ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ಅವರ ಪುತ್ರಿ ಅನಯಾ ಬಂಗಾರ್ ಅವರು ಟೀಂ ಇಂಡಿಯಾ ಆಟಗಾರರ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ್ದು, ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗುತ್ತಿದೆ.
ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಅನಯಾ ಅವರಿಗೆ, ಭಾರತೀಯ ಕ್ರಿಕೆಟಿಗರಾದ ಶುಭಮನ್ ಗಿಲ್, ಅಭಿಷೇಕ್ ಶರ್ಮಾ ಮತ್ತು ಶ್ರೇಯಸ್ ಅಯ್ಯರ್ ಅವರೊಂದಿಗೆ 'ಕಿಲ್, ಮ್ಯಾರಿ, ಹುಕ್ಅಪ್' ಆಡುವಂತೆ ಹೇಳಲಾಗಿತ್ತು. ಇದಕ್ಕೆ ಅನಯಾ ಅವರು "ಶ್ರೇಯಸ್ ಅಯ್ಯರ್ ಅವರನ್ನು ಕೊಂದು, ಅಭಿಷೇಕ್ ಶರ್ಮಾ ಅವರನ್ನು ಮದುವೆಯಾಗಿ, ಶುಭಮನ್ ಗಿಲ್ ಅವರೊಂದಿಗೆ ಹುಕ್ಅಪ್ ಮಾಡಿ" ಎಂದು ಹೇಳಿದ್ದಾರೆ.
ಕೃಷ್ಣಾಂಕ್ ಅತ್ರೆ ಅವರ ಯೂಟ್ಯೂಬ್ ಚಾನೆಲ್ನಲ್ಲಿ ಅನಯಾ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಮುಂಬೈನಲ್ಲಿ ವಯೋಧಾರಿತ ಕ್ರಿಕೆಟ್ ಆಡಿದ್ದ ಅನಯಾ, ತಮ್ಮ ಲಿಂಗ ಪರಿವರ್ತನೆಯ ನಂತರ ಕ್ರಿಕೆಟ್ನಿಂದ ದೂರ ಉಳಿಯಬೇಕಾಗಿ ಬಂದಿತ್ತು. ನಾನು ಮಹಿಳಾ ಕ್ರಿಕೆಟ್ ಗೆ ಅರ್ಹಳು ಎಂದು ಬಿಸಿಸಿಐಗೆ ಮನವಿ ಮಾಡಿಕೊಂಡಿದ್ದರೂ ಅವರಿಗೆ ಆಡುವ ಅವಕಾಶ ದೊರೆತಿರಲಿಲ್ಲ. ಇದೀಗ ಆಸ್ಟ್ರೇಲಿಯಾ ಅವರಿಗೆ ಅವಕಾಶ ನೀಡಿದೆ ಎಂದು ಅನಯಾ ಹೇಳಿಕೊಂಡಿದ್ದಾರೆ. ಆದರೆ ಕ್ರಿಕೆಟ್ ಆಸ್ಟ್ರೇಲಿಯಾ ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.
2027ರ ಮಾರ್ಚ್ನಿಂದ ಆಸ್ಟ್ರೇಲಿಯಾದ ಮಹಿಳಾ ಬಿಗ್ ಬ್ಯಾಷ್ ಲೀಗ್ (WBBL) ಆಡಲು ನನಗೆ ಅರ್ಹತೆ ಸಿಕ್ಕಿದೆ. ಒಂದು ಹಂತದಲ್ಲಿ ಕ್ರಿಕೆಟ್ ಜೀವನವೇ ಮುಗಿದುಹೋಯಿತು ಎಂದು ಭಾವಿಸಿದ್ದ ನನಗೆ ಇದು ಅತ್ಯಂತ ಭಾವುಕ ವಿಷಯ ಎಂದು ಅನಯಾ ಇತ್ತೀಚಿಗೆ ಹೇಳಿದ್ದರು.