ಬುಮ್ರಾ ವೇಗಕ್ಕೆ ಪತರುಗುಟ್ಟಿದ ಪಾಕ್ ಸ್ಟಾರ್ ಬ್ಯಾಟರ್ 
ಕ್ರಿಕೆಟ್

Asian Games 2026: 'ಈಗ ಮಾಡು ಡಾಕ್ಯುಮೆಂಟರಿ': ಬುಮ್ರಾ ವೇಗದ ಹೊಡೆತಕ್ಕೆ ಪತರುಗುಟ್ಟಿದ ಪಾಕ್ ನಾಯಕ

ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರ ಮಾರಕ ಬೌಲಿಂಗ್ ಮತ್ತೊಮ್ಮೆ ಎದುರಾಳಿ ಬ್ಯಾಟರ್‌ಗಳಿಗೆ ಕಠಿಣ ಸವಾಲಾಗಿ ಪರಿಣಮಿಸಿದ್ದು, ಅವರ ವೇಗದ ದಾಳಿಯ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ‘ಈಗ ಮಾಡು ಡಾಕ್ಯುಮೆಂಟರಿ’ ಎಂಬ ಕಾಮೆಂಟ್‌ಗಳು ವೈರಲ್ ಆಗಿವೆ.

ನಿಶ್ಸಿನ್: ಈ ಹಿಂದೆ ಭಾರತದ ಸ್ಟಾರ್ ವೇಗಿ ಜಸ್ ಪ್ರೀತ್ ಬುಮ್ರಾ ಓವರ್ ನಲ್ಲಿ ಸಿಕ್ಸರ್ ಸಿಡಿಸಿ ಡಾಕ್ಯುಮೆಂಟರಿ ವಿಡಿಯೋ ಮಾಡಿದ್ದ ಪಾಕಿಸ್ತಾನದ ಸ್ಟಾರ್ ಬ್ಯಾಟರ್ ಹಾಗೂ ನಾಯಕ ಇದೀಗ ಅದೇ ಬೌಲರ್ ವೇಗಕ್ಕೆ ಪತರುಗುಟ್ಟಿದ್ದಾರೆ.

ಹೌದು.. ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರ ಮಾರಕ ಬೌಲಿಂಗ್ ಮತ್ತೊಮ್ಮೆ ಎದುರಾಳಿ ಬ್ಯಾಟರ್‌ಗಳಿಗೆ ಕಠಿಣ ಸವಾಲಾಗಿ ಪರಿಣಮಿಸಿದ್ದು, ಅವರ ವೇಗದ ದಾಳಿಯ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ‘ಈಗ ಮಾಡು ಡಾಕ್ಯುಮೆಂಟರಿ’ ಎಂಬ ಕಾಮೆಂಟ್‌ಗಳು ವೈರಲ್ ಆಗಿವೆ.

ಬುಮ್ರಾ ತಮ್ಮ ಯಾರ್ಕರ್, ಬೌನ್ಸರ್ ಹಾಗೂ ಸ್ವಿಂಗ್ ಮೂಲಕ ವಿಶ್ವದ ಪ್ರಮುಖ ಬ್ಯಾಟರ್‌ಗಳಿಗೂ ಸವಾಲು ಎಸೆಯುವ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ಪಾಕಿಸ್ತಾನ ವಿರುದ್ಧದ ಪಂದ್ಯಗಳಲ್ಲೂ ಅವರ ಪ್ರದರ್ಶನದ ಮೇಲೆ ಅಭಿಮಾನಿಗಳ ಗಮನ ಹೆಚ್ಚಾಗಿರುತ್ತದೆ. ಬುಮ್ರಾ ವೇಗದ ದಾಳಿಗೆ ಪಾಕ್ ಬ್ಯಾಟರ್‌ಗಳ ತತ್ತರಿಸುವ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಿಷಯವಾಗಿದ್ದು, ಪಂದ್ಯದ ವಿಡಿಯೋ ತುಣುಕುಗಳು ವೈರಲ್ ಆಗುತ್ತಿವೆ.

