ದಕ್ಷಿಣ ಆಫ್ರಿಕಾ ನಾಯಕ ಟೆಂಬಾ ಬವುಮಾ 
ಕ್ರಿಕೆಟ್

76 ವರ್ಷಗಳ ದಾಖಲೆ ಮುರಿದ Temba Bavuma; ಮೊಹಮ್ಮದ್ ಅಜರುದ್ದೀನ್ ವರ್ಲ್ಡ್ ರೆಕಾರ್ಡ್ ಕೂಡ ಪತನ!

ಮಂಗಳವಾರ ಸೇಂಟ್ ಜಾರ್ಜ್ ಪಾರ್ಕ್‌ನಲ್ಲಿ ನಡೆದ ಪಂದ್ಯದಲ್ಲಿ 179 ರನ್‌ಗಳ ಭರ್ಜರಿ ಇನಿಂಗ್ಸ್ ಆಡಿದ ಬವುಮಾ, 76 ವರ್ಷಗಳ ಹಳೆಯ ದಾಖಲೆ ಮುರಿದಿದ್ದು ಮಾತ್ರವಲ್ಲದೇ ಭಾರತದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್..

ಗೆಬರ್ಹಾ: ದಕ್ಷಿಣ ಆಫ್ರಿಕಾ ಟೆಸ್ಟ್ ತಂಡದ ನಾಯಕ ಟೆಂಬಾ ಬವುಮಾ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

ಮಂಗಳವಾರ ಸೇಂಟ್ ಜಾರ್ಜ್ ಪಾರ್ಕ್‌ನಲ್ಲಿ ನಡೆದ ಪಂದ್ಯದಲ್ಲಿ 179 ರನ್‌ಗಳ ಭರ್ಜರಿ ಇನಿಂಗ್ಸ್ ಆಡಿದ ಬವುಮಾ, 76 ವರ್ಷಗಳ ಹಳೆಯ ದಾಖಲೆ ಮುರಿದಿದ್ದು ಮಾತ್ರವಲ್ಲದೇ ಭಾರತದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ.

ಮಳೆಯ ಅಡಚಣೆಯಿಂದ ಪಂದ್ಯಕ್ಕೆ ತೊಂದರೆಯಾದರೂ, ದಕ್ಷಿಣ ಆಫ್ರಿಕಾ ತಂಡ 425 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡು ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.

ಅಜರುದ್ದೀನ್ ಹೆಸರಿನಲ್ಲಿದ್ದ ದಾಖಲೆ ಪತನ

ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ 150ಕ್ಕೂ ಹೆಚ್ಚು ರನ್ ಗಳಿಸಿದ ಅತ್ಯಂತ ಹಿರಿಯ ನಾಯಕ ಎಂಬ ಹೆಗ್ಗಳಿಕೆಗೆ ಬವುಮಾ ಪಾತ್ರರಾಗಿದ್ದಾರೆ. ಈ ಮೂಲಕ 1998ರಿಂದ ಭಾರತದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಹೆಸರಿನಲ್ಲಿದ್ದ ದಾಖಲೆಯನ್ನು ಹಿಂದಿಕ್ಕಿದ್ದಾರೆ.

1998ರಲ್ಲಿ ಈಡನ್ ಗಾರ್ಡನ್ಸ್‌ನಲ್ಲಿ ಸ್ಟೀವ್ ವಾ ನಾಯಕತ್ವದ ಆಸ್ಟ್ರೇಲಿಯಾ ತಂಡದ ವಿರುದ್ಧ ಅಜರುದ್ದೀನ್ ಅಜೇಯ 163 ರನ್ ಗಳಿಸಿದ್ದರು. ಇದೀಗ ಬವುಮಾ 179 ರನ್‌ಗಳ ಇನಿಂಗ್ಸ್ ಮೂಲಕ ಈ ದಾಖಲೆ ಮುರಿದಿದ್ದಾರೆ.

76 ವರ್ಷಗಳ ಬಳಿಕ ಅಪರೂಪದ ಸಾಧನೆ

36 ವರ್ಷ ದಾಟಿದ ಬಳಿಕ ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್ ಪಂದ್ಯದಲ್ಲಿ 150ಕ್ಕೂ ಹೆಚ್ಚು ರನ್ ಗಳಿಸಿದ ನಾಯಕರ ಪೈಕಿ ಬವುಮಾ 76 ವರ್ಷಗಳ ಬಳಿಕ ಈ ಸಾಧನೆ ಮಾಡಿದ ಮೊದಲ ನಾಯಕ ಎನಿಸಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 150ಕ್ಕೂ ಹೆಚ್ಚು ವೈಯಕ್ತಿಕ ರನ್ ಗಳಿಸಿದ ಎರಡನೇ ಹಿರಿಯ ನಾಯಕ ಎಂಬ ಹೆಗ್ಗಳಿಕೆಯೂ ಬವುಮಾ ಅವರದಾಗಿದೆ. 1950ರಲ್ಲಿ ಇದೇ ಗೆಬರ್ಹಾದಲ್ಲಿ ಆಸ್ಟ್ರೇಲಿಯಾದ ಲಿಂಡ್ಸೆ ಹ್ಯಾಸೆಟ್ ಈ ಸಾಧನೆ ಮಾಡಿದ್ದರು.

ಇದಲ್ಲದೆ, 1951ರಲ್ಲಿ ಡಡ್ಲಿ ನರ್ಸ್ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ 150ಕ್ಕೂ ಹೆಚ್ಚು ರನ್ ಗಳಿಸಿದ ದಕ್ಷಿಣ ಆಫ್ರಿಕಾದ ಅತ್ಯಂತ ಹಿರಿಯ ನಾಯಕ ಎಂಬ ದಾಖಲೆಗೂ ಬವುಮಾ ಪಾತ್ರರಾಗಿದ್ದಾರೆ. 21ನೇ ಶತಮಾನದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 150ಕ್ಕೂ ಹೆಚ್ಚು ರನ್ ಗಳಿಸಿದ ಮೂರನೇ ಹಿರಿಯ ನಾಯಕ ಎಂಬ ಸಾಧನೆಯನ್ನೂ ಬವುಮಾ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಸ್ಟೀವ್ ವಾ ಮತ್ತು ಬ್ರಿಯಾನ್ ಲಾರಾ ಅವರಂತಹ ದಿಗ್ಗಜರು ಕೂಡ ಸ್ಥಾನ ಪಡೆದಿದ್ದಾರೆ.

ಬವುಮಾ ಅವರ 179 ರನ್‌ಗಳ ಇನಿಂಗ್ಸ್ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಬಲ ತುಂಬಿದ್ದು, ಅವರ ಟೆಸ್ಟ್ ವೃತ್ತಿಜೀವನದ ಸ್ಮರಣೀಯ ಸಾಧನೆಗಳಲ್ಲೊಂದಾಗಿ ಗುರುತಿಸಿಕೊಂಡಿದೆ.

ಆಫ್ರಿಕಾಗೆ ಆಸರೆಯಾಗಿದ್ದ ಬವುಮಾ

ಪಂದ್ಯದ ಮೊದಲ ದಿನವೇ ದಕ್ಷಿಣ ಆಫ್ರಿಕಾ ತಂಡ 12 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಎರಡನೇ ದಿನವೂ ವಿಕೆಟ್‌ಗಳು ಪತನಗೊಂಡಿದ್ದರಿಂದ ತಂಡದ ಮೊತ್ತ 110 ರನ್‌ಗಳಿಗೆ 6 ವಿಕೆಟ್ ಎಂಬ ಸ್ಥಿತಿಗೆ ತಲುಪಿತ್ತು.

ಇಂತಹ ಒತ್ತಡದ ಪರಿಸ್ಥಿತಿಯಲ್ಲಿ ಕ್ರೀಸ್‌ಗೆ ಅಂಟಿಕೊಂಡು ಆಡಿದ ನಾಯಕ ಬವುಮಾ, ತಂಡಕ್ಕೆ ಆಸರೆಯಾದರು. ಮಾರ್ಕೊ ಯಾನ್ಸನ್ ಮತ್ತು ಸೈಮನ್ ಹಾರ್ಮರ್ ಅವರೊಂದಿಗೆ ಏಳನೇ ಹಾಗೂ ಎಂಟನೇ ವಿಕೆಟ್‌ಗೆ ಮಹತ್ವದ ಜೊತೆಯಾಟಗಳನ್ನು ಆಡಿದ ಬವುಮಾ, ತಂಡದ ಮೊತ್ತವನ್ನು 400ರ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದಸರಾ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ; ಮೈಸೂರು ಪೇಟ ಧರಿಸಿ ನಂದಿಧ್ವಜ ಪೂಜೆ ನೆರವೇರಿಸಿದ ಸಿಎಂ; Live Video

ಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ; ಜ್ಞಾನೇಶ್ ಕುಮಾರ್ ವಜಾಗೊಳಿಸಿ: ಮಲ್ಲಿಕಾರ್ಜುನ ಖರ್ಗೆ ಆಗ್ರಹ

ಕುಮಾರಸ್ವಾಮಿ ಪರವಾಗಿ ಪ್ರಿಯಾಂಕ್ ಖರ್ಗೆಗೆ ಸವಾಲು ಹಾಕಿದ ಕರಾವಳಿಯ ಜನತೆ, ಬ್ಯಾನರ್ ವೈರಲ್!

ರಾಹುಲ್ ಗಾಂಧಿ ವಿದೇಶ ಪ್ರವಾಸದ ಬಗ್ಗೆ ಹೇಳಲು ನಾನು 'ಟ್ರಾವೆಲ್ ಏಜೆಂಟ್ ಅಲ್ಲ': ನನ್ನನ್ನು ಕೇಳುವುದರಲ್ಲಿ ಅರ್ಥವಿಲ್ಲ; ಶಶಿ ತರೂರ್ ಆಕ್ರೋಶ

‘Expiry Date'ಮುಗಿಯುತ್ತಾ ಬಂದಿದೆ: ಪಿಎಂ-ದಕ್ಷ್ ಯೋಜನೆ ಅನುಷ್ಟಾನದಲ್ಲಿ ಲೋಪದ ಆರೋಪ,ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿ!