ಪಾಕಿಗಳನ್ನು ಉರಿಸಿದ ಭಾರತದ ಆಟಗಾರರು 
ಕ್ರಿಕೆಟ್

U19 ಏಷ್ಯಾ ಕಪ್ ಫೈನಲ್‌ನಲ್ಲಿ ರೋಚಕ ಗೆಲುವು; ಸಂಭ್ರಮಾಚರಣೆ ನಡುವೆ ಪಾಕಿಗಳನ್ನು ಉರಿಸಿದ ಭಾರತದ ಆಟಗಾರರು! Video

ಮೈದಾನದಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಹಾಗೆಯೇ ಸಾಂಪ್ರದಾಯಿಕ ಎದುರಾಳಿ ಪಾಕಿಗಳನ್ನು ಉರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಅಲ್ ಅಮೆರಾಟ್‌: ಶನಿವಾರ ಅಲ್ ಅಮೆರಾಟ್‌ನಲ್ಲಿ ನಡೆದ ಅಂಡರ್ 19 ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ 1 ವಿಕೆಟ್ ನಿಂದ ರೋಚಕ ಗೆಲುವು ಸಾಧಿಸಿದ ಬಳಿಕ ಭಾರತದ ಆಟಗಾರರ ಸಂಭ್ರಮಾಚರಣೆ ಹೇಳತೀರದಾಗಿತ್ತು.

ಮೈದಾನದಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಹಾಗೆಯೇ ಸಾಂಪ್ರದಾಯಿಕ ಎದುರಾಳಿ ಪಾಕಿಗಳನ್ನು ಉರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಕೊನೆಯ ಎಸೆತದಲ್ಲಿ ಭಾರತಕ್ಕೆ ನಾಲ್ಕು ರನ್‌ಗಳು ಬೇಕಾಗಿದ್ದವು. ಮೋಹಿತ್ ಬೌಂಡರಿ ಬಾರಿಸಿ ಭಾರತಕ್ಕೆ ಅದ್ಭುತ ಗೆಲುವು ತಂದುಕೊಡುತ್ತಿದ್ದಂತೆಯೇ ಮೈದಾನದೊಳಗೆ ನುಗ್ಗಿದ ಭಾರತೀಯ ಆಟಗಾರರು, ಒಬ್ಬರಿಗೊಬ್ಬರ ಪರಸ್ಪರ ಆಲಂಗಿಸಿಕೊಳ್ಳುವ ಮೂಲಕ ಸಂಭ್ರಮಾಚರಣೆ ಮಾಡಿದ್ದಾರೆ. ಈ ನಡುವೆ ವಿಭಿನ್ನ ಕೈ ಸನ್ನೆಗಳ ಮೂಲಕ ಪಾಕಿಸ್ತಾನದ ಆಟಗಾರರನ್ನು ಕೆರಳಿಸಿದ್ದಾರೆ.

ಇಂದಿನ ಪಂದ್ಯದಲ್ಲಿ ಮೋಹಿತ್ ಉಲ್ವಾ ಮತ್ತು ಮನಾಲ್ ಚೌಹಾಣ್ ಅಸಾಧ್ಯವಾದುದನ್ನು ಸಾಧ್ಯವಾಗಿಸಿದರು. ಪಾಕಿಸ್ತಾನ ನೀಡಿದ 338 ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದ ಭಾರತ ತಂಡಕ್ಕೆ ಈ ಜೋಡಿಯು ಕೇವಲ 35 ಎಸೆತಗಳಲ್ಲಿ 57 ರನ್‌ಗಳ ಜೊತೆಯಾಟವನ್ನು ನೀಡುವ ಮೂಲಕ ಪಾಕಿಸ್ತಾನದ ವಿರುದ್ಧ ಒಂದು ವಿಕೆಟ್ ಅಂತರದ ಅದ್ಭುತ ಗೆಲುವು ತಂದುಕೊಟ್ಟಿತು.

ಅಂತಿಮ ಓವರ್‌ಗಳಲ್ಲಿ ಗೆಲುವಿಗೆ 10ಕ್ಕೂ ಹೆಚ್ಚು ರನ್ ಅಗತ್ತವಿದ್ದಾಗ ಭಾರತ U19 ತಂಡವು ಕಠಿಣ ಪರಿಸ್ಥಿತಿಯಲ್ಲಿತ್ತು. ಆದರೆ, ಮನಾಲ್ ಚೌಹಾಣ್ 32 ಎಸೆತಗಳಲ್ಲಿ 47 ರನ್ ಮತ್ತು ಮೋಹಿತ್ ಉಲ್ವಾ 26 ಎಸೆತಗಳಲ್ಲಿ ಅಜೇಯ 49 ರನ್ ಗಳಿಸುವ ಮೂಲಕ ಭಾರತಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟರು.

ಉಲ್ವಾ ವಿನ್ನಿಂಗ್ ಶಾಟ್ ಹೊಡೆಯುತ್ತಿದ್ದಂತೆ ಭಾರತೀಯ ಆಟಗಾರರ ಸಂಭ್ರಮಾಚರಣೆ ಕಟ್ಟೆಯೊಡೆದು ಎದುರಾಳಿ ಪಾಕಿಸ್ತಾನ ತಂಡವನ್ನು ಉರಿಸುವುದರೊಂದಿಗೆ ವಿದಾಯ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

U19 ಏಷ್ಯಾಕಪ್ ಫೈನಲ್: ಕೊನೇ ಎಸೆತದಲ್ಲಿ ಬೌಂಡರಿ; ಪಾಕ್ ವಿರುದ್ಧ ಭಾರತಕ್ಕೆ 1 ವಿಕೆಟ್‌ನಿಂದ ರೋಚಕ ಜಯ!

ನನ್ನ ಬಳಿ ಹಣವಿಲ್ಲ ಅಂದೆ, ಮೋದಿ ಅವರೇ ಟಿಕೆಟ್ ತಗೊಂಡ್ರು: ಪಿಂಕ್ ಲೈನ್ ಉದ್ಘಾಟನೆ ವೇಳೆ PM ಸೌಹಾರ್ದ ನಡೆ ನೆನೆದ DKS

Operation Sindoor ಬಳಿಕ ಭಾರತಕ್ಕೆ ಮೊದಲ ಬಾರಿ ಪಾಕ್ ಸಚಿವರ ಭೇಟಿ!

ಮೇಕೆದಾಟು: 'ನಾವೇನು ಕರ್ನಾಟಕದ ಬಳಿ ಭಿಕ್ಷೆ ಬೇಡ್ತಿಲ್ಲ.. ಕಾವೇರಿ ನಮ್ಮ ಹಕ್ಕು': ಡಿ.ಕೆ ಶಿವಕುಮಾರ್ ಹೇಳಿಕೆಗೆ ತಮಿಳುನಾಡು ಕಾಂಗ್ರೆಸ್ ಸಂಸದೆ ಕೆಂಡಾಮಂಡಲ!

ನವೆಂಬರ್ 16 ರಿಂದ ಮೂರು ದಿನ GKVK ಕೃಷಿ ಮೇಳ; ಬರ ನಿರ್ವಹಣೆಯ ಮೇಲೆ ವಿಶೇಷ ಗಮನ