ಲಂಡನ್: ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ರೇಸ್ ನಿಂದ ಪಾಕಿಸ್ತಾನ ಕ್ರಿಕೆಟ್ ತಂಡ ಹೊರಬಿದ್ದಿದ್ದು, ಆ ಮೂಲಕ 2025-27ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ರೇಸ್ ನಿಂದ ಹೊರಬಿದ್ದ ಮೊದಲ ತಂಡ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.
ಹೌದು.. ಇಂಗ್ಲೆಂಡ್ ಪ್ರವಾಸದಲ್ಲಿರುವ ಪಾಕಿಸ್ತಾನ ತಂಡ ಹೀನಾಯ ಪ್ರದರ್ಶನ ತೋರಿ ಇದೀಗ ICC ಟೆಸ್ಟ್ ಚಾಂಪಿಯನ್ ಷಿಪ್ ರೇಸ್ ನಿಂದಲೇ ಹೊರಬಿದ್ದಿದೆ.
ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಪಾಕಿಸ್ತಾನ ತಂಡ ಹೀನಾಯ ಸೋಲನುಭವಿಸಿತ್ತು. ಇದೀಗ ಮೂರನೇ ಮ್ಯಾಚ್ನಲ್ಲೂ ಮುಗ್ಗರಿಸಿದೆ.
ಈ ಸತತ ಮೂರು ಸೋಲುಗಳೊಂದಿಗೆ ಪಾಕ್ ಪಡೆಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಕನಸು ಭಗ್ನಗೊಂಡಿದೆ.
ಕೇವಲ 9 ಪಂದ್ಯಗಳಲ್ಲೇ ಮುಗ್ಗರಿಸಿದ ಪಾಕಿಸ್ತಾನ
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪುವ ಪಾಕಿಸ್ತಾನ ಕ್ರಿಕೆಟ್ ತಂಡದ ಕನಸು ನುಚ್ಚುನೂರಾಗಿದೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅನುಭವಿಸಿದ 3-0 ಅಂತರದ ಹೀನಾಯ ಸೋಲಿನೊಂದಿಗೆ ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ್ ತಂಡ, ಲಂಡನ್‌ನ ದಿ ಓವಲ್‌ನಲ್ಲಿ ನಡೆಯಲಿರುವ ಮಹತ್ವದ ಫೈನಲ್ ರೇಸ್‌ನಿಂದ ಹೊರಬಿದ್ದ ಮೊದಲ ತಂಡ ಎನಿಸಿಕೊಂಡಿದೆ.
ಪಾಕಿಸ್ತಾನ ಐಸಿಸಿ ಟೆಸ್ಟ್ ಚಾಂಪಿಯನ್ ಷಿಪ್ ನಲ್ಲಿ ಈ ವರೆಗೂ ಒಟ್ಟು 9 ಪಂದ್ಯಗಳನ್ನು ಆಡಿದ್ದು ಈ ಪೈಕಿ 2 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿ 7 ಪಂದ್ಯಗಳಲ್ಲಿ ಸೋಲು ಕಂಡಿದೆ. ಪಾಕಿಸ್ತಾನದ ಶೇಕಡಾವಾರು ಜಯದ ಪ್ರಮಾಣ 14.81ರಷ್ಟಿದೆ.
ಹೀಗಾಗಿ ಪಾಕಿಸ್ತಾನ ಕೊನೆಯ ಸ್ಥಾನಕ್ಕೆ ಕುಸಿದು ಚಾಂಪಿಯನ್ ಷಿಪ್ ರೇಸಿನಿಂದಲೇ ಹೊರಬಿದ್ದಿದೆ. ಮುಂಬರುವ ಎಲ್ಲಾ ಪಂದ್ಯಗಳನ್ನು ಪಾಕಿಸ್ತಾನ ಗೆದ್ದರೂ ಸಹ ಅಗ್ರ ಎರಡು ಸ್ಥಾನಕ್ಕೇರಲು ಅಗತ್ಯವಿರುವ ಕನಿಷ್ಠ ಸರಾಸರಿಯನ್ನು ತಲುಪಲು ಪಾಕಿಸ್ತಾನ್ ತಂಡಕ್ಕೆ ಸಾಧ್ಯವಿಲ್ಲ.
ಲಾರ್ಡ್ಸ್ ಟೆಸ್ಟ್ ಸೋಲಿನ ಆಘಾತ!
ಪಾಕಿಸ್ತಾನ್ ತಂಡವು ಎಡ್ಜ್ಬಾಸ್ಟನ್ ಮೈದಾನದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ 8 ವಿಕೆಟ್ಗಳಿಂದ ಸೋಲೊಪ್ಪಿಕೊಂಡಿತು. ಇದರೊಂದಿಗೆ 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಇಂಗ್ಲೆಂಡ್ 3-0 ಅಂತರದಿಂದ ವಶಪಡಿಸಿಕೊಂಡಿದೆ. ಈ ಸರಣಿ ಸೋಲಿನೊಂದಿಗೆ ಪಾಕಿಸ್ತಾನ ತಂಡ ಅಧಿಕೃತವಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ರೇಸ್‌ನಿಂದ ಹೊರಬಿದ್ದಂತಾಗಿದೆ.