ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೂರನೇ ಏಕದಿನ ಪಂದ್ಯದ ವೇಳೆ ವಿರಾಟ್ ಕೊಹ್ಲಿ, ಅಭಿಮಾನಿಯೊಂದಿಗೆ ನಡೆಸಿರುವ ವಿಶೇಷ ಸಂವಾದವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಭಾರತದ ಮಾಜಿ ನಾಯಕ ಡಗ್‌ಔಟ್‌ನಲ್ಲಿ ಕುಳಿತಿದ್ದಾಗ ಅಭಿಮಾನಿಯೊಬ್ಬ ವಿರಾಟ್ ಕೊಹ್ಲಿ ಸಹ-ಸಂಸ್ಥಾಪಕತ್ವದ 'ಒನ್8' ಬ್ರ್ಯಾಂಡ್‌ನ ಶೂ ತೋರಿಸಿದ್ದಾರೆ. ಇದಕ್ಕೆ ಕೊಹ್ಲಿ ನೀಡಿರುವ ಕ್ಯೂಟ್ ರಿಯಾಕ್ಷನ್ ನೆಟ್ಟಿಗರ ಗಮನ ಸೆಳೆದಿದೆ.
ಇಂಡಿಯಾ ಬ್ಯಾಟಿಂಗ್ ವೇಳೆ ಡಗ್ ಔಟ್ ನಲ್ಲಿ ಕುಳಿತು ವಿರಾಟ್ ಕೊಹ್ಲಿ, ಶಾಂತ ಚಿತ್ತರಾಗಿ ಮ್ಯೂಸಿಕ್ ಕೇಳುತ್ತಿದ್ದಾಗ ಗ್ಯಾಲರಿಯಲ್ಲಿದ್ದ ಅಭಿಮಾನಿಗಳು ಕೊಹ್ಲಿ, ಕೊಹ್ಲಿ ಎಂದು ಕೂಗಲು ಪ್ರಾರಂಭಿಸಿದ್ದಾರೆ. ಇದರಿಂದಾಗಿ ಅಲ್ಲಿ ಒಂದು ರೀತಿಯ ಉತ್ಸಾಹಭರಿತ ವಾತಾವರಣ ನಿರ್ಮಾಣವಾಯಿತು. ನಂತರ ಅಭಿಮಾನಿಯೊಬ್ಬ, ವಿರಾಟ್ ಕೊಹ್ಲಿ ಸಹ-ಸಂಸ್ಥಾಪಕತ್ವದ 'ಒನ್8' ಬ್ರ್ಯಾಂಡ್‌ನ ಶೂ ತೋರಿಸಿದ್ದಾರೆ. ಆಗ ಕೊಹ್ಲಿ ಕೊಂಚ ಗರಂ ಆದಂತೆ ತಮಾಷೆಯಾಗಿ ಕ್ಯೂಟ್ ರಿಯಾಕ್ಷನ್ ನೀಡಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿ, ಅಭಿಮಾನಿಗಳು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಮೈದಾನದಲ್ಲಿ ನಡೆದ ಆಟಕ್ಕಿಂತ ಹೆಚ್ಚಾಗಿ, ಕೊಹ್ಲಿ ನೀಡಿದ ರಿಯಾಕ್ಷನ್ ವಿಡಿಯೋ ಮುಖ್ಯ ಆಕರ್ಷಣೆಯಾಗಿದೆ.
ಭಾರತೀಯ ಅಭಿಮಾನಿಗಳಲ್ಲಿ ಕೊಹ್ಲಿಯೇ ಪ್ರಮುಖ ಆಕರ್ಷಣೆ: ಈಗಲೂ ಭಾರತೀಯ ಅಭಿಮಾನಿಗಳಲ್ಲಿ ಕೊಹ್ಲಿಯೇ ಪ್ರಮುಖ ಆಕರ್ಷಣೆಯಾಗಿದ್ದಾರೆ. ಅವರ ಜನಪ್ರಿಯತೆಯು ಅವರ ಪ್ರದರ್ಶನಗಳನ್ನು ಮೀರಿ ಬೆಳೆದಿದೆ. ಅಭಿಮಾನಿಗಳು ಆಗಾಗ್ಗೆ ಅವರ ಗಮನವನ್ನು ಸೆಳೆಯಲು ಏನಾದರೊಂದು ಮಾಡುತಲ್ಲೇ ಇರುತ್ತಾರೆ. ಅಂತಹುದೇ ಘಟನೆ ಭಾರತ- ವೆಸ್ಟ್ ಇಂಡೀಸ್ ನಡುವಿನ ಪಂದ್ಯದ ವೇಳೆ ನಡೆದಿದೆ.