ಜಿಲ್ಲಾ ಸುದ್ದಿ

ನಿತ್ಯಾನಂದ ಆಶ್ರಮದ ಭಕ್ತೆ ಅನುಮಾನಾಸ್ಪದ ಸಾವು

Lakshmi R

ರಾಮನಗರ: ಬಿಡದಿ ನಿತ್ಯಾನಂದ ಆಶ್ರಮದಲ್ಲಿ ಸನ್ಯಾಸತ್ವ ತರಬೇತಿ ಪಡೆಯುತ್ತಿದ್ದ ಸಂಗೀತಾ(24) ಎಂಬ ಭಕ್ತೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.

ತಮಿಳುನಾಡಿನ ತಿರುಚನಾಪಳ್ಳಿ ಮೂಲದ ಸಂಗೀತಾ ಕಳೆದ 4 ವರ್ಷಗಳಿಂದ ನಿತ್ಯಾನಂದ ಆಶ್ರಮದಲ್ಲಿ ಸ್ವಯಂ ಪ್ರೇರಿತವಾಗಿ ಸನ್ಯಾಸತ್ವ ತರಬೇತಿ ಪಡೆಯುತ್ತಿದ್ದರು. ಡಿ.28ರ ರಾತ್ರಿ ಎದೆನೋವು ಕಾಣಿಸಿಕೊಂಡ ಅವರನ್ನು ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

ಅಲ್ಲಿಂದ ಬಿಜಿಎಸ್ ಅಪೊಲೋ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿಯೇ ಸಂಗೀತಾ ಕೊನೆಯುಸಿರೆಳೆದಿದ್ದಾಳೆ. 'ಸಂಗೀತಾ ಅವರು ಮೃತಪಟ್ಟಿದ್ದಾರೆ ಎನ್ನುವ ಸುದ್ದಿ ಬಂದಿತ್ತು. ನಮ್ಮ ಕುಟುಂಬದಲ್ಲಿರುವ ಇತರೆ ಸದಸ್ಯರಿಗೆ ಹೃದಯಾಘಾತವಾಗಿರುವ ಇತಿಹಾಸವಿದೆ. ಹಾಗೂ ಮಗಳಿಗೂ ಸಣ್ಣ ಪ್ರಮಾಣದ ಹೃಯಾಘಾತವಾಗಿತ್ತು. ಹೀಗಾಗಿ ಸಂಗೀತಾ ಹೃದಯಾಘಾತದಿಂದಲೇ ಮೃತಪಟ್ಟಿದ್ದಾರೆ ಎನ್ನಲು ಅನುಮಾನವೇ ಇಲ್ಲ.

ಹೀಗಾಗಿ ತಮಿಳುನಾಡಿಗೆ ಶವ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ನಡೆಸಲು ಅನುವುಮಾಡಿಕೊಡಿ. ಅದಕ್ಕೆ ನನ್ನ ಯಾವುದೇ ಅಭ್ಯಂತರ ಇಲ್ಲ' ಎಂದು ಸಂಗೀತಾ ತಾಯಿ ಜಾನ್ಸಿರಾಣಿ ನವಲೂರು ಬಿಡದಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

SCROLL FOR NEXT