ಧನಶ್ರೀ ವರ್ಮಾ - ಯುಜ್ವೇಂದ್ರ ಚಾಹಲ್  
ಕ್ರಿಕೆಟ್

'ವಿಚ್ಛೇದನ ಪಡೆದ ಬಳಿಕ ಎಲ್ಲ ಮಿತಿಗಳನ್ನೂ ಮೀರಿದ್ದೆ': ಆಲ್ಕೋಹಾಲ್‌ಗೆ ವ್ಯಸನಕ್ಕೆ ದಾಸನಾಗಿದ್ದರ ಬಗ್ಗೆ ಯುಜ್ವೇಂದ್ರ ಚಾಹಲ್

'ಸಾರ್ವಜನಿಕ ವ್ಯಕ್ತಿಯಾಗಿದ್ದಾಗ, ನಿಮ್ಮ ಜೀವನದಲ್ಲಿ ನಡೆಯುವ ಪ್ರತಿಯೊಂದು ವಿಷಯವೂ ಜನರು ಪ್ರತಿಕ್ರಿಯಿಸಲು ಅವಕಾಶವಾಗುತ್ತದೆ. ನನಗೆ ತುಂಬಾ ಬೇಸರವಾಯಿತು, ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಯಿತು' ಎಂದರು.

ಇತ್ತೀಚೆಗೆ ಪ್ರಥಮ ದರ್ಜೆ ಕ್ರಿಕೆಟ್‌ನಿಂದ ನಿವೃತ್ತರಾದ ಭಾರತೀಯ ಕ್ರಿಕೆಟಿಗ ಯುಜ್ವೇಂದ್ರ ಚಾಹಲ್, ಮದ್ಯದ ಚಟದಿಂದ ಬಳಲುತ್ತಿದ್ದಾಗ ಪುನರ್ವಸತಿ ಕೇಂದ್ರಕ್ಕೆ ದಾಖಲಾಗಬೇಕಾಯಿತು ಎಂದು ಬಹಿರಂಗಪಡಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಬೌಲರ್‌ಗಳಲ್ಲಿ ಒಬ್ಬರಾದ ಚಾಹಲ್ ಆಲ್ಕೋಹಾಲ್ ಚಟ ಮತ್ತು ವಿಚ್ಛೇದನ ಸೇರಿದಂತೆ ಹಲವಾರು ವೈಯಕ್ತಿಕ ಸವಾಲುಗಳನ್ನು ಎದುರಿಸಿದ್ದಾರೆ. 'ಕಳೆದ ವರ್ಷದ ಕೌಂಟಿ ಕ್ರಿಕೆಟ್‌ನ ನಂತರ... ಅದು (ಮದ್ಯದ ಚಟ) ಎಲ್ಲ ಮಿತಿಗಳನ್ನು ಮೀರಿತ್ತು, ಆದ್ದರಿಂದ ನಾನು ಪುನರ್ವಸತಿ ಕೇಂದ್ರಕ್ಕೆ ಹೋಗಿ 26 ದಿನಗಳ ಕಾಲ ಅಲ್ಲಿಯೇ ಇದ್ದೆ. ಈಗ, ಅದನ್ನು ಹೇಗೆ ನಿಭಾಯಿಸಬೇಕೆಂದು ನನಗೆ ತಿಳಿದಿದೆ' ಎಂದು ಚಾಹಲ್ ಪಾಡ್‌ಕಾಸ್ಟ್‌ನಲ್ಲಿ ಭಾರತದ ಮಾಜಿ ಆರಂಭಿಕ ಆಟಗಾರ ಆಕಾಶ್ ಚೋಪ್ರಾಗೆ ಹೇಳಿದರು.

'ಆ ನಿರ್ಧಾರವು ನನ್ನ ವೈಯಕ್ತಿಕ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತಂದಿತು. ನನ್ನಲ್ಲಿ ಪ್ರಬುದ್ಧತೆ ಹೆಚ್ಚಾಯಿತು. ಈಗ ನನ್ನ ಭಾವನೆಗಳು ಸಮತೋಲಿತವಾಗಿವೆ. ಕಳೆದ ಐಪಿಎಲ್ ಸಮಯದಲ್ಲಿ, ಜಿಮ್‌ನಲ್ಲಿ ವ್ಯಾಯಾಮ ಮಾಡುವುದು, ಫೀಲ್ಡಿಂಗ್ ಅಭ್ಯಾಸಗಳು ಮತ್ತು ಸರಿಯಾದ ತರಬೇತಿಯಲ್ಲಿ ತೊಡಗಿಸಿಕೊಂಡಾಗ, ನನ್ನ ದೇಹವು ನನಗೆ ಮತ್ತೆ 30 ವರ್ಷ ವಯಸ್ಸಾದಂತೆ ಭಾಸವಾಯಿತು' ಎಂದು ಅವರು ಹೇಳಿದರು.

