ಮುಂಬೈ ಇಂಡಿಯನ್ಸ್ ತಂಡ ಹಾಗೂ ಮಾಲೀಕರು(ಸಂಗ್ರಹ ಚಿತ್ರ) 
ಕ್ರಿಕೆಟ್

IPL ಹಾಲಿ ಚಾಂಪಿಯನ್ RCBಯನ್ನೇ ಹಿಂದಿಕ್ಕಿದ ಮುಂಬೈ ಇಂಡಿಯನ್ಸ್; ಈಗ ವಿಶ್ವದ ಅತ್ಯಂತ ಶ್ರೀಮಂತ ಫ್ರಾಂಚೈಸಿ!

ಮುಂಬೈ ಇಂಡಿಯನ್ಸ್ ತಂಡ 2.1 ಬಿಲಿಯನ್ ಡಾಲರ್( 20,008.8 ಕೋಟಿ ರೂ.) ಮೌಲ್ಯದೊಂದಿಗೆ, ವಿಶ್ವದ ಅತ್ಯಂತ ಮೌಲ್ಯಯುತ ಐಪಿಎಲ್ (IPL) ಫ್ರಾಂಚೈಸಿ ಎಂಬ ಸ್ಥಾನವನ್ನು ಪಡೆದುಕೊಂಡಿದೆ.

ಮುಂಬೈ: ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡವನ್ನೇ ಹಿಂದಿಕ್ಕಿದ ಐದು ಬಾರಿ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ (MI) ತಂಡ ವಿಶ್ವದ ಅತ್ಯಂತ ಶ್ರೀಮಂತ ಫ್ರಾಂಚೈಸಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮುಂಬೈ ಇಂಡಿಯನ್ಸ್ ತಂಡ 2.1 ಬಿಲಿಯನ್ ಡಾಲರ್( 20,008.8 ಕೋಟಿ ರೂ.) ಮೌಲ್ಯದೊಂದಿಗೆ, ವಿಶ್ವದ ಅತ್ಯಂತ ಮೌಲ್ಯಯುತ ಐಪಿಎಲ್ (IPL) ಫ್ರಾಂಚೈಸಿ ಎಂಬ ಸ್ಥಾನವನ್ನು ಪಡೆದುಕೊಂಡಿದೆ.

'ಸ್ಪೋರ್ಟಿಕೋ' (Sportico) ವರದಿಯ ಪ್ರಕಾರ, ಪ್ರಸ್ತುತ ಪ್ರತಿಯೊಂದು ಐಪಿಎಲ್ ಫ್ರಾಂಚೈಸಿಯ ಮೌಲ್ಯವು ಕನಿಷ್ಠ 1.5 ಬಿಲಿಯನ್ ಡಾಲರ್ (ರೂ. 14,292 ಕೋಟಿ) ಆಗಿದ್ದು, ಮುಂಬೈ ಇಂಡಿಯನ್ಸ್ ತಂಡವು, ಉತ್ತರ ಅಮೆರಿಕಾದ ಪ್ರಮುಖ ಕ್ರೀಡಾ ತಂಡಗಳಾದ 'ಡೆಟ್ರಾಯಿಟ್ ಟೈಗರ್ಸ್' ಮತ್ತು 'ವ್ಯಾಂಕೋವರ್ ಕ್ಯಾನಕ್ಸ್'ಗಿಂತಲೂ ಹೆಚ್ಚಿನ ಮೌಲ್ಯವನ್ನು ಹೊಂದಿದೆ.

ಎರಡನೇ ಸ್ಥಾನಕ್ಕೆ ಕುಸಿದ RCB

ಐಪಿಎಲ್ ಫ್ರಾಂಚೈಸಿಗಳ ಮೌಲ್ಯಮಾಪನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) 1.85 ಬಿಲಿಯನ್ ಡಾಲರ್‌ (ಸುಮಾರು 17,626.8 ಕೋಟಿ ರೂ.) ಮೌಲ್ಯದೊಂದಿಗೆ 2ನೇ ಸ್ಥಾಕ್ಕೆ ಕುಸಿದರೆ, 5 ಬಾರಿ ಚಾಂಪಿಯನ್ಸ್‌ ತಂಡ ಚೆನ್ನೈ ಸೂಪರ್ ಕಿಂಗ್ಸ್‌ (CSK) 1.75 ಬಿಲಿಯನ್ ಡಾಲರ್‌ (ಸುಮಾರು 16,674 ಕೋಟಿ) ಮೌಲ್ಯದೊಂದಿಗೆ 3ನೇ ಸ್ಥಾನಕ್ಕೆ ಪಡೆದುಕೊಂಡಿದೆ.

ಇನ್ನು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮೌಲ್ಯ 1.73 ಬಿಲಿಯನ್ ಡಾಲರ್ (ರೂ. 16,483.44 ಕೋಟಿ) ಆಗಿದ್ದು, ಇದು ಲೀಗ್‌ನ ಸರಾಸರಿ ಮೌಲ್ಯವಾದ 1.7 ಬಿಲಿಯನ್ ಡಾಲರ್ (ರೂ. 16,197.6 ಕೋಟಿ) ಗಿಂತ ಸ್ವಲ್ಪ ಹೆಚ್ಚಾಗಿದೆ. ದೆಹಲಿ ಕ್ಯಾಪಿಟಲ್ಸ್ ತಂಡದ ಮೌಲ್ಯವು ಈ ಸರಾಸರಿ ಮೌಲ್ಯಕ್ಕೆ (1.7 ಬಿಲಿಯನ್ ಡಾಲರ್) ಸಮನಾಗಿದೆ.

ಉಳಿದ ತಂಡಗಳ ಬ್ರ್ಯಾಂಡ್‌ ಮೌಲ್ಯ ಎಷ್ಟು?

ರಾಜಸ್ಥಾನ್ ರಾಯಲ್ಸ್‌: 1.65 ಬಿಲಿಯನ್ ಡಾಲರ್‌ (ಸುಮಾರು 15,721.2 ಕೋಟಿ ರೂ.)

ಸನ್‌ರೈಸರ್ಸ್ ಹೈದರಾಬಾದ್‌: 1.62 ಬಿಲಿಯನ್ ಡಾಲರ್‌ (ಸುಮಾರು 15,435.36 ಕೋಟಿ ರೂ.)

ಗುಜರಾತ್ ಟೈಟಾನ್ಸ್‌: 1.58 ಬಿಲಿಯನ್ ಡಾಲರ್‌ (ಸುಮಾರು 15,054.24 ಕೋಟಿ ರೂ.)

ಪಂಜಾಬ್ ಕಿಂಗ್ಸ್‌: 1.53 ಬಿಲಿಯನ್ ಡಾಲರ್‌ (ಸುಮಾರು 14,577.84 ಕೋಟಿ ರೂ.)

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯದ ಜನತೆಗೆ ಬಿಗ್ ಶಾಕ್: ನಂದಿನ ಹಾಲಿನ ದರ ಲೀಟರ್‌ಗೆ ಬರೋಬ್ಬರಿ 8 ರೂ ಹೆಚ್ಚಳ; ನವೆಂಬರ್‌ 1 ರಿಂದಲೇ ಜಾರಿ! Video

ಮಂಗಳೂರು: ಬೇಡಿಕೊಂಡರು 40ರ ವಿವಾಹಿತ ಧರ್ಮಗುರು ಜೊತೆ ಹೋದ 22ರ ಯುವತಿ; ಬಿಕ್ಕಿಬಿಕ್ಕಿ ಅತ್ತ ಪೋಷಕರು!

'ಫಿಲ್ಟರ್ ಮುಖ್ಯ': 'ಹಾಲಿನಂತ ದೇಹ' ಎಂದ ಅನ್ನು ಕಪೂರ್​ ಹೇಳಿಕೆಗೆ ಮಿಲ್ಕಿ ಬ್ಯೂಟಿ ತಮನ್ನಾ ಫಸ್ಟ್ ರಿಯಾಕ್ಷನ್!

ಪತ್ನಿ ಅಕ್ರಮ ಸಂಬಂಧ ಪ್ರಶ್ನಿಸಿದ ಪತಿಗೆ 12 ಬಾರಿ ಇರಿದ ಜಿಮ್‌ ಟ್ರೈನರ್‌; ಭೀಕರ ಕೃತ್ಯ ಸಿಸಿಟಿವಿಯಲ್ಲಿ ಸೆರೆ!

ಅಂಡಮಾನ್ ಸಮುದ್ರದಲ್ಲಿ ಪ್ರಬಲ ಭೂಕಂಪನ; ರಿಕ್ಟರ್ ಮಾಪಕದಲ್ಲಿ 5.1 ತೀವ್ರತೆ ದಾಖಲು; ದ್ವೀಪಗಳಲ್ಲೂ ಕಂಪನ!