ಮೌಂಟ್ ಮೌಂಗನುಯಿ: ಭಾರತದ ವಿರುದ್ಧದ 4ನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ವೇಗಿ ಮ್ಯಾಟ್ ಹೆನ್ರಿ ಮಾರಕ ಬೌಲಿಂಗ್ ಗೆ ಪತರುಗುಟ್ಟಿದ ಭಾರತ ತಂಡ ತಾನು ಎದುರಿಸಿದ ಮೊದಲ ಓವರ್ ನಲ್ಲೇ 3 ವಿಕೆಟ್ ಕಳೆದುಕೊಂಡು ಕ್ರಿಕೆಟ್ ಇತಿಹಾಸದ ಹೀನಾಯ ದಾಖಲೆ ನಿರ್ಮಿಸಿದೆ.
ನ್ಯೂಜಿಲೆಂಡ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ 334 ರನ್ ಬೃಹತ್ ಮೊತ್ತ ಬೆನ್ನು ಹತ್ತಿರುವ ಭಾರತ ತಂಡ ಅತ್ಯಂತ ಕಳಪೆ ಆರಂಭ ಪಡೆದುಕೊಂಡಿದೆ.
ಭಾರತಕ್ಕೆ ನ್ಯೂಜಿಲೆಂಡ್ ವೇಗಿ ಮ್ಯಾಟ್ ಹೆನ್ರಿ ಆರಂಭದಲ್ಲೇ ಆಘಾತ ನೀಡಿದ್ದು, ಒಂದೇ ಓವರ್‌ನಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಶೂನ್ಯಕ್ಕೆ ಔಟ್ ಮಾಡುವ ಮೂಲಕ ಭಾರತ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ.
ಮಾತ್ರವಲ್ಲದೇ ಒಂದೇ ಓವರ್ ನಲ್ಲಿ ಭಾರತದ ಮೂವರು ಸ್ಟಾರ್ ಬ್ಯಾಟರ್ ಗಳನ್ನು ಶೂನ್ಯಕ್ಕೆ ಔಟ್ ಮಾಡಿ ವಿಶ್ವದಾಖಲೆ ನಿರ್ಮಿಸಿದ್ದಾರೆ.
ಏಕದಿನ ಕ್ರಿಕೆಟ್‌ನಲ್ಲಿ ಅಪರೂಪದ ಕೆಟ್ಟ ದಾಖಲೆ
ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಇನಿಂಗ್ಸ್‌ನ ಮೊದಲ ಓವರ್‌ನಲ್ಲೇ ಯಾವುದೇ ರನ್ ನೀಡದೆ ಮೂರು ವಿಕೆಟ್ ಕಳೆದುಕೊಂಡ ಘಟನೆ ಇದು ಮೂರನೇ ಬಾರಿ. ಈ ಮೂಲಕ ಭಾರತ ಕೂಡ ಈ ಅನಗತ್ಯ ದಾಖಲೆಯ ಪಟ್ಟಿಗೆ ಸೇರ್ಪಡೆಯಾಗಿದೆ.
ಇದೇ ವೇಳೆ ಕಳೆದ 16 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಒಂದೇ ಏಕದಿನ ಇನಿಂಗ್ಸ್‌ನಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಶೂನ್ಯಕ್ಕೆ ಔಟಾಗಿದ್ದಾರೆ. ಇದಕ್ಕೂ ಮೊದಲು 2010ರಲ್ಲಿ ದಂಬುಲ್ಲಾದಲ್ಲಿ ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ಈ ಇಬ್ಬರೂ ಬ್ಯಾಟರ್‌ಗಳು ಖಾತೆ ತೆರೆಯದೆ ಪೆವಿಲಿಯನ್ ಸೇರಿದ್ದರು.
ಈ ಹಿಂದೆ ಪಾಕಿಸ್ತಾನ, ಬಾಂಗ್ಲಾದೇಶಕ್ಕೂ ಎದುರಾಗಿತ್ತು ಇದೇ ಆಘಾತ!
ಏಕದಿನ ಕ್ರಿಕೆಟ್‌ನಲ್ಲಿ ಮೊದಲ ಓವರ್‌ನಲ್ಲೇ ಮೂರು ವಿಕೆಟ್ ಕಳೆದುಕೊಂಡ ಮೊದಲ ತಂಡ ಪಾಕಿಸ್ತಾನ. 1997ರಲ್ಲಿ ಲಾಹೋರ್‌ನಲ್ಲಿ ದಕ್ಷಿಣ ಆಫ್ರಿಕಾದ ವೇಗಿ ಶಾನ್ ಪೊಲಾಕ್ ಅವರ ಮಾರಕ ಬೌಲಿಂಗ್‌ಗೆ ಪಾಕಿಸ್ತಾನ ತಂಡ ಇದೇ ರೀತಿಯ ಆಘಾತ ಅನುಭವಿಸಿತ್ತು.
2003ರ ಏಕದಿನ ವಿಶ್ವಕಪ್‌ನಲ್ಲಿ ಶ್ರೀಲಂಕಾದ ವೇಗಿ ಚಾಮಿಂಡ ವಾಸ್ ಕೂಡ ಬಾಂಗ್ಲಾದೇಶ ತಂಡಕ್ಕೆ ಮೊದಲ ಓವರ್‌ನಲ್ಲೇ ಮೂರು ವಿಕೆಟ್ ಕಳೆದುಕೊಳ್ಳುವ ಆಘಾತ ನೀಡಿದ್ದರು. ಇದೀಗ ಮ್ಯಾಟ್ ಹೆನ್ರಿ ತಮ್ಮ ಅಮೋಘ ಬೌಲಿಂಗ್ ಮೂಲಕ ಭಾರತವನ್ನೂ ಇದೇ ಅನಗತ್ಯ ದಾಖಲೆಗಳ ಸಾಲಿಗೆ ಸೇರಿಸಿದ್ದಾರೆ.
Teams losing first three wickets without a run on the board in ODIs
PAK vs NZ, Edgbaston, CWC 1983
PAK vs SA, Lahore, 1997
BAN vs SL, Pietermaritzburg, CWC 2003
AUS vs BAN, Mirpur, 2026
IND vs NZ, Mount Maunganui, 2026