ನಿರಂಜನ 
ಜಿಲ್ಲಾ ಸುದ್ದಿ

ಖ್ಯಾತ ಸಾಹಿತಿ ನಿರಂಜನರ ಎಲ್ಲ ಕೃತಿಗಳೂ ಅಂತರ್ಜಾಲದಲ್ಲಿ ಲಭ್ಯ

ಕರ್ನಾಟಕದ ಖ್ಯಾತ ಸಾಹಿತಿ, ಹೋರಾಟಗಾರ ದಿವಂಗತ ನಿರಂಜನ ಅವರ ಕೃತಿಗಳು ಇನ್ನು ಮುಂದೆ ಅಂತರ್ಜಾಲದಲ್ಲಿ ...

ಬೆಂಗಳೂರು: ಕರ್ನಾಟಕದ ಖ್ಯಾತ ಸಾಹಿತಿ, ಹೋರಾಟಗಾರ ದಿವಂಗತ ನಿರಂಜನ ಅವರ ಕೃತಿಗಳು ಇನ್ನು ಮುಂದೆ ಅಂತರ್ಜಾಲದಲ್ಲಿ ಉಚಿತ ಓದಿಗೆ ಸಿಗಲಿವೆ. ಚಿರಸ್ಮರಣೆ, ಮೃತ್ಯುಂಜಯ ಇಂತಹ ಖ್ಯಾತ ಕಾದಂಬರಿಗಳನ್ನು ಬರೆದ ನಿರಂಜನ ಅವರ ಬಹುತೇಕ ಎಲ್ಲ ಕೃತಿಗಳನ್ನು ಕ್ರಿಯೇಟಿವ್ ಕಾಮನ್ಸ್ ಲೈಸೆನ್ಸ್ ಅಡಿಯಲ್ಲಿ ಉಚಿತ ಬಳಕೆಗೆ ವಿಕಿಸೋರ್ಸ್ ನಲ್ಲಿ ಸಿಕ್ಕಲಿವೆ.

ಇವುಗಳಲ್ಲಿ ನಿರಂಜನರ ಕಾದಂಬರಿಗಳು, ಸಣ್ಣ ಕಥೆಗಳು, ನಾಟಕಗಳು, ಪ್ರಬಂಧಗಳು, ರಾಜಕೀಯ ಲೇಖನಗಳು ಕೂಡ ಒಳಗೊಂಡಂತೆ ಸುಮಾರು ೫೫ ಕೃತಿಗಳಿವೆ.

ಮೈಸೂರು ವಿಶ್ವವಿದ್ಯಾಲಯಕ್ಕೆ 'ಜ್ಞಾನ ಗಂಗೋತ್ರಿ" ಹೆಸರಿನಲ್ಲಿ ಪ್ರಧಾನ ಸಂಪಾದಕರಾಗಿ ಸಂಪಾದಿಸಿದ್ದ ಕನ್ನಡ ವಿಶ್ವಕೋಶ ಮತ್ತು ನವಕರ್ನಾಟಕ ಪ್ರಕಾಶನಕ್ಕೆ ಪ್ರಧಾನ ಸಂಪಾದಕರಾಗಿ ಸಂಪಾದಿಸಿದ ೨೫ ಸಂಪುಟದ ವಿಶ್ವ ಕಥಾ ಕೋಶದಿಂದ ನಿರಂಜನ ಅವರು ಮನೆಮಾತಾಗಿದ್ದರು.

ಈಗಾಗಲೇ ನಿರಂಜನ ಸಂಪಾದಿಸಿರುವ ವಿಶ್ವಕೋಶ ವಿಕಿಸೋರ್ಸ್ ನಲ್ಲಿ ಲಭ್ಯವಿದೆ.

1.      http://bit.ly/1pllLKJ ಈ ಲಿಂಕಿನಲ್ಲಿ ಈ ಪುಸ್ತಕ ಲಭ್ಯವಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಅದೇಶ ಪಾಲನೆ: ಗುರುವಾರ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ; Video

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

Mysuru Rain: ಸಿಡಿಲು ಬಡಿದು ಬೆಂಗಳೂರಿನ ಟೆಕ್ಕಿ ಸಾವು

ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಹೆಸರು ಬಹುತೇಕ ಫೈನಲ್? ಕಾಂಗ್ರೆಸ್‌ನಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ..!

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

SCROLL FOR NEXT