'ಈಗ ನೀನೇ ನನ್ನ ಸ್ಫೂರ್ತಿ': ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಮೋಡಿಗೆ ಬೆರಗಾದ ಸೂರ್ಯಕುಮಾರ್ ಯಾದವ್, ಮಾಜಿ ಆಟಗಾರರು ಫಿದಾ!
ಕೇವಲ 52 ಎಸೆತಗಳಲ್ಲಿ ದ್ವಿಶತಕ ಗಳಿಸುವ ಮೂಲಕ ನ್ಯೂಜಿಲೆಂಡ್ನ ಬ್ಯಾಟರ್ ಚಾಡ್ ಬೋವ್ಸ್ ಅವರು 'ಫೋರ್ಡ್ ಟ್ರೋಫಿ'ಯಲ್ಲಿ ಕ್ಯಾಂಟರ್ಬರಿ ಪರವಾಗಿ ಒಟಾಗೊ ವಿರುದ್ಧ ಆಡುವಾಗ ನಿರ್ಮಿಸಿದ್ದ, ಹಿಂದಿನ ಅತ್ಯುತ್ತಮ ದಾಖಲೆಯನ್ನು ಮುರಿದಿದ್ದಾರೆ.
ಮಂಗಳವಾರ ದೋಹಾದಲ್ಲಿ ನಡೆದ ಎಸಿಸಿ ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ 2026 ರಲ್ಲಿ ಯುಎಇ ವಿರುದ್ಧ ಭಾರತ ಎ ಪರ 53 ಎಸೆತಗಳಲ್ಲಿ 204 ರನ್ ಗಳಿಸುವ ಮೂಲಕ ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಲಿಸ್ಟ್ ಎ ದಾಖಲೆಯನ್ನು ಮುರಿದರು ಮತ್ತು ಭಾರಿ ಪ್ರಶಂಸೆಗೆ ಪಾತ್ರರಾದರು. ಸೂರ್ಯವಂಶಿ ಕೇವಲ 6.3 ಓವರ್ಗಳಲ್ಲಿ 28 ಎಸೆತಗಳಲ್ಲಿ ಶತಕ ಗಳಿಸಿದರು. 2023ರಲ್ಲಿ ಆಸ್ಟ್ರೇಲಿಯಾದ ಜೇಕ್ ಫ್ರೇಸರ್-ಮೆಕ್ಗುರ್ಕ್ ಅವರು ಲಿಸ್ಟ್ ಎ ಕ್ರಿಕೆಟ್ನಲ್ಲಿ ಅತ್ಯಂತ ವೇಗದ ಶತಕ ಗಳಿಸಿದ್ದರು. ಅವರು 29 ಎಸೆತಗಳಲ್ಲಿ ಗಳಿಸಿದ್ದ ಶತಕದ ದಾಖಲೆಯನ್ನು ವೈಭವ್ ಮುರಿದರು.
ಸೂರ್ಯವಂಶಿ ಕೇವಲ 40 ಎಸೆತಗಳಲ್ಲಿ 150 ರನ್ಗಳನ್ನು ಗಳಿಸಿದ್ದಾರೆ. ಕಳೆದ ವರ್ಷ ಅರುಣಾಚಲ ಪ್ರದೇಶದ ವಿರುದ್ಧ ಬಿಹಾರ ತಂಡಕ್ಕಾಗಿ ಆಡುವಾಗ ಅವರು 59 ಎಸೆತಗಳಲ್ಲಿ 150 ರನ್ಗಳನ್ನು ಗಳಿಸಿ ದಾಖಲೆ ನಿರ್ಮಿಸಿದ್ದರು; ಇದೀಗ ಆ ದಾಖಲೆಯನ್ನು ಅವರೇ ಮುರಿದಿದ್ದಾರೆ.
ಕೇವಲ 52 ಎಸೆತಗಳಲ್ಲಿ ದ್ವಿಶತಕ ಗಳಿಸುವ ಮೂಲಕ ನ್ಯೂಜಿಲೆಂಡ್ನ ಬ್ಯಾಟರ್ ಚಾಡ್ ಬೋವ್ಸ್ ಅವರು 'ಫೋರ್ಡ್ ಟ್ರೋಫಿ'ಯಲ್ಲಿ ಕ್ಯಾಂಟರ್ಬರಿ ಪರವಾಗಿ ಒಟಾಗೊ ವಿರುದ್ಧ ಆಡುವಾಗ ನಿರ್ಮಿಸಿದ್ದ, ಹಿಂದಿನ ಅತ್ಯುತ್ತಮ ದಾಖಲೆಯನ್ನು ಮುರಿದಿದ್ದಾರೆ. ಅವರು 103 ಎಸೆತಗಳಲ್ಲಿ ದ್ವಿಶತಕ ಗಳಿಸಿದ್ದರು.
