ವೀರೇಂದ್ರ ಸೆಹ್ವಾಗ್ ಪುತ್ರ ಆರ್ಯವೀರ್ 
ಕ್ರಿಕೆಟ್

U19 ಏಷ್ಯಾಕಪ್ 2026: ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ವೀರೇಂದ್ರ ಸೆಹ್ವಾಗ್ ಪುತ್ರ ಆರ್ಯವೀರ್!

ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ರೋಚಕ ಜಯ ಸಾಧಿಸುವ ಮೂಲಕ ಈ ಟೂರ್ನಿ ಮುಕ್ತಾಯಗೊಂಡಿತು.

ಒಮಾನ್: 19 ವರ್ಷದೊಳಗಿನವರ ಏಷ್ಯಾ ಕಪ್ 2026ರಲ್ಲಿ ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರ ಪುತ್ರ ಆರ್ಯವೀರ್, 'ಪ್ಲೇಯರ್ ಆಫ್ ದಿ ಟೂರ್ನಮೆಂಟ್' (ಸರಣಿ ಶ್ರೇಷ್ಠ) ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.

ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ರೋಚಕ ಜಯ ಸಾಧಿಸುವ ಮೂಲಕ ಈ ಟೂರ್ನಿ ಮುಕ್ತಾಯಗೊಂಡಿತು. ಲಕ್ಷ್ಯ ರೈಚಂದಾನಿ ನೇತೃತ್ವದ ಭಾರತ ತಂಡ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಒಂದು ವಿಕೆಟ್ ಅಂತರದಿಂದ ಸೋಲಿಸಿ, ದಾಖಲೆಯ ಒಂಬತ್ತನೇ ಬಾರಿಗೆ U19 ಏಷ್ಯಾ ಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ಪಾಕಿಸ್ತಾನದ ವಿರುದ್ಧದ ಫೈನಲ್ ಪಂದ್ಯದಲ್ಲಿ ಆರ್ಯವೀರ್ 61 ಎಸೆತಗಳಲ್ಲಿ 58 ರನ್ ಗಳಿಸುವ ಮೂಲಕ ಭಾರತ ಗೆಲುವಿನಲ್ಲಿ ಪ್ರಮುಖ ಕೊಡುಗೆ ನೀಡಿದರು.

'ಪ್ಲೇಯರ್ ಆಫ್ ದಿ ಟೂರ್ನಮೆಂಟ್' ಪ್ರಶಸ್ತಿ ಪಡೆದ ನಂತರ ಮಾತನಾಡಿದ ಆರ್ಯವೀರ್, ಪಾಕಿಸ್ತಾನ ನೀಡಿದ 338 ರನ್ ಗಳ ಗೆಲುವಿನ ಗುರಿ ಬೆನ್ನಟ್ಟುವ ಕುರಿತು ಡ್ರೆಸ್ಸಿಂಗ್ ರೂಮ್ ನಲ್ಲಿ ಚರ್ಚೆ ನಡೆಸಿದ್ದೇವು. ಪಿಚ್ ಬ್ಯಾಟಿಂಗ್‌ಗೆ ತುಂಬಾ ಚೆನ್ನಾಗಿದೆ, ಇದು ಅಷ್ಟೇನೂ ದೊಡ್ಡ ಮೊತ್ತವಲ್ಲ ಎಂದು ಚರ್ಚಿಸಲಾಯಿತು. ಸಹಜವಾಗಿ ಬ್ಯಾಟಿಂಗ್ ಮಾಡಿ, ನಮ್ಮ ಎಂದಿನ ಶೈಲಿಯ ಶಾಟ್‌ಗಳನ್ನು ಆಡಿದರೆ, ಗುರಿಯನ್ನು ತಲುಪಬಹುದು ಎಂಬ ನಮಗೆ ನಂಬಿಕೆ ಇತ್ತು ಎಂದು ಅವರು ಹೇಳಿದರು.

ಫೈನಲ್ ಪಂದ್ಯದಲ್ಲಿ ಭಾರತ 300ಕ್ಕೂ ಹೆಚ್ಚು ರನ್‌ಗಳ ಗುರಿಯನ್ನು ಬೆನ್ನಟ್ಟುತ್ತಿದ್ದರೂ, ತಮ್ಮ ಯೋಜನೆಯಲ್ಲಿ ಯಾವುದೇ ಬದಲಾವಣೆ ಇರಲಿಲ್ಲ ಎಂದು ಈ ಸ್ಟಾರ್ ಬ್ಯಾಟರ್ ತಿಳಿಸಿದರು.