ಅಂದಹಾಗೆ ಈ ಪಂದ್ಯದಲ್ಲಿ ಪಾಕ್ ನಾಯಕ ಫರ್ಹಾನ್ 11 ಎಸೆತಗಳಲ್ಲಿ 1 ಬೌಂಡರಿ ಸಹಿತ 10 ರನ್ ಕಲೆಹಾಕಿ ವಾಷಿಂಗ್ಟನ್ ಸುಂದರ್ ಬೌಲಿಂಗ್ ನಲ್ಲಿ ಔಟಾದರು.

ಭಾರತಕ್ಕೆ ಭರ್ಜರಿ ಜಯ

ಜಪಾನ್ ನ ನಿಶಿನ್ ನಲ್ಲಿ ನಡೆದ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಕ್ರಿಕೆಟ್ ವಿಭಾಗದಲ್ಲಿ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 19 ರನ್ ಗಳ ಅಂತರದಲ್ಲಿ ಮಣಿಸಿ 2ನೇ ಬಾರಿಗೆ ಚಿನ್ನದ ಪದಕ ಬಾಚಿಕೊಂಡಿದೆ. ಅಂತೆಯೇ ಏಷ್ಯನ್ ಕ್ರೀಡಾಕೂಟದ ಪ್ರಸ್ತುತ ಆವೃತ್ತಿಯಲ್ಲಿ ಭಾರತಕ್ಕೆ ಇದು 19ನೇ ಚಿನ್ನದ ಪದಕವಾಗಿದೆ.

ಜಪಾನ್ ನ ನಿಶ್ಸಿನ್ ನ ಕೊರೋಗಿ ಮೈದಾನದಲ್ಲಿ ಇಂದು ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡ ನೀಡಿದ್ದ 212 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಪಾಕಿಸ್ತಾನ 20 ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 192 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಈ ಮೂಲಕ 19 ರನ್ ಗಳ ಅಂತರದ ವಿರೋಚಿತ ಗೆಲುವು ಸಾಧಿಸಿತು.

ಪಾಕಿಸ್ತಾನ ಪರ ಹಸನ್ ನವಾಜ್ 96 ರನ್ ಗಳಿಸಿ ಕೇವಲ 4 ರನ್ ಅಂತರದಲ್ಲಿ ಶತಕ ವಂಚಿತರಾದರು. ಅಂತೆಯೇ ಪಾಕಿಸ್ತಾನವನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದರು. ಭಾರತದ ಪರ ಅಕ್ಸರ್ ಪಟೇಲ್, ವಾಷಿಂಗ್ಟನ್ ಸುಂದರ್ ಮತ್ತು ಶಿವಂ ದುಬೆ ತಲಾ 2 ವಿಕೆಟ್ ಪಡೆದರು.

