ಅತಿ ವೇಗದ ದ್ವಿಶತಕ: ವೈಭವ್ ಸೂರ್ಯವಂಶಿಗೆ 'ಯಮರಾಜ'ನ ರೂಪ ಕೊಟ್ಟ ರವೀಂದ್ರ ಜಡೇಜಾ! ಫೋಟೋ ವೈರಲ್
'ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2026' ಟೂರ್ನಿಯ ಗ್ರೂಪ್ ಹಂತದ ಪಂದ್ಯದಲ್ಲಿ ಯುಎಇ (UAE) ವಿರುದ್ಧ ಭಾರತ 'ಎ' ತಂಡದ ವೈಭವ್ ಸೂರ್ಯವಂಶಿ ಕೇವಲ 53 ಎಸೆತಗಳಲ್ಲಿ ಬರೋಬ್ಬರಿ 204 ರನ್ ಗಳಿಸುವ ಮೂಲಕ ಅತ್ಯಂತ ವೇಗದ ದ್ವಿಶತಕ ದಾಖಲೆ ಬರೆದಿದ್ದಾರೆ.
ಹೈದರಾಬಾದ್: ಭಾರತದ ಉದಯೋನ್ಮುಖ ಪ್ರತಿಭೆ, ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಯುಎಇ (UAE) ವಿರುದ್ಧ ಸಿಡಿಲಬ್ಬರದ ದ್ವಿಶತಕ ಸಿಡಿಸುವ ಮೂಲಕ ಹಲವು ವಿಶ್ವ ದಾಖಲೆಗಳನ್ನು ಬರೆದಿದ್ದು, ಜಗತ್ತಿನಾದ್ಯಂತ ಭಾರೀ ಪ್ರಶಂಸೆಗೆ ಪಾತ್ರರಾಗಿದ್ದಾರೆ.
'ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2026' ಟೂರ್ನಿಯ ಗ್ರೂಪ್ ಹಂತದ ಪಂದ್ಯದಲ್ಲಿ ಯುಎಇ (UAE) ವಿರುದ್ಧ ಭಾರತ 'ಎ' ತಂಡದ ವೈಭವ್ ಸೂರ್ಯವಂಶಿ ಕೇವಲ 53 ಎಸೆತಗಳಲ್ಲಿ ಬರೋಬ್ಬರಿ 204 ರನ್ ಗಳಿಸುವ ಮೂಲಕ ಅತ್ಯಂತ ವೇಗದ ದ್ವಿಶತಕ ದಾಖಲೆ ಬರೆದಿದ್ದಾರೆ.
ಈ ಯುವ ಆಟಗಾರನ ಬ್ಯಾಟಿಂಗ್ ಬಗ್ಗೆ ಭಾರೀ ಮೆಚ್ಚಿಗೆ ವ್ಯಕ್ತಪಡಿಸಿದ ಟೀಮ್ ಇಂಡಿಯಾದ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು, ವೈಭವ್ ಗೆ 'ಯಮರಾಜ'ನ ರೂಪ ನೀಡಿದ್ದು, ತಮಾಷೆಯ ಎಡಿಟ್ ಮಾಡಿದ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
'ವಿಶೇಷ ಪ್ರತಿಭೆ, ಬೆಲೆಕಟ್ಟಲಾಗದ ವಜ್ರ': ವೈಭವ್ ಸೂರ್ಯವಂಶಿಯನ್ನು ಹಾಡಿ ಹೊಗಳಿದ ಪಾಕ್ ಮಾಜಿ ವೇಗಿ ಶೋಯೆಬ್ ಅಖ್ತರ್!
ಜಡೇಜಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿರುವ ಈ ಚಿತ್ರದಲ್ಲಿ, 15 ವರ್ಷದ ವೈಭವ್ ಸೂರ್ಯವಂಶಿಯನ್ನು ಪೌರಾಣಿಕ ದೈತ್ಯ ಯಮರಾಜನಾಗಿ ಚಿತ್ರಿಸಲಾಗಿದೆ. ಈ ಫೋಟೊಗೆ "ಉತ್ತಮ ಆಟ" ಎಂದು ಬರೆದು ರಾಜಸ್ಥಾನ್ ರಾಯಲ್ಸ್ ಹಾಗೂ ವೈಭವ್ ಅವರನ್ನು ಟ್ಯಾಗ್ ಮಾಡುವ ಮೂಲಕ ಬೆನ್ನುತಟ್ಟಿದ್ದಾರೆ.