ಕೊನೆಯ 10 ಓವರ್‌ಗಳಲ್ಲಿ 100 ಅಥವಾ 120 ರನ್‌ಗಳನ್ನು ಹೇಗೆ ಬೆನ್ನಟ್ಟಬಹುದು ಎಂಬುದರ ಕುರಿತು ಚರ್ಚಿಸಿದ್ದೆವು. ಏಕೆಂದರೆ ಪಿಚ್ ಬ್ಯಾಟಿಂಗ್‌ಗೆ ಅತ್ಯುತ್ತಮವಾಗಿತ್ತು. ಹೀಗಾಗಿ ಯಾರಾದರೂ ಒಬ್ಬರು ದೀರ್ಘಕಾಲ ಕ್ರೀಸ್‌ನಲ್ಲಿ ನಿಂತು ಬ್ಯಾಟಿಂಗ್ ಮಾಡಬೇಕಿತ್ತು. ಲಕ್ಷ್ಯ ಅದನ್ನು ಮಾಡಿದರು, ಅವರಿಗೆ ಅಭಿನಂದನೆಗಳು. ಹಾಗೆಯೇ, ಅಂತಿಮ ಹಂತದಲ್ಲಿ ಮೋಹಿತ್ ಮತ್ತು ಮಾನಲ್ ಪ್ರದರ್ಶಿಸಿದ ಆಟ ಅದ್ಭುತವಾಗಿತ್ತು, ಅವರಿಗೂ ಅಭಿನಂದನೆಗಳು ಎಂದು ಆರ್ಯವೀರ್ ಹೇಳಿದರು. ಇದೇ ವೇಳೆ ತಮ್ಮ ತಂದೆಯೊಂದಿಗೆ ಮಾತನಾಡಿದ್ದೀರಾ ಎಂದು ಕೇಳಿದಾಗ, "ಇಲ್ಲ ಸರ್, ನಾನು ಇನ್ನೂ ಮಾತನಾಡಿಲ್ಲ. ನಂತರ ಮಾತನಾಡುತ್ತೇನೆ ಎಂದಷ್ಟೇ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

U19 ಏಷ್ಯಾಕಪ್ ಫೈನಲ್: ಕೊನೇ ಎಸೆತದಲ್ಲಿ ಬೌಂಡರಿ; ಪಾಕ್ ವಿರುದ್ಧ ಭಾರತಕ್ಕೆ 1 ವಿಕೆಟ್‌ ರೋಚಕ ಜಯ!

U19 ಏಷ್ಯಾ ಕಪ್ ಫೈನಲ್‌ನಲ್ಲಿ ರೋಚಕ ಗೆಲುವು; ಸಂಭ್ರಮಾಚರಣೆ ನಡುವೆ ಪಾಕಿಗಳನ್ನು ಉರಿಸಿದ ಭಾರತದ ಆಟಗಾರರು! Video

ನನ್ನ ಬಳಿ ಹಣವಿಲ್ಲ ಅಂದೆ, ಮೋದಿ ಅವರೇ ಟಿಕೆಟ್ ತಗೊಂಡ್ರು: ಪಿಂಕ್ ಲೈನ್ ಉದ್ಘಾಟನೆ ವೇಳೆ PM ಸೌಹಾರ್ದ ನಡೆ ನೆನೆದ DKS

Operation Sindoor ಬಳಿಕ ಭಾರತಕ್ಕೆ ಮೊದಲ ಬಾರಿ ಪಾಕ್ ಸಚಿವ ಭೇಟಿ!

ಮೇಕೆದಾಟು: 'ನಾವೇನು ಕರ್ನಾಟಕದ ಬಳಿ ಭಿಕ್ಷೆ ಬೇಡ್ತಿಲ್ಲ.. ಕಾವೇರಿ ನಮ್ಮ ಹಕ್ಕು': ಡಿ.ಕೆ ಶಿವಕುಮಾರ್ ಹೇಳಿಕೆಗೆ ತಮಿಳುನಾಡು ಕಾಂಗ್ರೆಸ್ ಸಂಸದೆ ಕೆಂಡಾಮಂಡಲ!