ಗೂಗಲ್ ಮ್ಯಾಪ್ ನಂಬಿ ಕೆಟ್ಟ ಟೆಕ್ಕಿಗಳು: ಚೆನ್ನೈ ಬದಲು ಚಾಮರಾಜನಗರ ಸಮೀಪ ಹಳ್ಳಕ್ಕೆ ಬಿದ್ದ ಕಾರು

ಗೂಗಲ್ ಮ್ಯಾಪ್ ನಂಬಿ ಪ್ರಯಾಣಿಸುತ್ತಿದ್ದ ಬೆಂಗಳೂರಿನ 9 ಮಂದಿ ಸಾಫ್ಟ್‌ವೇರ್ ಟೆಕ್ಕಿಗಳು ಕಾರು ಹಾದಿ ತಪ್ಪಿ, ದಟ್ಟ ಅರಣ್ಯದ ನಡುವೆ ಹಳ್ಳಕ್ಕೆ ಬಿದ್ದು ಅಪಘಾತಕ್ಕೀಡಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಆಸನೂರು ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ. ಆ ಕುರಿತ ವರದಿ ಇಲ್ಲಿದೆ:
Bengaluru Techies Follow Google Maps Into Dense Forest, Car Plunges Into Ditch
ಗೂಗಲ್ ಮ್ಯಾಪ್ ನಂಬಿ ಕಾಡಿಗೆ ನುಗ್ಗಿದ ಕಾರುOnline Desk
Updated on: 

ಚಾಮರಾಜನಗರ: ಮುಂದಕ್ಕೆ ಹೋಗಿ, ಎಡಕ್ಕೆ ತಿರುಗಿ ಎನ್ನುವ ಗೂಗಲ್ ಮ್ಯಾಪ್‌ನ ಆ ಮಧುರ ಧ್ವನಿ ಕೇಳಿ ಫಾಲೋ ಮಾಡಿದರೆ ನೆಮ್ಮದಿಯ ಜರ್ನಿ ಗ್ಯಾರಂಟಿ ಅಂದುಕೊಂಡಿರಾ? ಖಂಡಿತ ಇಲ್ಲ! ಅಪರಿಚಿತ ಊರಿನಲ್ಲಿ ಶಾರ್ಟ್‌ಕಟ್ ಹುಡುಕಲು ಹೋಗಿ, ಗೂಗಲ್ ಮ್ಯಾಪ್ ನಂಬಿ ನೆಟ್ಟಗೆ ಹೋಗುತ್ತಿದ್ದವರು ನೇರವಾಗಿ ಕೆರೆಗೋ, ಪ್ರಪಾತಕ್ಕೋ ಬಿದ್ದ ಉದಾಹರಣೆಗಳು ಸಾಕಷ್ಟಿವೆ. ಅದಕ್ಕೆ ಚಾಮರಾಜನಗರ ಜಿಲ್ಲೆಯ ಆಸನೂರು ಅರಣ್ಯ ವ್ಯಾಪ್ತಿಯಲ್ಲಿ ನಡೆದ ಘಟನೆಯೇ ಸಾಕ್ಷಿ! ಆ ಕುರಿತ ವರದಿ ಇಲ್ಲಿದೆ:

ಏನಿದು ಘಟನೆ?

