ಕ್ರಿಕೆಟ್

60 ಎಸೆತ, 62 ರನ್; ಜಪಾನ್ ವಿರುದ್ಧ ಭಾರತಕ್ಕೆ 2 ರನ್ ರೋಚಕ ಜಯ

ಜಪಾನ್ ನ ಸಾನೋ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯ ಮಳೆ ಮತ್ತು ತೇವಾಂಶಭರಿತ ಔಟ್ ಫೀಲ್ಡ್ ನಿಂದಾಗಿ ಕೇವಲ 5 ಓವರ್ ಗಳಿಗೆ ಸೀಮಿತವಾಯಿತು.

ಕಾಂಟೋ: ಜಪಾನ್ ವಿರುದ್ಧ ಏಕೈಕ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತ ತಂಡ 2 ರನ್ ಗಳ ರೋಚಕ ಜಯ ಸಾಧಿಸಿದೆ.

ಜಪಾನ್ ನ ಸಾನೋ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯ ಮಳೆ ಮತ್ತು ತೇವಾಂಶಭರಿತ ಔಟ್ ಫೀಲ್ಡ್ ನಿಂದಾಗಿ ಕೇವಲ 5 ಓವರ್ ಗಳಿಗೆ ಸೀಮಿತವಾಯಿತು.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗಧಿತ 5 ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 32 ರನ್ ಕಲೆಹಾಕಿತು. ಭಾರತದ ಪರ ಸಂಜು ಸ್ಯಾಮ್ಸನ್ 9, ಇಶಾನ್ ಕಿಶನ್ 3, ನಾಯಕ ಶ್ರೇಯಸ್ ಅಯ್ಯರ್ 16 ಮತ್ತು ತಿಲಕ್ ವರ್ಮಾ ಅಜೇಯ 1 ರನ್ ಗಳಿಸಿದರು. ಈ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಶೂನ್ಯ ಸುತ್ತಿ ನಿರಾಶೆ ಮೂಡಿಸಿದರು.

ಇನ್ನು ಭಾರತ ನೀಡಿದ 33 ರನ್ ಗಳ ಸಾಧಾರಣ ಗುರಿ ಬೆನ್ನು ಹತ್ತಿದ ಜಪಾನ್, 5 ಓವರ್ ನಲ್ಲಿ 3 ವಿಕೆಟ್ ನಷ್ಟಕ್ಕೆ 30 ರನ್ ಗಳಿಸಲು ಮಾತ್ರ ಶಕ್ತವಾಯಿತು. ಆ ಮೂಲಕ ಕೇವಲ 2ರನ್ ಅಂತರದಲ್ಲಿ ವಿರೋಚಿತ ಸೋಲು ಕಂಡಿತು.

ಜಪಾನ್ ಪರ ನಾಯಕ ಫ್ಲೆಮಿಂಗ್ 12 ರನ್ ಗಳಿಸಿದರೆ, ಲೇಕ್ 1, ಇಬ್ರಾಹಿಂ ಟಕಹಸಿ 4, ಡೇವಿಸ್ ಅಜೇಯ 9 ಮತ್ತು ಪಟ್ಮೋರ್ ಅಜೇಯ 2 ರನ್ ಗಳಿಸಿದರು.

21 ಎಸೆತಗಳಲ್ಲಿ 16 ರನ್ ಗಳಿಸಿದ ಭಾರತ ತಂಡದ ನಾಯಕ ಶ್ರೇಯಸ್ ಅಯ್ಯರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026: Cricket Finalನಲ್ಲಿ ಶ್ರೀಲಂಕಾ ಮಣಿಸಿ ಇತಿಹಾಸ ಬರೆದ ಭಾರತ ಮಹಿಳಾ ತಂಡ, ಚಿನ್ನದ ಬೇಟೆ!

ಇದೊಂದು ಕೆಲಸ ಮಾಡಿದ್ರೆ, ಮುಂದಿನ ಸಾಂಕ್ರಾಮಿಕದಲ್ಲಿ 27 ಲಕ್ಷಕ್ಕೂ ಅಧಿಕ ಜನರ ಜೀವ ಉಳಿಸಬಹುದು: ಅಧ್ಯಯನ

ಕರ್ನಾಟಕದ 4 ನಾಲ್ಕು MLC ಸ್ಥಾನಗಳಿಗೆ ಚುನಾವಣೆ ಘೋಷಣೆ; ನಾಲ್ಕು ರಾಜ್ಯಗಳ 28 ಪರಿಷತ್ ಚುನಾವಣೆಗೆ ಮುಹೂರ್ತ ಫಿಕ್ಸ್ ಮಾಡಿದ ಆಯೋಗ

ಜಾಗತಿಕ ವ್ಯವಸ್ಥೆ ಒತ್ತಡದಲ್ಲಿದೆ, ಬಹುಪಕ್ಷೀಯತೆಗೆ ಸುಧಾರಣೆ ಅಗತ್ಯ: ವಿಶ್ವಸಂಸ್ಥೆಯಲ್ಲಿ ಜೈಶಂಕರ್ ಕರೆ

ಜೀವ ಪಣಕ್ಕಿಟ್ಟು 3 ಕಿ.ಮೀ ಬೆನ್ನಟ್ಟಿ ಆನೆಮರಿ ರಕ್ಷಿಸಿದ ಮೀನುಗಾರರು, ಕೊನೆಗೂ ತಾಯಿ ಮಡಿಲು ಸೇರಿದ ಪುಟ್ಟ ಕಂದ! Video