'ವೈಭವ್ ಸೂರ್ಯವಂಶಿ, ನೀವೀಗ ನನ್ನ ಸ್ಫೂರ್ತಿಯಾಗಿದ್ದೀರಿ. ಎಂತಹ ಆಟಗಾರ! ವಿಶೇಷ' ಎಂದು ಭಾರತದ ಟಿ20 ವಿಶ್ವಕಪ್ ವಿಜೇತ ನಾಯಕ ಸೂರ್ಯಕುಮಾರ್ ಯಾದವ್ ಅವರು 'ಎಕ್ಸ್'ನಲ್ಲಿ ಬರೆದುಕೊಂಡಿದ್ದಾರೆ.
ತಮ್ಮ ಈ ಇನಿಂಗ್ಸ್ನಲ್ಲಿ ಸೂರ್ಯವಂಶಿ ಏಳು ಬೌಂಡರಿಗಳು ಮತ್ತು ಬರೋಬ್ಬರಿ 28 ಸಿಕ್ಸರ್ಗಳನ್ನು ಬಾರಿಸಿದರು. ಇದು 'ಲಿಸ್ಟ್ ಎ' (List A) ಇನಿಂಗ್ಸ್ ಒಂದರಲ್ಲಿ ಯಾವುದೇ ಬ್ಯಾಟರ್ ಒಬ್ಬರು ಸಿಡಿಸಿದ ಅತಿ ಹೆಚ್ಚು ಸಿಕ್ಸರ್ಗಳಾಗಿದ್ದು, 2018ರಲ್ಲಿ ಡಿ'ಆರ್ಸಿ ಶಾರ್ಟ್ ನಿರ್ಮಿಸಿದ್ದ 23 ಸಿಕ್ಸರ್ಗಳ ಹಿಂದಿನ ದಾಖಲೆಯನ್ನು ಅವರು ಮುರಿದರು. ಅಂತಿಮವಾಗಿ ಅವರು 204 ರನ್ಗಳಿಗೆ ಔಟಾದರು.
ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಕೂಡ ಈ ಯುವ ಆಟಗಾರನನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. 'ಅದ್ಭುತ ಪ್ರತಿಭೆ! ಇಷ್ಟು ಚಿಕ್ಕ ವಯಸ್ಸಿನಲ್ಲಿ ದ್ವಿಶತಕ ಬಾರಿಸಿರುವುದು ವೈಭವ್ ಸೂರ್ಯವಂಶಿಯವರ ನಿರ್ಭೀತ ಮನಸ್ಥಿತಿ ಮತ್ತು ಅಸಾಧಾರಣ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತದೆ. ದೊಡ್ಡ ಕನಸುಗಳನ್ನು ಕಾಣುತ್ತಿರಿ, ಹೀಗೆಯೇ ಬೆಳಗುತ್ತಿರಿ, ಯುವ ಚಾಂಪಿಯನ್!' ಎಂದು ಅವರು 'ಎಕ್ಸ್'ನಲ್ಲಿ ಬರೆದಿದ್ದಾರೆ.
ಮೊಹಮ್ಮದ್ ಕೈಫ್, 'ಕೇವಲ 53 ಎಸೆತಗಳಲ್ಲಿ 204 ರನ್, 28 ಸಿಕ್ಸರ್ಗಳು! ವೈಭವ್ ಸೂರ್ಯವಂಶಿ ಕೇವಲ ದಾಖಲೆಗಳು ಮುರಿಯುವುದಕ್ಕಾಗಿ ಕಾಯುತ್ತಿಲ್ಲ; ಅವರು ಕ್ರಿಕೆಟ್ ಇತಿಹಾಸವನ್ನೇ ಮರುಬರೆಯುತ್ತಿದ್ದಾರೆ. ಮುಂದಿನ ಸೂಪರ್ಸ್ಟಾರ್ ಇವರೇ!' ಎಂದಿದ್ದಾರೆ.
ಎಸ್. ಬದರಿನಾಥ್, 'ಇತ್ತೀಚೆಗೆ ವೈಭವ್ ಸೂರ್ಯವಂಶಿ ಮಾಡುತ್ತಿರುವ ಸಾಧನೆಗಳನ್ನು ಬಣ್ಣಿಸಲು ವಿಶೇಷಣಗಳೇ ಸಾಲದಾಗಿವೆ. ಇದೇ ರೀತಿ ಮುಂದುವರಿಯಿರಿ ಮತ್ತು ದೇಶಕ್ಕೆ ಹೆಮ್ಮೆ ತನ್ನಿ!' ಎಂದು ಬರೆದಿದ್ದಾರೆ.