ಚನ್ನಗಿರಿ(ದಾವಣಗೆರೆ): ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸವೊಂದು ಕೆರೆಗೆ ಉರುಳಿ ಬಿದ್ದ ಪರಿಣಾಮ ಸಾವಿನ ಸಂಖ್ಯೆ ಮೂರಕ್ಕೆ ಏರಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕೆರೆಬಿಳಚಿ ಗ್ರಾಮದ ಸೂಳೆಕೆರೆಗೆ ಖಾಸಗಿ ಬಸ್ ಉರುಳಿ ಬಿದ್ದಿದೆ. ಪರಿಣಾಮ ಬಸ್‌ನಲ್ಲಿದ್ದ ಮೂವರು ಸಾವನ್ನಪ್ಪಿದ್ದಾರೆ. ಮೃತರನ್ನು ಚನ್ನಗಿರಿಯ ಮೂಲದ 30 ವರ್ಷದ ಸವಿತಾ, 55 ವರ್ಷದ ಹರಪ್ಪನಹಳ್ಳಿಯ ಮಹದೇವಪ್ಪ ಎಂದು ಗುರುತಿಸಲಾಗಿದ್ದು, ಆತನ ಗುರುತು ಪತ್ತೆಯಾಗಿಲ್ಲ.
ಸುಮಾರು 40 ಮಂದಿಯನ್ನು ಹೊತ್ತು ಸಾಗುತ್ತಿದ್ದ ಬಸ್ ಸೂಳೆಕೆರೆಗೆ ಬೀಳುತ್ತಿದ್ದಂತೆ ಸ್ಥಳೀಯರು ಹಾಗೂ ಮೀನುಗಾರರು ಬಸ್‌ನಲ್ಲಿದ್ದ ಪ್ರಮಾಣಿಕರನ್ನು ರಕ್ಷಿಸುವಲ್ಲಿ ಯಶ್ವಸಿಯಾಗಿದ್ದಾರೆ. ಇದೀಗ ಕೆರೆಯಲ್ಲಿ ಬಸ್ ಸಂಪೂರ್ಣವಾಗಿ ಮುಳುಗಿದ್ದು, ಕ್ರೌನ್ ಬಳಸಿ ಬಸ್ ಮೇಲಕ್ಕೇತ್ತಲು ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ. ಸದ್ಯ ಘಟನಾ ಸ್ಥಳದಲ್ಲಿ ಅಗ್ನಿಶಾಮಕ ಸಿಬ್ಬಂದಿಗಳು ಪ್ರಯಾಣಿಕರಿಗಾಗಿ ಶೋಧಕಾರ್ಯ ಮುಂದುವರೆಸಿದ್ದಾರೆ.
ಬಸ್‌ನಲ್ಲಿ ಸಿಲುಕಿರುವವರನ್ನು ಮೇಲೆತ್ತುವ ಕಾರ್ಯ ಭರದಿಂದ ಸಾಗಿದೆ. ಮೃತಪಟ್ಟಿರುವ ಇಬ್ಬರು ದಾವಣಿಗೆರೆ ಮೂಲದವರು ಎಂದು ಡಿವೈಎಸ್‌ಪಿ ನ್ಯಾಮೇಗೌಡ ಅವರು ತಿಳಿಸಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದರು.
ಮೃತರ ಕುಟುಂಬಕ್ಕೆ ತಲಾ 1 ಲಕ್ಷ ರು. ಪರಿಹಾರ
ಮೃತ ಕುಟುಂಬಕ್ಕೆ ತಲಾ 1 ಲಕ್ಷ ರುಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ ಎಂದು ಚನ್ನಗಿರ ಶಾಸಕ ವಡ್ನಾಲ್ ರಾಜಪ್ಪ ಹೇಳಿದ್ದಾರೆ. ಪರಿಹಾರ ಘೋಷಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಪ್ಪಿಗೆ ನೀಡಿದ್ದಾರೆ ಎಂದರು.