ಜಾಸ್ ಬಟ್ಲರ್ 
ಕ್ರಿಕೆಟ್

T20 ಕ್ರಿಕೆಟ್‌ನಲ್ಲಿ ಹೊಸ ವಿಶ್ವ ದಾಖಲೆ; 15,000 ರನ್‌ ಗಡಿ ದಾಟಿದ Jos Buttler; ಪೊಲಾರ್ಡ್ ದಾಖಲೆ ಧ್ವಂಸ!

ಬಟ್ಲರ್‌ 528 ಪಂದ್ಯಗಳಲ್ಲಿ 15,000 ರನ್‌ ಗಳಿಸಿದ್ದು, 35.46ರ ಬ್ಯಾಟಿಂಗ್‌ ಸರಾಸರಿ ಮತ್ತು 147.46ರ ಸ್ಟ್ರೈಕ್‌ರೇಟ್‌ ಹೊಂದಿದ್ದಾರೆ.

ಲಂಡನ್‌: T20 ಕ್ರಿಕೆಟ್‌ನಲ್ಲಿ ಇಂಗ್ಲೆಂಡ್‌ನ ವಿಕೆಟ್‌ಕೀಪರ್‌-ಬ್ಯಾಟರ್‌ ಜೋಸ್ ಬಟ್ಲರ್‌ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದು, T20 ಕ್ರಿಕೆಟ್‌ನಲ್ಲಿ 15,000 ರನ್‌ಗಳ ಗಡಿ ತಲುಪಿದ ವಿಶ್ವದ ಮೊದಲ ಬ್ಯಾಟರ್‌ ಎಂಬ ಹೆಗ್ಗಳಿಕೆಗೆ ಬಟ್ಲರ್ ಪಾತ್ರರಾಗಿದ್ದಾರೆ.

ಶ್ರೀಲಂಕಾ ವಿರುದ್ಧದ ಎರಡನೇ T20 ಪಂದ್ಯದಲ್ಲಿ ಈ ಐತಿಹಾಸಿಕ ಸಾಧನೆಯನ್ನು ಬಟ್ಲರ್‌ ಮಾಡಿದ್ದು, ಈ ಮೂಲಕ ವೆಸ್ಟ್‌ ಇಂಡೀಸ್‌ನ ದಿಗ್ಗಜ ಕೀರನ್‌ ಪೊಲಾರ್ಡ್‌ ಅವರನ್ನು ಹಿಂದಿಕ್ಕಿ, T20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟರ್‌ ಎಂಬ ದಾಖಲೆಗೂ ಬಟ್ಲರ್‌ ಪಾತ್ರರಾಗಿದ್ದಾರೆ.

ಬಟ್ಲರ್‌ 528 ಪಂದ್ಯಗಳಲ್ಲಿ 15,000 ರನ್‌ ಗಳಿಸಿದ್ದು, 35.46ರ ಬ್ಯಾಟಿಂಗ್‌ ಸರಾಸರಿ ಮತ್ತು 147.46ರ ಸ್ಟ್ರೈಕ್‌ರೇಟ್‌ ಹೊಂದಿದ್ದಾರೆ. ಪ್ರಸ್ತುತ ಅವರ ಟಿ20 ಖಾತೆಯಲ್ಲಿ 9 ಶತಕಗಳು ಹಾಗೂ 107 ಅರ್ಧಶತಕಗಳಿವೆ.

ಶ್ರೀಲಂಕಾ ವಿರುದ್ಧದ ಪಂದ್ಯದ ಇಂಗ್ಲೆಂಡ್‌ ಚೇಸ್‌ನ ಐದನೇ ಓವರ್‌ನಲ್ಲಿ ಈಶಾನ್‌ ಮಲಿಂಗಾ ಬೌಲಿಂಗ್‌ನಲ್ಲಿ ಸಿಂಗಲ್‌ ರನ್‌ ಗಳಿಸುವ ಮೂಲಕ ಬಟ್ಲರ್‌ 15 ಸಾವಿರ ರನ್‌ಗಳ ಮೈಲುಗಲ್ಲು ತಲುಪಿದರು. ಇದಕ್ಕೂ ಮುನ್ನ ಈ ದಾಖಲೆ ವೆಸ್ಟ್ ಇಂಡೀಸ್ ದೈತ್ಯ ಕೀರನ್‌ ಪೊಲಾರ್ಡ್‌ ಹೆಸರಿನಲ್ಲಿತ್ತು. ಪೊಲಾರ್ಡ್‌ 754 ಪಂದ್ಯಗಳಲ್ಲಿ 31.71ರ ಸರಾಸರಿಯಲ್ಲಿ 14,999 T20 ರನ್‌ ಗಳಿಸಿದ್ದಾರೆ.

ಬಟ್ಲರ್ ಟಿ20 ಇತಿಹಾಸ

ಬಟ್ಲರ್‌ ಇಂಗ್ಲೆಂಡ್‌ ಮಾತ್ರವಲ್ಲದೆ ಲ್ಯಾಂಕಶೈರ್‌, ಮ್ಯಾಂಚೆಸ್ಟರ್‌ ಒರಿಜಿನಲ್ಸ್‌, ಮ್ಯಾಂಚೆಸ್ಟರ್‌ ಸೂಪರ್‌ ಜೈಂಟ್ಸ್‌, ಗುಜರಾತ್‌ ಟೈಟಾನ್ಸ್‌, ಸೋಮರ್‌ಸೆಟ್‌, ಪಾರ್ಲ್‌ ರಾಯಲ್ಸ್‌, ಮುಂಬೈ ಇಂಡಿಯನ್ಸ್‌, ಸಿಡ್ನಿ ಥಂಡರ್‌, ಕೊಮಿಲ್ಲಾ ವಿಕ್ಟೋರಿಯನ್ಸ್‌, ಡರ್ಬನ್‌ ಸೂಪರ್‌ ಜೈಂಟ್ಸ್‌, ಮೆಲ್ಬೋರ್ನ್‌ ರೆನೆಗೇಡ್ಸ್‌ ಹಾಗೂ ಇಂಗ್ಲೆಂಡ್‌ ಲಯನ್ಸ್‌ ತಂಡಗಳ ಪರ ಆಡಿದ್ದಾರೆ.

ಶ್ರೀಲಂಕಾ ವಿರುದ್ಧ 2-0 ಮುನ್ನಡೆ

ಇನ್ನು ಇದೇ ಪಂದ್ಯದಲ್ಲಿ ಇಂಗ್ಲೆಂಡ್‌ ಶ್ರೀಲಂಕಾವನ್ನು 6 ವಿಕೆಟ್‌ಗಳಿಂದ ಮಣಿಸಿ ಮೂರು ಪಂದ್ಯಗಳ T20 ಸರಣಿಯಲ್ಲಿ 2-0 ಅಂತರದ ಮುನ್ನಡೆ ಸಾಧಿಸಿತು. ಮೊದಲು ಬ್ಯಾಟಿಂಗ್‌ ಮಾಡಿದ ಶ್ರೀಲಂಕಾ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 145 ರನ್‌ ಗಳಿಸಿತು. ಈ ಗುರಿಯನ್ನು ಇಂಗ್ಲೆಂಡ್‌ ಕೇವಲ 12.1 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 146 ರನ್‌ ಗಳಿಸುವ ಮೂಲಕ ಬೆನ್ನಟ್ಟಿತು.

ಈ ಗೆಲುವಿನೊಂದಿಗೆ T20 ಪಂದ್ಯಗಳಲ್ಲಿ ಶ್ರೀಲಂಕಾ ವಿರುದ್ಧ ಇಂಗ್ಲೆಂಡ್‌ನ ಸತತ ಗೆಲುವಿನ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಮೂರು ವಿಕೆಟ್‌ಗಳ ಪಡೆಯುವ ಮೂಲಕ ಮ್ಯಾಥ್ಯೂ ಡಾಸನ್‌ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಮೂರು ಪಂದ್ಯಗಳ ಸರಣಿಯ ಮೂರನೇ ಹಾಗೂ ಅಂತಿಮ T20 ಪಂದ್ಯ ಶನಿವಾರ ಮ್ಯಾಂಚೆಸ್ಟರ್‌ನ ಓಲ್ಡ್‌ ಟ್ರಾಫರ್ಡ್‌ನಲ್ಲಿ ನಡೆಯಲಿದೆ. ಈಗಾಗಲೇ ಇಂಗ್ಲೆಂಡ್‌ 2-0 ಅಂತರದಲ್ಲಿ ಸರಣಿ ಗೆದ್ದುಕೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೀದಿ ಜೊತೆಗೆ ಕಾಂಗ್ರೆಸ್ ಗೂ ಶಾಕ್; TMC ಬೆಂಬಲ ಬೆನ್ನಲ್ಲೇ ನಂದಿಗ್ರಾಮ 'ಕೈ' ಅಭ್ಯರ್ಥಿ ಕೊಲೆ ಕೇಸ್`ನಲ್ಲಿ ಅರೆಸ್ಟ್!

ಸಾಕ್ಷ್ಯ ವಿಚಾರಣೆ ವೇಳೆ ದರ್ಶನ್ ಖುದ್ದು ಹಾಜರಾಗಲು ಹೈಕೋರ್ಟ್ ಒಪ್ಪಿಗೆ, ಷರತ್ತು ಅನ್ವಯ!

ChatGPT ತಂದ ಸಾವು: "ಏನಾಗಲ್ಲ, ಈ ಮಿಶ್ರಣ ಸೇವಿಸು" ಎಂದಿದ್ದ OpenAI; ಮಾತು ನಂಬಿದ 19 ವರ್ಷದ ಯುವಕ ಸಾವು; ತಾಯಿಯ ರೋಧನೆ!

Friendship Cup ಜೊತೆಗೇ ಆಫ್ಘನ್ ಅಭಿಮಾನಿಗಳ ಮನ ಗೆದ್ದ ಟೀಂ ಇಂಡಿಯಾ; Sarpanch Saab ಮಾಡಿದ್ದೇನು?

‘ಪ್ರಜಾಪ್ರಭುತ್ವದ ಕರಾಳ ದಿನ, ತಲೆ ಬಾಗಲ್ಲ, ಯಾರಿಗೂ ಶರಣಾಗಲ್ಲ': ಮಮತಾ ಬ್ಯಾನರ್ಜಿ ಕೆಂಡಾಮಂಡಲ