ದಾರೆ.

ಮುಂಬೈನಿಂದ ಹಾರ್ದಿಕ್ ಔಟ್

ಹಾಲಿ IPL 2026 ಟೂರ್ನಿಯಲ್ಲಿ 14 ಪಂದ್ಯಗಳಲ್ಲಿ ಕೇವಲ 4 ಗೆಲುವುಗಳನ್ನು ದಾಖಲಿಸಿದ ಮುಂಬೈ ಇಂಡಿಯನ್ಸ್, ಟೂರ್ನಿಯಿಂದ ಹೊರಬಿದ್ದ ಮೊದಲ ತಂಡ ಎಂಬ ಕುಖ್ಯಾತಿಗೂ ತುತ್ತಾಗಿತ್ತು. 2024ರ ಸೀಸನ್‌ಗೆ ಮುನ್ನ ನಾಯಕನಾಗಿ ನೇಮಕ ಮಾಡಿದ್ದ ಹಾರ್ದಿಕ್‌ ಪಾಂಡ್ಯಾರಿಂದ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಲು ಸಾಧ್ಯವಾಗಿರಲಿಲ್ಲ.

ಅಲ್ಲದೆ ಹಾರ್ದಿಕ್ ನಾಯಕತ್ವದಿಂದ ತಂಡದ ಬಹುತೇಕ ಆಟಗಾರರು ಅಸಮಾಧಾನಗೊಂಡಿದ್ದರು. ಹಾರ್ದಿಕ್ ನಾಯಕತ್ವದಿಂದ ಹಿಂದೆ ಸರಿಯಬೇಕು ಎಂದು ತಂಡದ ಬಹುತೇಕ ಆಟಗಾರರ ಬಯಕೆ ಎನ್ನಲಾಗಿದೆ. ಹಾರ್ದಿಕ್ ಕೂಡ ಇದೀಗ ತಂಡ ತೊರೆಯಲು ಮುಂದಾಗಿದ್ದು, ಹೀಗಾಗಿ ಅವರ ನಂತರ ತಂಡದ ನಾಯಕತ್ವವನ್ನು ಯಾರು ವಹಿಸಿಕೊಳ್ಳುತ್ತಾರೆ ಎಂಬುದು ಇದೀಗ ದೊಡ್ಡ ಪ್ರಶ್ನೆಯಾಗಿದೆ.

ಮುಂಬೈ ಇಂಡಿಯನ್ಸ್ ಆಡಳಿತ ಹಾರ್ದಿಕ್ ಬಗ್ಗೆ ಇನ್ನೂ ಶೇಕಡಾ 100 ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ ಎಂಬ ವರದಿಗಳಿದ್ದರೂ, 32 ವರ್ಷದ ಆಟಗಾರ ತಂಡ ತೊರೆಯಲು ಮುಂದಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದರಿಂದ ಆಡಳಿತದೊಂದಿಗೆ ಅವರ ಸಂಬಂಧ ಉತ್ತಮವಾಗಿಲ್ಲ ಎಂಬ ಸುಳಿವು ಸಿಕ್ಕಿದೆ.

“ಇದು ಕೇವಲ ನಾಯಕತ್ವದ ವಿಚಾರವಲ್ಲ, ವೈಯಕ್ತಿಕ ವಾಸ್ತವಿಕತೆಗಳ ಪ್ರಶ್ನೆಯೂ ಹೌದು. ಆಡಳಿತದೊಂದಿಗೆ ಉತ್ತಮ ಸಂಬಂಧ ಇಲ್ಲದಿದ್ದಾಗ ನೀವು ಆ ಸಂಸ್ಥೆಯಲ್ಲಿ ಕೆಲಸ ಮಾಡಬಹುದೇ?” ಎಂದು ಮುಂಬೈ ಇಂಡಿಯನ್ಸ್ ಅಧಿಕಾರಿ ಹೇಳಿದ್ದಾರೆ. ಹಾರ್ದಿಕ್ ಪಾಂಡ್ಯ ಅವರ ಮುಂಬೈ ಇಂಡಿಯನ್ಸ್ ಭವಿಷ್ಯದ ಬಗ್ಗೆ ಸ್ಪಷ್ಟ ಮಾಹಿತಿ ಇನ್ನೂ ಕೆಲವು ವಾರಗಳಲ್ಲಿ ಹೊರಬರುವ ನಿರೀಕ್ಷೆಯಿದೆ.

ರೋಹಿತ್ ಶರ್ಮಾಗೆ ಮಹತ್ವದ ಪಾತ್ರ

ಮೂಲಗಳ ಪ್ರಕಾರ, ಮುಂದಿನ ಮುಂಬೈ ಇಂಡಿಯನ್ಸ್ ನಾಯಕನ ಆಯ್ಕೆ ರೋಹಿತ್ ಶರ್ಮಾ ಅವರ ಒಪ್ಪಿಗೆಯೊಂದಿಗೆ ನಡೆಯಲಿದೆ. 2023ರಲ್ಲಿ ರೋಹಿತ್ ಅವರನ್ನು ಬದಲಿಸಿ ಹಾರ್ದಿಕ್ ಅವರನ್ನು ನಾಯಕನನ್ನಾಗಿ ಮಾಡಿದ್ದ ನಿರ್ಧಾರ ದೊಡ್ಡ ತಪ್ಪಾಗಿತ್ತು ಎಂಬ ಪಾಠವನ್ನು ಮುಂಬೈ ಇಂಡಿಯನ್ಸ್ ತಂಡದ ಆಡಳಿತ ಕಲಿತಿದೆ ಎನ್ನಲಾಗಿದೆ.

ಮುಂದಿನ ನಾಯಕತ್ವ ಆಯ್ಕೆಯಲ್ಲಿ ಇದೇ ರೀತಿಯ ಪರಿಸ್ಥಿತಿ ಮರುಕಳಿಸದಂತೆ ನೋಡಿಕೊಳ್ಳಲು ತಂಡದ ಆಡಳಿತ ಉತ್ಸುಕವಾಗಿದೆ. ಹೀಗಾಗಿ, ಮುಂಬೈ ಇಂಡಿಯನ್ಸ್ ತಂಡದ ಅತಿದೊಡ್ಡ ಹೆಸರಾಗಿರುವ ರೋಹಿತ್ ಶರ್ಮಾ ಮುಂದಿನ ನಾಯಕ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ.

ರೋಹಿತ್ ಗಿಲ್ಲ ನಾಯಕತ್ವ

ಅಂತೆಯೇ ಮುಂಬೈ ಇಂಡಿಯನ್ಸ್ ನಾಯಕತ್ವಕ್ಕೆ ಸಂಬಂಧಿಸಿದಂತೆ ರೋಹಿತ್ ಶರ್ಮಾ ಮತ್ತೆ ನಾಯಕನಾಗಿ ಮರಳುವ ಸಾಧ್ಯತೆ ಇಲ್ಲ ಎಂಬುದು ಈಗಾಗಲೇ ಸ್ಪಷ್ಟವಾಗಿದೆ. “ಮುಂದಿನ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಅವರ ಆಶೀರ್ವಾದ ಪಡೆದವರೇ ಆಗಿರುತ್ತಾರೆ. ಮುಂಬೈ ಇಂಡಿಯನ್ಸ್ ತಮ್ಮಿಂದಾದ ತಪ್ಪನ್ನು ಈಗ ಅರಿತುಕೊಂಡಿದೆ. ಆದರೆ ರೋಹಿತ್ ಸ್ವತಃ ಮತ್ತೆ ನಾಯಕನಾಗುವುದಿಲ್ಲ,” ಎಂದು ಭಾರತದ ಮಾಜಿ ಆಟಗಾರ ಹಾಗೂ ಪ್ರಮುಖ ಕೋಚ್ ಒಬ್ಬರು ಹಾರ್ದಿಕ್ ಭವಿಷ್ಯದ ಕುರಿತು ಕೇಳಿದಾಗ ತಿಳಿಸಿದ್ದಾರೆ.

