ಜಿಲ್ಲಾ ಸುದ್ದಿ

ಹೊಸ ವರ್ಷಾಚರಣೆಗೆ ಸಿಸಿಟಿವಿ ಕಣ್ಗಾವಲು

Guruprasad Narayana

ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆಗಳಿಗೆ ಕೆಲವೇ ದಿನಗಳು ಇರುವಂತೆ, ಭಾನುವಾರ ರಾತ್ರಿ ಚರ್ಚ್ ಸ್ಟ್ರೀಟ್ ನಲ್ಲಿ ನಡೆದ ಲಘು ಬಾಂಬ್ ಸ್ಫೋಟ ಬೆಂಗಳೂರನ್ನು ಬೆಚ್ಚಿ ಬೀಳಿಸಿದೆ. ಸಾಮಾನ್ಯವಾಗಿ ಹೊಸ ವರ್ಷದ ಸಂಭ್ರಮಾಚರಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ಜಾಗಗಳಲ್ಲಿ ಮಹಾತ್ಮ ಗಾಂಧಿ ರಸ್ತೆಗೆ ಸಮಾನಾಂತರವಾಗಿರುವ ಚರ್ಚ್ ಸ್ಟ್ರೀಟ್ ಕೂಡ ಒಂದು. ಈ ಸ್ಫೋಟದ ಬಗ್ಗೆ ತನಿಖೆ ಪ್ರಗತಿಯಲ್ಲಿದ್ದು, ಇಂತಹ ಘಟನೆಗಳನ್ನು ನಿಗ್ರಹಿಸಲು ವಿಧಾನಸೌಧದ ೫ ಕಿಮೀ ಸುತ್ತಳತೆಯಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೆನ್ನೆ ಘೋಷಿಸಿದ್ದರು.

ಅಲ್ಲದೆ ಹೊಸ ವರ್ಷದ ಆಚರಣೆಗಳಲ್ಲಿ, ಮಹಿಳೆಯರ ಮೇಲೆ ಆಕ್ರಮಣ, ಲೈಂಗಿಕ ದೌರ್ಜನ್ಯಗಳು ನಡೆಯುವುದು ಕೂಡ ಸಾಮಾನ್ಯ. ಈಗ ಇವೆರಡಕ್ಕೂ ಮುಂಜಾಗ್ರತಾ ಕ್ರಮದಂತೆ ಕೂಡಲೆ ಮಹಾತ್ಮ ಗಾಂಧಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ಮುಂತಾದ ಜಾಗಗಳಲ್ಲಿ ಸಿಸಿಟಿವಿ ಅಳವಡಿಸಲು ಕಬ್ಬನ್ ಪಾರ್ಕ್ ಪೊಲೀಸರು ಮುಂದಾಗಿದ್ದಾರೆ. ಈ ಕಾರ್ಯ ಪ್ರಗತಿಯಲ್ಲಿದ್ದು, ಹೊಸ ವರ್ಷದ ಸಂಭ್ರಮಾಚರಣೆಗಳಲ್ಲಿ ನಡೆಯಬಹುದಾದ ಸಮಾಜವಿರೋಧಿ ಚಟುವಟಿಕೆಗಳ ಮೇಲೆ ಕಣ್ಗಾವಲಿಡಲು ಸಹಕಾರಿಯಾಗಲಿದೆ ಎಂದು ಪೋಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.


ಜನನಿಬಿಡ ಪ್ರದೇಶಗಳಲ್ಲಿ ಆಂಬ್ಯುಲೆನ್ಸ್ ಸದಾ


ಇದೆ ಬ್ಲಾಸ್ಟ್ ಹಿನ್ನಲೆಯಲ್ಲಿ, ಇಂತಹ ಅಹಿತಕರ ಘಟನೆಗಳಾದಾಗ, ಗಾಯಗೊಂಡವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲು ಸಹಾಯವಾಗಲು ಇನ್ನು ಮುಂದೆ ಜನನಿಬಿಡ ಪ್ರದೇಶಗಳಲ್ಲಿ ಆಂಬ್ಯುಲೆನ್ಸ್ ಗಳನ್ನು ಸದಾ ನಿಲ್ಲಿಸಿರಲು ಆರೋಗ್ಯ ಇಲಾಖೆ ನಿರ್ದರಿಸಿದೆ.

SCROLL FOR NEXT