ಮೊಹಮ್ಮದ್ ಸಿರಾಜ್  
ಕ್ರಿಕೆಟ್

ಕ್ರಿಕೆಟ್ ನಲ್ಲಿ ಹಿಂದೂ- ಮುಸ್ಲಿಂ ಬರಲ್ಲ: ಮೊಹಮ್ಮದ್ ಸಿರಾಜ್ ಕೈಬಿಟ್ಟ ಬಗ್ಗೆ ಗೌತಮ್ ಗಂಭೀರ್ ಕೋಚ್ ಪ್ರತಿಕ್ರಿಯೆ..

"ಇದು ಆಧಾರರಹಿತವಾಗಿದೆ. ಭಾರತೀಯ ಕ್ರಿಕೆಟ್ ತಂಡದಲ್ಲಿ ಯಾವುದೇ ಹಿಂದೂ-ಮುಸ್ಲಿಂ ಬೇಧಬಾವ ಇಲ್ಲ. ಪ್ರತಿಯೊಬ್ಬರೂ ಭಾರತೀಯರು ಮತ್ತು ಅವರು ರಾಷ್ಟ್ರವನ್ನು ಪ್ರತಿನಿಧಿಸುತ್ತಾರೆ ಎಂದು ಗೌತಮ್ ಗಂಭೀರ್ ಅವರ ಬಾಲ್ಯದ ಕೋಚ್ ಸಂಜಯ್ ಭಾರದ್ವಾಜ್ ಹೇಳಿದ್ದಾರೆ

ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕಾಗಿ ಭಾರತದ ಆಡುವ ಹನ್ನೊಂದರ ಬಳಗದಿಂದ (playing XI) ಮೊಹಮ್ಮದ್ ಸಿರಾಜ್ ಅವರನ್ನು ಕೈಬಿಟ್ಟಿದ್ದರ ಹಿಂದೆ ಧಾರ್ಮಿಕ ಕಾರಣವಿದೆ ಎಂಬ ಆರೋಪಗಳನ್ನು ಗೌತಮ್ ಗಂಭೀರ್ ಅವರ ಬಾಲ್ಯದ ಕೋಚ್ ಸಂಜಯ್ ಭಾರದ್ವಾಜ್ ಶುಕ್ರವಾರ ತಳ್ಳಿಹಾಕಿದ್ದಾರೆ. ತಂಡದ ಆಯ್ಕೆಯು ಸಂಪೂರ್ಣವಾಗಿ ಕ್ರಿಕೆಟ್ ಅಗತ್ಯಗಳು ಮತ್ತು ತಂಡದ ಸಂಯೋಜನೆಯನ್ನು (team combination) ಆಧರಿಸಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಗಂಭೀರ್ ಯಾವಾಗಲೂ ಈ ಭಾರತೀಯ ವೇಗದ ಬೌಲರ್‌ಗೆ ಬೆಂಬಲ ನೀಡಿದ್ದಾರೆ ಮತ್ತು ಯಾವುದೇ ಆಟಗಾರನ ವಿರುದ್ಧ ವೈಯಕ್ತಿಕ ದ್ವೇಷವನ್ನು ಹೊಂದಿಲ್ಲ ಎಂದು ಹೇಳಿದ ಭಾರದ್ವಾಜ್, ಮುಖ್ಯ ಕೋಚ್ ಆಗಿ ಗಂಭೀರ್ ಅವರ ಆದ್ಯತೆಯು ಬಲವಾದ ತಂಡವನ್ನು ರೂಪಿಸುವುದಾಗಿದೆ ಎಂದು ತಿಳಿಸಿದ್ದಾರೆ.

"ಇದು ಆಧಾರರಹಿತವಾಗಿದೆ. ಭಾರತೀಯ ಕ್ರಿಕೆಟ್ ತಂಡದಲ್ಲಿ ಯಾವುದೇ ಹಿಂದೂ-ಮುಸ್ಲಿಂ ಬೇಧಬಾವ ಇಲ್ಲ. ಪ್ರತಿಯೊಬ್ಬರೂ ಭಾರತೀಯರು ಮತ್ತು ಅವರು ರಾಷ್ಟ್ರವನ್ನು ಪ್ರತಿನಿಧಿಸುತ್ತಾರೆ. ಗೌತಮ್ ಗಂಭೀರ್ ಯಾವಾಗಲೂ ಮೊಹಮ್ಮದ್ ಸಿರಾಜ್‌ಗೆ ಬೆಂಬಲ ನೀಡಿದ್ದಾರೆ. ಸಿರಾಜ್ ಆಡುವ ಹನ್ನೊಂದರ ಬಳಗದಲ್ಲಿ ಇಲ್ಲದಿದ್ದರೆ, ಅದು ಸಂಪೂರ್ಣವಾಗಿ ತಂಡದ ಅಗತ್ಯಗಳ ಕಾರಣದಿಂದಾಗಿ ಮಾತ್ರ. ಆಯ್ಕೆಯು ತಂಡದ ಸಂಯೋಜನೆ, ಆಟಗಾರರ ಸ್ಥಾನಗಳು ಮತ್ತು ಅವರ ಪ್ರದರ್ಶನವನ್ನು ಅವಲಂಬಿಸಿರುತ್ತದೆ ಎಂದು ಅವರು ಹೇಳಿದ್ದಾರೆ.

"ಗಂಭೀರ್‌ಗೆ ಯಾರ ವಿರುದ್ಧವೂ ವೈಯಕ್ತಿಕ ದ್ವೇಷವಿಲ್ಲ. ಸರಿಯಾದ ಸಂಯೋಜನೆಯೊಂದಿಗೆ ಬಲವಾದ ತಂಡವನ್ನು ರೂಪಿಸುವುದೇ ಅವರ ಆದ್ಯತೆ. ಬಿಸಿಸಿಐ (BCCI) ಕೂಡ ಹಿಂದೂ-ಮುಸ್ಲಿಂ ವಿಭಜನೆಯನ್ನು ನಂಬುವುದಿಲ್ಲ ಅಥವಾ ಅದನ್ನು ಉತ್ತೇಜಿಸುವುದಿಲ್ಲ. ಇಂತಹ ಆರೋಪಗಳು ಸಂಪೂರ್ಣವಾಗಿ ಆಧಾರರಹಿತವಾಗಿವೆ ಎಂದು ಭಾರದ್ವಾಜ್ ಐಎಎನ್‌ಎಸ್ (IANS) ಸುದ್ದಿಸಂಸ್ಥೆಗೆ ತಿಳಿಸಿದರು.

ವೆಲ್ಲಿಂಗ್ಟನ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಆಡುವ ಬಳಗದಿಂದ ಸಿರಾಜ್ ಅವರನ್ನು ಕೈಬಿಟ್ಟಿದ್ದರ ಬಗ್ಗೆ ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಪ್ರಶ್ನಿಸಿದ ನಂತರ ಈ ಹೇಳಿಕೆ ಬಂದಿದೆ. ಸಿರಾಜ್ ಅವರ ಉತ್ತಮ ಪ್ರದರ್ಶನಗಳ ಹೊರತಾಗಿಯೂ, ಅವರ ಹೆಸರೇ ಅವರನ್ನು ಕೈಬಿಡಲು ಕಾರಣವಾಗಿರಬಹುದು ಎಂದು ಮಸೂದ್ ಹೇಳಿದ್ದರು.

"ಅವರ ಹೆಸರು ಸಿರಾಜ್, ಇದೇ ಕಾರಣ ಸಾಕಲ್ಲವೇ? ಅವರು ಉತ್ತಮ ಪ್ರದರ್ಶನ ನೀಡುತ್ತಿದ್ದರೂ ಆಯ್ಕೆಯಾಗುತ್ತಿಲ್ಲವೆಂದರೆ, ಬೇರೆ ಕಾರಣವೇನಿರಬಹುದು? ಇದೇ ಕಾರಣವಾಗಿರಬಹುದುಇದಲ್ಲದೆ ಬೇರೆ ಯಾವುದೇ ಕಾರಣವಿರಲು ಸಾಧ್ಯವಿಲ್ಲ ಎಂದು ಮಸೂದ್ ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ನಮ್ಮಲ್ಲಿ ನೀರಿದ್ದರೆ ಖಂಡಿತ ತಮಿಳುನಾಡಿಗೆ ಕೊಡ್ತೇವೆ, ಈ ವರ್ಷ ಕುಡಿಯುವ ನೀರಿಗೇ ತತ್ವಾರವಾಗಿದೆ ’: ಸಿಎಂ ಡಿ ಕೆ ಶಿವಕುಮಾರ್; Video

ಪತಿ ಜೊತೆ ಅಕ್ರಮ ಸಂಬಂಧ ಶಂಕೆ; ಇಂಡಿಗೋ ಸಿಬ್ಬಂದಿ ವರ್ಷಾ ಹತ್ಯೆ; ಪತ್ನಿಯಿಂದಲೇ ಸುಪಾರಿ!

ನಾಳೆ ಪ್ರಧಾನಿ ಮೋದಿಯಿಂದ 'ನಿತೀಶ್ ಸೇತು' ಉದ್ಘಾಟನೆ

HDK vs DKS ಸಂಘರ್ಷಕ್ಕೆ ಸ್ವಾಮೀಜಿ ಎಂಟ್ರಿ: ಎಚ್‌ಡಿ ಕುಮಾರಸ್ವಾಮಿ ವಿರುದ್ಧ ನಿಶ್ಚಲಾನಂದನಾಥ ಸ್ವಾಮೀಜಿ ಕಿಡಿ!

'ಮುಸ್ಲಿಂ' ಅನ್ನೋ ಕಾರಣಕ್ಕೆ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಿಂದ ಸಿರಾಜ್ ಗೆ ಕೊಕ್! ವಿವಾದಕ್ಕೆ ಕಾರಣವಾಯ್ತು ಕಾಂಗ್ರೆಸ್ MP ಹೇಳಿಕೆ, ಬಿಜೆಪಿ ತಿರುಗೇಟು