ಟೀಂ ಇಂಡಿಯಾ ಆಟಗಾರರು Photo | BCCI
ಕ್ರಿಕೆಟ್

India vs New Zealand, 2nd ODI: ಭಾರತದ ಬೌಲರ್‌ಗಳ ಮುಂದೆ ಮಂಡಿಯೂರಿದ ನ್ಯೂಜಿಲೆಂಡ್ ಬ್ಯಾಟರ್‌ಗಳು; 134 ರನ್‌ಗಳಿಗೆ ಆಲೌಟ್!

ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಪರ ಡೆರಿಲ್ ಮಿಚೆಲ್ 55 ರನ್‌ಗಳೊಂದಿಗೆ ಗರಿಷ್ಠ ಸ್ಕೋರರ್ ಎನಿಸಿಕೊಂಡರೆ, ಮಿಚೆಲ್ ಸ್ಯಾಂಟ್ನರ್ 31 ರನ್ ಗಳಿಸಿದರು.

ವೆಲ್ಲಿಂಗ್ಟನ್: ಶನಿವಾರ ಇಲ್ಲಿ ನಡೆದ ಐದು ಪಂದ್ಯಗಳ ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ, ಭಾರತ ತಂಡವು ನ್ಯೂಜಿಲೆಂಡ್ ಅನ್ನು 41 ಓವರ್‌ಗಳಲ್ಲಿ 134 ರನ್‌ಗಳಿಗೆ ಆಲೌಟ್ ಮಾಡಿದೆ.

ಗುರ್ನೂರ್ ಬ್ರಾರ್ 10 ಓವರ್‌ಗಳಲ್ಲಿ 30 ರನ್‌ ನೀಡಿ 4 ವಿಕೆಟ್‌ಗಳನ್ನು ಪಡೆಯುವ ಮೂಲಕ ತಮ್ಮ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನ ನೀಡಿದರು; ಇತ್ತ, ಔಕಿಬ್ ನಬಿ (31 ರನ್‌ಗೆ 2 ವಿಕೆಟ್) ಹೊಸ ಚೆಂಡಿನೊಂದಿಗೆ ಎದುರಾಳಿ ತಂಡಕ್ಕೆ ಆರಂಭಿಕ ಆಘಾತ ನೀಡಿದರು.

ಅನ್ಶುಲ್ ಕಾಂಬೋಜ್ ಮತ್ತು ಅಕ್ಷರ್ ಪಟೇಲ್ ಕೂಡ ತಲಾ ಎರಡು ವಿಕೆಟ್ ಪಡೆದು ಎದುರಾಳಿ ತಂಡದ ಬ್ಯಾಟರ್‌ಗಳನ್ನು ಕಾಡಿದರು.

ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಪರ ಡೆರಿಲ್ ಮಿಚೆಲ್ 55 ರನ್‌ಗಳೊಂದಿಗೆ ಗರಿಷ್ಠ ಸ್ಕೋರರ್ ಎನಿಸಿಕೊಂಡರೆ, ಮಿಚೆಲ್ ಸ್ಯಾಂಟ್ನರ್ 31 ರನ್ ಗಳಿಸಿದರು. ಇನ್ನುಳಿದಂತೆ ಎಲ್ಲ ಬ್ಯಾಟರ್‌ಗಳು ಭಾರತೀಯ ಬೌಲರ್‌ಗಳ ಮುಂದೆ ಮಂಡಿಯೂರಿದರು.

ಇದಕ್ಕೂ ಮುನ್ನ, ಟಾಸ್ ಗೆದ್ದ ಭಾರತ ತಂಡದ ನಾಯಕ ಶುಭಮನ್ ಗಿಲ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮಳೆಯ ಕಾರಣದಿಂದಾಗಿ ಆಟಕ್ಕೆ ದೀರ್ಘಕಾಲ ಅಡಚಣೆ ಉಂಟಾದ ಹಿನ್ನೆಲೆಯಲ್ಲಿ, ಪಂದ್ಯವನ್ನು ಪ್ರತಿ ತಂಡಕ್ಕೆ 47 ಓವರ್‌ಗಳಿಗೆ ಸೀಮಿತಗೊಳಿಸಲಾಗಿದೆ. ಸರಣಿಯ ಮೊದಲ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಅದೇ ಆಟಗಾರರನ್ನೇ ಎರಡೂ ತಂಡಗಳು ಈ ಪಂದ್ಯದಲ್ಲೂ ಉಳಿಸಿಕೊಂಡಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

AI ಬರಹ, ನಕಲಿ ಲೇಖಕರು: ಕೊಯಮತ್ತೂರಿನ ಗ್ರಂಥಾಲಯದಲ್ಲಿ ನಕಲಿ ಪುಸ್ತಕಗಳ ಜಾಲ! ಸಾಹಿತ್ಯ ಲೋಕವನ್ನು ಬೆಚ್ಚಿಬೀಳಿಸಿದ ಪೆರಿಯಾರ್ ಅರಿವುಳಗಂ ಗ್ರಂಥಾಲಯ ಹಗರಣ

OBC ಮೀಸಲಾತಿ ಕುರಿತು ಸುಪ್ರೀಂ ಮಹತ್ವದ ತೀರ್ಪು: ಕೇವಲ ವೇತನವಷ್ಟೇ ಮಾನದಂಡವಲ್ಲ ಎಂದ ಸರ್ವೋಚ್ಚ ನ್ಯಾಯಾಲಯ

India-EU: ಪ್ರಧಾನಿ ಮೋದಿ ಭೇಟಿ ಮುನ್ನ ಸಂಶೋಧನೆ, ನಾವೀನ್ಯತೆ ಕಾರ್ಯಕ್ರಮ ಸಂಬಂಧಿಸಿದ ಮಾತುಕತೆ ಪೂರ್ಣ

ಕೆ.ಎಲ್. ರಾಹುಲ್‌ಗೆ 'ಬಿಗ್ ಬ್ರದರ್' ನಂತೆ ವಿರಾಟ್ ಕೊಹ್ಲಿ ಕಾಳಜಿ! Video ವೈರಲ್, ನೆಟ್ಟಿಗರು ಫಿದಾ!

IAS ಅಧಿಕಾರಿ ದಿವ್ಯಾ ಮಿತ್ತಲ್ ಬಳಿಕ ಯುಪಿ ಪಿಸಿಎಸ್ ಅಧಿಕಾರಿ 'ಅನುಪಮಾ ರಾಗ್' ರಾಜೀನಾಮೆ: ರಾಜಕೀಯ ಪ್ರವೇಶದ ಸುಳಿವು! Video