ಸೃಷ್ಟಿ ಗ್ಲೋಬಲ್ ಸಂಸ್ಥೆಯ ಮುಖ್ಯಸ್ಥ ಗುರುಮೂರ್ತಿ (ಸಂಗ್ರಹ ಚಿತ್ರ) 
ಜಿಲ್ಲಾ ಸುದ್ದಿ

ಸೃಷ್ಟಿಕರ್ತನ ವಿರುದ್ಧ ದೂರುದಾರನೇ ಕಾಣೆ

ಸೃಷ್ಟಿ ಗ್ಲೋಬಲ್ ಸಂಸ್ಥೆಯ ಮುಖ್ಯಸ್ಥ ಗುರುಮೂರ್ತಿ ವಿರುದ್ಧ ವಂಚನೆ ಆರೋಪದಡಿ ದೂರು ನೀಡಿದ್ದ ಡಾನ್ ಬಾಸ್ಕೋ ಅವರು ಡಿಸೆಂಬರ್ 1ರಿಂದ ನಾಪತ್ತೆಯಾಗಿದ್ದಾರೆ.

ಬೆಂಗಳೂರು: ಸೃಷ್ಟಿ ಗ್ಲೋಬಲ್ ಸಂಸ್ಥೆಯ ಮುಖ್ಯಸ್ಥ ಗುರುಮೂರ್ತಿ ವಿರುದ್ಧ ವಂಚನೆ ಆರೋಪದಡಿ ದೂರು ನೀಡಿದ್ದ ಚಂದ್ರ ಲೇಔಟ್ ನಿವಾಸಿ ಡಾನ್ ಬಾಸ್ಕೋ ಅವರು ಡಿಸೆಂಬರ್ 1ರಿಂದ ನಾಪತ್ತೆಯಾಗಿದ್ದಾರೆ.

ಗುರುಮೂರ್ತಿ ವಿರುದ್ಧ ನೀಡಿರುವ ದೂರನ್ನು ಹಿಂಪಡೆಯುವಂತೆ ಡಾನ್ ಅವರಿಗೆ ಕಳೆದ ಕೆಲ ತಿಂಗಳಿಂದ ಬೆದರಿಕೆ ಕರೆಗಳು ಬರುತ್ತಿದ್ದವು. ಹಾಗಾಗಿ ಆ ಸಂಸ್ಥೆ ಕಡೆಯವರೇ ಅವರನ್ನು ಅಪಹರಿಸಿರಬಹುದು ಎಂದು ಆರೋಪಿಸಿ ರಾಜ್ಯ ಪುರುಷ ಸಂಘದ ಅಧ್ಯಕ್ಷ ಬಿ.ಎಸ್.ಗೌಡ ಅವರು ಮಲ್ಲೇಶ್ವರದ ಮಂತ್ರಿ ಮಹಲ್‌ನಲ್ಲಿರುವ ಆನ್‌ಲೈನ್ ದೂರು ದಾಖಲು ಕೇಂದ್ರದಲ್ಲಿ ದೂರು ದಾಖಲಿಸಿದ್ದಾರೆ.

ಈ ಬಗ್ಗೆ ದೂರು ದಾಖಲಿಸಲು ಸಂಘದ ಸದಸ್ಯರು ಉಪ್ಪಾರಪೇಟೆ, ಚಿಕ್ಕಪೇಟೆ, ನಂದಿನಿಲೇಔಟ್, ಚಂದ್ರಲೇಔಟ್ ಠಾಣೆಗಳಿಗೆ ಅಲೆದರೂ ಪ್ರಯೋಜನವಾಗದ ಕಾರಣ ಆನ್‌ಲೈನ್‌ನಲ್ಲಿ ದೂರು ದಾಖಲಿಸಿದ್ದಾಗಿ ದೂರುದಾರರು ತಿಳಿಸಿದ್ದಾರೆ. ಡಾನ್ ಅವರು ಸಂಘದ ಸದಸ್ಯರಾಗಿದ್ದು, ಅವರಿಗೆ ಸಾಕಷ್ಟು ಬೆದರಿಕೆ ಕರೆಗಳು ಬರುತ್ತಿದ್ದವು. ಈ ಬಗ್ಗೆ ಸಂಘಕ್ಕೆ ತಿಳಿಸಿದ್ದರು. ನವೆಂಬರ್ 30ರಂದು ಸಹ ಸಂಘದ ಕಚೇರಿಗೆ ಭೇಟಿ ನೀಡಿದ್ದರು. 1ನೇ ತಾರೀಖಿನಿಂದ ಅವರು ನಾಪತ್ತೆಯಾಗಿದ್ದು, ಪೊಲೀಸರು ತಮ್ಮನ್ನು ಕರೆಸಿ ಡಾನ್ ಬಗ್ಗೆ ಮಾಹಿತಿ ಪಡೆದಿದ್ದಾರೆ. ಅವರ ಫೋಟೋ ನೀಡುವಂತೆ ತಿಳಿಸಿದ್ದಾರೆ ಎಂದು ಗೌಡ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕಾ ಫೈಟರ್ ಜೆಟ್ ಹೊಡೆದುರುಳಿಸಿದ ಇರಾನ್: ನಾವು ಯುದ್ಧದಲ್ಲಿದ್ದೇವೆ; ಟ್ರಂಪ್ ಮಾರ್ಮಿಕ ನುಡಿ, ಸಂಘರ್ಷ ಮತ್ತಷ್ಟು ಉದ್ನಿಗ್ನ ಸಾಧ್ಯತೆ

'ಸಿಎಂ ಸಿದ್ದರಾಮಯ್ಯ ತಮ್ಮ ಮಗನನ್ನು ವಸೂಲಿ ಮಾಡಲು ರಾಜಕೀಯಕ್ಕೆ ಕರೆತಂದಿದ್ದಾರೆ': ಹೆಚ್ ಡಿ ಕುಮಾರಸ್ವಾಮಿ

ಮಹಾರಾಷ್ಟ್ರ: ನಾಸಿಕ್ ಬಳಿ ಬಾವಿಗೆ ಬಿದ್ದ ಕಾರು; ಒಂದೇ ಕುಟುಂಬದ 9 ಮಂದಿ ಸಾವು-Video

ಗಡಿ ನುಗ್ಗಿ RSS ಶಿಬಿರ-ಮನೆಗಳ ಮೇಲೆ ನೇರ ದಾಳಿ: ಮತ್ತೆ ಬಾಲ ಬಿಚ್ಚಿದ ಪಾಕ್‌; ಭಾರತಕ್ಕೆ ಗೊಡ್ಡು ಬೆದರಿಕೆ

ಅತ್ತೆ ಮನೆ ಕಿರುಕುಳ: ಬೇಸತ್ತು ಬೆಂಕಿ ಹಚ್ಚಿಕೊಂಡು ಗರ್ಭಿಣಿ ಮಹಿಳೆ ಆತ್ಮಹತ್ಯೆ, ನಾಲ್ವರ ಬಂಧನ

SCROLL FOR NEXT