ಬೆಂಗಳೂರಿನ ಇನ್ಫೋಸಿಸ್ ಸೇರಿದಂತೆ ವಿವಿಧ ಕಂಪನಿಗಳಲ್ಲಿ ಕೆಲಸ ಮಾಡುವ 9 ಮಂದಿ ಟೆಕ್ಕಿಗಳ ತಂಡವು ಮೈಸೂರು ದಸರಾ ವೀಕ್ಷಿಸಿದ ಬಳಿಕ, ಮೈಸೂರಿನಿಂದ ತಮಿಳುನಾಡಿನ ಚೆನ್ನೈಗೆ ತೆರಳುತ್ತಿದ್ದರು. ಈ ವೇಳೆ ಅವರು ದಾರಿಗಾಗಿ ಗೂಗಲ್ ಮ್ಯಾಪ್ ಮಾರ್ಗದರ್ಶನವನ್ನು ನಂಬಿದ್ದರು. ಅದರಂತೆ, ಮ್ಯಾಪ್ ತೋರಿಸಿದ ಶಾರ್ಟ್‌ಕಟ್ ಮಾರ್ಗವನ್ನು ಅನುಸರಿಸಿ ಸಾಗಿದ ಟೆಕ್ಕಿಗಳ ಕಾರು, ತಮಿಳುನಾಡು ಗಡಿಯ ಚಾಮರಾಜನಗರ ಜಿಲ್ಲೆಯ ಸತ್ಯಮಂಗಲ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯ ದಿಂಬಂ ಘಾಟ್ ಮತ್ತು ಆಸನೂರು ದಟ್ಟ ಅರಣ್ಯದೊಳಗೆ ಪ್ರವೇಶಿಸಿದ್ದಾರೆ. ಅದರಲ್ಲೂ, ಅರಣ್ಯದ ಕಡಿದಾದ ಹಾಗೂ ಕರಡು ರಸ್ತೆಯಲ್ಲಿ ಮುನ್ನಡೆಯುತ್ತಿದ್ದಾಗ, ನಿಯಂತ್ರಣ ತಪ್ಪಿದ ಕಾರು ರಸ್ತೆ ಪಕ್ಕದ ಆಳವಾದ ಹಳ್ಳಕ್ಕೆ (ಕಂದಕ) ಬಿದ್ದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ.

ಕಾಡಾನೆಗಳ ಭಯದ ನಡುವೆ ಇಡೀ ರಾತ್ರಿ

ಏತನ್ಮಧ್ಯೆ, ಕಾರು ಹಳ್ಳಕ್ಕೆ ಬಿದ್ದ ತಕ್ಷಣ ಇಡೀ ಕಾಡಿನಲ್ಲಿ ಮೊಬೈಲ್ ಸಿಗ್ನಲ್ ಕಟ್‌ ಆಗಿತ್ತು. ಜೊತೆಗೆ, ದಟ್ಟ ಅರಣ್ಯದಲ್ಲಿ ಮೊಬೈಲ್ ನೆಟ್‌ವರ್ಕ್ ಇಲ್ಲದ ಕಾರಣ ಇಡೀ ರಾತ್ರಿ ಇವರು ಯಾರನ್ನೂ ಸಂಪರ್ಕಿಸಲು ಸಾಧ್ಯವಾಗದೆ ಕಾರಿನೊಳಗೇ ಲೈಟ್ ಆಫ್ ಮಾಡಿ ಒಳಗೇ ಕುಳಿತಿದ್ದರು. ತದನಂತರ ಮುಂಜಾನೆ 5 ಗಂಟೆಯ ಸುಮಾರಿಗೆ ತಂಡದ ಒಬ್ಬರು ಸಿಗ್ನಲ್ ಹುಡುಕುತ್ತಾ ಸ್ವಲ್ಪ ದೂರ ನಡೆದುಬಂದು 112 ಸಹಾಯವಾಣಿಗೆ ಕರೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ತರುವಾಯು ತಕ್ಷಣವೇ ಕಾರ್ಯಪ್ರವೃತ್ತರಾದ ಚಾಮರಾಜನಗರದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಹಳ್ಳದಲ್ಲಿದ್ದ ಕಾರನ್ನು ಕ್ರೇನ್ ಮೂಲಕ ಮೇಲೆತ್ತಿ, ಒಂಬತ್ತೂ ಜನರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

Bengaluru Techies Follow Google Maps Into Dense Forest, Car Plunges Into Ditch
Google Maps ಬಳಸಿ Traffic Fine ತಪ್ಪಿಸೋದು ಹೇಗೆ? ಇಲ್ಲಿದೆ ಗೂಗಲ್ ಮ್ಯಾಪ್ ಬಳಸಿ ಪೆಟ್ರೋಲ್-ಡೀಸೆಲ್ ಉಳಿಸೋ ಟಿಪ್ಸ್!

ಶಾರ್ಟ್‌ಕಟ್ ಹುಡುಕಿ ಪ್ರಪಾತ ಸೇರುತ್ತಿರುವ.. 

