ಪೊಲೀಸರ ಅತಿಥಿಯಾಗಿರುವ ಶಂಕಿತ ಉಗ್ರ ಮೆಹ್ದಿ ಮಸ್ರೂರ್ ಬಿಸ್ವಾಸ್ (ಸಂಗ್ರಹ ಚಿತ್ರ) 
ಜಿಲ್ಲಾ ಸುದ್ದಿ

ನಾನೊಬ್ಬ ಯೋಧ, ನನ್ನ ಕೃತ್ಯದ ಬಗ್ಗೆ ವಿಷಾದವಿಲ್ಲ: ಮೆಹ್ದಿ

ನಾನೊಬ್ಬ ಯೋಧನಾಗಿದ್ದು, ನಾನು ಮಾಡಿದ ಕೆಲಸದ ಕುರಿತು ನನಗಾವುದೇ ವಿಷಾದವಿಲ್ಲ ಎಂದು ಬಂಧಿತ ಶಂಕಿತ ಉಗ್ರ ಮೆಹ್ದಿ ಮಸ್ರೂರ್ ಬಿಸ್ವಾಸ್ ಹೇಳಿದ್ದಾನೆ.

ಬೆಂಗಳೂರು: ನಾನೊಬ್ಬ ಯೋಧನಾಗಿದ್ದು, ನಾನು ಮಾಡಿದ ಕೆಲಸದ ಕುರಿತು ನನಗಾವುದೇ ವಿಷಾದವಿಲ್ಲ ಎಂದು ಬಂಧಿತ ಶಂಕಿತ ಉಗ್ರ ಮೆಹ್ದಿ ಮಸ್ರೂರ್ ಬಿಸ್ವಾಸ್ ಹೇಳಿದ್ದಾನೆ.

ಇಸಿಸ್ ಉಗ್ರ ಸಂಘಟನೆಯನ್ನು ಬೆಂಬಲಿಸುತ್ತಾ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಪ್ರಚೋದನಾತ್ಮಕ ಸಂದೇಶಗಳನ್ನು ಬರೆದು, ಪ್ರಸ್ತುತ ಪೊಲೀಸರ ಅತಿಥಿಯಾಗಿರುವ ಮೆಹ್ದಿ ನ್ಯಾಯಾಲಯದ ಆವರಣದಲ್ಲಿ ಇಂತಹ ಉದ್ಧಟತನದ ಹೇಳಿಕೆ ನೀಡಿದ್ದಾನೆ. ಕಳೆದ ಶನಿವಾರದಿಂದ ಪೊಲೀಸರ ವಶದಲ್ಲಿರುವ ಮೆಹ್ದಿಯ ಬಂಧನದ ಅವಧಿ ನಿನ್ನೆಗೆ ಮುಕ್ತಾಯವಾದ ಹಿನ್ನಲೆಯಲ್ಲಿ ಆತನನ್ನು ಸಿವಿಲ್ ಕೋರ್ಟ್ ನ್ಯಾಯಾಲಯಗಳ ಸಂಕೀರ್ಣದ ಕೋರ್ಟ್ ಹಾಲ್ 49ರಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು.

ನ್ಯಾಯಾಧೀಶರಾದ ಸೋಮರಾಜು ಅವರು ಮೆಹ್ದಿಯನ್ನು ವಿಚಾರಣೆಗೊಳಪಡಿಸಿ ಮತ್ತೆ 15 ದಿನಗಳ ಕಾಲ ಆತನನ್ನು ಸಿಸಿಬಿ ಪೊಲೀಸರ ವಶಕ್ಕೆ ನೀಡಿದರು. ವಿಚಾರಣೆ ಬಳಿಕ ನ್ಯಾಯಾಲಯದಿಂದ ಹೊರಗೆ ಬರುವ ವೇಳೆ ವಕೀಲರೊಬ್ಬರು ಮೆಹ್ದಿಯನ್ನು ಏತಕ್ಕಾಗಿ ಇದನ್ನೆಲ್ಲ ಮಾಡಿದೆ? ಎಂದು ಕೇಳಿದಾಗ, ಅದಕ್ಕೆ ಉತ್ತರಿಸಿದ ಮೆಹ್ದಿ 'ನಾನೊಬ್ಬ ಯೋಧನಾಗಿದ್ದು, ನಾನು ಮಾಡಿದ ಕೆಲಸಕ್ಕಾಗಿ ನನ್ನಲ್ಲಿ ಯಾವುದೇ ವಿಷಾದವಿಲ್ಲ' ಎಂದು ಹೇಳಿದ್ದಾನೆ. ನ್ಯಾಯಾಲಯದ ವಿಚಾರಣೆ ವೇಳೆ ಮೆಹ್ದಿ ಪೋಷಕರು ಕೂಡ ಹಾಜರಿದ್ದರು.