'ತನ್ನ ಜೀವನದ ಕಠಿಣ ಹಂತದಲ್ಲಿ ನನ್ನ ಆಪ್ತ ಸ್ನೇಹಿತ ಮತ್ತು ಕುಟುಂಬದವರು ನನ್ನೊಂದಿಗಿದ್ದರು' ಎಂದು 36 ವರ್ಷದ ಲೆಗ್-ಸ್ಪಿನ್ನರ್ ಹೇಳಿದರು.

ತಮ್ಮ ಮದ್ಯಪಾನದ ಸಮಸ್ಯೆಗಳು 2011ರ ಸುಮಾರಿಗೆ, ಅಂದರೆ ತಾವು ಐಪಿಎಲ್‌ಗೆ ಪ್ರವೇಶಿಸಿದಾಗ ಪ್ರಾರಂಭವಾದವು ಮತ್ತು ವಿಚ್ಛೇದನದ ನಂತರ ಇನ್ನಷ್ಟು ಉಲ್ಬಣಗೊಂಡವು. ಆದಾಗ್ಯೂ, ಈಗ ಆ ವ್ಯಸನದಿಂದ ಹೊರಬಂದು, ಜೀವನದಲ್ಲಿ ಹೆಚ್ಚು ಸಂತೋಷದಾಯಕ ಸ್ಥಿತಿಯಲ್ಲಿದ್ದೇನೆ ಎಂದು ಚಾಹಲ್ ಹೇಳಿದರು.

'ಆರಂಭದಲ್ಲಿ ನಾನು ಚಿಕ್ಕವನಾಗಿದ್ದೆ. ಆಗ ಪಾರ್ಟಿಗಳು ನಡೆಯುತ್ತಿದ್ದವು. 2011ರಲ್ಲಿ ನಾನು ನನ್ನ ಮೊದಲ ಐಪಿಎಲ್ ಪಂದ್ಯವನ್ನು ಆಡಿದೆ. (ದಕ್ಷಿಣ ಆಫ್ರಿಕಾದ ಕ್ರಿಕೆಟಿಗ) ಎಬಿ ಡಿವಿಲಿಯರ್ಸ್ ಒಮ್ಮೆ ನನಗೆ, 'ಜೀವನದಲ್ಲಿ ಸಮತೋಲನವೇ ಮುಖ್ಯ' ಎಂದು ಹೇಳಿದ್ದರು. ಇದು ಕೇಳಲು ಸುಲಭವೆನಿಸಿದರೂ, ವಾಸ್ತವದಲ್ಲಿ ಅಷ್ಟು ಸುಲಭವಲ್ಲ' ಎಂದರು.

'ವಿಚ್ಛೇದನದ ನಂತರ ಪರಿಸ್ಥಿತಿ ಮಿತಿಮೀರಿತ್ತು ಮತ್ತು ನನ್ನ ಮಾನಸಿಕ ಸ್ಥಿತಿಯೂ ಅಷ್ಟೇನೂ ಚೆನ್ನಾಗಿರಲಿಲ್ಲ. ನಾನು ಇದೇ ಹಾದಿಯಲ್ಲಿ ಮುಂದುವರಿದರೆ, ನನಗೆ ಅತಿ ಹೆಚ್ಚು ಇಷ್ಟವಾದ ವಿಷಯವನ್ನೇ—ಅಂದರೆ ಕ್ರಿಕೆಟ್ ಅನ್ನು—ಹಾಳುಮಾಡಿಕೊಳ್ಳುತ್ತೇನೆ ಎಂದು ನನಗೆ ಅರಿವಾಯಿತು. ಹಾಗಾಗಿ ನಾನು ಅದಕ್ಕೆ ಅಂತ್ಯ ಹಾಡಿದೆ; ಈಗ ನಾನು ಹೆಚ್ಚು ಸಂತೋಷವಾಗಿದ್ದೇನೆ ಮತ್ತು ಉತ್ತಮ ಸ್ಥಿತಿಯಲ್ಲಿದ್ದೇನೆ' ಎಂದು ಚಾಹಲ್ ಹೇಳಿದರು.

'ನೀವು ಸಾರ್ವಜನಿಕ ವ್ಯಕ್ತಿಯಾಗಿದ್ದಾಗ, ನಿಮ್ಮ ಜೀವನದಲ್ಲಿ ನಡೆಯುವ ಪ್ರತಿಯೊಂದು ವಿಷಯವೂ ಜನರು ಪ್ರತಿಕ್ರಿಯಿಸಲು ಒಂದು ಅವಕಾಶವಾಗುತ್ತದೆ. ನನಗೆ ತುಂಬಾ ಬೇಸರವಾಯಿತು, ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಯಿತು' ಎಂದು ಅವರು ಹೇಳಿದರು.

