ಭಾರತ ವರ್ಸಸ್ ಬಾಂಗ್ಲಾದೇಶ 
ಕ್ರಿಕೆಟ್

Asia Cup 2026: ಮೊದಲ ಸೆಮಿಸ್‌ನಲ್ಲಿ ಬಾಂಗ್ಲಾವನ್ನು ಸೋಲಿಸಿ ಫೈನಲ್ ಪ್ರವೇಶಿಸಿದ ಭಾರತ!

ಭಾರತ ಮತ್ತು ಬಾಂಗ್ಲಾದೇಶ ಮಹಿಳಾ ತಂಡಗಳು ಮಹಿಳಾ ಏಷ್ಯಾ ಕಪ್ 2026ರ ಮೊದಲ ಸೆಮಿಫೈನಲ್‌ನಲ್ಲಿ ಪಂದ್ಯದಲ್ಲಿ ಮುಖಾಮುಖಿಯಾಗಿದ್ದು, ಈ ಹೈ-ವೋಲ್ಟೇಜ್ ನಾಕೌಟ್ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶವನ್ನು 40 ರನ್ ಗಳಿಂದ ಮಣಿಸಿ ಫೈನಲ್ ಪ್ರವೇಶಿಸಿದೆ.

ದುಬೈ: ಭಾರತ ಮತ್ತು ಬಾಂಗ್ಲಾದೇಶ ಮಹಿಳಾ ತಂಡಗಳು ಮಹಿಳಾ ಏಷ್ಯಾ ಕಪ್ 2026ರ ಮೊದಲ ಸೆಮಿಫೈನಲ್‌ನಲ್ಲಿ ಪಂದ್ಯದಲ್ಲಿ ಮುಖಾಮುಖಿಯಾಗಿದ್ದು, ಈ ಹೈ-ವೋಲ್ಟೇಜ್ ನಾಕೌಟ್ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶವನ್ನು 40 ರನ್ ಗಳಿಂದ ಮಣಿಸಿ ಫೈನಲ್ ಪ್ರವೇಶಿಸಿದೆ.

ಭಾರತೀಯ ಮಹಿಳಾ ತಂಡವು ಸ್ಫೋಟಕ ಬ್ಯಾಟಿಂಗ್‌ ಮಾಡಿದ್ದು ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 149 ರನ್‌ ಪೇರಿಸಿತ್ತು. 150 ರನ್ ಗಳ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ 109 ರನ್ ಪೇರಿಸಲಷ್ಟೇ ಸಾಧ್ಯವಾಗಿದ್ದು 40 ರನ್ ಗಳಿಂದ ಸೋಲು ಕಂಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲು ಆಯ್ಕೆ ಮಾಡಿಕೊಂಡ ಭಾರತ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಸ್ಟಾರ್ ಓಪನರ್ ಸ್ಮೃತಿ ಮಂಧಾನ ಅವರನ್ನು ಸುಲ್ತಾನಾ ಖಾತುನ್ ಕೇವಲ 2 ರನ್‌ಗಳಿಗೆ ಔಟ್ ಮಾಡಿದರು. ಇದಾದ ನಂತರ, ಕ್ರೀಸ್‌ಗೆ ಬಂದ ಪ್ರತಿಕಾ ರಾವಲ್ (20 ರನ್‌ಗಳು, 24 ಎಸೆತಗಳು) ಶೆಫಾಲಿಗೆ ಬೆಂಬಲ ನೀಡಿದರು. ಆದರೆ ರನ್ ದರವನ್ನು ಹೆಚ್ಚಿಸುವ ಸಂಪೂರ್ಣ ಜವಾಬ್ದಾರಿ ಶೆಫಾಲಿ ಅವರ ಹೆಗಲ ಮೇಲಿತ್ತು. ಶೆಫಾಲಿ ವರ್ಮಾ ಆರಂಭದಿಂದಲೇ ಬಾಂಗ್ಲಾದೇಶದ ಬೌಲರ್‌ಗಳ ಮೇಲೆ ಒತ್ತಡ ಹೇರಲು ಪ್ರಾರಂಭಿಸಿದರು. ಕೇವಲ 40 ಎಸೆತಗಳಲ್ಲಿ 64 ರನ್‌ಗಳ ಅಬ್ಬರದ ಇನ್ನಿಂಗ್ಸ್ ಆಡಿದರು. ಪರಿಣಾಮ ಭಾರತ ಸ್ಫರ್ಧಾತ್ಮಕ ರನ್ ಕಲೆಹಾಕಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ED ದಾಳಿ ಅಂತ್ಯ: 3 ಕೋಟಿ ರೂ ನಗದು, ಅಪಾರ ಪ್ರಮಾಣದ ಚಿನ್ನ, ಬೆಳ್ಳಿ ಪತ್ತೆ; ಆ ಹಣ ನಮ್ಮದೇ ಎಂದ ಸತೀಶ್ ಜಾರಕಿಹೊಳಿ

'ವಂದೇ ಮಾತರಂ' ಕಾನೂನಾಗಿದೆ; ತಾಕತ್ತಿದ್ದರೆ ಅಧಿಕಾರಕ್ಕೆ ಬಂದು ಬದಲಾಯಿಸಿ, ನನ್ನ ಅಭ್ಯಂತರವಿಲ್ಲ: ಕಾಂಗ್ರೆಸ್‌ಗೆ ಒಮರ್ ಅಬ್ದುಲ್ಲಾ ತಿರುಗೇಟು!

ಹಿಂಸೆ ಫ್ಯಾಷನ್ ಆಗಿಬಿಟ್ಟಿದೆ: ಮಣಿಪುರಿ ಸಂಗೀತಗಾರನ ಹತ್ಯೆಗೆ ನ್ಯಾಯ ಒದಗಿಸುವುದಾಗಿ ರಾಹುಲ್ ಗಾಂಧಿ ಪ್ರತಿಜ್ಞೆ! Video

ಇದನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ: ಕಿರಿಯ CJP ಕಾರ್ಯಕರ್ತೆಗೆ ಕಿರುಕುಳ, ಬೆದರಿಕೆ ಹಾಕಿದ್ದಕ್ಕೆ ಸುಪ್ರೀಂ ಕೋರ್ಟ್ ಗರಂ!

"ಈ ತಪ್ಪು ನೀವು ಮಾಡಬೇಡಿ": ಪತ್ನಿ ತಲೆಕಡಿದು ಫ್ರಿಡ್ಜ್​ನಲ್ಲಿಟ್ಟ ಪಾಪಿ ಪತಿ ಹೇಳಿದ ಬುದ್ಧಿ ಮಾತುಗಳಿವು!