ವೈರಲ್ ಡಾಕ್ಯುಮೆಂಟರಿ

ಇನ್ನು ಈ ಹಿಂದೆ ಜಸ್ ಪ್ರೀತ್ ಬುಮ್ರಾ ಬೌಲಿಂಗ್ ನಲ್ಲಿ ಸಿಕ್ಸರ್ ಹೊಡೆದಿದ್ದಕ್ಕೇ ಡ್ಯಾಕ್ಯುಮೆಂಟರಿ ಮಾಡಿದ್ದ ವಿಚಾರ ವ್ಯಾಪಕ ವೈರಲ್ ಆಗಿತ್ತು. ಪಾಕಿಸ್ತಾನ ತಂಡದ ಪ್ರಸ್ತುತ ಟಿ20 ನಾಯಕ ಸಾಹಿಬ್ಜಾದಾ ಫರ್ಹಾನ್ ಈ ಹಿಂದೆ ಬುಮ್ರಾ ಬೌಲಿಂಗ್ ನಲ್ಲಿ ಸಿಕ್ಸರ್ ಸಿಡಿಸಿದ್ದರು. ಆ ಮೂಲಕ ಬುಮ್ರಾ ಹೆಸರಿನಲ್ಲಿದ್ದ ಸಿಕ್ಸರ್ ರಹಿತ ಬೌಲರ್ ಎಂಬ ಕೀರ್ತಿಯನ್ನು ಅಳಿಸಿದ್ದರು. ಈ ದಾಖಲೆ ಬೆನ್ನಲ್ಲೇ ಪಾಕಿಸ್ತಾನದಲ್ಲಿ ಹೀರೋ ಆಗಿದ್ದ ಫರ್ಹಾನ್ ಇದೇ ವಿಚಾರವಾಗಿ ಡ್ಯಾಕ್ಯುಮೆಂಟರಿ ಕೂಡ ಮಾಡಿದ್ದರು.

ಆ ಡಾಕ್ಯುಮೆಂಟರಿಯಲ್ಲಿ ಜಸ್ ಪ್ರೀತ್ ಬುಮ್ರಾ ಅವರ ಬೌಲಿಂಗ್, ಶೈಲಿ ಮತ್ತು ವೇಗ ಸೇರಿದಂತೆ ಹಲವು ಅಂಶಗಳ ಬಗ್ಗೆ ಫರ್ಹಾನ್ ಮಾತನಾಡಿದ್ದರು. ಅಲ್ಲದೆ ಬುಮ್ರಾ ಅವರನ್ನು ಹೇಗೆ ಎದುರಿಸಬೇಕು ಎಂಬ ವಿಚಾರವಾಗಿ ಫರ್ಹಾನ್ ಮಾತನಾಡಿದ್ದರು. ಈ ಡಾಕ್ಯುಮೆಂಟರಿ ವ್ಯಾಪಕ ವೈರಲ್ ಆಗಿತ್ತು.

ಬುಮ್ರಾ ವೇಗದ ಹೊಡೆತಕ್ಕೆ ಪತರುಗುಟ್ಟಿದ ಪಾಕ್ ನಾಯಕ

ಇದೀಗ ಇಂದು ನಡೆದ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಫೈನಲ್ ಪಂದ್ಯದಲ್ಲಿ ಇದೇ ಫರ್ಹಾನ್ ಬುಮ್ರಾ ಅವರ ಬೌಲಿಂಗ್ ನಲ್ಲಿ ರನ್ ಗಳಿಸಲು ಪರದಾಡಿದ್ದಾರೆ. ಫೈನಲ್ ಪಂದ್ಯದ ಪಾಕಿಸ್ತಾನ ಇನ್ನಿಂಗ್ಸ್ ನ 2ನೇ ಎಸೆತದಲ್ಲೇ ಈ ಘಟನೆ ನಡೆದಿದ್ದು, ಬುಮ್ರಾ ಎಸೆದ ಎಸೆತವೊಂದು ಅವರ ಕೈಗೆ ಬಡಿದ ಕಾರಣ ಅವರು ಬ್ಯಾಟ್ ಅನ್ನೇ ಬಿಸಾಡಿ ನೋವು ಅನುಭವಿಸಿದ ಘಟನೆ ನಡೆದಿದೆ. ಅವರ ಈ ಪರದಾಟವನ್ನು ಕಂಡ ಭಾರತೀಯ ಅಭಿಮಾನಿಗಳು ಇದೀಗ ಈಗ ಮಾಡು ಡಾಕ್ಯುಮೆಂಟರಿ ಎಂದು ಕಮೆಂಟ್ ಮಾಡುತ್ತಿದ್ದಾರೆ. ಅಲ್ಲದೆ ಫರ್ಹಾನ್ ನಿಧಾನಗತಿಯ ಬ್ಯಾಟಿಂಗ್ ಶೈಲಿಯನ್ನು ಟೀಕಿಸುತ್ತಿದ್ದಾರೆ.