'ನಾನು ಅನಿರುದ್ಧ್ ಸರ್ (ಚೌಧರಿ, ಬಿಸಿಸಿಐನ ಮಾಜಿ ಖಜಾಂಚಿ) ಅವರೊಂದಿಗೆ ಮಾತನಾಡಿ, ಸ್ವಲ್ಪ ವಿರಾಮ ನೀಡುವಂತೆ ಕೋರಿದೆ. ಅವರು ನನಗೆ ತುಂಬಾ ಬೆಂಬಲ ನೀಡಿದರು. ಕೊನೆಗೆ ನಾನು, 'ಈ ಹೊರೆಯನ್ನು ನಾನು ಇನ್ನೆಷ್ಟು ಕಾಲ ಹೊತ್ತುಕೊಂಡು ಹೋಗಲಿ?' ಎಂದು ಯೋಚಿಸಿದೆ. ನನ್ನ ಜೀವನದಲ್ಲಿ ಆತಂಕ ಮತ್ತು ಪ್ಯಾನಿಕ್ ಅಟ್ಯಾಕ್ ಕಾಣಿಸಿಕೊಳ್ಳಲಾರಂಭಿಸಿದವು. ಆತಂಕ ಉಂಟಾದಾಗ ಹೃದಯ ಬಡಿತ ಹೆಚ್ಚಾಗುತ್ತದೆ. ನನಗೆ ಪ್ಯಾನಿಕ್ ಅಟ್ಯಾಕ್ ಆದಾಗ, ನನ್ನ ಮುಖವು ಸಂಕುಚಿತಗೊಂಡಂತಾಗುತ್ತಿತ್ತು. ಆಗ ನನಗೆ ಮಾತನಾಡಲೂ ಸಾಧ್ಯವಾಗುತ್ತಿರಲಿಲ್ಲ; ನನ್ನ ತುಟಿ ಬಿಗಿಗೊಂಡು ಒಂದು ಬದಿಗೆ ಎಳೆದುಕೊಂಡಂತಾಗುತ್ತಿತ್ತು, ಇದರಿಂದಾಗಿ ಏನೋ ಸರಿಯಿಲ್ಲ ಎಂದು ಇತರರಿಗೆ ಸುಲಭವಾಗಿ ಅರಿವಾಗುತ್ತಿತ್ತು' ಎಂದು ಅವರು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Kolkata Durga Puja stampede ಕೇಸ್: ಪೂಜಾ ಸಮಿತಿ ಕಾರ್ಯದರ್ಶಿ ಸೇರಿ 7 ಮಂದಿ ಬಂಧನ; SIT ತನಿಖೆಗೆ ಆದೇಶ, ಮೃತರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಘೋಷಣೆ..!

ಕೋಲ್ಕತ್ತಾ ಕಾಲ್ತುಳಿತ ಪ್ರಕರಣ: ಸಾವಿನ ಸಂಖ್ಯೆ 19ಕ್ಕೆ ಏರಿಕೆ; ಆಯೋಜಕರು ಸೇರಿ 12 ಮಂದಿ ವಶಕ್ಕೆ, ಮೃತರ ಕುಟುಂಬಕ್ಕೆ ತಲಾ ರೂ.2 ಲಕ್ಷ ಪರಿಹಾರ ಘೋಷಣೆ..!

CM ಡಿಕೆ.ಶಿವಕುಮಾರ್ ಭರವಸೆಗೂ ಜಗ್ಗದ ಕಬ್ಬು ಬೆಳೆಗಾರರು: ಹೋರಾಟ ಮುಂದುವರಿಸಲು ನಿರ್ಧಾರ..!

ತಲಕಾವೇರಿ ಬ್ರಹ್ಮಕುಂಡಿಕೆಯಲ್ಲಿ ತೀರ್ಥೋದ್ಭವ: ಪವಿತ್ರ ಕ್ಷಣಕ್ಕೆ ಸಾಕ್ಷಿಯಾದ ಸಾವಿರಾರು ಭಕ್ತರು..!

ಗೂಗಲ್ ಮ್ಯಾಪ್ ನಂಬಿ ಕೆಟ್ಟ ಟೆಕ್ಕಿಗಳು: ಚೆನ್ನೈ ಬದಲು ಚಾಮರಾಜನಗರ ಸಮೀಪ ಹಳ್ಳಕ್ಕೆ ಬಿದ್ದ ಕಾರು