ಪ್ರಗ್ಯಾನ್ ಓಜಾ 
ಕ್ರಿಕೆಟ್

ಪ್ರಗ್ಯಾನ್ ಓಜಾಗೆ ಟೀಂ ಇಂಡಿಯಾ ಆಯ್ಕೆ ಸಮಿತಿ ಅಧ್ಯಕ್ಷ ಪಟ್ಟ; ಹೊಸ ಸದಸ್ಯರಾಗಿ ರಮೇಶ್ ಪವಾರ್ ನೇಮಕ

ಅಶೋಕ್ ಮಲ್ಹೋತ್ರಾ ಮತ್ತು ಜತಿನ್ ಪರಾಂಜಪೆ ಅವರನ್ನು ಒಳಗೊಂಡ ಕ್ರಿಕೆಟ್ ಸಲಹಾ ಸಮಿತಿಯು (CAC), ಪುರುಷರ ಆಯ್ಕೆ ಸಮಿತಿಯ ನೇಮಕಾತಿ ಪ್ರಕ್ರಿಯೆಯನ್ನು ನಡೆಸಿದ್ದು, ಈ ಸಮಿತಿಯ ಹೊಸ ಸದಸ್ಯರಾಗಿ ರಮೇಶ್ ಪವಾರ್ ಅವರನ್ನು ಆಯ್ಕೆ ಮಾಡಲಾಗಿದೆ.

ಮುಂಬೈ: ಭಾರತದ ಪುರುಷರ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ನೂತನ ಅಧ್ಯಕ್ಷರಾಗಿ ಮಾಜಿ ಸ್ಪಿನ್ನರ್ ಪ್ರಗ್ಯಾನ್ ಓಜಾ ಅವರನ್ನು ಹಾಗೂ ಸದಸ್ಯರಾಗಿ ರಮೇಶ್ ಪವಾರ್ ಅವರನ್ನು ನೇಮಕ ಮಾಡಿರುವುದಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(BCCI) ಸೋಮವಾರ ತಿಳಿಸಿದೆ.

ಆಯ್ಕೆ ಸಮಿತಿ ಅಧ್ಯಕ್ಷರಾಗಿದ್ದ ಅಜಿತ್ ಅಗರ್ಕರ್ ಅವರ ಅಧಿಕಾರವಧಿ ಮುಕ್ತಾಯದೊಂದಿಗೆ ಖಾಲಿಯಾಗಿದ್ದ ಪುರುಷರ ತಂಡದ ಆಯ್ಕೆ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಓಜಾ ಅವರನ್ನು ನೇಮಕ ಮಾಡಲಾಗಿದೆ. ಓಜಾ ಅವರಿಗೆ ಹಿರಿತನದ ಆಧಾರದ ಮೇಲೆ ಸಮಿತಿಯ ಅಧ್ಯಕ್ಷತೆ ಅಧಿಕಾರ ನೀಡಲಾಗಿದೆ.

ಅಶೋಕ್ ಮಲ್ಹೋತ್ರಾ ಮತ್ತು ಜತಿನ್ ಪರಾಂಜಪೆ ಅವರನ್ನು ಒಳಗೊಂಡ ಕ್ರಿಕೆಟ್ ಸಲಹಾ ಸಮಿತಿಯು (CAC), ಪುರುಷರ ಆಯ್ಕೆ ಸಮಿತಿಯ ನೇಮಕಾತಿ ಪ್ರಕ್ರಿಯೆಯನ್ನು ನಡೆಸಿದ್ದು, ಈ ಸಮಿತಿಯ ಹೊಸ ಸದಸ್ಯರಾಗಿ ರಮೇಶ್ ಪವಾರ್ ಅವರನ್ನು ಆಯ್ಕೆ ಮಾಡಲಾಗಿದೆ.

ಬಿಸಿಸಿಐ ನಿಯಮಗಳ ಪ್ರಕಾರ, ಆಯ್ಕೆ ಸಮಿತಿಯ ಸದಸ್ಯರಲ್ಲಿ ಯಾರು ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿರುತ್ತಾರೋ ಅವರಿಗೆ ಅಧ್ಯಕ್ಷ ಸ್ಥಾನ ನೀಡಲಾಗುತ್ತದೆ. ಆ ಕಾರಣಕ್ಕಾಗಿಯೇ ಪ್ರಗ್ಯಾನ್ ಓಜಾ ಅವರಿಗೆ ಈ ಜವಾಬ್ದಾರಿ ನೀಡಲಾಗಿದೆ.

5 ಸದಸ್ಯರ ಸಮಿತಿ

ಪ್ರಗ್ಯಾನ್ ಓಜಾ ಅವರ ನೇತೃತ್ವದ ಈ ಪುರುಷರ ಆಯ್ಕೆ ಸಮಿತಿಯು ಈಗ ಒಟ್ಟು ಐದು ಸದಸ್ಯರನ್ನು ಒಳಗೊಂಡಿದೆ. ಪ್ರಗ್ಯಾನ್ ಓಜಾ (ಅಧ್ಯಕ್ಷರು), ಶಿವ ಸುಂದರ್ ದಾಸ್, ಆರ್. ಪಿ. ಸಿಂಗ್, ಅಜಯ್ ರಾತ್ರಾ ಮತ್ತು ರಮೇಶ್ ಪವಾರ್ ಅವರನ್ನು ಈ ಸಮಿತಿ ಒಳಗೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸಲು ತುರ್ತಾಗಿ ಮಧ್ಯೆ ಪ್ರವೇಶಿಸಿ: ಪ್ರಧಾನಿ ಮೋದಿಗೆ ಡಿಕೆ ಶಿವಕುಮಾರ್ ಪತ್ರ

"ನಿಮಗೆ ಯಾವುದೇ ರೀತಿಯ ಅಧಿಕಾರವಿಲ್ಲ, ಪಾಕ್ ಕಾರ್ಯಸೂಚಿ ಈಡೇರೆಗೆ ವೇದಿಕೆ ದುರ್ಬಳಕೆ": OIC ಯಲ್ಲಿ ಭಾರತ-ವಿರೋಧಿ ಉಲ್ಲೇಖಕ್ಕೆ MEA ಕೆಂಡಾಮಂಡಲ!

ಸಿದ್ದರಾಮಯ್ಯಗೆ ಗೌರವ ಡಾಕ್ಟರೇಟ್‌ ಪ್ರದಾನ: ಆದ್ರೂ ನಾನು ಡಾಕ್ಟರ್ ಅಲ್ಲ, ಲಾಯರ್ ಅಷ್ಟೇ ಎಂದ ಮಾಜಿ ಸಿಎಂ!

ರೀಲ್ಸ್‌ ಪ್ರಿಯರಿಗೆ CM ಡಿಕೆಶಿ ಗುಡ್ ನ್ಯೂಸ್; ಮೈಸೂರು ದಸರಾ ಬಗ್ಗೆ Reels ಮಾಡಿ, ಬಹುಮಾನ ಗೆಲ್ಲಿ!

ಗೆಳೆಯನ ಕಾರಿನ ಮೇಲೆ ಫೈರಿಂಗ್: ಟೈಗರ್ ಶ್ರಾಫ್‌ ಮನೆಗೆ ಓಡೋಡಿ ಬಂದ ನಟಿ ದಿಶಾ ಪಟಾನಿ! Video