ಮುಂದುವರೆದು, ಇತ್ತೀಚಿನ ವರ್ಷಗಳಲ್ಲಿ ಜಿಪಿಎಸ್ ದಾರಿಯನ್ನು ಕುರುಡಾಗಿ ನಂಬಿ ಪ್ರಾಣಾಪಾಯಕ್ಕೆ ಸಿಲುಕಿದ ಹಲವು ಘಟನೆಗಳು ಭಾರತದಲ್ಲಿ ವರದಿಯಾಗುತ್ತೆಲೇ ಇದೆ. ಅದರಂತೆ, ಕೆಲ ವರ್ಷದ ಹಿಂದೆ ಕೇರಳಂನ ಎರ್ನಾಕುಲಂನಲ್ಲಿ ಮೂವರು ಡಾಕ್ಟರ್‌ಗಳು ಮ್ಯಾಪ್ ನಂಬಿ ಕಾರು ಚಲಾಯಿಸುತ್ತಿದ್ದರು. ಮ್ಯಾಪ್ ರಸ್ತೆ ಎಂದು ತೋರಿಸಿದ ಜಾಗದಲ್ಲಿ ಭಾರಿ ಮಳೆಯಿಂದಾಗಿ ನದಿ ತುಂಬಿ ಹರಿಯುತ್ತಿತ್ತು. ರಾತ್ರಿ ವೇಳೆ ರಸ್ತೆ ಕಾಣದೆ ಕಾರು ನೇರವಾಗಿ ನದಿಗೆ ಬಿದ್ದು ಇಬ್ಬರು ಯುವ ವೈದ್ಯರು ಸಾವನ್ನಪ್ಪಿದ್ದರು. ಜೊತೆಗೆ, 2021ರಲ್ಲಿ ಮಹಾರಾಷ್ಟ್ರದಲ್ಲಿ ಚಾರಣಕ್ಕೆ ಹೊರಟಿದ್ದ ಮೂವರು ಟೆಕ್ಕಿಗಳು ಗೂಗಲ್ ಮ್ಯಾಪ್ ಶಾರ್ಟ್‌ಕಟ್ ತೋರಿಸಿದ ದಾರಿಯಲ್ಲಿ ಸಾಗಿದ್ದರು. ಆ ದಾರಿ ನೇರವಾಗಿ ಅಣೆಕಟ್ಟಿನ ಹಿನ್ನೀರಿನ ಕಡೆಗೆ ಹೋಗಿತ್ತು. ರಾತ್ರಿ ವೇಳೆ ನೀರು ಕಾಣದೆ ಕಾರು ಮುಳುಗಿ ಒಬ್ಬರು ಜಲಸಮಾಧಿಯಾಗಿದ್ದರು. ಇನ್ನು 2024 ರಲ್ಲಿ ತಮಿಳುನಾಡಿನ ಗಿರಿಧಾಮ ಊಟಿಗೆ ಹೊರಟಿದ್ದ ಪ್ರವಾಸಿಗರು ಮ್ಯಾಪ್ ಆನ್ ಮಾಡಿಕೊಂಡಿದ್ದರು. ಮ್ಯಾಪ್ ವಾಹನ ಸಂಚಾರ ನಿಷೇಧಿಸಿರುವ ಅತ್ಯಂತ ಕಿರಿದಾದ ಮೆಟ್ಟಿಲುಗಳ ಹಾದಿಯನ್ನು ಶಾರ್ಟ್‌ಕಟ್ ಎಂದು ತೋರಿಸಿತ್ತು. ಚಾಲಕ ಕಾರನ್ನು ಮೆಟ್ಟಿಲುಗಳ ಮೇಲೆಯೇ ಇಳಿಸಿ, ಕಾರು ಮಧ್ಯದಲ್ಲೇ ಸಿಲುಕಿಕೊಂಡು ನಂತರ ಸ್ಥಳೀಯರು ರಕ್ಷಿಸಿದ್ದರು.

Bengaluru Techies Follow Google Maps Into Dense Forest, Car Plunges Into Ditch
Mumbai: ಗೂಗಲ್ ಮ್ಯಾಪ್ ಎಡವಟ್ಟು; ಕಂದಕಕ್ಕೆ ಉರುಳಿದ Audi ಕಾರು! ಮಹಿಳೆ ಪ್ರಾಣಪಾಯದಿಂದ ಪಾರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com