ನೇಹ್ರಾಗೂ ಗಾಳ

ಹೊಸ ನಾಯಕ ಮಾತ್ರವಲ್ಲ.. ಗುಜರಾತ್ ಕೋಚ್ ಗೂ ಮುಂಬೈ ಇಂಡಿಯನ್ಸ್ ಗಾಳ ಹಾಕಿದ್ದು, ಈ ಬಗ್ಗೆಯೂ ಮುಂಬೈ ಅಧಿಕಾರಿ ಮಾತನಾಡಿದ್ದಾರೆ.

Ashish Nehra ಅವರನ್ನು Gujarat Titans ತಂಡದಿಂದ ಕರೆತರುವ ಪ್ರಯತ್ನ ಮಾಡಬೇಕಿತ್ತೇ ಎಂಬ ಪ್ರಶ್ನೆಗೆ, ಮತ್ತೊಂದು ಫ್ರಾಂಚೈಸಿಯಿಂದ ಕೋಚ್ ಅಥವಾ ನಾಯಕನನ್ನು ನೇರವಾಗಿ ಕರೆತರುವುದು ಅಷ್ಟು ಸುಲಭವಲ್ಲ ಎಂದು ಮೂಲಗಳು ಪ್ರತಿಕ್ರಿಯಿಸಿವೆ.

“ಇದೇ IPL‌ನ ವಾಸ್ತವಿಕತೆ. ಬೇರೆ ಫ್ರಾಂಚೈಸಿಯಿಂದ ಕೋಚ್ ಮತ್ತು ನಾಯಕನನ್ನು ಸುಲಭವಾಗಿ ಕರೆದೊಯ್ಯಲು ಸಾಧ್ಯವಿಲ್ಲ. ನೆಹ್ರಾ ಯಾಕೆ ಬರಬೇಕು?” ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪ್ರಹ್ಲಾದ್ ಜೋಶಿ ಕೊಳಕು ಮನುಷ್ಯ; ಅತ್ಯಾಚಾರಿಯನ್ನು ರಕ್ಷಿಸುವವರು ನೂತನ ಶಿಕ್ಷಣ ಸಚಿವರಾಗಿದ್ದಾರೆ: ರಾಹುಲ್ ಗಂಭೀರ ಆರೋಪ, Video

ದೆಹಲಿಗೆ ಬಂದು ನಾಟಕವಾಡುವ ನಿಮಗೆ KPSC ಹಗರಣ ಅನ್ಯಾಯ ಅನಿಸಲಿಲ್ಲವೇ?: ಲೋಕಸಭೆಯಲ್ಲಿ ಸಿಎಂ ಶಿವಕುಮಾರ್ ವಿರುದ್ಧ ತೇಜಸ್ವಿ ವಾಗ್ದಾಳಿ!

ಪಾಕ್ ತನ್ನ ಅತಿಕ್ರಮಣವನ್ನು ಮುಚ್ಚಿಹಾಕಲು PoKನಲ್ಲಿ ಚುನಾವಣೆ ನಡೆಸುವ ಪ್ರಯತ್ನ: ಭಾರತ ತೀವ್ರ ಖಂಡನೆ

ಶಾಸಕರ ಭವನದ 7ನೇ ಮಹಡಿಯಿಂದ ಬಿದ್ದು ಮಾಜಿ ಸಚಿವ ನಾನಕ್ ರಾಮ್ ಭುರ್ಜಿ ಸಾವು; ಕೊಲೆಯೋ, ಆತ್ಮಹತ್ಯೆಯೋ?

ಬಿಡದಿ ಟೌನ್ ಶಿಪ್ ಯೋಜನೆ ಬೇಡ ಎನ್ನುವವರು ಕೋರ್ಟ್ ಗೆ ಹೋಗಲಿ, ನಾನು ಕೂಡಾ ಸಚಿವ ಸ್ಥಾನದ ಆಕಾಂಕ್ಷಿ- ಹೆಚ್. ಸಿ. ಬಾಲಕೃಷ್ಣ!