ಮೈಕೆಲ್ ಅಥರ್ಟನ್ ಮತ್ತು ನಾಸರ್ ಹುಸೇನ್ 
ಕ್ರಿಕೆಟ್

ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮಕ್ಕಳ ಸಂದರ್ಶನ ಪ್ರಸಾರ: ಕಾಮೆಂಟರಿ ತಂಡದಿಂದ ಇಂಗ್ಲೆಂಡ್ ಮಾಜಿ ಕ್ರಿಕೆಟಿಗರನ್ನು ಕೈಬಿಟ್ಟ PCB!

ಲಾರ್ಡ್ಸ್ ಟೆಸ್ಟ್ ಪಂದ್ಯದ ಸಮಯದಲ್ಲಿ ಪ್ರಸಾರವಾದ ಸಂದರ್ಶನದ ನಂತರ, ಪಿಸಿಬಿ ತನ್ನ ಆಟಗಾರರನ್ನು ಮಧ್ಯಾಹ್ನದ ಅವಧಿಗೆ ಮೈದಾನದಿಂದ ದೂರವಿಡುವುದಾಗಿ ಬೆದರಿಕೆ ಹಾಕಿದೆ ಎಂದು ವರದಿಯಾಗಿದೆ.

ಸದ್ಯ ನಡೆಯುತ್ತಿರುವ ಏಕದಿನ ತ್ರಿಕೋನ ಸರಣಿಗೆ ಇಂಗ್ಲೆಂಡ್ ತಂಡದ ಮಾಜಿ ನಾಯಕರಾದ ನಾಸರ್ ಹುಸೇನ್ ಮತ್ತು ಮೈಕೆಲ್ ಅಥರ್ಟನ್ ಅವರನ್ನು ಕಾಮೆಂಟರಿ ತಂಡದಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಹೊರಗಿಟ್ಟಿದೆ. ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪುತ್ರರೊಂದಿಗಿನ ಸಂದರ್ಶನ ಪ್ರಸಾರವಾದ ನಂತರ, ಪಿಸಿಬಿ ಘೋಷಿಸಿದ ಆರು ಸದಸ್ಯರ ಸಮಿತಿಯಲ್ಲಿ ಹುಸೇನ್ ಮತ್ತು ಅಥರ್ಟನ್ ಅವರ ಹೆಸರು ಕಾಣೆಯಾಗಿವೆ. ಈ ವರ್ಷದ ಆರಂಭದಲ್ಲಿ ಪಾಕಿಸ್ತಾನದ ಇಂಗ್ಲೆಂಡ್ ಪ್ರವಾಸದ ಸಮಯದಲ್ಲಿ, ಸ್ಕೈ ಸ್ಪೋರ್ಟ್ಸ್ ಇಮ್ರಾನ್ ಅವರ ಪುತ್ರರಾದ ಕಾಸಿಮ್ ಮತ್ತು ಸುಲೈಮಾನ್ ಖಾನ್ ಅವರೊಂದಿಗಿನ ಸಂದರ್ಶನವನ್ನು ಪ್ರಸಾರ ಮಾಡಿತು. ಈ ಸಂದರ್ಶನವನ್ನು ಅಥರ್ಟನ್ ನಡೆಸಿದ್ದರು.

2024 ರಲ್ಲಿ ಇಂಗ್ಲೆಂಡ್ ಕೊನೆಯ ಬಾರಿಗೆ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದಾಗ ಅಥರ್ಟನ್ ಮತ್ತು ಹುಸೇನ್ ಇಬ್ಬರೂ ಕಾಮೆಂಟರಿ ತಂಡದ ಭಾಗವಾಗಿದ್ದರು ಎಂಬುದನ್ನು ಇಲ್ಲಿ ಉಲ್ಲೇಖಿಸಬೇಕಾಗಿದೆ.

ಲಾರ್ಡ್ಸ್ ಟೆಸ್ಟ್ ಪಂದ್ಯದ ಸಮಯದಲ್ಲಿ ಪ್ರಸಾರವಾದ ಸಂದರ್ಶನದ ನಂತರ, ಪಿಸಿಬಿ ತನ್ನ ಆಟಗಾರರನ್ನು ಮಧ್ಯಾಹ್ನದ ಅವಧಿಗೆ ಮೈದಾನದಿಂದ ದೂರವಿಡುವುದಾಗಿ ಬೆದರಿಕೆ ಹಾಕಿದೆ ಎಂದು ವರದಿಯಾಗಿದೆ.

ಸಂದರ್ಶನದ ಸಮಯದಲ್ಲಿ, ಅಧಿಕಾರಿಗಳು ನಿರ್ಲಕ್ಷ್ಯ ಮತ್ತು ಪ್ರತ್ಯೇಕತೆಯ ಮೂಲಕ 'ತಮ್ಮನ್ನು ಕೊಲ್ಲಲು ಸ್ಪಷ್ಟವಾಗಿ ಪ್ರಯತ್ನಿಸುತ್ತಿದ್ದಾರೆ' ಎಂದು ಕಾಸಿಮ್ ಮತ್ತು ಸುಲೈಮಾನ್ ಆರೋಪಿಸಿದರು.

ಜೆಮಿಮಾ ಗೋಲ್ಡ್‌ಸ್ಮಿತ್ ಮತ್ತು ಇಮ್ರಾನ್ ಖಾನ್ ದಂಪತಿಯ ಎರಡನೇ ಮಗ ಕಾಸಿಮ್, ಹಲವಾರು ರಾಜಕೀಯ ಕೈದಿಗಳು ಜೈಲಿನಲ್ಲಿ ಸಾವಿಗೀಡಾಗಿದ್ದಾರೆ ಮತ್ತು ಪಾಕಿಸ್ತಾನ ಸರ್ಕಾರವು ನಮ್ಮ ತಂದೆಗೂ ಅದೇ ರೀತಿ ಮಾಡಲು ಯೋಜಿಸುತ್ತಿದೆ ಎಂದು ಹೇಳಿದರು.

ದೇಶದ ಮಾಜಿ ಪ್ರಧಾನಿ ಮತ್ತು ವಿಶ್ವಕಪ್ ವಿಜೇತ ನಾಯಕ ದಿನಕ್ಕೆ 23 ಗಂಟೆಗಳಿಗಿಂತ ಹೆಚ್ಚು ಕಾಲ ಸಣ್ಣ ಸೆಲ್‌ನಲ್ಲಿ ಏಕಾಂಗಿಯಾಗಿ ಕಳೆಯುತ್ತಾರೆ. ಪಾಕಿಸ್ತಾನ ಅಧಿಕಾರಿಗಳು 'ತಾಂತ್ರಿಕ ಆಧಾರದ ಮೇಲೆ' ಅವರಿಗೆ ವೀಸಾ ನೀಡಲು ನಿರಾಕರಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಆದಾಗ್ಯೂ, ಪಾಕಿಸ್ತಾನ ಸರ್ಕಾರ ಈ ಆರೋಪಗಳನ್ನು ನಿರಾಕರಿಸಿದ್ದು, ಇಮ್ರಾನ್ ಅವರ ಸಂಬಂಧಿಕರು, ವಕೀಲರು ಅಥವಾ ವೈದ್ಯರು ಅವರನ್ನು ಭೇಟಿ ಮಾಡುವುದನ್ನು ನಿಷೇಧಿಸಿಲ್ಲ ಎಂದು ಹೇಳಿದೆ.

ಸಂದರ್ಶನದ ರಾಜಕೀಯ ಸ್ವರೂಪದಿಂದಾಗಿ ಪಿಸಿಬಿ ಆಟಗಾರರೊಂದಿಗೆ ಹೊರನಡೆಯುವುದಾಗಿ ಬೆದರಿಕೆ ಹಾಕಿದೆ ಮತ್ತು ಸ್ಕೈ ಸ್ಪೋರ್ಟ್ಸ್‌ಗೆ ದೂರು ನೀಡಿದೆ ಎಂದು ವರದಿಯಾಗಿದೆ. ಪಾಕಿಸ್ತಾನದ ರಾಜ್ಯ ಪ್ರಸಾರಕ ಪಿಟಿವಿ ಸಂದರ್ಶನವನ್ನು ದೇಶೀಯವಾಗಿ ಪ್ರಸಾರ ಮಾಡಿಲ್ಲ.

2023ರಿಂದ ಜೈಲಿನಲ್ಲಿರುವ ಇಮ್ರಾನ್ ಅವರ ದೃಷ್ಟಿ ಶೇ 75 ರಷ್ಟು ಕುಸಿದಿದ್ದು, ಅವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತವಾಗಿದೆ. 1992ರ ವಿಶ್ವಕಪ್ ವಿಜೇತ ನಾಯಕನಿಗೆ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಒತ್ತಾಯಿಸಿ ಹಲವಾರು ಮಾಜಿ ಕ್ರಿಕೆಟಿಗರು ಪಾಕಿಸ್ತಾನ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ: ಬ್ಯಾಂಡೇಜ್ ಧರಿಸಿರುವ ನಟನ ಫಸ್ಟ್ ಇಮೇಜ್; ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಡಿಸಿಎಂ ಏಕನಾಥ್ ಶಿಂಧೆ; Video

ಟೈಗರ್ ಶ್ರಾಫ್ ಕಾರಿನ ಮೇಲೆ ಫೈರಿಂಗ್: ಸೋಷಿಯಲ್ ಮೀಡಿಯಾದಲ್ಲಿ ದಾಳಿ ಹೊಣೆ ಹೊತ್ತ ಬಿಷ್ಣೋಯ್ ಗ್ಯಾಂಗ್; Video

ಕಬ್ಬು ಬೆಳೆಗಾರರೊಂದಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತುಕತೆ: ಸಂಧಾನ ಯಶಸ್ವಿ?; Video

ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ: ಹಲವರಿಗೆ ಗಾಯ; ನಟ ಪ್ರಾಣಾಪಾಯದಿಂದ ಪಾರು, Video

ಪ್ರಸ್ತುತ ಪರಿಸ್ಥಿತಿಯಲ್ಲಿ ರೈತರ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲ: ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್