24 ವರ್ಷದ ಮೆಹ್ದಿ ಮಸ್ರೂರ್ ಬಿಸ್ವಾಸ್ ಮೂಲತಃ ಪಶ್ಚಿಮ ಬಂಗಾಳದ ಮೂಲದವನಾಗಿದ್ದು, ಬೆಂಗಳೂರಿನಲ್ಲಿ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದನು. ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ 'ಶಮಿ ವಿಟ್ನೆಸ್‌' ಎಂಬ ಖಾತೆಯನ್ನು ತೆರೆದಿದ್ದ ಮೆಹ್ದಿ, ಇಸಿಸ್ ಉಗ್ರಗಾಮಿ ಸಂಘಟನೆಯನ್ನು ಬೆಂಬಲಿಸಿ ಬರೆಯುತ್ತಿದ್ದನು. ಅಲ್ಲದೆ ಹಲವು ಪ್ರಚೋದನಾತ್ಮಕ ಸಂದೇಶಗಳು ಮತ್ತು ಇರಾಕ್‌ನಲ್ಲಿ ಉಗ್ರರು ವಿದೇಶಿ ಪತ್ರಕರ್ತರನ್ನು ಅಪಹರಿಸಿ ಅವರ ತಲೆಕತ್ತರಿಸುವ ವಿಡಿಯೋಗಳನ್ನು ಖಾತೆಯಲ್ಲಿ ಹಾಕುತ್ತಿದ್ದನು.

ಕಳೆದ ಶುಕ್ರವಾರ ಬ್ರಿಟನ್ ಮೂಲದ ಚಾನೆಲ್ 4 ಸುದ್ದಿವಾಹಿನಿಯು ಇಸಿಸ್ ಪರ ಪ್ರಚೋದನಾತ್ಮಕ ಸಂದೇಶಗಳನ್ನು ಹಾಕುತ್ತಿರುವ ವ್ಯಕ್ತಿ ಬೆಂಗಳೂರು ಮೂಲದವನೆಂದೂ ವರದಿ ಬಿತ್ತರಿಸಿತ್ತು. ಅಲ್ಲದೇ ದೂರವಾಣಿ ಸಂಭಾಷಣೆಯಲ್ಲಿ ಆತನ ಪ್ರತಿಕ್ರಿಯೆ ಸಹ ಪಡೆದಿತ್ತು.

ಅತ್ತ ಸುದ್ದಿ ಪ್ರಸಾರವಾಗುತ್ತಿದ್ದಂತೆಯೇ ಇತ್ತ ಕಾರ್ಯಾಚರಣೆಗೆ ಇಳಿದ ಬೆಂಗಳೂರು ಸಿಸಿಬಿ ಪೊಲೀಸರು, ಜಾಲಹಳ್ಳಿ ಬಳಿ ಇರುವ ಅಪಾರ್ಟ್‌ಮೆಂಟ್‌ವೊಂದರ ಮೇಲೆ ದಾಳಿ ಮಾಡಿ ಮೆಹ್ದಿ ಮಸ್ರೂರ್ ಬಿಸ್ವಾಸ್‌ನನ್ನು ಬಂಧಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel