ವಿರಾಟ್ ಕೊಹ್ಲಿ - ರಜತ್ ಪಾಟೀದಾರ್ 
ಕ್ರಿಕೆಟ್

'ಬೇರೆ ಯಾರೂ ಬೇಕಾಗಿಲ್ಲ': 'ಆರಾಧ್ಯ ದೈವ' ವಿರಾಟ್ ಕೊಹ್ಲಿ ಬಗ್ಗೆ RCB ನಾಯಕ ರಜತ್ ಪಾಟೀದಾರ್ ಅಚ್ಚರಿಯ ಹೇಳಿಕೆ

ಪಾಟಿದಾರ್ ಅವರ ನಾಯಕತ್ವದಲ್ಲಿ, ಪಂಜಾಬ್ ಕಿಂಗ್ಸ್ ವಿರುದ್ಧದ ಫೈನಲ್ ಪಂದ್ಯವನ್ನು ಗೆಲ್ಲುವ ಮೂಲಕ RCB ಚೊಚ್ಚಲ 2025ರ ಐಪಿಎಲ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. 2026ರ ಐಪಿಎಲ್‌ನಲ್ಲಿ ಸತತ ಎರಡನೇ ಬಾರಿಗೆ ಪ್ರಶಸ್ತಿ ಗೆದ್ದುಕೊಂಡಿತು.

ಐಪಿಎಲ್ 2025ರ ಮೆಗಾ ಹರಾಜಿನ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ರಜತ್ ಪಾಟೀದಾರ್ ಅವರನ್ನು ನಾಯಕರನ್ನಾಗಿ ನೇಮಿಸಿದ ನಿರ್ಧಾರವು ಅನೇಕರಿಗೆ ಆಶ್ಚರ್ಯವನ್ನುಂಟುಮಾಡಿತ್ತು. ಪಾಟೀದಾರ್ ಆಗಷ್ಟೇ ತಮ್ಮ ದೇಶೀಯ ತಂಡದ ನಾಯಕತ್ವ ವಹಿಸಿಕೊಳ್ಳಲು ಆರಂಭಿಸಿದ್ದರು ಮತ್ತು ಡ್ರೆಸ್ಸಿಂಗ್ ರೂಂನಲ್ಲಿ ವಿರಾಟ್ ಕೊಹ್ಲಿಯಂತಹ ದಿಗ್ಗಜ ಆಟಗಾರರನ್ನು ನಿಭಾಯಿಸಬೇಕಾದ ಸವಾಲು ಅವರ ಮುಂದಿತ್ತು. ಆದಾಗ್ಯೂ, ಆರ್‌ಸಿಬಿ ಇತಿಹಾಸದಲ್ಲೇ ಅತ್ಯಂತ ಪ್ರಭಾವಶಾಲಿ ವ್ಯಕ್ತಿಯಾಗಿರುವ ಕೊಹ್ಲಿ, ಆರಂಭದಿಂದಲೇ ಪಾಟೀದಾರ್ ಅವರನ್ನು ನಾಯಕನನ್ನಾಗಿ ನೇಮಿಸುವುದನ್ನು ಬೆಂಬಲಿಸಿದರು. ಈ ನಿರ್ಧಾರವು ಉತ್ತಮ ಫಲಿತಾಂಶ ನೀಡಿತು; ಪಾಟೀದಾರ್ ನೇತೃತ್ವದಲ್ಲಿ ಆರ್‌ಸಿಬಿ 2025ರಲ್ಲಿ ತನ್ನ ಚೊಚ್ಚಲ ಐಪಿಎಲ್ ಪ್ರಶಸ್ತಿ ಗೆದ್ದುಕೊಂಡಿತು ಮತ್ತು ನಂತರ 2026ರಲ್ಲೂ ಸತತವಾಗಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಇತ್ತೀಚಿನ ಸಂದರ್ಶನವೊಂದರಲ್ಲಿ, ಆರ್‌ಸಿಬಿ ತಂಡದ ಪ್ರಮುಖ ಆಟಗಾರ ವಿರಾಟ್ ಕೊಹ್ಲಿ ಅವರನ್ನು ತಮ್ಮ 'ಆರಾಧ್ಯ ದೈವ' ಎಂದು ಬಣ್ಣಿಸಿದ ಪಾಟೀದಾರ್, ಅವರ ಬೆಂಬಲ ತಮಗೆ ಎಷ್ಟೊಂದು ಮಹತ್ವದ್ದಾಗಿದೆ ಎಂಬುದನ್ನು ವಿವರಿಸಿದರು.

'ನಿಮ್ಮ ಆರಾಧ್ಯ ದೈವವೇ ನಿಮಗೆ ಬೆಂಬಲವಾಗಿ ನಿಂತರೆ, ಅದಕ್ಕಿಂತ ಹೆಚ್ಚಿನದೇನೂ ಬೇಕಿಲ್ಲ. ಬೇರೆ ಯಾರ ಬೆಂಬಲವೂ ನಿಮಗೆ ಅಗತ್ಯವಿರುವುದಿಲ್ಲ' ಎಂದು 'ಸ್ಪೋರ್ಟ್ಸ್ ಲಾಂಚ್‌ಪ್ಯಾಡ್' ಜೊತೆಗಿನ ಸಂದರ್ಶನದಲ್ಲಿ ಪಾಟೀದಾರ್ ಹೇಳಿರುವುದಾಗಿ 'ಹಿಂದೂಸ್ತಾನ್ ಟೈಮ್ಸ್' ವರದಿ ಮಾಡಿದೆ.

'ಅವರು ಬ್ಯಾಟಿಂಗ್ ಮಾಡುತ್ತಿದ್ದಾಗ ನಾನು ಅವರ ಪ್ರತಿಯೊಂದು ವಿಷಯವನ್ನೂ ಗಮನಿಸುತ್ತಿದ್ದೆ; ಮೈದಾನದಲ್ಲಿನ ಅವರ ನಡೆವಳಿಕೆಯಿಂದ ಹಿಡಿದು ಮೈದಾನದ ಹೊರಗಿನ ಅವರ ದಿನಚರಿಯವರೆಗೂ ಎಲ್ಲವನ್ನೂ ಗಮನಿಸುತ್ತಿದ್ದೆ. ನಂತರ, ನಾಯಕತ್ವದ ವಿಷಯ ಸೇರಿದಂತೆ ಹಲವು ಸಂದರ್ಭಗಳಲ್ಲಿ ಅವರು ನನಗೆ ಬಲವಾದ ಬೆಂಬಲ ನೀಡಿದ್ದರು ಎಂಬುದು ನನಗೆ ತಿಳಿಯಿತು' ಎಂದು ಪಾಟೀದಾರ್ ಬಹಿರಂಗಪಡಿಸಿದರು.

'ಆರ್‌ಸಿಬಿ ತಂಡದ ಅಭಿಮಾನಿಗಳು ಮತ್ತು ತಂಡದ ಮೇಲಿರುವ ನಿರೀಕ್ಷೆಗಳನ್ನು ಗಮನಿಸಿದರೆ, ಯಾರಿಗಾದರೂ ನಾಯಕತ್ವವನ್ನು ವಹಿಸಿಕೊಡುವುದು ಸುಲಭದ ಮಾತಲ್ಲ. ಖಂಡಿತವಾಗಿಯೂ ಅವರು ನನ್ನಲ್ಲಿ ಏನನ್ನೋ ಕಂಡಿರಬೇಕು. ಅದು ಏನೆಂದು ನನಗೆ ನಿಖರವಾಗಿ ತಿಳಿದಿಲ್ಲವಾದರೂ, ಒಬ್ಬ ಆಟಗಾರನಾಗಿ ಮತ್ತು ನಾಯಕನಾಗಿ ತಂಡದಲ್ಲಿ ಅವರಿಂದ ನನಗೆ ಅಪಾರ ಬೆಂಬಲ ಸಿಕ್ಕಿದೆ' ಎಂದರು.

ಪಾಟಿದಾರ್ ಅವರ ನಾಯಕತ್ವದಲ್ಲಿ, ಪಂಜಾಬ್ ಕಿಂಗ್ಸ್ ವಿರುದ್ಧದ ಫೈನಲ್ ಪಂದ್ಯವನ್ನು ಗೆಲ್ಲುವ ಮೂಲಕ RCB 2025ರ ಐಪಿಎಲ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು ಮತ್ತು ಆ ಮೂಲಕ 18 ವರ್ಷಗಳ ಸುದೀರ್ಘ ಕಾಯುವಿಕೆಗೆ ತೆರೆ ಎಳೆಯಿತು. 2026ರ ಐಪಿಎಲ್‌ನಲ್ಲಿ RCB ಇನ್ನಷ್ಟು ಪ್ರಬಲ ಪ್ರದರ್ಶನ ನೀಡಿತು; ಕ್ವಾಲಿಫೈಯರ್ 1 ಮತ್ತು ಫೈನಲ್ ಎರಡರಲ್ಲೂ ಗುಜರಾತ್ ಟೈಟಾನ್ಸ್ (GT) ತಂಡವನ್ನು ಮಣಿಸುವ ಮೂಲಕ ಸತತ ಎರಡನೇ ಬಾರಿಗೆ ಪ್ರಶಸ್ತಿಯನ್ನು ಗೆದ್ದುಕೊಂಡಿತು.

2025 ಮತ್ತು 2026ರಲ್ಲಿನ ಈ ಯಶಸ್ಸು, ಸದ್ಯ RCB ತಂಡವನ್ನು ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ತಂಡಗಳ ಸಾಲಿನಲ್ಲಿ ಒಂದಾಗಿ ಪರಿಗಣಿಸುವಂತೆ ಮಾಡಿದೆ. 2027ರಲ್ಲಿ ಸತತ ಮೂರು ಪ್ರಶಸ್ತಿಗಳನ್ನು ಗೆದ್ದ ಮೊದಲ ತಂಡವಾಗುವ ಗುರಿಯನ್ನು ಅವರು ಹೊಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿ ಕಟ್ಟಡ ದುರಂತ: ತಲೆಮರೆಸಿಕೊಂಡಿರುವ PG ಮಾಲೀಕನ ವಿರುದ್ಧ Lookout Notice ಜಾರಿ, ಇಂದು High courtನಲ್ಲಿ ತುರ್ತು ವಿಚಾರಣೆ..!

Devi Awards 2026: ಮಹಿಳೆಯರನ್ನು ಕೇವಲ ಫಲಾನುಭವಿಗಳಾಗಿ ನೋಡುವ ಬದಲು ಅಭಿವೃದ್ಧಿಯ ಪಾಲುದಾರರು, ನಾಯಕಿಯರನ್ನಾಗಿ ಪರಿಗಣಿಸಬೇಕು- ಒಡಿಶಾ ಡಿಸಿಎಂ

West asia conflict: ಬೆದರಿಕೆಗೆ ಮಣಿಯಲ್ಲ, ದಾಳಿ ನಿಲ್ಲದ ಹೊರತು ಹಾರ್ಮುಜ್ ಜಲಸಂಧಿ ತೆರೆಯಲ್ಲ: ಅಮೆರಿಕಾಕ್ಕೆ Iran ಖಡಕ್ ಸಂದೇಶ..!

'ಅಹಿಂದ ಯಾರ ಆಸ್ತಿಯೂ ಅಲ್ಲ'.. ಕರೆಯದೇ ಹೇಗೆ ಹೋಗಲಿ?: ಗುರುವಿನ ವಿರುದ್ಧ ಸಚಿವ ಸತೀಶ್ ಜಾರಕಿಹೊಳಿ ಗರಂ!

ದೆಹಲಿ ಹಾಸ್ಟೆಲ್ ದುರಂತ: ಸಾವಿನ ಸಂಖ್ಯೆ 6ಕ್ಕೆ ಏರಿಕೆ; 11 ಮಂದಿ ರಕ್ಷಣೆ, ಮುಂದುವರಿದ ರಕ್ಷಣಾ ಕಾರ್ಯಾಚರಣೆ