ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರಿಕೆಟ್

'ಇಂತಹ ಪ್ರತಿಭೆ ಪೀಳಿಗೆಗೊಮ್ಮೆ ಹುಟ್ಟುತ್ತಾರೆ, ಪೋಷಿಸಿ, ಬೆಂಬಲಿಸಿ'; ವೈಭವ್ ಸೂರ್ಯವಂಶಿ ಬಗ್ಗೆ ಆಸಿಸ್ ದೈತ್ಯನ ಮೆಚ್ಚುಗೆ ಮಾತು!

ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್ ಅನ್ನು 'ಅದ್ಭುತ, ಊಹಿಸಲೂ ಅಸಾಧ್ಯವಾದ ಇನ್ನಿಂಗ್ಸ್' ಎಂದು ಬಣ್ಣಿಸಿದ್ದಾರೆ. ಅಲ್ಲದೆ ಏಕದಿನ ಕ್ರಿಕೆಟ್‌ನಲ್ಲಿ ಕೇವಲ 50 ಎಸೆತಗಳಲ್ಲಿ ದ್ವಿಶತಕ ಬಾರಿಸುವುದನ್ನು ಊಹಿಸಿಕೊಳ್ಳುವುದೂ ಕಷ್ಟ..

ವೈಭವ್ ಸೂರ್ಯವಂಶಿ ಮತ್ತು ರಿಕ್ಕಿಪಾಂಟಿಂಗ್
Srinivasa Murthy VN
Updated On : 24 Nov 2026, 10:26 pm

ನವದೆಹಲಿ: ಕೇವಲ 53 ಎಸೆತಗಳಲ್ಲಿ ದ್ವಿಶತಕ ಸಿಡಿಸಿ ಕ್ರಿಕೆಟ್ ಜಗತ್ತನ್ನೇ ಬೆರಗುಗೊಳಿಸಿರುವ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಆಟಕ್ಕೆ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಮನಸೋತಿದ್ದಾರೆ.

ಈ ಕುರಿತು ಇಂಡಿಯನ್ ಸ್ಪೋರ್ಟ್ಸ್ ನೆಟ್ವರ್ಕ್ ವರದಿ ಮಾಡಿದ್ದು, ಕ್ರೀಡಾ ವೆಬ್ ಸೈಟ್ ಜೊತೆ ಮಾತನಾಡಿದ ರಿಕ್ಕಿ ಪಾಂಟಿಂಗ್, ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್ ಅನ್ನು 'ಅದ್ಭುತ, ಊಹಿಸಲೂ ಅಸಾಧ್ಯವಾದ ಇನ್ನಿಂಗ್ಸ್' ಎಂದು ಬಣ್ಣಿಸಿದ್ದಾರೆ.

ಅಲ್ಲದೆ ಏಕದಿನ ಕ್ರಿಕೆಟ್‌ನಲ್ಲಿ ಕೇವಲ 50 ಎಸೆತಗಳಲ್ಲಿ ದ್ವಿಶತಕ ಬಾರಿಸುವುದನ್ನು ಊಹಿಸಿಕೊಳ್ಳುವುದೂ ಕಷ್ಟ ಎಂದು ಅಭಿಪ್ರಾಯಪಟ್ಟಿದ್ದಾರೆ.

Advertisement

Advertisement

'ಇಂತಹ ಪ್ರತಿಭೆಗಳು ಪೀಳಿಗೆಗೊಮ್ಮೆ ಮಾತ್ರ ಹುಟ್ಟುತ್ತಾರೆ. ನಿಜ ಹೇಳಬೇಕೆಂದರೆ, ಇದು ಸಂಪೂರ್ಣವಾಗಿ ನಂಬಲಸಾಧ್ಯವಾದ ಇನ್ನಿಂಗ್ಸ್. ಏಕದಿನ ಕ್ರಿಕೆಟ್‌ನಲ್ಲಿ ಕೇವಲ 50 ಎಸೆತಗಳಲ್ಲಿ ಒಬ್ಬ ಆಟಗಾರ ದ್ವಿಶತಕ ಗಳಿಸುತ್ತಾನೆ ಎಂಬುದನ್ನು ಊಹಿಸುವುದೂ ಕಷ್ಟ. ವೈಭವ್ ಸೂರ್ಯವಂಶಿ ನಿಜಕ್ಕೂ ಅಸಾಧಾರಣ ಪ್ರತಿಭೆ" ಎಂದು ಪಾಂಟಿಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Also Read

'ಮೊದಲ ಎರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿರಲಿಲ್ಲ', ಈಗ 53 ಎಸೆತಗಳಲ್ಲಿ 204 ರನ್'!: ವಂಡರ್ ಕಿಡ್ ವೈಭವ್ ಸೂರ್ಯವಂಶಿ ಹೇಳಿದ್ದೇನು?

ಪೋಷಿಸಿ, ಬೆಂಬಲಿಸಿ

53 ಎಸೆತಗಳಲ್ಲಿ 28 ಸಿಕ್ಸರ್ ಹಾಗೂ 7 ಬೌಂಡರಿಗಳ ಸಹಿತ ಒಟ್ಟು 35 ಬೌಂಡರಿಗಳನ್ನು ಬಾರಿಸಿರುವ ವೈಭವ್ ಅವರ ಆಟವನ್ನು ಪಾಂಟಿಂಗ್ ವಿಶೇಷವಾಗಿ ಪ್ರಶಂಸಿಸಿದ್ದಾರೆ.

ಇಂತಹ ಅದ್ಭುತ ಪ್ರತಿಭೆ ಆಗಾಗ ಸಿಗುವುದಿಲ್ಲ. ಆದ್ದರಿಂದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವೈಭವ್ ಅವರ ಪ್ರತಿಭೆಯನ್ನು ವಿಶೇಷ ಕಾಳಜಿಯಿಂದ ಬೆಳೆಸಬೇಕು ಎಂದು ಸಲಹೆ ನೀಡಿದ್ದಾರೆ.

"ಬಿಸಿಸಿಐ ವೈಭವ್ ಬಗ್ಗೆ ವಿಶೇಷ ಗಮನ ಹರಿಸಬೇಕು. ಅವರ ಪ್ರತಿಭೆಯನ್ನು ಪೋಷಿಸಿ, ಅಗತ್ಯವಿರುವ ಎಲ್ಲ ಬೆಂಬಲ ನೀಡಬೇಕು. ಇಂತಹ ಪ್ರತಿಭೆಗಳು ಆಗಾಗ ಕಾಣಸಿಗುವುದಿಲ್ಲ. ವೈಭವ್ ಅವರಂತಹ ಆಟಗಾರರು ಪೀಳಿಗೆಗೊಮ್ಮೆ ಮಾತ್ರ ಹುಟ್ಟುತ್ತಾರೆ," ಎಂದು ರಿಕಿ ಪಾಂಟಿಂಗ್ ಹೇಳಿದ್ದಾರೆ.

ಯುವ ವಯಸ್ಸಿನಲ್ಲೇ ಅಸಾಧಾರಣ ಬ್ಯಾಟಿಂಗ್ ಸಾಮರ್ಥ್ಯ ಪ್ರದರ್ಶಿಸಿರುವ ವೈಭವ್ ಸೂರ್ಯವಂಶಿ, ತಮ್ಮ ಸ್ಫೋಟಕ ಆಟದ ಮೂಲಕ ಕ್ರಿಕೆಟ್ ದಿಗ್ಗಜರ ಗಮನ ಸೆಳೆಯುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement