ಇರ್ಫಾನ್ ಪಠಾಣ್ 
ಕ್ರಿಕೆಟ್

'ಯಾವ ಧರ್ಮದ ಬಗ್ಗೆಯೂ ತಪ್ಪಾಗಿ ಮಾತನಾಡಿಲ್ಲ, ಅದರಲ್ಲೂ ನನ್ನ ಧರ್ಮದ ಬಗ್ಗೆಯಂತೂ ಮಾತನಾಡಿಯೇ ಇಲ್ಲ'; ಇರ್ಫಾನ್ ಪಠಾಣ್

ಪಠಾಣ್ ಸದ್ಯ 'ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್' (WCL) ಟೂರ್ನಮೆಂಟ್‌ನ ನಡೆಯುತ್ತಿರುವ ಆವೃತ್ತಿಗಾಗಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿದ್ದು (UAE), 'ಇಂಡಿಯಾ ಚಾಂಪಿಯನ್ಸ್' ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ತಮ್ಮ ಹೆಸರಿನಲ್ಲಿ ಹರಡಲಾಗುತ್ತಿರುವ 'ಸುಳ್ಳು ಸುದ್ದಿ'ಗಳ ವಿರುದ್ಧ ಧ್ವನಿ ಎತ್ತಿದ್ದು, ತಾವು ಎಂದಿಗೂ ಯಾವುದೇ ಧರ್ಮದ ಬಗ್ಗೆ 'ಅಪಪ್ರಚಾರ' ಮಾಡಿಲ್ಲ ಅಥವಾ ಕೆಟ್ಟದಾಗಿ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇನ್‌ಸ್ಟಾಗ್ರಾಂ ಮೂಲಕ ಪ್ರತಿಕ್ರಿಯಿಸಿದ ಪಠಾಣ್, ಅಂತಹ ಯಾವುದೇ ಹೇಳಿಕೆಗಳನ್ನು ನೀಡಿಲ್ಲ. ಅಲ್ಲದೆ, ತಮ್ಮ ಕುರಿತಾದ ವಿಷಯಗಳು ಅಥವಾ ತಮ್ಮ ಹೆಸರಿನಲ್ಲಿ ಹರಿದಾಡುವ ಹೇಳಿಕೆಗಳನ್ನು ಸತ್ಯಾಸತ್ಯತೆ ಪರಿಶೀಲಿಸದೆ ಹಂಚಿಕೊಳ್ಳದಂತೆ ಅಭಿಮಾನಿಗಳಿಗೆ ಮನವಿ ಮಾಡಿದರು.

ಸುಮಾರು ಒಂದು ದಶಕದ ತಮ್ಮ ವೃತ್ತಿಜೀವನದಲ್ಲಿ, 41 ವರ್ಷದ ಪಠಾಣ್ ಭಾರತಕ್ಕಾಗಿ 29 ಟೆಸ್ಟ್, 120 ಏಕದಿನ ಮತ್ತು 24 ಟಿ20 ಪಂದ್ಯಗಳನ್ನು ಆಡಿದ್ದಾರೆ. ಭಾರತದ ಮಾಜಿ ಆಲ್‌ರೌಂಡರ್ ಸುಳ್ಳು ಸುದ್ದಿಗಳನ್ನು ಹರಡುವವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಕೇವಲ ವ್ಯೂಸ್‌ಗಳನ್ನು ಪಡೆಯುವ ಉದ್ದೇಶದಿಂದ, ಯಾವುದೇ ಸಾಕ್ಷ್ಯವಿಲ್ಲದೆ ನನ್ನ ಹೆಸರನ್ನು ಬಳಸಿಕೊಂಡು ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ. ದಯವಿಟ್ಟು ಯಾರೂ ಇದನ್ನು ನಂಬಬೇಡಿ ಅಥವಾ ಹಂಚಿಕೊಳ್ಳಬೇಡಿ ಎಂದು ನಾನು ಮನವಿ ಮಾಡುತ್ತೇನೆ. ಸುದ್ದಿ ನೇರವಾಗಿ ನನ್ನಿಂದಲೇ ಬಂದಿಲ್ಲ ಎಂದಾದರೆ, ದಯವಿಟ್ಟು ಅದನ್ನು ನಂಬಬೇಡಿ' ಎಂದು ಪಠಾಣ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

'ನಾನು ಯಾವುದೇ ಧರ್ಮದ ಬಗ್ಗೆ, ಅದರಲ್ಲೂ ವಿಶೇಷವಾಗಿ ನನ್ನದೇ ಧರ್ಮದ ಬಗ್ಗೆ ಎಂದಿಗೂ ಕೆಟ್ಟದಾಗಿ ಮಾತನಾಡಿದ್ದಿಲ್ಲ. ಇಂತಹ ಸುಳ್ಳು ಹೇಳಿಕೆಗಳನ್ನು ನಂಬುವ ಅಥವಾ ಹರಡುವ ಮೊದಲು ಸತ್ಯಾಸತ್ಯತೆಯನ್ನು ಪರಿಶೀಲಿಸುವಂತೆ ನಾನು ಎಲ್ಲರಿಗೂ ಬಲವಾಗಿ ಮನವಿ ಮಾಡುತ್ತೇನೆ' ಎಂದು ಅವರು ಹೇಳಿದರು.

ಪಠಾಣ್ ಸದ್ಯ 'ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್' (WCL) ಟೂರ್ನಮೆಂಟ್‌ನ ನಡೆಯುತ್ತಿರುವ ಆವೃತ್ತಿಗಾಗಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿದ್ದು (UAE), 'ಇಂಡಿಯಾ ಚಾಂಪಿಯನ್ಸ್' ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ಈ ವರ್ಷದ ಆವೃತ್ತಿಯಲ್ಲಿ ಪಾಕಿಸ್ತಾನ ಭಾಗವಹಿಸದಿರಲು ನಿರ್ಧರಿಸಿದ ನಂತರ WCL ಇತ್ತೀಚೆಗೆ ವಿವಾದಕ್ಕೆ ಗುರಿಯಾಯಿತು. ಭಾರತೀಯ ತಂಡದಿಂದ ಲಿಖಿತ ಕ್ಷಮೆಯಾಚಿಸುವ ಬೇಡಿಕೆಯನ್ನು ಆಯೋಜಕರು ತಿರಸ್ಕರಿಸಿದ ನಂತರ ಪಾಕಿಸ್ತಾನ WCL ನಿಂದ ಹಿಂದೆ ಸರಿದಿದೆ ಎಂದು ಮೂಲಗಳು NDTV ಗೆ ತಿಳಿಸಿವೆ.

PCB ಆರಂಭದಲ್ಲಿ ಇಷ್ಟವಿಲ್ಲದಿದ್ದರೂ ಆಟಗಾರರಿಗೆ NOC ನೀಡಲು ಒಪ್ಪಿಕೊಂಡಿತು. ಆದರೆ, ಕಳೆದ ಆವೃತ್ತಿಯಲ್ಲಿ ತನ್ನ ಕ್ರಮಗಳಿಗಾಗಿ ಭಾರತ ತಂಡ ಲಿಖಿತ ಕ್ಷಮೆಯಾಚಿಸುವಂತೆ ಕೋರಿತು. ಆದಾಗ್ಯೂ, WCL ಸಂಘಟಕರು ಈ ಬೇಡಿಕೆಯನ್ನು ತಿರಸ್ಕರಿಸಿದರು.

ಭಾರತೀಯ ಆಟಗಾರರು ಟೂರ್ನಿಯಲ್ಲಿ ಭಾಗವಹಿಸದಿರಲು ನಿರ್ಧರಿಸಿದರೆ ತಮಗೆ ಯಾವುದೇ ಆಕ್ಷೇಪವಿರುವುದಿಲ್ಲ ಎಂಬ ಭರವಸೆಯನ್ನು ಡಬ್ಲ್ಯುಸಿಎಲ್ ಸಂಘಟಿಕರಿಂದ ಪಿಸಿಬಿ (PCB) ಕೋರಿತ್ತು.

ಇದರ ಪರಿಣಾಮವಾಗಿ, ಪಾಕಿಸ್ತಾನ ತಂಡವು ಟೂರ್ನಿಯಿಂದ ಹಿಂದೆ ಸರಿಯಲು ನಿರ್ಧರಿಸಿತು. ಆದಾಗ್ಯೂ, 'ಅನಿರೀಕ್ಷಿತ ಸನ್ನಿವೇಶಗಳ' ಕಾರಣದಿಂದಾಗಿ ಪಾಕಿಸ್ತಾನ್ ಚಾಂಪಿಯನ್ಸ್ ತಂಡವು ಹಿಂದೆ ಸರಿದಿದೆ ಎಂದು ಡಬ್ಲ್ಯುಸಿಎಲ್ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Cockroach Janta Partyಗೆ ಬಿಗ್ ಶಾಕ್: ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸರು, 57 ಮೆಟ್ರೋ ನಿಲ್ದಾಣಗಳು ಬಂದ್..!

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video

ಧಾರವಾಡ: ಕಾರು - ಕ್ಯಾಂಟರ್ ಮುಖಾಮುಖಿ ಡಿಕ್ಕಿ; ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವು!

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

ಯೋಗೀಶ್ ಗೌಡ ಕೊಲೆ ಪ್ರಕರಣ: ಕಾಂಗ್ರೆಸ್ ಶಾಸಕ ವಿನಯ್‌ ಕುಲಕರ್ಣಿಗೆ ತಾತ್ಕಾಲಿಕ ರಿಲೀಫ್‌; ಅ.27ಕ್ಕೆ ವಿಚಾರಣೆ ಮುಂದೂಡಿಕೆ