ಹಸನ್ ನವಾಜ್ ಹೋರಾಟ ವ್ಯರ್ಥ

ಇನ್ನು ಇಂದಿನ ಪಂದ್ಯದಲ್ಲಿ ಪಾಕಿಸ್ತಾನದ ಪರ ಮಧ್ಯಮ ಕ್ರಮಾಂಕದ ಬ್ಯಾಟರ್ ಹಸನ್ ನವಾಜ್ ಏಕಾಂಗಿ ಹೋರಾಟ ನಡೆಸಿದರು. ಒಂದೆಡೆ ಪಾಕಿಸ್ತಾನದ ಅಗ್ರ ಕ್ರಮಾಂಕದ ಬ್ಯಾಟರ್`ಗಳು ರನ್ ಗಳಿಸಲು ವಿಫಲವಾದರೆ ಮಧ್ಯಮ ಕ್ರಮಾಂಕದಲ್ಲಿ ಬಂದ ಹಸನ್ ನವಾಜ್ ಪಾಕಿಸ್ತಾನದ ಇನ್ನಿಂಗ್ಸ್ ಗೆ ಜೀವ ತುಂಬಿದರು. ಕೇವಲ 51 ಎಸೆತಗಳನ್ನು ಎದುರಿಸಿದ ಹಸನ್ ನವಾಜ್ 7 ಸಿಕ್ಸರ್ ಮತ್ತು 5 ಬೌಂಡರಿ ಸಹಿತ 96 ರನ್ ಗಳಿಸಿ ಅಂತಿಮ ಎಸೆತದಲ್ಲಿ ಔಟಾಗಿ ಇತ್ತ ಶತಕವನ್ನು ಮಿಸ್ ಮಾಡಿಕೊಂಡಿದ್ದಲ್ಲದೇ, ತಂಡ ಕೂಡ ಸೋಲಿನ ಹತಾಶೆ ಅನುಭವಿಸಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026: ಫೈನಲ್ ನಲ್ಲಿ ಪಾಕಿಸ್ತಾನ ವಿರುದ್ಧ ಭಾರತಕ್ಕೆ ರೋಚಕ ಜಯ, ಮತ್ತೊಂದು ಚಿನ್ನದ ಪದಕ

ಮೈಸೂರು: ಕುಸಿದು ಬಿದ್ದ ದೀಪಾಲಂಕಾರದ ಬೃಹತ್ ಕಟೌಟ್; ವಿದ್ಯಾರ್ಥಿಗಳು ಪಾರು, ದಸರಾ ಆರಂಭದಲ್ಲೇ ತಪ್ಪಿದ ದೊಡ್ಡ ದುರಂತ!

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌‌ವೇಯಲ್ಲಿ ಭೀಕರ ಅಪಘಾತ: ಕಾರು ಡಿಕ್ಕಿ ಹೊಡೆದು ಯುವತಿ ಸ್ಥಳದಲ್ಲೇ ಸಾವು!

'ಕಮಾಲ್ ಕರ್ ದಿಯಾ ಪೈಲಟ್ ಜಿ, ನಿಮ್ಮ ಧೈರ್ಯಕ್ಕೆ ನಮ್ಮ ಸೆಲ್ಯೂಟ್': ಕ್ಯಾಪ್ಟನ್ ಸ್ಮಿತ್ ಮಚ್ಚರ್'ರನ್ನು ಹಾಡಿ ಹೊಗಳಿದ ಸಲ್ಮಾನ್ ಖಾನ್!

Asian Games 2026: ಇತಿಹಾಸ ಬರೆದ ಮೈಸೂರಿನ ಪ್ರಣವಿ ಅರಸ್; ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳಾ ಗಾಲ್ಫರ್