ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರಿಕೆಟ್

'ವಿಶೇಷ ಪ್ರತಿಭೆ, ಬೆಲೆಕಟ್ಟಲಾಗದ ವಜ್ರ': ವೈಭವ್ ಸೂರ್ಯವಂಶಿಯನ್ನು ಹಾಡಿ ಹೊಗಳಿದ ಪಾಕ್ ಮಾಜಿ ವೇಗಿ ಶೋಯೆಬ್ ಅಖ್ತರ್!

ಅವರು ಭಾರತೀಯ ಕ್ರಿಕೆಟ್‌ಗೆ ಒಂದು ದೊಡ್ಡ ಆಸ್ತಿ. ಬಿಸಿಸಿಐ (BCCI) ಅವರನ್ನು ಸರಿಯಾಗಿ ನೋಡಿಕೊಳ್ಳಬೇಕು ಮತ್ತು ಹಂತ ಹಂತವಾಗಿ ಅವರಿಗೆ ಭಾರತೀಯ ತಂಡದಲ್ಲಿ ಅವಕಾಶಗಳನ್ನು ನೀಡಬೇಕು ಎಂದು ಪಾಕ್ ಮಾಜಿ ಕ್ರಿಕೆಟಿಗ ಹೇಳಿದ್ದಾರೆ.

ವೈಭವ್ ಸೂರ್ಯವಂಶಿ - ಶೋಯೆಬ್ ಅಖ್ತರ್
Lingaraj Badiger
Updated On : 25 Nov 2026, 5:32 pm

ಇಸ್ಲಾಮಾಬಾದ್: ಉದಯೋನ್ಮುಖ ಪ್ರತಿಭೆ, ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಯುಎಇ (UAE) ವಿರುದ್ಧ ಸಿಡಿಲಬ್ಬರದ ದ್ವಿಶತಕ ಸಿಡಿಸುವ ಮೂಲಕ ಹಲವು ವಿಶ್ವ ದಾಖಲೆಗಳನ್ನು ಬರೆದಿದ್ದಾರೆ.

'ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2026' ಟೂರ್ನಿಯ ಗ್ರೂಪ್ ಹಂತದ ಪಂದ್ಯದಲ್ಲಿ ಯುಎಇ (UAE) ವಿರುದ್ಧ ಭಾರತ 'ಎ' ತಂಡದ ವೈಭವ್ ಸೂರ್ಯವಂಶಿ ಕೇವಲ 52 ಎಸೆತಗಳಲ್ಲಿ ಅತ್ಯಂತ ವೇಗದ ದ್ವಿಶತಕ ಸಿಡಿಸಿ ಹೊಸ ದಾಖಲೆ ಬರೆದಿದ್ದಾರೆ.

ವೈಭವ್ ಸಿಡಿಲಬ್ಬರದ ಬ್ಯಾಟಿಂಗ್ ಬಗ್ಗೆ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಕೂಡ ತಲೆದೂಗಿದ್ದು, ಈ ಯುವ ಆಟಗಾರನನ್ನು 'ಬೆಲೆಕಟ್ಟಲಾಗದ ವಜ್ರ' ಎಂದು ಬಣ್ಣಿಸಿದ್ದಾರೆ.

Advertisement

Advertisement

Also Read

India A vs UAE: ಕೇವಲ 52 ಎಸೆತಗಳಲ್ಲಿ ದ್ವಿಶತಕ: ಹೊಸ ದಾಖಲೆ ಬರೆದ ವೈಭವ್ ಸೂರ್ಯವಂಶಿ!

ವೈಭವ್ ಬಗ್ಗೆ ಶೋಯೆಬ್ ಅಖ್ತರ್ ಹೇಳಿದ್ದೇನು?

"ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್ ನೋಡಿ ನನಗೆ ನಿಜವಾಗಿಯೂ ಏನು ಹೇಳಬೇಕೆಂದು ತೋಚುತ್ತಿಲ್ಲ. ಕೇವಲ 52 ಎಸೆತಗಳಲ್ಲಿ 35 ಬೌಂಡರಿಗಳು - ಇದರಲ್ಲಿ 28 ಸಿಕ್ಸರ್‌ಗಳು ಮತ್ತು 7 ಬೌಂಡರಿಗಳು ಸೇರಿವೆ. ಅಬ್ಬಾ! ಇದು ನಂಬಲಸಾಧ್ಯವಾದ ಸಂಗತಿ. ಏಕದಿನ ಕ್ರಿಕೆಟ್‌ನಲ್ಲಿ ಕೇವಲ 52 ಎಸೆತಗಳಲ್ಲಿ ದ್ವಿಶತಕ ಬಾರಿಸುವುದು ಸಾಧ್ಯ ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ಕ್ಲಬ್ ಕ್ರಿಕೆಟ್‌ನಿಂದ ಹಿಡಿದು ಅಂತರರಾಷ್ಟ್ರೀಯ ಕ್ರಿಕೆಟ್‌ವರೆಗೆ ನನ್ನ ಇಡೀ ಕ್ರಿಕೆಟ್ ಪಯಣದಲ್ಲಿ, ಯಾರೂ ಈ ರೀತಿ ಬ್ಯಾಟಿಂಗ್ ಮಾಡುವುದನ್ನು ನಾನು ನೋಡಿಲ್ಲ. ಅವರು ನಿಜವಾಗಿಯೂ ಒಬ್ಬ ವಿಶೇಷ ಆಟಗಾರ. ಇವರಂತಹ ಆಟಗಾರನನ್ನು ನಾನು ಹಿಂದೆಂದೂ ನೋಡಿಲ್ಲ, ಮತ್ತು ಮುಂದೆಯೂ ಇವರಂತಹ ಮತ್ತೊಬ್ಬ ಆಟಗಾರನನ್ನು ನಾವು ನೋಡುತ್ತೇವೆಯೇ ಎಂಬುದು ನನಗೆ ಗೊತ್ತಿಲ್ಲ ಎಂದಿದ್ದಾರೆ.

ವೈಭವ್ ಸೂರ್ಯವಂಶಿ ನಿಜಕ್ಕೂ ಅದ್ಭುತ; ಅವರು ಒಂದು ಬೆಲೆಕಟ್ಟಲಾಗದ ಅಮೂಲ್ಯ ರತ್ನ. ಭವಿಷ್ಯದಲ್ಲಿ ಅವರು ಭಾರತಕ್ಕಾಗಿ ಏಕಾಂಗಿಯಾಗಿ ಅನೇಕ ಪಂದ್ಯಗಳನ್ನು ಗೆಲ್ಲಿಸಿಕೊಡಬಲ್ಲರು. ಅವರು ಭಾರತೀಯ ಕ್ರಿಕೆಟ್‌ಗೆ ಒಂದು ದೊಡ್ಡ ಆಸ್ತಿ. ಬಿಸಿಸಿಐ (BCCI) ಅವರನ್ನು ಸರಿಯಾಗಿ ನೋಡಿಕೊಳ್ಳಬೇಕು ಮತ್ತು ಹಂತ ಹಂತವಾಗಿ ಅವರಿಗೆ ಭಾರತೀಯ ತಂಡದಲ್ಲಿ ಅವಕಾಶಗಳನ್ನು ನೀಡಬೇಕು ಎಂದು ಹೇಳಿದ್ದಾರೆ.

ಅವರು ನಿಜವಾದ 'ಮ್ಯಾಚ್-ವಿನ್ನರ್'(ಪಂದ್ಯ ಗೆಲ್ಲಿಸಿಕೊಡುವ ಆಟಗಾರ), ತಮ್ಮ ಸಾಮರ್ಥ್ಯದಿಂದಲೇ ಪಂದ್ಯದ ಫಲಿತಾಂಶವನ್ನೇ ಬದಲಾಯಿಸಬಲ್ಲರು. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಅವರ ಬ್ಯಾಟಿಂಗ್ ನೋಡಿ ನಾನು ಸಂಪೂರ್ಣವಾಗಿ ಬೆರಗಾಗಿದ್ದೇನೆ. ಎಂತಹ ವಿಶೇಷ ಪ್ರತಿಭೆ!" ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement