ದೋಹಾ: 'ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2026' ಟೂರ್ನಿಯ 'ಇಂಡಿಯಾ ಎ' ಮತ್ತು 'ಪಾಕಿಸ್ತಾನ ಎ' ನಡುವಿನ ಪಂದ್ಯ ಮೈದಾನದಲ್ಲಿ ಸಾಕಷ್ಟು ಮಾತಿನ ಚಕಮಕಿಗೆ ಕಾರಣವಾಯಿತು.
ಈ ಘಟನೆಗಳ ಕೇಂದ್ರಬಿಂದುವಾಗಿದ್ದವರು ಭಾರತದ ವೇಗದ ಬೌಲರ್ ಹರ್ಷಿತ್ ರಾಣಾ, ಮೊದಲ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನ ಎ ಆಟಗಾರರೊಂದಿಗೆ ಮಾತಿನ ಚಕಮಕಿ ನಡೆಸಿದ್ದ ಹರ್ಷಿತ್ ರಾಣಾ, ನಂತರ ಬ್ಯಾಟಿಂಗ್ ಮಾಡಲು ಮೈದಾನಕ್ಕೆ ಬಂದಾಗ ಎದುರಾಳಿ ಆಟಗಾರರ ತೀವ್ರ ಪ್ರತಿಕ್ರಿಯೆಗೆ ಗುರಿಯಾದರು.
ಪಾಕಿಸ್ತಾನ ಎ ತಂಡ ಬ್ಯಾಟಿಂಗ್ ಮಾಡುತ್ತಿದ್ದಾಗಲೆ ಈ ಮಾತಿನ ಚಕಮಕಿಗಳು ಆರಂಭವಾಗಿದ್ದವು. ಈ ವೇಳೆ ರಾಣಾ ಎದುರಾಳಿ ಬ್ಯಾಟರ್‌ಗಳೊಂದಿಗೆ ವಾಗ್ವಾದ ನಡೆಸಿದ್ದರು. ವಿಶೇಷವಾಗಿ, ಆಯುಷ್ ಬದೋನಿ ಅವರ ಬೌಲಿಂಗ್‌ನಲ್ಲಿ ಶಮೈಲ್ ಹುಸೇನ್ ಅವರ ಕ್ಯಾಚ್ ಹಿಡಿದ ನಂತರ ಅವರೊಂದಿಗೆ ರಾಣಾ ಮಾತಿನ ಚಕಮಕಿ ನಡೆಸಿದ್ದರು. ಆದರೆ ಈ ನಾಟಕೀಯ ಸನ್ನಿವೇಶಗಳು ಅಲ್ಲಿಗೆ ಮುಗಿಯಲಿಲ್ಲ.
45ನೇ ಓವರ್‌ನಲ್ಲಿ ಹರ್ಷಿತ್ ರಾಣಾ ಯಾವುದೇ ರನ್ ಗಳಿಸದೆ (ಶೂನ್ಯಕ್ಕೆ) ಔಟಾದರು. ಅವರು ಡ್ರೆಸ್ಸಿಂಗ್ ರೂಮ್‌ಗೆ ಮರಳುತ್ತಿದ್ದಾಗ, ಪಾಕಿಸ್ತಾನದ ಸ್ಪಿನ್ನರ್ ಮೊಕೀಮ್ ಕೆಣಕಿದ್ದಾರೆ. ಈ ಪ್ರತಿಕ್ರಿಯೆಯಿಂದ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿತು. ರಾಣಾ ಮೈದಾನದಿಂದ ಹೊರನಡೆಯುತ್ತಿದ್ದಾಗ ಮೊಕೀಮ್ ತಡೆಯಲು ಅವರ ತಂಡದ ಸಹ ಆಟಗಾರೊಬ್ಬರು ಮಧ್ಯಪ್ರವೇಶಿಸಬೇಕಾಯಿತು.
ಪಂದ್ಯದಲ್ಲಿ ಪಾಕಿಸ್ತಾನ ಗೆಲುವು ಸಾಧಿಸಿತು. 'ಗ್ರೂಪ್ ಬಿ' ಹಂತದ ಈ ಮುಖಾಮುಖಿಯಲ್ಲಿ ಅವರು 'ಇಂಡಿಯಾ ಎ' ವಿರುದ್ಧ 48 ರನ್‌ಗಳ ಜಯ ಸಾಧಿಸಿದರು ಮತ್ತು ತಮ್ಮ ಸಾಂಪ್ರದಾಯಿಕ ಎದುರಾಳಿಗಳಿಗೆ 'ರೈಸಿಂಗ್ ಸ್ಟಾರ್ಸ್' ಟೂರ್ನಿಯಲ್ಲಿ ಸೋಲುಣಿಸಿದರು.
ಈ ಪಂದ್ಯದಲ್ಲಿ ಹರ್ಷಿತ್ ರಾಣಾ ತಮ್ಮ ಆಕ್ರಮಣಕಾರಿ ಆಟದ ಶೈಲಿಯ ಮೂಲಕ ಗಮನ ಸೆಳೆದರು. ಪಾಕಿಸ್ತಾನ ಎ ಬ್ಯಾಟರ್‌ಗಳೊಂದಿಗೆ ಮಾತಿನ ಚಕಮಕಿಯಲ್ಲಿ ತೊಡಗಿಸಿಕೊಂಡರು. ಹುಸೇನ್ ಅವರನ್ನು ಬೀಳ್ಕೊಟ್ಟ ರೀತಿ ಈಗಾಗಲೇ ಉದ್ವಿಗ್ನವಾಗಿದ್ದ ಈ ಪಂದ್ಯದಲ್ಲಿ ಮತ್ತೊಂದು ಸಂಘರ್ಷದ ಕ್ಷಣವನ್ನು ಸೃಷ್ಟಿಸಿತು.
ಭಾವೋದ್ರೇಕಗಳು ಹೆಚ್ಚಾಗಿದ್ದ ಈ ಸಂದರ್ಭದಲ್ಲಿ ಭಾರತದ ವೇಗಿ ರಾಣಾ ಅವರು ಎದುರಾಳಿ ತಂಡದ ಆಕ್ರಮಣಕಾರಿ ವರ್ತನೆಯನ್ನು ಎದುರಿಸಬೇಕಾಯಿತು. ಈ ಬಾರಿ, ಪಾಕಿಸ್ತಾನದ ಸ್ಪಿನ್ನರ್ ಸುಫ್ಯಾನ್ ಮೊಕೀಮ್ ರಾಣಾಗೆ ಏನೋ ಹೇಳಲು ಮುಂದಾದಂತೆ ಕಂಡುಬಂತು.